LPG Cylinder Price: ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆ ಕೂಡ ಇಳಿಕೆ ಸಾಧ್ಯತೆ, ಕಾರಣವೇನು?
ಸೋಮವಾರವಷ್ಟೇ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಪ್ರತಿ ₹10ವರೆಗೆ ಇಳಿಕೆ ಕಂಡಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಜಾಗತಿಕ ಮಾನದಂಡಗಳು ಮತ್ತು ಕರೆನ್ಸಿ ಚಲನೆಗಳಿಂದ ನಡೆಸಲ್ಪಡುವ ತಮ್ಮ ಇತ್ತೀಚಿನ ಮಾಸಿಕ ಬೆಲೆ ಪರಿಷ್ಕರಣೆ ಆಗಿದೆ.
ರಾಜ್ಯ ಮತ್ತು ದೇಶದ ಜನರಿಗೆ ಪ್ರಮುಖ ಪ್ರಭಾವ ಬೀರುವ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯ ಕುರಿತಾಗಿ ಹೊಸ ಬೆಳವಣಿಗೆಗಳು ಕಂಡುಬರುತ್ತಿವೆ. ಗೃಹಬಳಕೆಗಾಗಿ ಬಳಸುವ ಸಿಲಿಂಡರ್‌ಗಳ ಬೆಲೆ ಇತ್ತೀಚೆಗೆ ಹೆಚ್ಚು ತಗ್ಗದ ಕಾರಣ, ಗ್ರಾಹಕರ ಮೇಲೆ ಇದರಿಂದ ಒತ್ತಡ ಹೆಚ್ಚಾಗಿತ್ತು. ಆದರೆ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯ ಇಳಿಕೆಯಿಂದ ಗೃಹಬಳಕೆ ಸಿಲಿಂಡರ್‌ಗಳ ಬೆಲೆಯೂ ಇಳಿಯುವ ಸಾಧ್ಯತೆ ಹೆಚ್ಚಾಗಿದೆ.
ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯು ಡಿಸೆಂಬರ್ 1ರಿಂದ ಇಳಿಕೆಯಾಗಿರುವ ಸಂತಸ ಮೂಡಿಸಿದೆ. ಇದರ ಬೆನ್ನಲ್ಲೇ ಗೃಹಬಳಕೆ ಸಿಲಿಂಡರ್ ಬೆಲೆ ಸಹ ಇಳಿಯುವ ಸಾಧ್ಯತೆ ಇದೆ. ಸದ್ಯದ ಸ್ಥಿತಿಯಲ್ಲಿ, ವಾಣಿಜ್ಯ ಮತ್ತು ಕೈಗಾರಿಕಾ ಬಳಕೆಯ ಸಿಲಿಂಡರ್‌ಗಳ ಬೆಲೆ ಕಡಿಮೆಯಾಗಿದೆ. ಇದರಿಂದ ಗ್ಯಾಸ್ ವಿತರಣಾ ಸಂಸ್ಥೆಗಳು ಗೃಹಬಳಕೆ ಸಿಲಿಂಡರ್ ಬೆಲೆ ಇಳಿಕೆ ನಿರೀಕ್ಷೆಯಲ್ಲಿವೆ.

ತೈಲ ಮತ್ತು ಅನಿಲದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಕಂಡುಬಂದ ಕಡಿತ, ಸರಬರಾಜಿನ ಸ್ಥಿರತೆಯಿಂದ ಎಲ್‌ಪಿಜಿ ಸಿಲಿಂಡರ್ ಬೆಲೆಗಳಲ್ಲಿ ಇಳಿಕೆ ಕಂಡುಬಂದಿದೆ. ಇದು ವಾಣಿಜ್ಯ ಬಳಕೆ ಎಲ್‌ಪಿಜಿಯಲ್ಲಿ ಸ್ಪಷ್ಟವಾಗಿ ತೋರುತ್ತಿದ್ದು, ಗೃಹ ಬಳಕೆಯ ಮೇಲಿನ ಒತ್ತಡವೂ ಕಡಿಮೆಯಾಗಲಿದೆ.
ಇತ್ತೀಚಿನ ತೈಲ ಮಾರುಕಟ್ಟೆಯ ಏರಿಳಿತಗಳ ನಡುವೆ ವಾಣಿಜ್ಯ ಮತ್ತು ಕೈಗಾರಿಕಾ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಕಂಡುಬಂದ ಕಡಿತ ಗೃಹಬಳಕೆದಾರರಿಗೂ ಅನುಕೂಲ ಎನ್ನಲಾಗಿದೆ. ಜಾಗತಿಕ ತೈಲ ದರಗಳ ಕುಸಿತ ಮತ್ತು ಸರಬರಾಜು ಸುಧಾರಣೆಯಿಂದ ಈ ಬದಲಾವಣೆ ಸಂಭವಿಸಿದ್ದು, ಇದು ಗೃಹಬಳಕೆ ಸಿಲಿಂಡರ್ ಬೆಲೆ ಇಳಿಕೆಗೂ ದಾರಿ ಮಾಡಿಕೊಡಬಹುದು ಎಂದು ಹೇಳಲಾಗುತ್ತಿದೆ.
ಸೋಮವಾರವಷ್ಟೇ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಪ್ರತಿ ₹10ವರೆಗೆ ಇಳಿಕೆ ಕಂಡಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಜಾಗತಿಕ ಮಾನದಂಡಗಳು ಮತ್ತು ಕರೆನ್ಸಿ ಚಲನೆಗಳಿಂದ ನಡೆಸಲ್ಪಡುವ ತಮ್ಮ ಇತ್ತೀಚಿನ ಮಾಸಿಕ ಬೆಲೆ ಪರಿಷ್ಕರಣೆಯನ್ನು ಘೋಷಿಸಿದ್ದರಿಂದ ಸತತವಾಗಿ ಇಳಿಕೆ ಕಂಡಿದೆ. ವಾಣಿಜ್ಯ ಉದ್ದೇಶಕ್ಕಾಗಿ ಹೆಚ್ಚಾಗಿ ಬಳಸುವ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಈಗ ದೆಹಲಿಯಲ್ಲಿ ₹1,580.50ಕ್ಕೆ ಇಳಿದಿದೆ. ಅಕ್ಟೋಬರ್‌ನಲ್ಲಿ ₹15.50 ಹೆಚ್ಚಳ ಕಂಡು, ನವೆಂಬರ್ 1ರಂದು ಪ್ರತಿ ಸಿಲಿಂಡರ್‌ಗೆ ₹5 ರಷ್ಟು ದರವನ್ನು ಇಳಿಸಲಾಗಿತ್ತು.
ಕಳೆದ ಏಪ್ರಿಲ್‌ನಿಂದ ಇಲ್ಲಿವರೆಗೆ ವಾಣಿಜ್ಯ ಎಲ್‌ಪಿಜಿ ಆರು ಬಾರಿ ಇಳಿಕೆಯಾಗಿದೆ. ಒಟ್ಟು ಪ್ರತಿ ಸಿಲಿಂಡರ್‌ಗೆ ₹223ವರೆಗೆ ಇಳಿಕೆಯಾಗಿದ್ದು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಅಡುಗೆ ಪೂರೈಕೆದಾರರಿಗೆ ರಿಲೀಫ್ ಸಿಕ್ಕಂತಾಗಿದೆ. ಇನ್ನು ಗೃಹಬಳಕೆ ಎಲ್‌ಪಿಜಿ ಬೆಲೆಗಳು 14.2 ಕೆಜಿ ಸಿಲಿಂಡರ್‌ಗೆ ₹853ರಂತೆ ಬದಲಾಗದೆ ಸ್ಥಿರವಾಗಿದೆ. ಕಳೆದ ಏಪ್ರಿಲ್‌ನಲ್ಲಿ ₹50 ಹೆಚ್ಚಳದ ನಂತರ ದರಗಳು ಹಾಗೆಯೇ ಇದ್ದು, ಸದ್ಯದಲ್ಲೇ ಗೃಹಬಳಕೆ ಸಿಲಿಂಡರ್ ದರ ಕೂಡ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.












Click it and Unblock the Notifications