ಅನಂತ್‌ಕುಮಾರ್ ಹೆಗಡೆಯಿಂದ ಮತ್ತೊಂದು ವಿವಾದಾತ್ಮಕ ಹೇಳಿಕೆ
Recommended Video

ಉತ್ತರ ಕನ್ನಡ, ಫೆಬ್ರವರಿ 20: ಯಾರು ಡಿಜಿಟಲ್ ಪೇಪರ್, ದಿನಪತ್ರಿಕೆ ಓದುತ್ತಾರೋ, ಟಿವಿ ನೊಡ್ತಾರೋ ಅವರ ತಲೆ ಹಾಳಾಗುತ್ತೆ ಹೀಗೆಂದು ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ ಅವರು ಹೇಳಿದ್ದಾರೆ.
ಉತ್ತರ ಕನ್ನಡದ ಅಂಕೋಲಾದಲ್ಲಿ ಪಕ್ಷದ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡುತ್ತಾ ಅವರು ಈ ಮಾತನ್ನು ಹೇಳಿದ್ದಾರೆ. ಸಚಿವರೇ ಒಬ್ಬರು ದಿನಪತ್ರಿಕೆ ಓದಬೇಡಿ, ಟಿವಿ ಸುದ್ದಿಗಳನ್ನು ನೋಡಬೇಡಿ ಎಂದಿರುವುದು ವಿವಾದ ಹುಟ್ಟಿಸುವ ಸಾಧ್ಯತೆ ಇದೆ. ಸಾಮಾಜಿಕ ಜಾಲತಾಣದಲ್ಲಿ ಹಲವರು ಸಚಿವರ ಹೇಳಿಕೆ ವಿರುದ್ಧ ಪೋಸ್ಟ್ ಹಾಕುತ್ತಿದ್ದಾರೆ.
ಡಿಜಿಟಲ್ ಪತ್ರಿಕೆ ಓದುವುದು, ಟಿವಿ ನೋಡುವುದರಿಂದ ದೂರ ಇದ್ದಷ್ಟೂ ತಲೆ ಸರಿ ಇರುತ್ತದೆ. ನಾನು ಹತ್ತು ವರ್ಷದಿಂದ ಪತ್ರಿಕೆ ಓದುವುದಿಲ್ಲ, ಟಿವಿ ನೋಡುತ್ತಿಲ್ಲ ಹಾಗಾಗಿ ನನ್ನ ತಲೆ ಸರಿ ಇದೆ ಎಂದು ಅನಂತ್‌ಕುಮಾರ್ ಅವರು ಹೇಳಿದ್ದಾರೆ.

ಮುಂದೆ ಮಾತನಾಡಿದ ಅವರು, ನಿಮ್ಮ ಶುಗರ್ ಲೆವಲ್ ಸರಿ ಇರಬೇಕು, ಬಿಪಿ ಕಂಟ್ರೋಲ್ ಅಲ್ಲಿ ಇರಬೇಕು, ನಿಮ್ಮ ತಲೆ ಸರಿ ಇರಬೇಕು ಅಂದರೆ ಪೇಪರ್ ಓದ್ಬೇಡಿ, ಟಿವಿನೂ ನೋಡ್ಬೇಡಿ ಎಂದು ಪ್ರವಚನ ಮಾಡಿದ್ದಾರೆ.
ಸುದ್ದಿ ಮಾಧ್ಯಮಗಳು ಮತ್ತು ಪತ್ರಿಕೆಗಳಲ್ಲಿ ನಕಾರಾತ್ಮಕ ಸುದ್ದಿಗಳೇ ಹೆಚ್ಚಿರುತ್ತವೆ ಎಂಬ ಕಾರಣಕ್ಕೆ ಸಚಿವರು ಹಾಗೆ ಹೇಳಿದ್ದಾರೋ ಅಥವಾ ತಮ್ಮ ವಿರುದ್ಧ ಪ್ರಕಟವಾಗುವ ಸುದ್ದಿಗಳು ಜನಕ್ಕೆ ತಲುಪದಿರಲಿ ಎಂದು ಹಾಗೆ ಹೇಳಿದರೋ ತಿಳಿಯಬೇಕಿದೆ.












Click it and Unblock the Notifications