DK Shivakumar Property: ಡಿ.ಕೆ.ಶಿವಕುಮಾರ್ ಬಳಿ ಒಟ್ಟು ಎಷ್ಟು ಕೋಟಿ ಆಸ್ತಿ ಇದೆ? ಅಸಲಿ ವಿವರ ಬಹಿರಂಗ
ಕರ್ನಾಟಕದ ಭವಿಷ್ಯದ ಮುಖ್ಯಮಂತ್ರಿಯಾಗುವ ಕನಸು ಹೊತ್ತಿದ್ದಾರೆ ಡಿ.ಕೆ.ಶಿವಕುಮಾರ್. ಕನಕಪುರದ ಬಂಡೆ ಎಂದೇ ರಾಜ್ಯ ರಾಜಕಾರಣದಲ್ಲಿ ಹವಾ ಸೃಷ್ಟಿಸಿರುವ ಅವರು ಸದ್ಯ ಉಪಮುಖ್ಯಮಂತ್ರಿ ಸ್ಥಾನದಲ್ಲಿದ್ದಾರೆ. ಈಗೆಲ್ಲ ರಾಜಕಾರಣಿಗಳು ಅಂದರೆ ತುಂಬಾ ಶ್ರೀಮಂತರು, ಭಾರೀ ಆಸ್ತಿ ಹೊಂದಿರುತ್ತಾರೆ ಎನ್ನುವ ಮಾತಿದೆ. ಡಿಕೆ ಶಿವಕುಮಾರ್ ಅವರು ರಾಜಕಾರಣದ ಜೊತೆಗೆ ಬಿಸಿನೆಸ್‌ನಲ್ಲೂ ಇದ್ದಾರೆ. ಹೀಗಾಗಿ ಶ್ರೀಮಂತ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ಡಿ.ಕೆ.ಶಿವಕುಮಾರ್ ಅವರ ಒಟ್ಟು ಆಸ್ತಿ ಎಷ್ಟಿದೆ ಎಂಬ ಮಾಹಿತಿ ಬಹಿರಂಗವಾಗಿದೆ.
ದೇಶದ ಅತ್ಯಂತ ಶ್ರೀಮಂತ ರಾಜಕೀಯ ನಾಯಕರ ಪಟ್ಟಿಯಲ್ಲೂ ಡಿ.ಕೆ.ಶಿವಕುಮಾರ್ ಅವರು ಮುಂಚೂಣಿ ಸ್ಥಾನ ಪಡೆದಿದ್ದಾರೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿಯಲ್ಲಿ ಈ ವಿಚಾರ ಹೊರಬಿದ್ದಿದ್ದು, ಪ್ರಸ್ತುತ ಡಿಕೆ ಶಿವಕುಮಾರ್ ಅವರ ಒಟ್ಟು ಆಸ್ತಿ ಎಷ್ಟಿದೆ ಎಂಬುದು ಬಹಿರಂಗವಾಗಿದೆ. ಅದರಂತೆ ಡಿ.ಕೆ.ಶಿವಕುಮಾರ್ ದೇಶದ ಎರಡನೇ ಶ್ರೀಮಂತ ಸಚಿವರು ಎಂದು ಈ ವರದಿ ತಿಳಿಸಿದೆ.

ರಾಜ್ಯದ 8 ಮಂದಿ ಬಳಿ 100 ಕೋಟಿ ಆಸ್ತಿ
ಚುನಾವಣೆ ಸಂದರ್ಭದಲ್ಲಿ ಎಲ್ಲ ರಾಜ್ಯಗಳ ವಿಧಾನಸಭೆ, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಚಿವರು ಸಲ್ಲಿಸಿದ್ದ ಪ್ರಮಾಣಪತ್ರಗಳನ್ನು ವಿಶ್ಲೇಷಿಸಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿ ಬಿಡುಗಡೆ ಮಾಡಿದೆ. ಒಟ್ಟು 652 ಸಚಿವರ ಪೈಕಿ 643 ಸಚಿವರು ಸಲ್ಲಿಸಿದ್ದ ಪ್ರಮಾಣಪತ್ರಗಳಿಂದ ಈ ಮಾಹಿತಿ ತೆಗೆಯಲಾಗಿದೆ. ಕರ್ನಾಟಕದ ಎಂಟು ಸಚಿವರು ಬರೋಬ್ಬರಿ 100 ಕೋಟಿ ರೂಪಾಯಿಗಿಂತ ಹೆಚ್ಚು ಆಸ್ತಿ ಹೊಂದಿರುವ ಇರುವ ಇದ್ದಾರೆ. ಇದಾದ ನಂತರ ಆಂಧ್ರಪ್ರದೇಶದಲ್ಲಿ ಶ್ರೀಮಂತ ರಾಜಕಾರಣಿಗಳಿದ್ದಾರೆ.
ಎಡಿಆರ್ ವರದಿ ಪ್ರಕಾರ ಕಾಂಗ್ರೆಸ್ ಪಕ್ಷದ ಡಿ.ಕೆ.ಶಿವಕುಮಾರ್ ಅವರ ಬಳಿ 1,413 ಕೋಟಿ ಆಸ್ತಿ ಇದೆ. ಈ ಮೂಲಕ ಎರಡನೇ ಶ್ರೀಮಂತ ಸಚಿವ ಎನಿಸಿಕೊಂಡಿದ್ದಾರೆ. ಟಿಡಿಪಿ ಪಕ್ಷದ ಕೇಂದ್ರ ಸಚಿವ ಚಂದ್ರಶೇಖರ ಪೆಮ್ಮಸಾನಿ ಅವರು ಬರೋಬ್ಬರಿ 5,705 ಕೋಟಿ ಆಸ್ತಿ ಹೊಂದಿದ್ದು ದೇಶದ ಕುಬೇರ ಸಚಿವ ಎಂದು ಮೊದಲ ಸ್ಥಾನ ಅಲಂಕರಿಸಿದ್ದಾರೆ.

ಅತಿ ಹೆಚ್ಚು ಶತಕೋಟ್ಯಾಧಿಪತಿ ಸಚಿವರನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವು ಮೊದಲ ಸ್ಥಾನದಲ್ಲಿದ್ದರೆ, ಟಿಡಿಪಿ ಪಕ್ಷದಿಂದಾಗಿ ಆಂಧ್ರಪ್ರದೇಶ ಎರಡನೇ ಸ್ಥಾನದಲ್ಲಿದೆ. ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷ (ಟಿಡಿಪಿ) ಎರಡನೇ ಅತಿ ಹೆಚ್ಚು ಶತಕೋಟ್ಯಾಧಿಪತಿ ಸಚಿವರನ್ನು ಹೊಂದಿರುವ ರಾಜಕೀಯ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಂಧ್ರಪ್ರದೇಶದ ಆರು ಮಂದಿ ಸಚಿವರು ಶತಕೋಟ್ಯಾಧಿಪತಿಗಳಾಗಿದ್ದು, ಅವರಲ್ಲಿ ಐದು ಮಂದಿ ಟಿಡಿಪಿಯವರು ಮತ್ತು ಒಬ್ಬರು ಜನಸೇನಾ ಪಕ್ಷಕ್ಕೆ ಸೇರಿದ್ದಾರೆ.
ಒಟ್ಟು 643 ಸಚಿವರ ಪೈಕಿ 302 ಮಂದಿ ರಾಜಕಾರಣಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳೂ ಇದ್ದು, 174 ವಿರುದ್ಧ ಗಂಭೀರ ಅಪರಾಧ ಪ್ರಕರಣಗಳಿವೆ. ಕೇಂದ್ರ ಸಚಿವ ಸಂಪುಟದ 29 ಮಂದಿಯ ವಿರುದ್ಧ ಪ್ರಕರಣಗಳಿವೆ. ಈ ಪ್ರಕರಣಗಳಲ್ಲಿ ಕೊಲೆ, ಕೊಲೆ ಯತ್ನ, ಅಪಹರಣ, ಮಹಿಳೆಯರ ವಿರುದ್ಧ ಅಪರಾಧಗಳು ಸೇರಿದಂತೆ ಹಲವು ಕೇಸ್‌ಗಳಿವೆ.












Click it and Unblock the Notifications