ಕೆಪಿಸಿಸಿ ನೂತನ ಸಾರಥಿಯಾಗಿ ಡಿಕೆ ಶಿವಕುಮಾರ್?

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 19: ಕೆಪಿಸಿಸಿ ನೂತನ ಸಾರಥಿಯಾಗಿ ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ಆಯ್ಕೆಯಾಗಿದ್ದು, ಅಧಿಕೃತ ಘೋಷಣೆ ಬಾಕಿ ಉಳಿದಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಂಕಿತ ಬಿದ್ದ ಮೇಲೆ ಡಿಕೆಶಿ ಅಧಿಕಾರ ಅವಧಿ ಆರಂಭವಾಗಲಿದೆ ಎಂಬ ಸುದ್ದಿ ಬಂದಿದೆ.[ಇರೋ 1 ಸ್ಥಾನಕ್ಕೆ ಅದೆಷ್ಟು ಜನ ಟವಲ್ ಹಾಕ್ತಾರೋ!]

ಆಗಸ್ಟ್ ತಿಂಗಳ ಅಂತ್ಯದೊಳಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ)ಗೆ ಹೊಸ ಅಧ್ಯಕ್ಷರೊಬ್ಬರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿಗೂ ಹೈಕಮಾಂಡ್ ಒಪ್ಪಿಗೆ ಸಿಗಬೇಕಿದೆ. ಈ ಎರಡು ಪ್ರಮುಖ ಘೋಷಣೆಗಳನ್ನು ಸದ್ಯದಲ್ಲೇ ನಿರೀಕ್ಷಿಸಬಹುದು.[ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ದಿನೇಶ್ ಗುಂಡೂರಾವ್]

ಸಚಿವ ಸಂಪುಟ ಪುನಾರಚನೆ ಸಂದರ್ಭದಲ್ಲೇ ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ರೇಸ್ ಆರಂಭವಾಗಿತ್ತು. ಹಾಲಿ ಅಧ್ಯಕ್ಷ ಡಾ. ಜಿ ಪರಮೇಶ್ವರ ಅವರು ಕೂಡಾ ವಿದೇಶಿ ಪ್ರವಾಸ ಕೈಗೊಂಡಿದ್ದರು. ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ನಾಯಕರ ಹೆಸರು ಕೇಳಿ ಬಂದಿತ್ತು.[ಡಿಕೆಶಿಗೆ ಕಾಂಗ್ರೆಸ್ ಹೈಕಮಾಂಡಿನ ಭರ್ಜರಿ ಗಿಫ್ಟ್: ದಿನಗಣನೆ ಆರಂಭ?]

ಚುನಾವಣೆ ಸಾರಥ್ಯ: ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೈಕಮಾಂಡ್ ಈ ತೀರ್ಮಾನ ತೆಗೆದುಕೊಂಡಿದೆ.ಡಿ.ಕೆ.ಶಿವಕುಮಾರ್ ಅವರು ಬಹುತೇಕ ಇನ್ನೆರಡು ವಾರಗಳಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ[ಸಿಎಂ ಆಗಲಾರೆ, ಕೆಪಿಸಿಸಿ ಅಧ್ಯಕ್ಷನಾಗುವೆ: ಮುನಿಯಪ್ಪ]

ಪರಂಗೆ ಹೊಣೆಗಾರಿಕೆ ನಿಭಾಯಿಸುವುದು ಕಷ್ಟ

ಪರಂಗೆ ಹೊಣೆಗಾರಿಕೆ ನಿಭಾಯಿಸುವುದು ಕಷ್ಟ

ಗೃಹ ಸಚಿವರಾಗಿ, ಮೇಲ್ಮನೆ ಸಭಾನಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷರಾಗಿ ಹೊಣೆಗಾರಿಕೆ ನಿಭಾಯಿಸುವುದು ಕಷ್ಟವಾಗಿದೆ. ಅಲ್ಲದೆ, ಪಕ್ಷದ ಸಂಘಟನೆ ಹಾಗೂ ವಿರೋಧ ಪಕ್ಷಗಳ ತಂತ್ರಕ್ಕೆ ಪ್ರತಿತಂತ್ರ ಹೆಣೆಯುವುದರಲ್ಲಿ ಡಿಕೆ ಶಿವಕುಮಾರ್ ಮೇಲುಗೈ ಸಾಧಿಸಿರುವುದು ಅವರಿಗೆ ಪ್ಲಸ್ ಪಾಯಿಂಟ್ ಆಗಿ ಪರಿಣಮಿಸಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರ ಯಾರ ಹೆಸರು

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರ ಯಾರ ಹೆಸರು

ಡಿ.ಕೆ.ಶಿವಕುಮಾರ್ ಅವರ ಹೆಸರು ಹೊರತುಪಡಿಸಿದರೆ ದೆಹಲಿಯಲ್ಲಿ ರಾಜ್ಯದ ಪ್ರತಿನಿಧಿಯಾಗಿರುವ ಅಪ್ಪಾಜಿ ನಾಡಗೌಡ, ಮಾಜಿ ಐಟಿ ಬಿಟಿ ಸಚಿವ ಎಸ್.ಆರ್.ಪಾಟೀಲ್, ತುಮಕೂರು ಸಂಸದ ಮುದ್ದಹನುಮೇಗೌಡ ಅವರ ಹೆಸರು ಅಧ್ಯಕ್ಷ ಕೇಳಿ ಬಂದಿದೆ.

ಯಡಿಯೂರಪ್ಪ ವಿರುದ್ಧ ಸಮರ್ಥ ನಾಯಕನ ಅಗತ್ಯ

ಯಡಿಯೂರಪ್ಪ ವಿರುದ್ಧ ಸಮರ್ಥ ನಾಯಕನ ಅಗತ್ಯ

ಲಿಂಗಾಯತ ಸಮುದಾಯದ ಎಸ್ ಆರ್ ಪಾಟೀಲ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಕೂರಿಸುವ ಮಾತು ಕೇಳಿ ಬಂದಿತ್ತು. ಆದರೆ, ಯಡಿಯೂರಪ್ಪ ಅವರ ವಿರುದ್ಧ ನಿಲ್ಲಬಲ್ಲ ಸಮರ್ಥವಾಗಿ ತಂತ್ರ ರೂಪಿಸಬಲ್ಲ ಅರ್ಹತೆ ಇದೆ ಎಂಬ ಕಾರಣಕ್ಕೆ ಡಿಕೆ ಶಿವಕುಮಾರ್ ಗೆ ಸ್ಥಾನ ಸಿಗಬಹುದಾಗಿದೆ. ಬಿಜೆಪಿಯ ಒಳಜಗಳ, ಬಂಡಾಯದ ಲಾಭ ಪಡೆಯಲು ಇದು ಸಕಾಲ ಎಂದು ಕಾಂಗ್ರೆಸ್ ಆಲೋಚಿಸಿದೆ.

ಅಹಿಂದ ವರ್ಗಕ್ಕೆ ಸೇರಿದವರಿಗೆ ಸ್ಥಾನಮಾನ

ಅಹಿಂದ ವರ್ಗಕ್ಕೆ ಸೇರಿದವರಿಗೆ ಸ್ಥಾನಮಾನ

ಅಹಿಂದ ವರ್ಗಕ್ಕೆ ಸೇರಿದವರು ಈ ಹುದ್ದೆ ಅಲಂಕರಿಸಬೇಕು ಎನ್ನುವ ಬಗ್ಗೆಯೂ ಚರ್ಚೆಗಳು ನಡೆದಿದೆ. ಆದರೆ, ಅಸಮಾಧಾನಗೊಂಡ ಮುಖಂಡರಿಗೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡಲು ಸಿದ್ದರಾಮಯ್ಯ ಸಮ್ಮತಿಸಿದ್ದಾರೆ. ಜೊತೆಗೆ ಡಿಕೆ ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಒಕ್ಕಲಿಗರ ಮನಗೆಲ್ಲಲು ಲೆಕ್ಕಾಚಾರ ಹಾಕಲಾಗಿದೆ,.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Energy Minister D.K. Shivakumar is likely to take charge as Karnataka Pradesh Congress Committee (KPCC) president soon as report says.
Please Wait while comments are loading...