ದೇವೇಗೌಡ ಕುಟುಂಬದ ವಿರುದ್ಧ ಡಾ.ಕೆ.ಸುಧಾಕರ್ ಟ್ವೀಟ್!
Recommended Video

ಬೆಂಗಳೂರು, ಮಾರ್ಚ್ 12 : ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಡಾ.ಕೆ.ಸುಧಾಕರ್ ಅವರು ಎಚ್.ಡಿ.ದೇವೇಗೌಡರ ಕುಟುಂಬದ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಕೆಲವು ದಿನಗಳ ಹಿಂದೆ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಅಸಮಾಧಾನ ಹೊರಹಾಕಿದ್ದರು.
ನ್ಯಾಷನಲ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ನಾಯಕ ಶರದ್ ಪವಾರ್ ಅವರ ವಿಚಾರ ಮುಂದಿಟ್ಟುಕೊಂಡು ದೇವೇಗೌಡರ ಕುಟುಂಬದ ಬಗ್ಗೆ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ. ದೇವೇಗೌಡರ ಕುಟುಂಬ ರಾಜಕಾರಣದ ಬಗ್ಗೆ ಟೀಕೆ ಮಾಡಿದ್ದಾರೆ.
'ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ನಾನು ಈಗಾಗಲೇ 14 ಬಾರಿ ಸ್ಪರ್ಧಿಸಿದ್ದೇನೆ. ಮುಂದಿನ ಪೀಳಿಗೆಯವರಿಗೆ ಅವಕಾಶ ಮಾಡಿಕೊಡಬೇಕು. ಈ ಚುನಾವಣೆಯಲ್ಲಿ ನನ್ನ ಕುಟುಂಬದ ಇಬ್ಬರು ಸದಸ್ಯರು ಸ್ಪರ್ಧಿಸುತ್ತಿದ್ದಾರೆ. ಹಾಗಾಗಿ ಈ ನಿರ್ಧಾರ ತೆಗೆದುಕೊಳ್ಳಲು ಇದು ಸೂಕ್ತ ಸಮಯ' ಎಂದು ಶರದ್ ಪವಾರ್ ಹೇಳಿದ್ದರು.
ಈ ಹೇಳಿಕೆಯನ್ನು ಮುಂದಿಟ್ಟುಕೊಂಡು ಡಾ.ಕೆ.ಸುಧಾಕರ್ ಅವರು ಎಚ್.ಡಿ.ದೇವೇಗೌಡ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 'ಶರದ್ ಪವಾರ್ ಹೇಳಿಕೆ ನಮ್ಮ ರಾಜ್ಯದ ಕೆಲ ಬುದ್ಧಿವಂತ ರಾಜಕಾರಣಿಗಳಿಗೆ ಸ್ಪೂರ್ತಿ ಆಗಲಿ' ಎಂದು ಹೇಳಿದ್ದಾರೆ.

ಎಷ್ಟು ಜನ ಸ್ಪರ್ಧೆ ಮಾಡಬೇಕು?
ಒಂದು ಕುಟುಂಬದಿಂದ ಎಷ್ಟು ಜನ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಬೇಕು ಎಂಬುದು ಪ್ರಶ್ನೆಯಾಗಿದೆ. ನಿಮ್ಮ ಬುದ್ಧಿವಂತ ನಿರ್ಧಾರಕ್ಕೆ ಧನ್ಯವಾದಗಳು ಶರದ್ ಪವಾರ್ ಜೀ ಎಂದು ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಶರದ್ ಪವಾರ್ ಜೀ ನಿಮ್ಮ ನಿರ್ಧಾರದಿಂದ ಕರ್ನಾಟಕದಲ್ಲಿಯೂ ಕೆಲವು ಬುದ್ಧಿವಂತ ರಾಜಕಾರಣಿಗಳು ಸ್ಪೂರ್ತಿ ಪಡೆಯುತ್ತಾರೆ ಎಂದು ಕೊಳ್ಳುತ್ತೇನೆ ಎಂದು ಸುಧಾಕರ್ ಹೇಳಿದ್ದಾರೆ. |
ಕರ್ನಾಟಕದಲ್ಲಿ ಸ್ಪೂರ್ತಿ ಪಡೆಯಬೇಕು
ಶರದ್ ಪವಾರ್ ಜೀ ನಿಮ್ಮ ನಿರ್ಧಾರದಿಂದ ಕರ್ನಾಟಕದಲ್ಲಿಯೂ ಕೆಲವು ಬುದ್ಧಿವಂತ ರಾಜಕಾರಣಿಗಳು ಸ್ಪೂರ್ತಿ ಪಡೆಯುತ್ತಾರೆ ಎಂದು ಕೊಳ್ಳುತ್ತೇನೆ ಎಂದು ಸುಧಾಕರ್ ಹೇಳಿದ್ದಾರೆ.

ದೇವೇಗೌಡರ ಕುಟುಂಬದಿಂದ ಎಷ್ಟು ಜನ
2019ರ ಲೋಕಸಭಾ ಚುನಾವಣೆಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಕುಟುಂಬದಿಂದ ಮೂವರು ಕಣಕ್ಕಿಳಿಯುವ ಸಾಧ್ಯತೆ ಇದೆ. ಹಾಸನದಿಂದ ಪ್ರಜ್ವಲ್ ರೇವಣ್ಣ, ಬೆಂಗಳೂರು ಉತ್ತರದಿಂದ ದೇವೇಗೌಡ, ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಅವರು ಕಣಕ್ಕಿಳಿಯಲಿದ್ದಾರೆ.

ಕುಮಾರಸ್ವಾಮಿ ವಿರುದ್ಧ ಗರಂ
ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಡಾ.ಕೆ.ಸುಧಾಕರ್ ಅವರು ವಾಗ್ದಾಳಿ ನಡೆಸಿದ್ದರು. 'ನನಗೆ ನಿಗಮ-ಮಂಡಳಿ ಅಧ್ಯಕ್ಷ ಹುದ್ದೆ ತಪ್ಪಲು ಮುಖ್ಯಮಂತ್ರಿ ಕುಮಾರಸ್ವಾಮಿಯೇ ನೇರ ಕಾರಣ. ಪುಟಗೋಸಿ ನಿಗಮ ಮಂಡಳಿ ಯಾರಿಗೆ ಬೇಕು. ನನಗೆ ಜನರ ಬೆಂಬಲ ಸಿಕ್ಕಿದೆ' ಎಂದು ಹೇಳಿದ್ದರು.












Click it and Unblock the Notifications