Breaking; ವಿಡಿಯೋ, ಡಿಕೆಶಿ ಕೈ ಹಿಡಿದು ಓಡಿದ ರಾಹುಲ್ ಗಾಂಧಿ
ಬೆಂಗಳೂರು, ಅಕ್ಟೋಬರ್ 10; ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಲುಪಿದೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸೇರಿದಂತೆ ವಿವಿಧ ನಾಯಕರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
Somedays you walk, Somedays you sprint!
— DK Shivakumar (@DKShivakumar) October 10, 2022
Chasing a dream requires you to do both! #BharathAikyataYatre#BharatJodoYatra pic.twitter.com/WaZtPYTfnV
ಸೋಮವಾರ ರಾಹುಲ್ ಗಾಂಧಿ ಡಿ. ಕೆ. ಶಿವಕುಮಾರ್ ಕೈ ಹಿಡಿದು ಓಡುವ ಮೂಲಕ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದವರಿಗೆ ಹುರುಪು ತುಂಬಿದರು. ಕಳೆದ ವಾರ ಸಿದ್ದರಾಮಯ್ಯ ಜೊತೆ ಅವರು ಓಡಿ ಗಮನ ಸೆಳೆದಿದ್ದರು.

ಡಿ. ಕೆ. ಶಿವಕುಮಾರ್ ರಾಹುಲ್ ಗಾಂಧಿ ಜೊತೆ ಕಾಂಗ್ರೆಸ್ ಪಕ್ಷದ ಧ್ವಜವನ್ನು ಹಿಡಿದು ಓಡಿದರು. ರಾಹುಲ್ ಸುತ್ತಲೂ ಇದ್ದ ಪೊಲೀಸರು, ಕಾಂಗ್ರೆಸ್ ಕಾರ್ಯಕರ್ತರು ಸಹ ಓಡಿ ಪಾದಪಾತ್ರೆಯಲ್ಲಿ ಪಾಲ್ಗೊಂಡವರಿಗೆ ಸ್ಫೂರ್ತಿ ತುಂಬಿದರು.
ಡಿ. ಕೆ. ಶಿವಕುಮಾರ್ ರಾಹುಲ್ ಗಾಂಧಿ ಜೊತೆ ಓಡಿರುವ ವಿಡಿಯೋ ಟ್ವೀಟ್ ಮಾಡಿ, 'ಕೆಲವು ದಿನ ನೀವು ನಡೆಯಬೇಕು, ಕೆಲವು ದಿನ ಓಡಬೇಕು. ಕನಸಿನ ಗುರಿ ಮುಟ್ಟಲು ಎರಡೂ ಮುಖ್ಯ' ಎಂದು ಪೋಸ್ಟ್ ಹಾಕಿದ್ದಾರೆ.
ಸೋಮವಾರ ಪಾದಯಾತ್ರೆ ಪೋಚಕಟ್ಟೆಯಿಂದ ಆರಂಭವಾಗಿದೆ. ತುಮಕೂರಿನ ಹುಳಿಯಾರುವಿನ ಕೆಂಕೆರೆ ಮೈದಾನದಲ್ಲಿ ಬೆಳಗಿನ ವಿರಾಮ. ಸಂಜೆ 4 ಗಂಟೆಗೆ ಪಾದಯಾತ್ರೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ವೇದಾವತಿ ವಿಜ್ಞಾನ ಕಾಲೇಜು ಹತ್ತಿರ ಆರಂಭವಾಗಲಿದೆ.
ಇಂದು ಸಂಜೆ 7 ಗಂಟೆಗೆ ಹಿರಿಯೂರಿನ ಹರ್ತಿಕೋಟೆ ಗ್ರಾಮದ ಶ್ರೀ ವೀರಾಂಜನೇಯ ಮಾತಾರಾಣಿ ಹಾಗೂ ಕೇದಾರೇಶ್ವರ ಸನ್ನಿಧಿಯಲ್ಲಿ ವಾಸ್ತವ್ಯ ಇದೆ.












Click it and Unblock the Notifications