ಯತೀಂದ್ರದು ಡಿ ಕೆ ಶಿವಕುಮಾರ್ CD ಬಿಡ್ತಾರೆ: ಹೊಸ ಬಾಂಬ್ ಸಿಡಿಸಿದ ರಾಜುಗೌಡ

ಯಾದಗಿರಿ, ಮೇ 03: ರಾಜ್ಯದಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಬಿಡುಗಡೆ ವಿಚಾರವಾಗಿ ಸದ್ದು ಜೋರಾಗಿದೆ. ಈ ಪೆನ್‌ ಡ್ರೈವ್‌ ಬಿಡುಗಡೆ ಹಿಂದೆ ಮಹಾನಾಯಕನ ಕೈವಾಡವಿದೆ ಎಂಬ ಆರೋಪಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದ್ದು, ಇದೀಗ ಬಿಜೆಪಿ ನಾಯಕ ರಾಜುಗೌಡ ಹೊಸ ಬಾಂಬ್‌ ಸಿಡಿಸಿದ್ದಾರೆ.

ಹೌದು, ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣೀಟ್ಟಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಲೋಕಸಭೆ ಚುನಾವಣೆ ಬಳಿಕ ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅವರು ಸಿದ್ದರಾಮಯ್ಯ ಅಥವಾ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಸಿಡಿ ಬಿಡಬಹುದು ಎಂದು ಸುರಪುರ‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜುಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.

DK Shivakumar May Be Released Siddaramaiah s CD For CM Chair Said Raju Gowda

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹುಷಾರಾಗಿರಿ, ಡಿ.ಕೆ.ಶಿವಕುಮಾರ್ ಅಣ್ಣವರು​ ಸಿಡಿ ತಯಾರಿಸುವುದರಲ್ಲಿ ಎತ್ತಿದ ಕೈ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಮೇಶ್ ಜಾರಕಿಹೊಳಿಯವರ ಸಿಡಿ ಮಾಡಿ ಮನೆಗೆ ಕಳಿಸಿದರು. ಡಿಕೆ ಶಿವಕುಮಾರ್​​ ಅವರು ಸಿದ್ದರಾಮಯ್ಯ ಅವರಿಗೆ ಒಳ್ಳೆಯದ ಮಾಡಲ್ಲ. ಸಿದ್ದರಾಮಯ್ಯ ಅಣ್ಣನವರೇ ನಿಮ್ಮ ಕುರ್ಚಿ ಮೇಲೆ ಡಿಕೆ ಶಿವಕುಮಾರ್​​ ಅವರ ಕಣ್ಣಿದೆ. ಮುಖ್ಯಮಂತ್ರಿ ಕುರ್ಚಿಗಾಗಿ ಡಿಕೆ ಶಿವಕುಮಾರ್​ ಏನು ಬೇಕಾದರೂ ಮಾಡುತ್ತಾರೆ. ಎಂದು ಹೇಳಿದರು.

ಇನ್ನೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು ಪೆನ್‌ ಡ್ರೈವ್‌ ಯೂನಿವರ್ಸಿಟಿ ತೆಗೆದಿದ್ದಾರೆ. ಡಿಕೆ ಶಿವಕುಮಾರ್ ಒಂಥರಾ 24X7 ರಾಜಕೀಯ ಮಾಡುವವರು. ಎದುರಾಳಿಗಳನ್ನು ಹೇಗೆ ಬಗ್ಗು ಬಡಿಯಬೇಕು ಎಂದು ಗೊತ್ತಿದೆ. ಕೆಲವರಿಗೆ ಬೆದರಿಸುವ ಅಸ್ತ್ರ, ಕೆಲವರಿಗೆ ಸಿಡಿ ಅಸ್ತ್ರ ಬಳಸುತ್ತಾರೆ. ಟೈಮ್ ಬಂದಾಗ ಎದುರಾಳಿಗೆ ಏನ್ ಮಾಡಬೇಕು ಅದನ್ನು ಮಾಡುತ್ತಾರೆ ಎಂದು ರಾಜುಗೌಡ ವಾಗ್ದಾಳಿ ನಡೆಸಿದರು.

ಹಾನಸ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹಾಗೂ ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿ ಅಸ್ತ್ರ ಪ್ರಯೋಗಿಸಿದರು. ಸಿದ್ದರಾಮಯ್ಯ ವಿರುದ್ಧವೂ ಇದೇ ಅಸ್ತ ಪ್ರಯೋಗಿಸುತ್ತಾರೆ. ಸಿದ್ದರಾಮಯ್ಯ ಅಣ್ಣನವರೇ ಎಚ್ಚರಿಕೆಯಿಂದ ಇರಿ ಎಂದು ರಾಜುಗೌಡ ಅವರು ಹೇಳಿದರು. ಮತದಾನಕ್ಕೆ ಎರಡ್ಮೂರು ದಿನ ಬಾಕಿ ಇರುವಾ ಪೆನ್​ಡ್ರೈವ್​ ಬಿಟ್ಟಿದ್ದಾರೆ.. ನಿಮ್ಮ ಕೈಗೆ ಮೊದಲೇ ಬಂದಿತಾ? ಅಗಲೆ ಕ್ರಮಕೈಗೊಂಡು ಶಿಕ್ಷೆ ಕೊಡಸಿದ್ದರೇ ಒಂದು ಡಿಪರೆಂಟ್ ಮೆಸೆಜ್ ಹೋಗ್ತಿತ್ತು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ವಿರುದ್ಧ ಹರಿಹಾಯ್ದರು. ಮಂಬರುವ ದಿನಗಳಲ್ಲಿ ಅವರು ಸಿದ್ದರಾಮಯ್ಯರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಿಸಬಹುದು. ರಾಹುಲ್ ಗಾಂಧಿಯವರ ಮನಸ್ಸಲ್ಲೂ ಅದೇ ಇರುವಂತಿದೆ, ಎಂದು ರಾಜುಗೌಡ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+