DK Suresh: ಕಾಂಗ್ರೆಸ್ ಸರ್ಕಾರ ಉಳಿಸಲು ಡಿಕೆ ಬ್ರದರ್ಸ್ ಅಲರ್ಟ್?

ಕರ್ನಾಟಕದ ರಾಜಕೀಯ ರಣರಂಗ ರಂಗೇರಿದೆ, ಅದರಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಇನ್ನೂ 6 ತಿಂಗಳು ಕಳೆದಿಲ್ಲ ಆಗಲೇ ಸಿಎಂ ಸ್ಥಾನಕ್ಕೆ ಫೈಟ್ ಶುರುವಾಗಿದೆ. ಹೀಗೆ ಪರಿಸ್ಥಿತಿ ಕೈಮೀರಿ ಹೋದ ಸಮಯದಲ್ಲಿ ರಾಜ್ಯದಲ್ಲಿ ಸರ್ಕಾರ ಬೀಳುತ್ತೆ ಅಂತ ಬಿಜೆಪಿ ನಾಯಕರು ಬಾಂಬ್ ಸಿಡಿಸುತ್ತಿದ್ದಾರೆ. ಹೀಗಿದ್ದಾಗ ಡಿಕೆ ಬ್ರದರ್ಸ್ ಹೊಸ ದಾಳ ಉರುಳಿಸಿ, ಎದುರಾಳಿ ಪಡೆಗೆ ಶಾಕ್ ಮೇಲೆ ಶಾಕ್ ಕೊಡ್ತಿದ್ದಾರೆ.

ಇತ್ತೀಚೆಗಷ್ಟೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಚಿವ ಸತೀಶ್ ಜಾರಕಿಹೊಳಿ ಅವರನ್ನ ಭೇಟಿ ಮಾಡಿದ್ದರು. ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ಬಳಿಕ ಅವರ ಸಹೋದರ ಕೂಡ ಇಂದು ದಿಢೀರ್ ಸತೀಶ್ ಜಾರಕಿಹೊಳಿರನ್ನ ಮೀಟ್ ಮಾಡಿದ್ದಾರೆ. ಸಂಸದ ಡಿ.ಕೆ.ಸುರೇಶ್ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರ ಭೇಟಿ ರಾಜ್ಯ ರಾಜಕೀಯದಲ್ಲಿ ಹೊಸ ವೇವ್ ಕ್ರಿಯೇಟ್ ಮಾಡಿದೆ. ಹಾಗಾದರೆ ಇಬ್ಬರ ನಡುವೆ, ಇಂದು ನಡೆದಿರುವ ಮಾತುಕತೆ ಏನು? ಈ ಬಗ್ಗೆ ಸಂಸದ ಡಿ.ಕೆ.ಸುರೇಶ್ ಹೇಳಿದ್ದೇನು? ಆ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ, ಮುಂದೆ ಓದಿ.

dk-suresh-and-satish-jarkiholi-meeting

ಕರ್ನಾಟಕಕ್ಕೆ ಮಹಾರಾಷ್ಟ್ರ ರಾಜಕೀಯ ಎಂಟ್ರಿ?

ಹೌದು, ಬೆಳಗಾವಿ ರಾಜಕೀಯ ಗದ್ದಲದ ನಡುವೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಕೆಲವು ದಿನಗಳ ಹಿಂದೆ ಮೀಟ್ ಮಾಡಿ ಚರ್ಚೆ ನಡೆಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉರುಳುತ್ತೆ & ಬೀಳುತ್ತೆ ಎಂಬ ಮಾತುಗಳ ನಡುವೆ ಡಿಸಿಎಂ ಡಿ.ಕೆ.ಶಿವಕುಮಾರ್ & ಸಚಿವ ಸತೀಶ್ ಜಾರಕಿಹೊಳಿ ಮಾತುಕತೆ ಕುತೂಹಲ ಕೆರಳಿಸಿತ್ತು. ಈ ನಡುವೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಉರುಳಿಸಲು ಮಹಾರಾಷ್ಟ್ರದ ರಾಜಕೀಯವೂ ಕೈಹಾಕಿದೆ. ಎಂಬ ಸುದ್ದಿ ಸಂಚಲನ ಸೃಷ್ಟಿಸಿರುವ ಬೆನ್ನಲ್ಲಿ ಇಂದು ಸಂಸದ & ಡಿಸಿಎಂರ ಸಹೋದರ ಡಿ.ಕೆ. ಸುರೇಶ್ ಕೂಡ ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಅಲ್ಲದೆ ಈ ಬಗ್ಗೆ ಅವರು ವಿವರಣೆ ಕೂಡ ನೀಡಿದ್ದಾರೆ.

ಡಿ.ಕೆ. ಸುರೇಶ್ & ಜಾರಕಿಹೊಳಿ ಚರ್ಚೆ

ಅಂದಹಾಗೆ ಇಂದು ಬೆಂಗಳೂರಿನಲ್ಲಿ ಇರುವ ಸಚಿವ ಸತೀಶ್ ಜಾರಕಿಹೊಳಿ ಅವರ ಸರ್ಕಾರಿ ನಿವಾಸಕ್ಕೆ ಸಂಸದ ಡಿ.ಕೆ.ಸುರೇಶ್ ಭೇಟಿ ನೀಡಿದ್ದರು. ಈ ಬಗ್ಗೆ ಮಾತನಾಡಿರುವ ಅವರು 'ಸತೀಶ್ ಜಾರಕಿಹೊಳಿ ನಮ್ಮ ಕಾರ್ಯಾಧ್ಯಕ್ಷರು ಮಹತ್ತರ ಖಾತೆಯ ಕೂಡ ಹೊಂದಿದ್ದಾರೆ. ನನ್ನ ಕ್ಷೇತ್ರದಲ್ಲಿ ಮಳೆಯಿಂದ ರಸ್ತೆ ಗುಂಡಿ ಬಿದ್ದು ದೊಡ್ಡ ಸಮಸ್ಯೆ ಆಗಿದೆ. ಕ್ಷೇತ್ರದ ರಸ್ತೆಗಳ ಅಭಿವೃದ್ಧಿ ಮಾಡೋದಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಕೇಳಲು ಬಂದಿದ್ದೆ' ಅಂತಾ ಈಗ ಡಿ.ಕೆ.ಸುರೇಶ್ ಭೇಟಿ ಉದ್ದೇಶ ಹೇಳಿದ್ದಾರೆ. ಆದರೆ ರಾಜ್ಯದ ರಾಜಕೀಯ ಪಡಸಾಲೆಯಲ್ಲಿ ಬೇರೆಯದ್ದೇ ಚರ್ಚೆ ಶುರುವಾಗಿದೆ.

dk-suresh-and-satish-jarkiholi-meeting

ಸರ್ಕಾರ ಉಳಿಸಲು ಡಿಕೆ ಬ್ರದರ್ಸ್ ಅಸ್ತ್ರ?

ಕರ್ನಾಟಕ ಕಾಂಗ್ರೆಸ್‌ಗೆ ಸಂಕಷ್ಟ ಬಂದಾಗೆಲ್ಲಾ ಡಿಕೆ ಬ್ರದರ್ಸ್ ಬೆನ್ನೆಲುಬಾಗಿ ನಿಂತಿದ್ದರು. ಅದರಲ್ಲೂ ಕಳೆದ ಬಾರಿ ಸಮ್ಮಿಶ್ರ ಸರ್ಕಾರ ಉಳಿಸಲು ಇಬ್ಬರೂ ಸಾಕಷ್ಟು ಪ್ರಯತ್ನಪಟ್ಟು ಸುದ್ದಿಯಾಗಿದ್ದರು. ಈಗ ಕೂಡ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಕಂಟಕ ಎದುರಾಗಿರುವ ಸೂಚನೆ ಸಿಕ್ಕಿದೆ. ಹೀಗಿದ್ದಾಗ ಡಿ.ಕೆ. ಬ್ರದರ್ಸ್ ಅಲರ್ಟ್ ಆಗಿದ್ದಾರೆ ಅನ್ನೋ ಮಾತುಗಳು ಕೂಡ ಚರ್ಚೆಯ ಭಾಗವಾಗಿವೆ. ಅದರಲ್ಲೂ 130ಕ್ಕೂ ಹೆಚ್ಚು ಸ್ಥಾನ ಗೆದ್ದರೂ ಕಾಂಗ್ರೆಸ್‌ಗೆ, ಕಾಂಗ್ರೆಸ್ ನಾಯಕರಿಗೆ ಬಿಜೆಪಿ & ಜೆಡಿಎಸ್ ದೋಸ್ತಿ ಡೌಟ್ ಮೂಡಿಸಿದೆ. ಈ ಕಾರಣಕ್ಕಾಗಿ ಪಕ್ಷದಲ್ಲಿ ಭುಗಿಲೆದ್ದ ಅಸಮಾಧಾನದ ಬೆಂಕಿಗೆ ನೀರು ಹಾಕುತ್ತಿದ್ದಾರೆ ಎನ್ನಲಾಗಿದೆ.

ಯಾರು ಮಾಡ್ತಾರೆ 'ಆಪರೇಷನ್'

ರಾಜ್ಯ ರಾಜಕೀಯದಲ್ಲಿ ಆಪರೇಷನ್ ಅನ್ನೋದು ಕಾಮನ್ ಆಗೋಗಿದೆ. ಹಲವು ಸರ್ಕಾರ ಬಿದ್ದೋಗಿವೆ, ಹಲವು ಸರ್ಕಾರ ಇದೇ ಆಪರೇಷನ್ ಮೂಲಕ ಅಸ್ತಿತ್ವಕ್ಕೆ ಬಂದಿವೆ. ಆದರೂ ಈಗ ಪೂರ್ಣ ಬಹುಮತದ ಸರ್ಕಾರ ಇದ್ದಾಗಲೂ ಇಂತಹ ಮಾತು ಎದುರಾಗಿದ್ದು, ಚರ್ಚೆ ಜೋರಾಗಿದೆ. ಇದೇ ಸಮಯಕ್ಕೆ ಡಿಕೆ ಬ್ರದರ್ಸ್ ಮೈಕೊಡವಿ ನಿಂತಿದ್ದಾರೆ, ಏನೇ ಆದರೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಯಾರೂ ಮುಟ್ಟಬಾರದು ಎಂದು ಅವರು ರಣತಂತ್ರ ರೂಪಿಸಿದ್ದಾರೆ ಅನ್ನೋ ಮಾತು ಕೇಳಿಬಂದಿದೆ.

dk-suresh-and-satish-jarkiholi-meeting

ಯಾವಾಗ ಮುಗಿಯುತ್ತೆ ಗೊಂದಲ

ಈ ಕಾರಣಕ್ಕೆ ಸಚಿವರಾದ ಸತೀಶ್ ಜಾರಕಿಹೊಳಿ ಸೇರಿದಂತೆ ಅಸಮಾಧಾನ ಭುಗಿಲೆದ್ದ ಕಡೆ ಮಾತುಕತೆ ಮೂಲಕ ಅದನ್ನೆಲ್ಲಾ ಸರಿಮಾಡ್ತಿದ್ದಾರೆ. ಹಾಗೇ ಸಿಎಂ ಸಿದ್ದರಾಮಯ್ಯ ಕೂಡ ಗುಪ್ತಚರ ಮಾಹಿತಿ ಆಧರಿಸಿ, ಪಕ್ಷವನ್ನ ಬಲಪಡಿಸಿ ಸರ್ಕಾರಕ್ಕೆ ಏನೂ ಆಗದಂತೆ ರಕ್ಷಿಸಲು ಅಲರ್ಟ್ ಆಗಿದ್ದಾರೆ ಎಂಬ ಮಾತು ಓಡಾಡುತ್ತಿವೆ. ಇತ್ತ ಬಿಜೆಪಿ ನಾಯಕರು ಹೇಳುತ್ತಿರುವ ಮಾತುಗಳು ಕೂಡ, ಕಿಚ್ಚು ಹೆಚ್ಚಾಗಲು ಕಾರಣವಾಗುತ್ತಿದೆ. ಇದನ್ನೆಲ್ಲಾ ನೋಡುತ್ತಿದ್ರೆ, ಈ ಆಪರೇಷನ್ ಫೈಟಿಂಗ್ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಅದರಲ್ಲೂ ಪಂಚರಾಜ್ಯ ಚುನಾವಣೆ ಮುಗಿದ ನಂತರ ಈ ಫೈಟಿಂಗ್ ಮತ್ತಷ್ಟು ಹೆಚ್ಚಾಗುವ ಮುನ್ಸೂಚನೆ ಸಿಕ್ಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+