ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲು ಅಪರೇಷನ್ ಕಮಲ ಮಾಡಿದ್ರು, ಈಗ ರೌಡಿಗಳ ಆಪರೇಷನ್ ಮಾಡ್ತಿದ್ದಾರೆ: ಡಿ.ಕೆ.ಶಿವಕುಮಾರ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 2: ಮೊದಲು ಅಪರೇಷನ್ ಕಮಲ ಮಾಡಿದ್ರು, ಈಗ ರೌಡಿಗಳ ಆಪರೇಷನ್ ಮಾಡ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ, ಶುಭವಾಗಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವ್ಯಂಗ್ಯವಾಡಿದರು.

ಈ ಕುರಿತು ನಗರದಲ್ಲಿ ಶುಕ್ರವಾರ ಮಾಧದ್ಯಮಗಳ ಜೊತೆಗ ಮಾತನಾಡಿದ ಅವರು, ಬಿಜೆಪಿಯದ್ದು ಡಬಲ್ ಇಂಜಿನ್ ಸರ್ಕಾರ, ನಮ್ಮ ಪಾರ್ಟೀನೇ ಇಲ್ಲ, ಅವರದೇ ಪಾರ್ಟಿ ಇರೋದು ದೇಶದಲ್ಲಿ, ಏನೋ ಹೆಣ ಹೊರಲು ನಾಲ್ಕು ಜನ ಇದ್ದೇವೆ ಎಂದು ಕುಟುಕಿದರು.

ಬೆಂಗಳೂರು ಬಳಿ ಚಿರತೆ ಪ್ರತ್ಯಕ್ಷ, ಜನರ ಆತಂಕ ಬೆಂಗಳೂರು ಬಳಿ ಚಿರತೆ ಪ್ರತ್ಯಕ್ಷ, ಜನರ ಆತಂಕ

ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರವಾಗಿ ಮಾತನಾಡಿ, ಮೂರ್ನಾಲ್ಕು ದಿನಗಳಲ್ಲಿ ಚುನಾವಣೆ ಸಮಿತಿ ರಚನೆ ಆಗುತ್ತದೆ. ದೆಹಲಿ ಇಂದ ಸಮಿತಿ ಸದಸ್ಯರ ಪಟ್ಟಿ ಬಿಡುಗಡೆ ಆಗುತ್ತದೆ ಎಂದರು.

ರೌಡಿಗಳನ್ನ ಬಿಜೆಪಿ ಸೇರ್ಪಡೆ; ಏನಿದು ವಿವಾದ?

ಚಾಮರಾಜಪೇಟೆಯ ಬಿ.ಎಸ್‌. ವೆಂಕಟರಾಮ್‌ ಕಲಾಭವನದಲ್ಲಿಸೈಲೆಂಟ್‌ ಸುನೀಲ್‌ ಭಾನುವಾರ ಬೃಹತ್‌ ರಕ್ತದಾನ ಶಿಬಿರ ಈ ಕಾರ್ಯಕ್ರಮದಲ್ಲಿ ತೇಜಸ್ವಿ ಸೂರ್ಯ, ಪಿ.ಸಿ. ಮೋಹನ್‌, ಬಿಜೆಪಿ ಶಾಸಕ ಉದಯ್‌ ಗರುಡಾಚಾರ್‌, ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಎನ್‌.ಆರ್‌. ರಮೇಶ್‌ ಹಾಗೂ ಇತರರು ಸೈಲೆಂಟ್‌ ಸುನೀಲ್‌ ಜತೆಗೆ ವೇದಿಕೆ ಹಂಚಿಕೊಂಡಿದ್ದ ಬಗ್ಗೆ ವ್ಯಾಪಕ ಆಕ್ಷೇಪ ಕೇಳಿಬಂದಿತ್ತು. ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಈ ಮಧ್ಯೆ ವಸತಿ ಸಚಿವ ವಿ ಸೋಮಣ್ಣ ಮನೆಗೆ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಭೇಟಿ ನೀಡಿದ್ದು ಭಾರೀ ಕುತೂಹಲ ಮೂಡಿಸಿದೆ.

DK Shivakumar Says Before BJP Done Operation Lotus , Now Doing Operation Rowdies

ವಿಜಯನಗರದಲ್ಲಿರುವ ಸಚಿವ ವಿ.ಸೋಮಣ್ಣ ನಿವಾಸಕ್ಕೆ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ತನ್ನ ಗ್ಯಾಂಗ್​ನ 40 ರಿಂದ 50 ಜನ ಹುಡುಗರ ಜೊತೆಗೆ ಭೇಟಿ ನೀಡಿದ್ದಾನೆ. ಇನ್ನೂ ವಿಲ್ಸನ್​ಗಾರ್ಡನ್ ನಾಗ, ಶ್ರೀಕಾಂತ್​ ಅಲಿಯಾಸ್​ ಆ್ಯಪಲ್ ಸಂತು ನವೆಂಬರ್​ 23 ರಂದು ಸಿಸಿಬಿ ದಾಳಿ ವೇಳೆ ತಲೆಮರೆಸಿಕೊಂಡಿದ್ದರು. ಎಚ್ಚೆತ್ತ ಸಿಸಿಬಿ ಆರೋಪಿ ನಾಗನನ್ನು ಕರೆತಂದು ವಿಚಾರಣೆ ನಡೆಸಿದರು. ಬಳಿಕ ಆರೋಪಿ ನಾಗ ತನ್ನ ಗ್ಯಾಂಗ್ ಜೊತೆ ಸಚಿವ ವಿ ಸೋಮಣ್ಣ ಮನೆಗೆ ಭೇಟಿ ನೀಡಿದ್ದು, ವಿವಾದಕ್ಕೆ ಕಾರಣವಾಗಿದೆ.

ರಾಜ್ಯದ್ಯಂತ 60 ರೂಡಿಗಳು ಬಿಜೆಪಿ ಸೇರುತ್ತಿದ್ದಾರೆ: ಎಂ.ಲಕ್ಷ್ಮಣ್

ಇತ್ತ ಕಾಂಗ್ರೆಸ್ ವಕ್ತಾರರಾದ ಎಂ ಲಕ್ಷ್ಮಣ್ , ರಾಜ್ಯದ್ಯಂತ 60 ರೂಡಿಗಳು ಬಿಜೆಪಿ ಸೇರುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಗೆಲ್ಲಬಹುದಾದ ಕ್ಷೇತ್ರಗಳಲ್ಲಿ ಈ ರೌಡಿಗಳನ್ನು ಕಣಕ್ಕಿಳಿಸಲು ಬಿಜೆಪಿಯಲ್ಲಿ ಚರ್ಚೆ ನಡೆಯುತ್ತಿದೆ ಎಂದಿದ್ದಾರೆ.

ನಾಗಮಂಗಲದಲ್ಲಿ ಫೈಟರ್ ರವಿ ಎಂಬಾತ ಈಗಾಗಲೇ ಧಮಕಿಹಾಕಲು ಶುರು ಮಾಡಿಕೊಂಡಿದ್ದಾರೆ. ಇನ್ನು ರಾಜ್ಯದ 47 ಬಿಜೆಪಿ ಶಾಸಕರ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿವೆ. ಅವರಿಗೆ ಕ್ರಿಮಿನಲ್ ಹಿನ್ನೆಲೆಗಳಿವೆ. 224 ಕ್ಷೇತ್ರದ ಪೈಕಿ ಬಿಜೆಪಿಯ 47, ಕಾಂಗ್ರೆಸ್ ನ 13 ಹಾಗೂ ಜೆಡಿಎಸ್ ನ ಹನ್ನೊಂದು ಶಾಸಕರ ಮೇಲೆ ಕ್ರಿಮಿನಲ್ ಹಿನ್ನಲೆ ಇದೆ. ಇನ್ನು ಮೂರು ಜನ ಸಂಸದರ ಮೇಲು ಕ್ರಿಮಿನಲ್ ಕೇಸ್ಗಳಿದ್ದು ಆ ಮೂರು ಜನ ಸಂಸದರು ಬಿಜೆಪಿಯವರಾಗಿದ್ದಾರೆ. 16 ಮಂತ್ರಿಗಳ ಪೈಕಿ 13 ಜನ ಮಂತ್ರಿಗಳ ಮೇಲೆ ಲೈಂಗಿಕ ಸಿಡಿ ಪ್ರಕರಣಗಳಿವೆ. ಈ 13 ಮಂದಿಯು ಈ ವಿಚಾರವಾಗಿ ಸುದ್ದಿ ಪ್ರಕಟಿಸಿದಂತೆ ತಡೆಯಾಜ್ಞೆ ತಂದಿದ್ದಾರೆ. ಇದು ಬಿಜೆಪಿಯವರ ಸಂಸ್ಕೃತಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಸೇರಲು ಒಂದಾಗಿರುವ 60 ಜನ ರೌಡಿಗಳ ಬಗ್ಗೆ ನಮಗೆ ಮಾಹಿತಿ ಇದೆ ಯಾವ ಜಿಲ್ಲೆಯಿಂದ ಎಷ್ಟು ಜನ ಸೇರುತ್ತಿದ್ದಾರೆ ಎಂಬ ಮಾಹಿತಿಯು ಇದೆ. ಬೆಂಗಳೂರಿನಲ್ಲಿ 26 ಜನರಿದ್ದಾರೆ. ಈ ವಿಚಾರದಲ್ಲಿ ಕುತೂಹಲ ಹೀಗೆ ಇರಲಿ. ಸ್ಪೀಕರ್ ಅವರು ಸೇರಿದಂತೆ ನಾವು ಆರ್ ಎಸ್ ಎಸ್ ಹಿನ್ನೆಲೆಯಿಂದ ಬಂದವರು ಆರ್ ಎಸ್ ಎಸ್ ನಲ್ಲಿ ವ್ಯಕ್ತಿ, ವ್ಯಕ್ತಿತ್ವ ಹಾಗೂ ಸಂಸ್ಕೃತಿ, ದೇಶ ನಿರ್ಮಾಣ ಬೆಳವಣಿಗೆಗೆ ಅವಕಾಶವಿದೆ ಎಂದು ಹೇಳುತ್ತಾರೆ. ಆದರೆ ರೌಡಿಗಳನ್ನು ಯಾಕೆ ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂದು ಸಮರ್ಥನೆ ಮಾಡಿಕೊಂಡವರು ಮುಖ್ಯಮಂತ್ರಿಗಳು ಹಾಗೂ ಸಚಿವ ಅಶ್ವತ್ ನಾರಾಯಣ ಅವರು. ಮಾಧ್ಯಮಗಳಲ್ಲಿ ಟೀಕೆ ಹೆಚ್ಚಾದ ಬಳಿಕ ನಮಗೂವರೆಗೂ ಸಂಬಂಧವಿಲ್ಲ ಎಂದು ಹೇಳುತ್ತಿದ್ದಾರೆ.

ಆದರೆ ಕೊಡಗೇರಿ ಪ್ರದೇಶಗಳಲ್ಲಿ ಮತ ಸೆಳೆಯುವ ಉದ್ದೇಶದಿಂದ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಲಾಗಿತ್ತು ಎಂದು ಅವರದೇ ಪಕ್ಷದ ನಾಯಕರು ಹೇಳುತ್ತಿದ್ದಾರೆ. ಈ ಪಟ್ಟಿಯನ್ನು ಸಮಯ ಬಂದಾಗ ತಿಳಿಸುತ್ತೇವೆ. ಈ ಪಟ್ಟಿಯನ್ನು ಬಿಜೆಪಿಯವರೇ ನೀಡಬಹುದು ಅದಕ್ಕಾಗಿ ಕಾಯೋಣ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಮೇಲೆ ನಾಲ್ಕು ಪ್ರಕರಣ, ಕೇಂದ್ರ ಸಚಿವ ಪ್ರಹಲ್ಲಾ ಜೋಶಿಯವರ ಮೇಲೆ ಒಂದು ಕ್ರಿಮಿನಲ್ ಪ್ರಕರಣ ಇದೆ. ಸಚಿವ ಶ್ರೀರಾಮುಲು, ಸಚಿವ ಗೋಪಾಲಯ್ಯ ಅವರು ಈ ಹಿಂದೆ ಎರಡು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದರು. ನಾವಿಲ್ಲಿ ಯಾವುದೇ ವ್ಯಕ್ತಿಗಳ ಮೇಲೆ ಟೀಕೆ ಮಾಡುತ್ತಿಲ್ಲ ಬಿಜೆಪಿಯವರು ಬೇರೆಯವರ ಮೇಲೆ ಕೆಸರು ಎರಚಿಸುವ ಮುನ್ನ ತಮ್ಮ ಸ್ಥಾನದ ಬಗ್ಗೆ ಆಲೋಚಿಸಬೇಕು ' ಎಂದು ತಿಳಿಸಿದರು.

English summary
First BJP done operation lotus , now doing operation rowdies says KPCC President DK Shivakumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X