Renukaswamy Murder Case: ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ದರ್ಶನ್ ಮಾವ ಏನ್ ಹೇಳಿದ್ರು ಗೊತ್ತಾ?
Darshan Thoogudeepa: ನಟ ದರ್ಶನ್ ಮೊದಲಿನಿಂದಲೂ ಒಂದಲ್ಲ ಒಂದು ವಿವಾದಗಳಲ್ಲಿ ಸುದ್ದಿಯಾಗುತ್ತಿದ್ದರು. ಇದೀಗ ರೇಣುಕಾಸ್ವಾಮಿ ಕೊಲೆ ಕೇಸ್ ಪ್ರಕರಣದಲ್ಲಿ ಬಂಧನವಾಗಿರುವ ನಟ ದರ್ಶನ್ ಅನ್ನು ವಿಚಾರಣೆ ಮಾಡುತ್ತಾ ಅನ್ನಪೂರ್ಣೇಶ್ವರಿ ಪೊಲೀಸರು ಜಾಲಾಡುತ್ತಿದ್ದಾರೆ. ಅಲ್ಲದೆ ಇದೀಗ ಈ ಪ್ರಕರಣ ಬಗೆದಷ್ಟು ಬಯಲಾಗುತ್ತಿದೆ. ಮತ್ತೊಂದೆಡೆ ಇವರಿಂದ ಮನೆಯವರೆಲ್ಲ ದೂರ ಆಗಿದ್ದು, ತನ್ನ ಸೋದರ ಮಾವನನ್ನು ಕೂಡ ಬೀದಿಗೆ ತಳ್ಳಿದ್ದಾರೆ ಎನ್ನುವ ಮಾಹಿತಿಯೊಂದು ಇದೀಗ ಲಭ್ಯವಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿದ್ದು, ರಾಜ್ಯಾದ್ಯಂತ ದರ್ಶನ್ ಮೇಲಿನ ಆರೋಪಕ್ಕೆ ಟೀಕೆಗಳು ಕೂಡ ವ್ಯಕ್ತ ಆಗುತ್ತಿವೆ. ದರ್ಶನ್ ಬಂಧನ ಆಗುತ್ತಿದ್ದಂತೆ ಹಳೆಯ ಘಟನೆಗಳಲ್ಲಿ ದರ್ಶನ್‌ನಿಂದ ಅನ್ಯಾಯಕ್ಕೆ ಒಳಗಾಗಿರುವವರು ಮಾಧ್ಯಮಗಳ ಬಳಿ ತಮ್ಮ ಅಳಲು ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಇದೀಗ ಸ್ವತಃ ದರ್ಶನ್ ಸೋದರ ಮಾವ ಕೂಡ ದರ್ಶನ್ ಪರಿಸ್ಥಿತಿ ಬಗ್ಗೆ ಬೇಸರ ಹೊರಹಾಕಿದ್ದಾರೆ. ಹಾಗಾದರೆ ಏನೆಲ್ಲಾ ಹೇಳಿದ್ದಾರೆ ಎಂದು ಇಲ್ಲಿ ತಿಳಿಯಿರಿ.

ರೇಣಕಾಸ್ವಾಮಿ ಕೊಲೆ ಕೇಸ್‌ನಲ್ಲಿರುವ ದರ್ಶನ್ ಹೆಸರು ಕೇಳಿಬಂದಿರುವ ಬಗ್ಗೆ ಅವರ ಕೊಡಗು ಜಿಲ್ಲೆಯ ಹುಟ್ಟೂರಾದ ಪೊನ್ನಂಪೇಟೆಯಲ್ಲಿ ಸ್ಥಳೀಯರು ಹಾಗೂ ಕುಟುಂಬಸ್ಥರು ಬೇಸರ ಹೊರಹಾಕಿದ್ದು, ಹುಟ್ಟೂರಲ್ಲೂ ಕೂಡ ದರ್ಶನ್ ಒಳ್ಳೆಯ ಹೆಸರು ಪಡೆದಿಲ್ಲ. ಮತ್ತೊಂದೆಡೆ ದರ್ಶನ್ ಮತ್ತು ಅವರ ತಾಯಿ ಸ್ವಂತಃ ಮನೆಯವರಿಗೆ ತೊಂದರೆ ನೀಡಿದ್ದಾರೆ. ದರ್ಶನ್ ಹುಟ್ಟಿ ಬೆಳೆದ ಮನೆಯನ್ನು ಕೆಡವಿಸಿದ್ದು, ಈ ಪ್ರಕರಣದಲ್ಲಿ ತಾಯಿ & ಮಗ ಇಬ್ಬರೂ ಕೇಸ್ ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಆಸ್ತಿ ವಿಚಾರವಾಗಿ ಸೋದರ ಮಾವವಂದಿರ ಜೊತೆ ಗಲಾಟೆ ಮಾಡಿಕೊಂಡು ಪೊನ್ನಂಪೇಟೆಯಲ್ಲಿ ಅವರು ವಾಸವಿದ್ದ ಮನೆಯನ್ನು ಕೆಡವಿದ್ದಾರೆ. ಈ ಪ್ರಕರಣದಲ್ಲಿ ದರ್ಶನ್ ಮತ್ತು ಅವರ ತಾಯಿ ಮೀನಾ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಹೆಂಡತಿ ಜೊತೆ ಗಲಾಟೆ ನಡೆದಾಗಲೂ ಎಲ್ಲಾ ಸೇರಿ ಪರಿಹರಿಸಿದ್ದೆವು. ಆದರೂ ಅವರು ತಿದ್ದಿಕೊಳ್ಳಲಿಲ್ಲ. ಮತ್ತೆ ಮತ್ತೆ ಗಲಾಟೆ ಮಾಡಿಕೊಳ್ಳುತ್ತಲೇ ಇದ್ದರು ಎಂದು ತಿಳಿಸಿದ್ದಾರೆ ಅಂತಾ ನ್ಯೂಸ್ 18 ಕನ್ನಡ ವರದಿ ಮಾಡಿದೆ.
ಇನ್ನು ಪವಿತ್ರಗೌಡ ಜೊತೆ ಸಂಬಂಧದಿಂದ ಈ ಸ್ಥಿತಿ ನಿರ್ಮಾಣವಾಗಿದ್ದು, ಅವರಿಬ್ಬರಿಗೆ ಏನು ಸಂಬಂಧ ಎಂದು ನನಗೆ ಗೊತ್ತಿಲ್ಲ. ಆ ಪವಿತ್ರಗೂ ದೇವರು ಒಳ್ಳೆಯ ಬುದ್ದಿ ಕೊಡಲಿ. ಆದರೆ ಘಟನೆ ಏನೇ ಆದರೂ ಕೊಲೆ ಮಾಡುವ ಹಂತಕ್ಕೆ ಹೋಗಬಾರದಿತ್ತು. ಕೊಲೆಯಾದ ವ್ಯಕ್ತಿಗೆ ನ್ಯಾಯ ಸಿಕ್ಕಬೇಕು. ನಾವು ಎತ್ತಿ ಹಾಡಿಸಿ ಬೆಳೆಸಿದ ದರ್ಶನ್ ಇಂತಹ ಆರೋಪ ಎದುರಿಸುತ್ತಿರುವುದು ಬೇಸರವಾಗಿದೆ ಎಂದು ದರ್ಶನ್ ಮಾವ ಟಿ.ಎಲ್. ಶ್ರೀನಿವಾಸ ಪೊನ್ನಪೇಟೆಯಲ್ಲಿ ಹೇಳಿದ್ದಾರೆ.












Click it and Unblock the Notifications