ಸಿಎಂ ಬದಲಾವಣೆ: ʼಮುಖ್ಯಮಂತ್ರಿ ಆಕಾಂಕ್ಷಿಗಳಲ್ಲಿ ಡಿ.ಕೆ.ಶಿವಕುಮಾರ್ ಮೊದಲ ಸ್ಥಾನʼ: ಪಟ್ಟಿ ಇಲ್ಲಿದೆ
ಬೆಂಗಳೂರು, ಅಕ್ಟೋಬರ್ 10:ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಯುವವರ ಪಟ್ಟಿಯಲ್ಲಿ ಡಿ.ಕೆ.ಶಿವಕುಮಾರರ ಹೆಸರೇ ಮೊದಲಿನಲ್ಲಿದೆ. ದಿನಬೆಳಗಾದರೆ ಪೂಜೆ ಸಲ್ಲಿಸಿ ಹೊರಕ್ಕೆ ಬರುತ್ತಿದ್ದಂತೆ ಡಿ.ಕೆ.ಶಿವಕುಮಾರ್ ಅವರು, ಸಿದ್ದರಾಮಯ್ಯನವರು 5 ವರ್ಷ ಮುಖ್ಯಮಂತ್ರಿ ಎಂದು ಹೇಳುತ್ತಾರೆ. ಮುಖ್ಯಮಂತ್ರಿ ಆಕಾಂಕ್ಷಿಗಳ ಪಟ್ಟಿ ದಿನೇದಿನೇ ಬೆಳೆಯುತ್ತಿದೆ. ಮೊದಲ ಸ್ಥಾನದಲ್ಲಿ ಇರುವವರು ಡಿ.ಕೆ.ಶಿವಕುಮಾರ್ ಎಂದು ಬಿ ವೈ ವಿಜಯೇಂದ್ರ ಅವರು ತಿಳಿಸಿದರು.
ಈ ಕುರಿತು ಮಾತನಾಡಿದ ಡಿ ಕೆ ಶಿವಕುಮಾರ್ ಅವರು, ಸಿದ್ದರಾಮಯ್ಯನವರು 3 ವರ್ಷಗಳ ಅವಧಿಗೆ ಇರುತ್ತಾರೋ, 5 ವರ್ಷಗಳ ಅವಧಿಗೆ ಇರುತ್ತಾರೋ ಹೈಕಮಾಂಡನ್ನು ಕೇಳಿ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಮತ್ತೊಂದು ಕಡೆ ಸರಕಾರದಲ್ಲಿರುವ ಅನೇಕ ಸಚಿವರು ಗುಪ್ತವಾಗಿ ಸಭೆಗಳನ್ನು ಕೂಡ ನಡೆಸುತ್ತಿದ್ದಾರೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ 5 ವರ್ಷ ಪೂರ್ಣಗೊಳಿಸುತ್ತಾರೆ ಎಂದು ಹೇಳುವವರೆಲ್ಲರೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳೇ ಆಗಿದ್ದಾರೆ ಎಂದು ತಿಳಿಸಿದ್ದಾರೆ.

ಸಿಎಂ ಸ್ಥಾನಕ್ಕಾಗಿ ಸತೀಶ್ ಜಾರಕಿಹೊಳಿ, ಡಿ ಕೆ ಶಿವಕುಮಾರ್, ಆರ್ ವಿ ದೇಶಪಾಂಡೆ ಹಾಗೂ ಪರಮೇಶ್ವರ್ ಸೇರಿದಂತೆ ಹಲವರು ಸಿಎಂ ರೇಸ್ ನಲ್ಲಿದ್ದಾರೆ. ಮುಖ್ಯಮಂತ್ರಿಗಳ ಕೃಪಾಕಟಾಕ್ಷದಲ್ಲಿ ಇರಬೇಕು. ರಾಜೀನಾಮೆ ಕೊಡುವಾಗ ತಮ್ಮ ಹೆಸರನ್ನು ಹೇಳಬೇಕೆಂಬ ದೃಷ್ಟಿಯಿಂದ ಈ ಹೇಳಿಕೆ ಕೊಡುತ್ತಿದ್ದಾರೆಯೇ ಹೊರತು ಸಿದ್ದರಾಮಯ್ಯನವರು ಯಾವುದೇ ಸಂದರ್ಭದಲ್ಲಿ ರಾಜೀನಾಮೆ ಕೊಡಬಹುದೆಂಬ ವಿಚಾರ ಅವರಿಗೂ ಗೊತ್ತಿದೆ. ಸಿದ್ದರಾಮಯ್ಯನವರು ಹೇಳಿದವರೇ ಮುಖ್ಯಮಂತ್ರಿ ಆಗುತ್ತಾರೆ. ನಿಮಗೇನೂ ಅನುಮಾನ ಬೇಡ ಎಂದರು.
ದಸರಾ ಬಳಿಕ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಆಗಲಿದೆಯೇ ಎಂದು ಪ್ರಶ್ನಿಸಿದಾಗ, ಯಾವುದೇ ಅನುಮಾನ ಇಲ್ಲ. ಇದೊಂದು ರಾಜಕೀಯ ಹೇಳಿಕೆಯಲ್ಲ. ಕಳೆದ 3 ತಿಂಗಳಿನಿಂದ ರಾಜ್ಯದಲ್ಲಿ ಸರಕಾರ ಬದುಕಿದೆಯೇ ಎಂದು ಒಂದು ಕ್ಷಣ ಯೋಚಿಸಿ. ಇವತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು, ನೌಕರರು ಕೂಡ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲೂ 2 ದಿನ ಪ್ರೊಟೆಸ್ಟ್ ಮಾಡಿದ್ದಾರೆ. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ವ್ಯವಸ್ಥೆಗಳು ಹದಗೆಟ್ಟು ಹೋಗುತ್ತಿವೆ. ಒಬ್ಬ ಸಚಿವರು, ಜವಾಬ್ದಾರಿಯುತ ಸರಕಾರ ಯಾವ ರೀತಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕೆಂಬ ಸಾಮಾನ್ಯ ಜ್ಞಾನವೂ ಸರಕಾರಕ್ಕೆ ಇಲ್ಲ. ಈ ಸರಕಾರ ಜನರ ಪಾಲಿಗೆ ಸತ್ತಂತಾಗಿದೆ ಎಂದು ತಿಳಿಸಿದರು.
ರಾಜ್ಯದ ಕಾಂಗ್ರೆಸ್ ಸರಕಾರ ಮತ್ತು ಮುಖ್ಯಮಂತ್ರಿಗಳ ಸ್ಥಾನ ನಿಶ್ಚಿತವಾಗಿಯೂ ಅಲ್ಲಾಡುತ್ತಿದೆ. ಮುಖ್ಯಮಂತ್ರಿಗಳು ಭಂಡತನ ಮುಂದುವರೆಸುವವರೆಗೂ ಆ ಸ್ಥಾನದಲ್ಲಿ ಇರುತ್ತಾರೆ. ಅದು ಬಹಳ ದಿನವಂತೂ ನಡೆಯುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸರಕಾರದ ಸಚಿವರೂ ಅದನ್ನು ಸಹಿಸುವುದಿಲ್ಲ ಎಂದು ಹೇಳಿದರು.
ಮುಡಾ, ವಾಲ್ಮೀಕಿ ನಿಗಮದ ಹಗರಣವನ್ನು ಮುಂದಿಟ್ಟು ಪಾದಯಾತ್ರೆ ಮಾಡಿದ್ದೇವೆ. ಇದರ ಪರಿಣಾಮವಾಗಿ ಮೊದಲ ಯಶಸ್ಸು ಲಭಿಸಿದೆ. ಮುಡಾ ಹಗರಣ ಆಗಿಯೇ ಇಲ್ಲ ಎಂದು ಮುಖ್ಯಮಂತ್ರಿಗಳು ಹೇಳುತ್ತಿದ್ದರು; 14 ನಿವೇಶನ ಹಿಂದಿರುಗಿಸುವ ತೀರ್ಮಾನ ಈಗಾಗಲೇ ಘೋಷಿಸಿದ್ದಾರೆ ಎಂದು ತಿಳಿಸಿದರು.
ವಾಲ್ಮೀಕಿ ನಿಗಮದಲ್ಲಿ ಹಗರಣ ಆಗಿಲ್ಲ ಎಂದು ಹೇಳಿದ್ದ ಸಿಎಂ ಅವರು, ಬಳಿಕ ಸದನದಲ್ಲೇ 87 ಕೋಟಿ ಹಗರಣವನ್ನು ಒಪ್ಪಿಕೊಂಡಿದ್ದಾರೆ. ನಾಗೇಂದ್ರ ಅವರು ರಾಜೀನಾಮೆ ನೀಡಿದ್ದಾರೆ ಎಂದ ಅವರು, ಸಿದ್ದರಾಮಯ್ಯನವರು ರಾಜೀನಾಮೆ ಕೊಡುವುದು ನಿಶ್ಚಿತ; ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು
ಜಾರಕಿಹೊಳಿ ನಿಮ್ಮನ್ನು ಭೇಟಿ ಮಾಡಿದ್ದಾರೆ ಎಂಬ ಪ್ರಶ್ನೆಗೆ 'ನಾನು ನಿಮಗೆ ಪರ್ಸನಲ್ ಆಗಿ ಹೇಳುವೆ; ಬಹಿರಂಗವಾಗಿ ಬೇಡ' ಎಂದು ನಗುತ್ತ ಉತ್ತರಿಸಿದರು. ಸುಮಾರು 2 ವರ್ಷದಿಂದ ಜಾತಿ ಗಣತಿ ಬಗ್ಗೆ ಮಾತನಾಡದ ಸಿದ್ದರಾಮಯ್ಯನವರಿಗೆ ಅವರ ಮುಖ್ಯಮಂತ್ರಿ ಸ್ಥಾನ ಅಲ್ಲಾಡುವಾಗ ಇದರ ನೆನಪಾಗಿದೆಯೇ ಎಂದು ಈ ಕುರಿತ ಪ್ರಶ್ನೆಗೆ ಉತ್ತರ ಕೊಟ್ಟರು. ಸಿದ್ದರಾಮಯ್ಯನವರು ಪ್ರಾಮಾಣಿಕರೇ ಆಗಿದ್ದರೆ, ಆ ಸಮುದಾಯಗಳಿಗೆ ನ್ಯಾಯ ಕೊಡಬೇಕೆಂಬ ಕಳಕಳಿ ಇದ್ದಿದ್ದರೆ, 2018ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ 165 ಕೋಟಿ ಕೊಟ್ಟು ವರದಿ ತಯಾರಿಸಿದ ತಕ್ಷಣ ಅದನ್ನು ಅನುಷ್ಠಾನಕ್ಕೆ ತರಬೇಕಿತ್ತು. ಯಾರು ಅವರನ್ನು ತಡೆದಿದ್ದರು ಎಂದು ಕೇಳಿದರು.
ಹೈಕಮಾಂಡಿಗೆ ಕೂಡ ಮಂಕುಬೂದಿ ಎರಚಬಹುದು; ಆ ತಾಕತ್ತು ವಿಜಯೇಂದ್ರನಿಗೆ ಇದೆ ಎಂದು ಒಪ್ಪಿಕೊಂಡಿದ್ದರೆ ಸಂತೋಷ. ಇವತ್ತು ಪಕ್ಷಬಿಟ್ಟು ಹೋದವರು, ಪಕ್ಷಕ್ಕೆ ದ್ರೋಹ ಮಾಡಿದವರು ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಮತ್ತು ಯೋಗ್ಯತೆ ಕಳೆದುಕೊಂಡಿದ್ದಾರೆ. ನಮ್ಮ ಪಕ್ಷದ ಬಗ್ಗೆ ಯೋಚನೆ, ಚಿಂತನೆ ಮಾಡುವ ಅವಶ್ಯಕತೆ ಇಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಯಾವ ರೀತಿ ಪಕ್ಷವನ್ನು ನಡೆಸಬೇಕು ಎಂಬ ವಿಚಾರದಲ್ಲಿ ಭಗವಂತ ಬುದ್ಧಿ ಕೊಟ್ಟಿದ್ದು ರಾಜ್ಯಾಧ್ಯಕ್ಷನಾಗಿ ಅದನ್ನು ಮಾಡುತ್ತೇನೆ ಎಂದರು.












Click it and Unblock the Notifications