ಕೊರೊನಾ ಕೆಪಿಸಿಸಿ ಜಿಲ್ಲಾ ಕೋವಿಡ್ ಟಾಸ್ಕ್‌ಫೋರ್ಸ್ಸ ಮಿತಿ ನೇಮಕ

ಬೆಂಗಳೂರು, ಏ. 18: ಕೊರೊನಾ ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದೆ. ಎರಡನೇ ಹಂತದ ಲಾಕ್‌ಡೌನ್ ನಿಂದಾಗಿ ಜನರ ಸಮಸ್ಯೆಗಳು ಹೆಚ್ಚಾಗಿವೆ. ಆದರೆ ಕೊರೊವಾ ವೈರಸ್ ಅಥವಾ ಕೋವಿಡ್-19 ಸೋಂಕು ಹರಡದಂತೆ ತಡೆಯಲು ಸರ್ಕಾರದ ಎದುರು ಬೇರೆ ಆಯ್ಕೆ ಇಲ್ಲ. ಹೀಗಾಗಿ ಸರ್ಕಾರದ ಕ್ರಮಕ್ಕೆ ವಿರೋಧ ಪಕ್ಷಗಳು ಕೂಡ ಒಪ್ಪಿಗೆ ಸೂಚಿಸಿವೆ. ರಾಜ್ಯದಲ್ಲಿಯೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಲಾಕ್‌ಡೌನ್ ಸೇರಿದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸರ್ವಪಕ್ಷ ಸಭೆಯನ್ನು ಕರೆದಿದ್ದರು.

ಸರ್ವಪಕ್ಷ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು. ಈ ಮಧ್ಯೆ ಸರ್ಕಾರದ ಕೆಲಸಗಳು ಜನರಿಗೆ ತಲುಪುತ್ತಿರುವ ಬಗ್ಗೆ ಖಾತರಿಪಡಿಸಿಕೊಳ್ಳಲು, ಮಾಜಿ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ನೇತೃತ್ವದ ರಾಜ್ಯಮಟ್ಟದ ಕೆಪಿಸಿಸಿ ಕೋವಿಡ್-19 ಕಾರ್ಯಪಡೆಯನ್ನು ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇಮಕ ಮಾಡಿದ್ದರು. ಇದೀಗ ಜಿಲ್ಲಾ ಮಟ್ಟದಲ್ಲಿಯೂ ಸರ್ಕಾರದ ಕೆಲಸಗಳ ಬಗ್ಗೆ ನಿಗಾ ವಹಿಸಲು ಜಿಲ್ಲಾ ಮಟ್ಟದ ಕಾರ್ಯಪಡೆಯನ್ನು ಕೆಪಿಸಿಸಿ ನೇಮಕ ಮಾಡಿದೆ.

ಕೆಪಿಸಿಸಿ ವೈದ್ಯ ಘಟಕದ ಅಧ್ಯಕ್ಷ ಡಾ. ರಾಘವೇಂದ್ರ ಎನ್ ಅವರ ಮನವಿಯಂತೆ ಜಿಲ್ಲಾ ಟಾಸ್ಕ್‌ಫೊರ್ಸ್‌ ಸಮಿತಿ-Covid 19 ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆದೇಶ ಮಾಡಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಕೋವಿಡ್ 19 ಸೋಂಕು ಹರಡದಂತೆ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಈ ಸಮತಿ ನಿಗಾ ವಹಿಸಲಿದೆ. ಹಾಗೆ ಅಗತ್ಯ ಬಿದ್ದರೆ ವೈದ್ಯಕೀಯ ಸಲಹೆಗಳನ್ನು ಜಿಲ್ಲಾ ಕಾಂಗ್ರೆಸ್ ಘಟಕಗಳಿಗೆ ಒದಗಿಸಲಿದೆ.

DK Sivakumar has appointed a district level task force to monitor the governments plans at the district level.

6 ಜನ ಸದಸ್ಯರ ಜಿಲ್ಲಾ ಟಾಸ್ಕ್‌ಫೊರ್ಸ್‌ ಸಮಿತಿ-Covid 19 ಸದಸ್ಯರನ್ನಾಗಿ ಹಾಸನದ ಡಾ. ಮದುಸೂದನ್, ಮೈಸೂರಿನ ಡಾ. ಭರತ್‌ಕುಮಾರ್ ಡಿ., ಶಿವಮೊಗ್ಗದ ಡಾ. ಕ್ಸೇವಿಯರ್ ಪ್ರದೀಪ್ ಡಿ ಮೆಲ್ಲೋ, ಧಾರವಾಡ ಡಾ. ದೀಪಕ್ ಕಲಾದಗಿ, ಬೆಂಗಳೂರಿನ ಡಾ. ರಾಜೇಶ್ ಹಾಗೂ ಡಾ. ಜಾವೇದ್ ಜೋಹರ್ ಶಹೀನ್ ಅವರನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಕಾಂಗ್ರೆಸ್ ಕಮಿಟಿ ಅಧ್ಯಕ್ಷರುಗಳು ಜಿಲ್ಲಾ ಟಾಸ್ಕ್‌ಫೊರ್ಸ್‌ ಸಮಿತಿ-Covid 19 ಸೇವೆ ಬಳಸಿಕೊಳ್ಳುವಂತೆ ಸೂಚಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+