ವೈದ್ಯಕೀಯ ಕ್ಷೇತ್ರಕ್ಕೆ ಪುಷ್ಟಿಕೊಡುವ ಬಯೋ ಫಾರ್ಮಾ ಸೇರಿ ಹಲವು ಘೋಷಣೆಗಳು: ಡಾ ದೇವಿಪ್ರಸಾದ್ ಶೆಟ್ಟಿ
"ಈ ವರ್ಷ ವೈದ್ಯಕೀಯ ಕ್ಷೇತ್ರಕ್ಕೆ ಚಿಂತನಶೀಲವಾಗಿ ಮತ್ತು ಸುದೀರ್ಘ ದೃಷ್ಟಿಕೋನದಿಂದ ಗಮನ ಹರಿಸಿ ಬಜೆಟ್ ಮಂಡಿಸಲಾಗಿದೆ. ಬಲಿಷ್ಠ ವೈದ್ಯಕೀಯ ವ್ಯವಸ್ಥೆಯು ಭಾರತದ ಆರ್ಥಿಕ ಮತ್ತು ಸಾಮಾಜಿಕ ದೃಢತೆಗೆ ಬಹಳ ಮುಖ್ಯ ಎಂಬುದನ್ನು ಸರ್ಕಾರದ ಗುರುತಿಸಿರುವುದನ್ನು ಈ ಬಜೆಟ್ ಪ್ರತಿಬಿಂಬಿಬಿಸಿದೆ. ಆರೋಗ್ಯ ರಕ್ಷಣೆಯನ್ನು ದೀರ್ಘಕಾಲೀನ ರಾಷ್ಟ್ರೀಯ ಆದ್ಯತೆಯಾಗಿ ಬಲಪಡಿಸುವತ್ತ ಗೌರವಾನ್ವಿತ ಹಣಕಾಸು ಸಚಿವರು ತೋರಿರುವ ಸಮತೋಲಿತ ಗಮನವನ್ನು ನಾವು ಶ್ಲಾಘಿಸುತ್ತೇವೆ.(ಬರಹ:ಡಾ. ದೇವಿ ಪ್ರಸಾದ್ ಶೆಟ್ಟಿ, ಸಂಸ್ಥಾಪಕರು ಮತ್ತು ಅಧ್ಯಕ್ಷರು, ನಾರಾಯಣ ಹೆಲ್ತ್)
₹10,000 ಕೋಟಿ ವೆಚ್ಚದ 'ಬಯೋ ಫಾರ್ಮಾ ಪವರ್' ಯೋಜನೆಯು ಬಯೋಲಾಜಿಕ್ಸ್ ಮತ್ತು ಬಯೋಸಿಮಿಲರ್‌ಗಳಲ್ಲಿ ದೇಶೀಯವಾದ ಬಲವಾದ ವ್ಯವಸ್ಥೆ ನಿರ್ಮಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದ್ದು, ಇದು ಕ್ಯಾನ್ಸರ್ ಮತ್ತು ಅಪರೂಪದ ಕಾಯಿಲೆಗಳಿಗೆ ಸುಧಾರಿತ ಚಿಕಿತ್ಸೆಗಳ ಲಭ್ಯತೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ.

ಖಾಸಗಿ ವಲಯದ ಸಹಭಾಗಿತ್ವದಲ್ಲಿ ಪ್ರಾದೇಶಿಕ ವೈದ್ಯಕೀಯ ಹಬ್‌ಗಳನ್ನು ಅಭಿವೃದ್ಧಿಪಡಿಸುವ ಪ್ರಸ್ತಾವನೆಯು ಜಾಗತಿಕ ವೈದ್ಯಕೀಯ ಕ್ಷೇತ್ರದಲ್ಲಿ ಮೌಲ್ಯಯುತ ತಾಣವಾಗಿ ಭಾರತದ ಸ್ಥಾನವನ್ನು ಬಲಪಡಿಸಲಿದೆ. ಜೊತೆಗೆ ದೇಶದೊಳಗೆ ರೋಗ ತಡೆಗಟ್ಟುವಿಕೆ, ಪುನರ್ವಸತಿ ಮತ್ತು ನಿರಂತರ ಆರೈಕೆಯ ಮಾದರಿಗಳನ್ನು ಇದು ಉತ್ತಮಗೊಳಿಸುತ್ತದೆ. ತುರ್ತು ಮತ್ತು ಆಘಾತ ಚಿಕಿತ್ಸಾ ಕ್ಷೇತ್ರದ ಸಾಮರ್ಥ್ಯವನ್ನು 50% ರಷ್ಟು ಹೆಚ್ಚಿಸುವ ಮೂಲಕ ಜಿಲ್ಲಾ ಆಸ್ಪತ್ರೆಗಳನ್ನು ಬಲಪಡಿಸುವುದು, ಇದರೊಂದಿಗೆ ಎರಡನೇ ನಿಮ್ಹಾನ್ಸ್ ಮತ್ತು ಪ್ರಾದೇಶಿಕ ಮಾನಸಿಕ ಆರೋಗ್ಯ ಸೇವಾ ಕೇಂದ್ರಗಳ ಸ್ಥಾಪನೆಯು ಕಟ್ಟಕಡೆಯ ವ್ಯಕ್ತಿಗೂ ಸಿಗಬೇಕಾದ ವೈದ್ಯಕೀಯ ಸೇವೆ ದೊರಕಿಸಲಿದೆ ಮತ್ತು ಮಾನಸಿಕ ಆರೋಗ್ಯ ಸೇವೆಯಲ್ಲಿನ ನಿರ್ಣಾಯಕ ಕೊರತೆಗಳನ್ನು ನೀಗಿಸುತ್ತದೆ.
ಅಲೈಡ್ ಹೆಲ್ತ್ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸುವ ಮತ್ತು ನಿರ್ಣಾಯಕ ವಿಭಾಗಗಳಲ್ಲಿ ತರಬೇತಿಯನ್ನು ಒದಗಿಸುವ ಕ್ರಮಗಳು ಕ್ಲಿನಿಕಲ್ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ, ಉತ್ತಮ ಗುಣಮಟ್ಟದ ಆರೈಕೆಯನ್ನು ನೀಡಲು ಬೆಂಬಲ ನೀಡುತ್ತವೆ. ವೈದ್ಯಕೀಯ ಉದ್ದೇಶದ ಹಣ ರವಾನೆಗಳ ಮೇಲಿನ ಟಿಸಿಎಸ್ ಅನ್ನು ತರ್ಕಬದ್ಧಗೊಳಿಸಿರುವುದು ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ, ಈ ಕ್ರಮಗಳು ಭಾರತದ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಕಡೆಗೆ ಒಂದು ಸುಸಂಬದ್ಧ ಹೆಜ್ಜೆಯಾಗಿದೆ ಮತ್ತು ಭವಿಷ್ಯದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ."
ಕೇಂದ್ರ ಬಜೆಟ್ ಲೈವ್ ಜೊತೆಗೆ ವಿಶ್ಲೇಷಣೆಯೂ ಇಲ್ಲಿದೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ (ಫೆ 1) ಸಂಸತ್ತಿನಲ್ಲಿ ಮಂಡಿಸಿದ ಬಜೆಟ್ ಭಾಷಣದ ಲೈವ್ ವಿಡಿಯೊ ಮತ್ತು ತಜ್ಞರ ವಿಶ್ಲೇಷಣೆಗಾಗಿ 'ಒನ್ ಇಂಡಿಯಾ ಕನ್ನಡ' ಯುಟ್ಯೂಬ್ ಚಾನೆಲ್‌ಗೆ ಭೇಟಿ ನೀಡಿ.
-
ಮೊಡವೆ ಕಲೆಗಳನ್ನು ಸಂಪೂರ್ಣವಾಗಿ ತೆಗೆದುಹಾಕುವ ಸಿಂಪಲ್ ಟ್ರಿಕ್ಸ್ : ಬೇಸಿಗೆಯಲ್ಲಿ ಅನುಸರಿಸಿ ಈ 9 ಟಿಪ್ಸ್ -
ಬೇಸಿಗೆಯಲ್ಲಿ ಸೌತೆಕಾಯಿ ತಿನ್ನಲು ಟಾಪ್ 5 ಕಾರಣಗಳು: ಆರೋಗ್ಯಕ್ಕೆ ಅದ್ಭುತ ಲಾಭಗಳು -
Summer Heat Alert: ಮಕ್ಕಳ ಆರೋಗ್ಯ ಕಾಪಾಡಲು ಪೋಷಕರಿಗೆ 7 ಮುಖ್ಯ ಸಲಹೆಗಳು -
ಮನೆ ಕಟ್ಟುವಾಗ ವಾಸ್ತು ಪಾಲಿಸದಿದ್ದರೆ ಏನಾಗುತ್ತದೆ? ಇಲ್ಲಿವೆ 5 ಪ್ರಮುಖ ನಿಯಮಗಳು -
ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ಕರಿದ ತಿಂಡಿ, ಟೀ-ಕಾಫಿ ಬ್ಯಾನ್: ಸಿರಿಧಾನ್ಯಗಳಿಗೆ ಆದ್ಯತೆ ನೀಡುವಂತೆ ಆರೋಗ್ಯ ಇಲಾಖೆ ಸೂಚನೆ -
ನಿಮ್ಮ ಮನೆ ದಿಕ್ಕು ಸರಿಯೇ? ರಾಶಿ ಪ್ರಕಾರ ವಾಸ್ತು ಸೂಚನೆಗಳು ಇಲ್ಲಿವೆ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ












Click it and Unblock the Notifications