• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿ ಧೂಳೀಪಟ ಜೆಡಿಎಸ್ ನಿಂದ ಮಾತ್ರ ಸಾಧ್ಯ: ಕುಮಾರಸ್ವಾಮಿ ವಾಗ್ದಾಳಿ

By Balaraj Tantry
|
   ಮೋದಿ ಸರ್ಕಾರವನ್ನ ಮಟ್ಟ ಹಾಕಲು ಜೆಡಿಎಸ್ ನಿಂದ ಮಾತ್ರ ಸಾಧ್ಯ, ಎಂದ ಎಚ್ ಡಿ ಕೆ | Oneindia Kannada

   ಕೋಲಾರ, ಮಾರ್ಚ್ 4: ನರೇಂದ್ರ ಮೋದಿ ಅವರ ಓಟ ನಿಲ್ಲಬೇಕಾದರೆ ಕರ್ನಾಟಕದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಬೇಕಾಗಿದೆ. ಮೋದಿಯವರ ಬಣ್ಣದ ಮಾತಿಗೆ ಮರುಳಾಗಬೇಡಿ, ಮೋದಿ ಧೂಳೀಪಟ ಜೆಡಿಎಸ್ ನಿಂದ ಮಾತ್ರ ಸಾಧ್ಯ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

   ಜಿಲ್ಲೆಯ ಮುಳಬಾಗಿಲುನಲ್ಲಿ ಭಾನುವಾರ (ಮಾ 4) ವಿಕಾಸಪರ್ವ ಸಮಾವೇಶದಲ್ಲಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ಈ ಚುನಾವಣೆಯಲ್ಲಿ ಕುಮಾರಸ್ವಾಮಿ ಮಾತ್ರ ಪರಿಹಾರ ಎನ್ನುವ ಭಾವನೆ ಜನರಲ್ಲಿ ಬಂದಿದೆ. ರಾಜ್ಯದ ಬಡವರನ್ನು ಒಂದು ಸಲ ಸಾಲದಿಂದ ಋಣಮುಕ್ತ ಮಾಡುವ ಅವಕಾಶ ಜೆಡಿಎಸ್ ಗೆ ಕೊಡಲು ಜನತೆಯಲ್ಲಿ ಮನವಿ ಮಾಡಿದ್ದಾರೆ. (ಮೋದಿ, ರಾಹುಲ್ ಎದುರು ತಲೆ ತಗ್ಗಿಸೋ ಹಾಗೆ ಮಾಡ್ಬೇಡಿ: ದೇವೇಗೌಡ)

   ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ಚಾಲನೆ ನೀಡಿದ ಕುಮಾರಸ್ವಾಮಿ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರಾಷ್ಟ್ರೀಕೃತ ಬ್ಯಾಂಕ್ ಸೇರಿದಂತೆ ಸಹಕಾರ ಸಂಸ್ಥೆಗಳು ಹಾಗೂ ಸ್ತ್ರೀ ಸಂಘಗಳು ಪಡೆದಿರುವ ಸಾಲ ಮನ್ನಾ ಮಾಡುವ ಘೋಷಣೆ ಮಾಡುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.

   ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿರುವವರು ಅಧಿಕಾರದ ರಕ್ಷಣೆಯಲ್ಲಿದ್ದಾರೆ. ನಾಟಕ ಆಡೋರನ್ನ ದೂರವಿರಿಸಿ ಒಳ್ಳೆಯ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳಲು ಕರೆನೀಡಿರುವ ಕುಮಾರಸ್ವಾಮಿ, ಪರ್ಸೆಂಟ್ ವ್ಯವಹಾರದವರು ಬೇಕೋ, ಬದುಕಿಗೆ ಬೆಳಕು ಕೊಡುವರು ಬೇಕೋ ತೀರ್ಮಾನಿಸಿ ಎಂದು ಜನತೆಯಲ್ಲಿ ಮನವಿ ಮಾಡಿದ್ದಾರೆ.

   ಜನರ ತೆರಿಗೆ ಹಣ ಕಮಿಷನ್ ರೂಪದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಹೋಗುತ್ತಿದೆ. ಜೆಡಿಎಸ್ ಗೆ ಒಂದು ಸಲ ಅವಕಾಶ ಕೊಟ್ಟರೆ ಹೊಸ ಸರ್ಕಾರ ಕೊಡುತ್ತೇನೆ ಎಂದಿರುವ ಕುಮಾರಸ್ವಾಮಿ, 10 ದಿನಗಳಿಂದ ಪ್ರವಾಸ ಮಾಡಿದ್ದೇನೆ. ಸಂವೃದ್ದಿ ಮಂಜುನಾಥ್ ಅವರನ್ನ ಗೆಲ್ಲಿಸಿ ಎಂದು ಮುಳಬಾಗಿಲು ಜನತೆಯಲ್ಲಿ ಮನವಿ ಮಾಡಿದ್ದಾರೆ. ರಾಜ್ಯ ಸರಕಾರದ ವಿರುದ್ದ ಕುಮಾರಸ್ವಾಮಿ ವಾಗ್ದಾಳಿ.. ಮುಂದೆ ಓದಿ..

   ರಾಜ್ಯ ಸರಕಾರದ್ದು ಕಮಿಷನರ್ ಸರಕಾರ ಎಂದು ಬಿರುದು

   ಪ್ರಧಾನಮಂತ್ರಿಯವರು ರಾಜ್ಯ ಸರಕಾರದ್ದು ಕಮಿಷನರ್ ಸರಕಾರ ಎಂದು ಬಿರುದು ಕೊಟ್ಟುಹೋಗಿದ್ದಾರೆ. ಯಡಿಯೂರಪ್ಪನವರಿಗೆ ಮೋದಿಯವರು 'ರೈತಬಂದು' ಬಿರುದು ಕೊಟ್ಟಿದ್ದಾರೆ. ಗುಜರಾತ್ ನಲ್ಲಿ ದಲಿತರ ಭೂಮಿಯನ್ನು ಹಿಂಬಾಲಕರು ಲೂಟಿ ಮಾಡುತ್ತಿದ್ದಾರೆ. ದಲಿತರು ಸಜೀವ ದಹನ ಆಗಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

   ಲಂಚ ತೆಗೆದುಕೊಳ್ಳುವುದನ್ನು ಯಾರಿಗೂ ಗೊತ್ತಾಗದಂತೆ ಮಾಡಬೇಕು

   ಲಂಚ ತೆಗೆದುಕೊಳ್ಳುವುದನ್ನು ಯಾರಿಗೂ ಗೊತ್ತಾಗದಂತೆ ಮಾಡಬೇಕು ಎನ್ನುವುದು ಇದೇ ಭಾಗದ ನಮ್ಮ ಆರೋಗ್ಯ ಸಚಿವರು ಸಲಹೆ ನೀಡುತ್ತಾರೆ. ದಲಿತರನ್ನ ಶೂಗೆ ಹೋಲಿಸಿರುವ ವ್ಯಕ್ತಿಯನ್ನು ಬೆಂಬಲಿಸಬೇಡಿ. ಡ್ರಾಮ ವ್ಯಕ್ತಿ ರಮೇಶ್ ಕುಮಾರ್ ಅವರನ್ನು ಸೋಲಿಸಿ. ಜನರ ಜೀವನದ ಜೊತೆಗೆ ಚೆಲ್ಲಾಟವಾಡಬೇಡಿ. ರಮೇಶ್ ಕುಮಾರ್ ನನ್ನ ಮನೆ ಮುಂದೆ ಕುಳಿತುಕೊಳ್ಳಿಲಿ ಗೊತ್ತಾಗುತ್ತದೆ. ಮುಳಬಾಗಿಲು ಶಾಸಕ ಕೊತ್ತೂರು ಮಂಜುನಾಥ್ ಅವನ್ನು ಓಡಿಸಿ - ಕುಮಾರಸ್ವಾಮಿ.

   ಕೆಸಿ ವ್ಯಾಲಿ ಯೋಜನೆ ಜಾರಿ ಮಾಡುತ್ತಿರೋದು ಯಾಕೆ?

   ದೂರದ ಎತ್ತಿನಹೊಳೆ ನೀರು ತರುವುದಾದರೆ ಇಲ್ಲಿರುವ ಯರಗೋಳು ಯೋಜನೆ ಜಾರಿ ಮಾಡೋದಿಕ್ಕೆ ಆಗಲ್ವಾ? ಎತ್ತಿನಹೊಳೆ ಹರಿಸುವ ಆತ್ಮವಿಶ್ವಾಸವಿದ್ದರೆ ಕೋಲಾರ ಜಿಲ್ಲೆಗೆ ಕೊಳಚೆ ನೀರು ಹರಿಸುವ ಕೆಸಿ ವ್ಯಾಲಿ ಯೋಜನೆ ಜಾರಿ ಮಾಡುತ್ತಿರೋದು ಯಾಕೆ? ಮಾಯಾವತಿ ಅವರು ಜೆಡಿಎಸ್ ಬೆಂಬಲಿಸಿದ್ದಾರೆ. ಅಲ್ಲಸಂಖ್ಯಾತ ಬಂಧುಗಳು ಕಾಂಗ್ರೆಸ್ ಬೆಂಬಲಿಸಬೇಡಿ - ಕುಮಾರಸ್ವಾಮಿ.

   ಜನರ ದುಡ್ಡಲ್ಲಿ ಪುಟಗಟ್ಟಲೆ ಸಿಎಂ ಜಾಹೀರಾತು

   ಪಾರ್ಟಿಯ ವರಿಷ್ಟರೂ ಇಲ್ಲ, ಸಚಿವರು ಇಲ್ಲ ಜನರ ದುಡ್ಡಲ್ಲಿ ಪುಟಗಟ್ಟಲೆ ಸಿಎಂ ಜಾಹೀರಾತು ನೀಡುತ್ತಿದ್ದಾರೆ. ಡಿ.ಕೆ.ರವಿ ಕುಟುಂಬಕ್ಕೆ ರಾಜ್ಯ ಸರ್ಕಾರ ಏನೂ ಕೊಟ್ಟಿಲ್ಲ. ಕಾಂಗ್ರೆಸ್, ಬಿಜೆಪಿ ಬೇಡ ಕುಮಾರಸ್ವಾಮಿ ಬೇಕು ಅಂತಾ ರಾಜ್ಯದಲ್ಲಿ ಚರ್ಚೆ ಆಗುತ್ತಿದೆ. ಸಿದ್ದರಾಮಯ್ಯ ಜನರ ತಲೆ ಮೇಲೆ ತೆರಿಗೆ ಹಾಕಿದ್ದಾರೆ. ಕಮಿಷನ್ ಪರ್ಸೆಂಟೇಜ್ ಸರ್ಕಾರಗಳು ನಮಗೆ ಬೇಡ - ಕುಮಾರಸ್ವಾಮಿ.

   ಸಿಎಂ ಬಡಾಯಿಗೇನೂ ಕಡಿಮೆಯಿಲ್ಲ

   ಸೋಲಾರ ಎನರ್ಜಿ ಹೆಸರಲ್ಲಿ ರಾಜ್ಯದ ಜನರ ಗಂಟು ಲೂಟಿಯಾಗಿದೆ. ಎಂಟು ಗಂಟೆ ವಿದ್ಯುತ್ ಕೊಡಲು ಸಾಧ್ಯವಿಲ್ಲದ ಸಿಎಂ ಬಡಾಯಿಗೇನೂ ಕಡಿಮೆಯಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ದುಡ್ಡು ಹೊಡೆದುಕೊಂಡು ಹೋದರು. ಕೆ.ಸಿ.ವ್ಯಾಲಿ ಯೋಜನೆ ಹೆಸರಿನಲ್ಲಿ ಸಾವಿರಾರು ಕೋಟಿ ಲೂಟಿ ಮಾಡುತ್ತಿದ್ದಾರೆ. ಅಧಿಕಾರ ದುರುಪಯೋಗ ಪಡಿಸಿಕೊಂಡು ರಮೇಶ್ ಕುಮಾರ್ ಅರಣ್ಯವನ್ನು ಲೂಟಿ ಮಾಡಿದ್ದಾರೆ - ಕುಮಾರಸ್ವಾಮಿ.

   ವಿಶ್ರಾಂತಿ ಇಲ್ಲದೆ ಹೋರಾಟ ಮಾಡುತ್ತಿದ್ದೇನೆ

   ಹೃದಯ ಖಾಯಿಲೆ ಒಳಗಾಗಿದ್ದೇನೆ. ವಿಶ್ರಾಂತಿ ಇಲ್ಲದೆ ಹೋರಾಟ ಮಾಡುತ್ತಿದ್ದೇನೆ. 3700 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಸ್ರೇಲ್ ನಲ್ಲಿ ಪ್ರವಾಸ ಮಾಡಿದೆ. ಅಲ್ಲಿ ಹೃದಯಘಾತವಾಯಿತು. ಅಲ್ಲಿ ಜೀವ ಉಳಿಸಿಕೊಂಡು ರೈತರ ಪರಿಸ್ಥಿತಿ ನೋಡಿ ವಾಪಸ್ಸು ರಾಜ್ಯದ ಭೂಮಿಗೆ ಬಂದಿದ್ದೇನೆ. ಸಹಕಾರಿ ಬ್ಯಾಂಕಿನ, ರಾಷ್ಟೀಯ ಬ್ಯಾಂಕ್ ಗಳ ಸಾಲ ಸಂಪೂರ್ಣ ಮನ್ನಾ ಮಾಡುತ್ತೇವೆ. ಹಣದ ವ್ಯಾಮೋಹಕ್ಕೆ ಒಳಗಾಗಬೇಡಿ, ಜೆಡಿಎಸ್ ಅಭ್ಯರ್ಥಿಯನ್ನ ಗೆಲ್ಲಿಸಿ. ಮೇನಲ್ಲಿ ಚುನಾವಣೆ ನಡೆಯಲಿದೆ, ನರೇಂದ್ರ ಮೋದಿ ಶಾಸ್ತ್ರ ಕೇಳಿ ದಿನಾಂಕ ಇಡುತ್ತಾರೆ. ಬಿಜೆಪಿ ಅಧಿಕಾರಕ್ಕೆ ಬರೋದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Do not believe in PM Narendra Modi and CM Siddaramaiah's word: JDS State President HD Kumaraswamy statement. In a Vikasa Parva rally in Mulabagilu (Kolar district) Kumaraswamy said, we will waive off farmers loan if JDS comes to the power.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more