Get Updates
Get notified of breaking news, exclusive insights, and must-see stories!

'ಡಿಕೆಶಿ' ಪ್ರತ್ಯಂಗಿ ಹೋಮ ಶತ್ರು ನಾಶ ಮಾಡುತ್ತೆ: ಇವರೇ ಆ ಶತ್ರುಗಳು: ಬಸನಗೌಡ ಯತ್ನಾಳ್

ವಿಜಯಪುರ, ಜನವರಿ 13: ಅಧಿಕಾರಕ್ಕಾಗಿ ಕಾಂಗ್ರೆಸ್ ನಾಯಕರಿಗೆ ದೇವರು, ಹಿಂದೂ ಧರ್ಮ ಬೇಕು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ವಿಶೇಷ ಪೂಜೆ, ಟೆಂಪಲ್ ರನ್ ಕುರಿತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ. ಶಾಸಕರ, ಕಾರ್ಯಕರ್ತರ ಬೆಂಬಲ ಬೇಡ, ನನಗೆ ರಾಜಯೋಗ ಇದೆ ಎಂದು ಹೇಳಿರುವ ಡಿಕೆ ಶಿವಕುಮಾರ್ ಅವರ ಶತ್ರುಗಳ ಹೆಸರುಗಳನ್ನು ತಿಳಿಸಿದ್ದಾರೆ.

ಸೋಮವಾರ ವಿಜಯಪುರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಉಪಮುಖ್ಯಂಮತ್ರಿ ಡಿ.ಕೆ. ಶಿವಕುಮಾರ್ ಅವರು ಮಾಡುತ್ತಿರುವುದೇ ಪೂಜೆ ಮಾಡುತ್ತಿರುವುದೇ ಪ್ರತ್ಯಂಗಿ ಹೋಮ. ಈ ಹೋಮದಿಂದ ಶತ್ರುಗಳು ನಾಶವಾಗುತ್ತಾರೆ. ಶತ್ರುಗಳೆಲ್ಲ ನಾಶವಾಗಬೇಕು. ಅಧಿಕಾರ ಸಿಗಬೇಕು ಎಂದೇ ಈ ಪೂಜೆ, ಹೋಮ ಹವನ ಮಾಡಿಸಿದ್ದಾರೆ ಎಂದು ಅವರು ಹೇಳಿದರು.

DK Shivakumar Ready to Destroy His Enemies for CM Post Basanagouda Patil Yatnal says

ಡಿಕೆ ಶಿವಕುಮಾರ್ ಅವರ ಟೆಂಪಲ್ ರನ್ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಈ ಹೋಮ ಶತ್ರುನಾಶಕ್ಕೆ ಮಾಡಲಾಗುತ್ತದೆ. ಡಿಕೆ ಶಿವಕುಮಾರ್ ಅವರ ಶತ್ರುಗಳು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರ ಸತೀಶ ಜಾರಕಿಹೋಳಿ, ಕೆ.ಎನ್. ರಾಜಣ್ಣ ಅವರು. ಇವೆಲ್ಲರು ನಾಶ ಆಗಬೇಕೆಂದು ಹೋಮ ಮಾಡಿದ್ದಾರೆ ಎಂದು ತಿಳಿಸಿದರು.

ಡಿಸಿಎಂ ಸ್ಥಾನದಲ್ಲಿದ್ದವರು ತಾವು ಮುಖ್ಯಮಂತ್ರಿ ಆಗಬೇಕೆಂದು ಎಲ್ಲ ದೇವಸ್ಥಾನಗಳನ್ನ ತಿರುಗಾಡುತ್ತಿದ್ದಾರೆ. ಮುಖ್ಯಮಂತ್ರಿ ಅಧಿಕಾರಕ್ಕೇರಲು ದೇವರು ಬಳಿ ಬೇಡಿಕೊಳ್ಳುತ್ತಿದ್ದಾರೆ. ಹಿಂದೂ ಧರ್ಮದ ವಿಚಾರದಲ್ಲಿ ಏನಾದರೂ ಆದರೆ, ಆಗ ಇವರು ಇತ್ತ ಗಮನ ಹರಿಸಲ್ಲ.

ಗಣೇಶನ ಹಬ್ಬದಲ್ಲಿ ಅಲ್ಲೇ ಬೆಂಕಿ ಹಚ್ಚುವ ಕೆಲಸ ಆಯ್ತು. ಕಲ್ಲು ತೂರಾಟವಾಯ್ತು, ಆಗ ಏನು ಇರಲಿಲ್ಲ.

ಕುರ್ಚಿ ಬೇಕಾದಾಗ ಹಿಂದೂ ಧರ್ಮ ಹಿಂದೂ ಸನಾತನ ಧರ್ಮ ಬೇಕು ಎಂದು ಅವರು ಡಿಕೆ ಶಿವಕುಮಾರ್ ಅವರ ನಡೆ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಲೇವಡಿ ಮಾಡಿದರು.

DK Shivakumar Ready to Destroy His Enemies for CM Post Basanagouda Patil Yatnal says

ಡಿಕೆಶಿ ಸಿಎಂ ಆಗಲ್ಲ: ಯತ್ನಾಳ್ ಭವಿಷ್ಯ

ಕುರ್ಚಿ ಬಂದ ಬಳಿಕ ಮುಸ್ಲಿಂ ನಮ್ಮ ಸಹೋದರರು ಅವರಿಗೆ ಏನಾದರೂ ಮಾಡಿದರೆ ಹುಷಾರ್ ಎನ್ನುತ್ತಾರೆ. ಅವರ ಕೊಳಕ ಬುದ್ಧಿಯನ್ನು ನೋಡಿದರೆ ಎಂದೂ ಅವರು ಮುಖ್ಯಮಂತ್ರಿ ಆಗುವುದಿಲ್ಲ ಎಂದು ಭವಿಷ್ಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಭವಿಷ್ಯ ನುಡಿದರು.

ಸದ್ಯ ರಾಜ್ಯ ರಾಜಕಾರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ದೊಡ್ಡ ತಂಡವೇ ತಯಾರಾಗಿದೆ. ಕಾಂಗ್ರೆಸ್‌ ಒಳಗಿನ ಬೇಗುದ್ದಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾವ ಶತ್ರು ನಾಶಕ್ಕೆ ಹೋಮ ಮಾಡಿದ್ದಾರೋ ಅವರೇ ಇವರನ್ನು ಮನೆಗೆ ಕಳುಹಿಸುತ್ತಾರೆ ಎಂದು ಕುಟುಕಿದರು.

ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿ ಮುಸ್ಲಿಂ ಯುವಕನ‌ ಕಿರುಕುಳದಿಂದ ಹಿಂದೂ ಯುವತಿ ಆತ್ಮಹತ್ಯೆ ವಿಚಾರ, ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಮುಸ್ಲಿಮರಿಗೆ ಫ್ರೀ ಬಿಟ್ಟಂಗಾಗಿದೆ. ಮುಸ್ಲಿಮರು ಏನು ಮಾಡಿದರು ಕ್ರಮ ವಿಲ್ಲ. ಅವರಿಗೆ ಎಲ್ಲದ್ದಕ್ಕೂ ಅನುಮತಿ ನೀಡಿದಂತಾಗಿದೆ. ಬೆಳಗಾವಿ ಸುವರ್ಣಸೌಧದಲ್ಲಿ ಸಿಟಿ ರವಿ ಮೇಲೆ ಹಲ್ಲೆ ಮಾಡಲು ಮುಂದಾದವ ಅದೇ ಜನಾಂಗದವ ಎಂದು ಕಾಂಗ್ರೆಸ್ ತುಷ್ಟೀಕರಣ ವಿರುದ್ಧ ಗುಡುಗಿದರು.

ಡಿ.ಕೆ.ಶಿವಕುಮಾರ್ ನನ್ನ ಹಿಂದೆ ಇದ್ದಾರೆಂದು ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಮಾಡುತ್ತಿರುವ ಗೂಂಡಾಗಿರಿ ಒಳ್ಳೆಯದಲ್ಲ. ಪಂಚಮಸಾಲಿ ಸಮಾಜದ ಮೇಲೆ ಲಾಠಿ ಚಾರ್ಜ್ ಆದಾಗ ಹೆಬ್ಬಾಳ್ಕರ್ರ್ ಖಂಡನೆ ಮಾಡಲಿಲ್ಲ. ಸಮಾವೇಶಕ್ಕೆ ಬಂದಾಗ ಸಮಾಜದ ಮಗಳಾಗಿ ಬಂದಿದ್ದೇನೆ ಎಂದು ಹೇಳಿದರು. ನಾನು ಮಂತ್ರಿಯಾಗಿ ಹೋಗಿದ್ದೆ ಎಂದು ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಲಾಠಿ ಚಾರ್ಜ್ ಘಟನೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ಪಾತ್ರವಿಲ್ಲ. ಇದರಲ್ಲಿ ಇದ್ದರೆ ಡಿಕೆ ಶಿವಕುಮಾರ್ ಅವರ ಹಸ್ತಕ್ಷೇಪ ಇರುತ್ತದೆ. ಯಾರಿಂದ ಸರ್ಕಾರ ಪತನವಾಗುತ್ತದೆ ಎಂದು ಜ್ಯೋತಿಷಿ ಹೇಳಿದ್ದಾರೆ. ಸರ್ಕಾರ ಪತನವಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ.

ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರೇ ಸರ್ಕಾರ ಬೀಳಲು ಕಾರಣವಾಗುತ್ತಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಅವರು ಆರೋಪ ಮಾಡಿದ್ದಾರೆ. ಇನ್ನು ಆಕಲು ಕೆಚ್ಚಲು ಕತ್ತರಿಸಿದ ವಿಚಾರ, ಚಾಮರಾಜಪೇಟೆಯಲ್ಲಿ ಎರಡು‌ ಎಕರೆ ಜಮೀನು ಪಶು ಆಸ್ಪತ್ರೆ ಮಾಡಲು ಜಮೀನು ನೀಡಿದ್ದರು. ಅದನ್ನು ವಕ್ಫ್ ಎಂದು ನೊಂದಾಯಿಸಿದ್ದಾರೆ.

ಆಕಳು ಕೆಚ್ಚಲಿಗೆ ಕತ್ತರಿ: ಯತ್ನಾಳ್ ಗರಂ

ಆದರೆ ಹೈಕೊರ್ಟ್ ನಲ್ಲಿ ಈ ವಿಚಾರಕ್ಕೆ ತಡೆ ಆಗಿದ್ದು, ಇದರಿಂದ ಮತಾಂಧರು ರೊಚ್ಚಿಗೆದ್ದು, ಕೆಚ್ಚಲು ಕತ್ತರಿಸಿದ್ದಾರೆ. ಎಷ್ಟು ಅಹಿಷ್ಣತೆ ಅವರಲ್ಲಿ ಇದೆ ಎಂದರೆ ಗೋವಿನ ಮೇಲೆ ಸಿಟ್ಟು ತೀರಿಸಿಕೊಳ್ಳುವ ಮಟ್ಟಿಗೆ ಹೋಗಿದ್ದಾರೆ. ಈ ಸರ್ಕಾರ ಮುಸ್ಲಿಂ ‌ಮರನ್ನು ತುಷ್ಟೀಕರಣ ಮಾಡುತ್ತಿದೆ.. ಮೊದಲೇ ಹಿಂದುಗಳು ಸುರಕ್ಷಿತರಾಗಿಲ್ಲ, ಈಗ ಗೋವುಗಳು‌ ಸಹಿತ ಸುರಕ್ಷಿತವಾಗಿಲ್ಲ ಎಂದು ಅವರು ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+