ಡಿಕೆಶಿಗೆ ಬೆಂಗಳೂರು ಇತಿಹಾಸ ಪುಸ್ತಕವನ್ನ ಉಡುಗೊರೆಯಾಗಿ ಕೊಟ್ಟ ಎಸ್ ಎಂ ಕೃಷ್ಣ: ಡಿ ಕೆ ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು, ಮೇ 22: ನೂತನವಾಗಿ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಡಿ ಕೆ ಶಿವಕುಮಾರ ಸೋಮವಾರ ಸದಾಶಿವನಗರದಲ್ಲಿ ಮಾಜಿ ಮುಖ್ಯಮಂತ್ರಿ ಎಸ್‌ ಎಂ ಕೃಷ್ಣ ಅವರನ್ನ ಭೇಟಿಯಾಗಿ ಆಶೀರ್ವಾದ ಪಡೆದರು.

ಈ ವೇಳೆ ಡಿ ಕೆ ಶಿವಕುಮಾರ್‌ ಅವರನ್ನ ಎಸ್‌ ಎಂ ಕೃಷ್ಣ ಅವರು ಬೆಂಗಳೂರು ಇತಿಹಾಸ ಪುಸ್ತಕವನ್ನ ಉಡುಗೊರೆಯಾಗಿ ನೀಡಿದ್ದು, ಎಸ್‌ ಎಂ ಕೃಷ್ಣ ಅವರು ಬಹಳ ದೂರದೃಷ್ಟಿಯಿಂದ ಈ ಪುಸ್ತಕ ನೀಡಿದ್ದಾರ ಎಂದು ನೂತನ ಡಿಸಿಎಂ ಎಸ್‌ ಎಂ ಕೃಷ್ಣ ಹೇಳಿದ್ದಾರೆ.

DK Shivakumar Visits SM Krishna

ವಿಧಾನಸಭೆ ನೂತನ ಸದಸ್ಯರಾಗಿ ಇಂದು ಪ್ರಮಾಣವಚನ ಸ್ವೀಕಾರ ಮಾಡಲಾಗುತ್ತಿದ್ದು, ನನಗೆ ರಾಜಕೀಯವಾಗಿ ಪ್ರೋತ್ಸಾಹ ನೀಡಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಆಶೀರ್ವಾದ ಪಡೆಯುವುದು ನನ್ನ ಕರ್ತವ್ಯ. ಹೀಗಾಗಿ ಅವರ ನಿವಾಸಕ್ಕೆ ಭೇಟಿ ನೀಡಿ, ಅವರ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆಯಲು ಬಂದಿದ್ದೇನೆ. ಅವರು ಬೆಂಗಳೂರು ಇತಿಹಾಸವೆಂಬ ಪುಸ್ತಕ ನೀಡಿದ್ದಾರೆ.

ಮಳೆಗೆ ಬ್ಯಾಟರಾಯನಪುರದಲ್ಲಿ 27 ವರ್ಷದ ಯುವಕ ಕೊಚ್ಚಿ ಹೋಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಿನ್ನೆ (ಭಾನುವಾರ) ರಾತ್ರಿ ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಇಂತಹ ದುರ್ಘಟನೆಯ ನಡೆಯುತ್ತಿರುವುದು ದುರಾದೃಷ್ಟಕರ. ನಾವು ಎಲ್ಲೇ ಇದ್ದರೂ ಕಾಲುವೆಗಳ ಬಳಿ ಬಹಳ ಜಾಗೃತವಾಗಿ ಇರಬೇಕು. ಈ ಹಿಂದೆ ಕೇಂದ್ರ ಸರ್ಕಾರ ನಮ್ಮ ಯೋಜನೆ ಮೂಲಕ ನಗರಗಳ ಮೂಲಸೌಕರ್ಯ ಅಭಿವೃದ್ಧಿಗೆ ಬಹಳ ನೆರವು ನೀಡಿದ್ದರು. ಈಗಲೂ ನಗರಗಳಿಗೆ ಕೇಂದ್ರ ಸರ್ಕಾರದ ಯೋಜನೆಗಳನ್ನು ಎಷ್ಟರ ಮಟ್ಟಿಗೆ ಸದುಪಯೋಗ ಪಡಿಸಿಕೊಂಡಿದ್ದಾರೆ ಎಂದು ನೋಡಬೇಕಿದೆ.

DK Shivakumar Visits SM Krishna

ಇನ್ನು ನಗರದ ಪ್ರಮುಖ ಅಂಡರ್ ಪಾಸ್ ಗಳ ಕುರಿತು ವರದಿ ತರಿಸಿಕೊಡು ಈ ಪ್ರದೇಶಗಳಲ್ಲಿ ಈ ರೀತಿ ಆಗದ ರೀತಿಯಲ್ಲಿ ಮುನ್ನೆಚ್ಚರಿಕೆ ವಹಿಸಬೇಕಿದೆ. ಪ್ರತಿಯೊಂದು ಜೀವ ಕಾಪಾಡುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+