ಡಿಕೆಶಿ ಪತ್ನಿ ನನಗೆ ಕಾಂಗ್ರೆಸ್ ತೊರೆಯದಂತೆ ಕೋರಿದ್ದರು: ರಮೇಶ್ ಜಾರಕಿಹೊಳಿ
ನನ್ನ ವಿರುದ್ಧ ಡಿಕೆ ಶಿವಕುಮಾರ್ ಸಿಡಿ ಹಗರಣದ ಷಡ್ಯಂತ್ರ ಮಾಡಿದ್ದ. ಬೆಳಗಾವಿ ನಾಯಕರೊಬ್ಬರಿಗೆ ಫೋನ್ ಮಾಡಿ ಕೃತ್ಯ ಎಸಗಿದ್ದ. ಅವರು ಇನ್ನೂ ನೂರಾರು ಸಿಡಿ ಮಾಡಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಆರೋಪಿಸಿದ್ದಾರೆ.
ಬೆಳಗಾವಿ, ಜನವರಿ 30: ನಾನು ಡಿಕೆ ಶಿವಕುಮಾರ್ ಒಳ್ಳೆಯ ಸ್ನೇಹಿತರಾಗಿದ್ದೆವು. ಅವರ ಹೆಂಡತಿ ನನಗೆ ಪಕ್ಷ ಬಿಡದಂತೆ ಹೇಳಿದ್ದರು. ನೀವಿಬ್ಬರು ಒಟ್ಟಿಗೆ ಇರಬೇಕು ಎಂದಿದ್ದರು, ಸಿಡಿ ಹಗರಣವಾದ್ದರಿಂದ ಅವನು ಹೆದರಿಬಿಟ್ಟಿದ್ದ. ಆದರೆ ನಾನು ಹೆದರಲಿಲ್ಲ ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, "ನನ್ನ ವಿರುದ್ಧ ಡಿಕೆ ಶಿವಕುಮಾರ್ ಸಿಡಿ ಹಗರಣದ ಷಡ್ಯಂತ್ರ ಮಾಡಿದ್ದ. ಬೆಳಗಾವಿ ನಾಯಕರೊಬ್ಬರಿಗೆ ಫೋನ್ ಮಾಡಿ ಕೃತ್ಯ ಎಸಗಿದ್ದ. ಅವರು ಇನ್ನೂ ನೂರಾರು ಸಿಡಿ ಮಾಡಿದ್ದಾರೆ, ಇದರ ಬಗ್ಗೆ ಸಿಬಿಐ ತನಿಖೆ ಆಗಬೇಕು" ಎಂದು ಅವರು ಒತ್ತಾಯಿಸಿದರು.
ಇದೇ ಮಾದರಿಯ ಸಿಡಿಗಳು ಇನ್ನೂ ಇದ್ದು ಇದರಲ್ಲಿ ಹಿರಿಯ ರಾಜಕಾರಣಿಗಳು ಇದ್ದಾರೆ, ಐಎಎಸ್ ಅಧಿಕಾರಿಗಳು ಇದ್ದಾರೆ, ಈ ಗ್ಯಾಂಗ್ ಅನ್ನು ಸದೆ ಬಡಿಯಬೇಕಾದರೆ ತನಿಖೆಯಾಗಲೇಬೇಕು. ನನ್ನ ಹಾಗೂ ಡಿಕೆಶಿ ವಿರುದ್ಧ ಸಂಬಂಧ ಹಾಳಾಗಲು ಗ್ರಾಮೀಣ ಶಾಸಕಿಯೊಬ್ಬರು ಕಾರಣ, ಕಿತ್ತೂರು ಚೆನ್ನಮ್ಮ ವಿರುದ್ಧ ಅವಹೇಳನ ಪದ ಬಳಕೆಗೆ ಅವರೇ ಕಾರಣ, ಇಲ್ಲಿ ಜಾತಿ ಸಂಘರ್ಷ ಉಂಟಾದರೆ ನಾನು ಕಾರಣ ಅಲ್ಲ. ಇದಕ್ಕೆ ಗ್ರಾಮೀಣ ಶಾಸಕಿ ಕಾರಣ ಎಂದು ಅವರು ಹೇಳಿದರು.

ಬೆಳಗಾವಿಯಲ್ಲಿ ಸಕ್ಕರೆ ಕಾರ್ಖಾನೆಯಲ್ಲಿ ಅಕ್ರಮವಾಗಿದೆ. ನನ್ನಿಂದ ಏನಾದರೂ ಅಕ್ರಮ ಆಗಿದ್ದರೆ ನನ್ನ ತಲೆ ಕಡಿದು ಟೇಬಲ್ ಮೇಲೆ ಇಡುತ್ತೇನೆ. ಡಿಕೆ ಶಿವಕುಮಾರ್ ಅವರನ್ನು ಸಿಬಿಐ ಬಂಧಿಸಬೇಕು. ಸಿಡಿ ಹಗರಣದಲ್ಲಿ ಬಹಳಷ್ಟು ಷಡ್ಯಂತ್ರ ನಡೆದಿದೆ. ನನ್ನ ಬಳಿ 128 ಸಾಕ್ಷ್ಯಗಳಿವೆ, ಅವರು ಮಾರ್ಚ್ 12ರಂದು ಸಿಡಿ ಬಿಡುಗಡೆ ಮಾಡಿದ್ದರು.
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರು ಬಳಸದೆ ಆರೋಪ ಮಾಡಿದ ರಮೇಶ್ ಜಾರಕಿಹೊಳಿ. ಚುನಾವಣೆ ಸಂದರ್ಭದಲ್ಲಿ ಸಿಡಿ ಬಿಡುಗಡೆ ಮಾಡಿ ತೇಜೋವಧೆ ಮಾಡುವ ಪಿತೂರಿ ನಡೆಯುತ್ತಿದೆ. ನನ್ನ ಹಾಗೂ ಡಿಕೆಶಿ ವಿರುದ್ಧ ಸಂಬಂಧ ಹಳಸಲು ಆ ಶಾಸಕಿ ಕಾರಣ ಎಂದು ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಸಿಡಿ ಹಗರಣದಲ್ಲಿ ಕಾಂಗ್ರೆಸ್‌ನ ದೊಡ್ಡ ದೊಡ್ಡ ನಾಯಕರಿದ್ದಾರೆ. ನನ್ನ ಬಳಿ 20ಕ್ಕೂ ಹೆಚ್ಚು ಆಡಿಯೋ ದಾಖಲೆಗಳಿವೆ. ನನ್ನ ಮೊಬೈಲ್‌ನಲ್ಲಿ ಹಲವಾರು ನಾಯಕ ಅಕ್ರಮಗಳ ಬಗ್ಗೆ ದಾಖಲೆಗಳಿವೆ. ಒಂದು ಆಡಿಯೋದಲ್ಲಿ ಡಿಕೆ ಶಿವಕುಮಾರ್ ನನ್ನ ಬಳಿ ದುಬೈ ಲಂಡನ್‌ನಲ್ಲಿ ಮನೆಗಳಿವೆ. ಸಾವಿರಾರು ಕೋಟಿ ಹಣವಿದೆ ಎಂದು ಹೇಳಿದ್ದಾರೆ. ಆಡಿಯೋ ಕೂಡ ನನ್ನ ಬಳಿ ಇದೆ ಎಂದು ಹೇಳಿದರು.

ಆಡಿಯೋದಲ್ಲಿ ನನ್ನ ವಿರುದ್ಧ ಸಂಚು ಮಾಡಿರುವ ಆಡಿಯೋ ಮಾಹಿತಿ ಇದೆ. ನಾನು ಡಿಕಶಿ ಮತ್ತು ಅವರ ಕಂಪೆನಿಯನ್ನು ಬಂಧಿಸುವರೆಗೂ ವಿರಮಿಸುವುದಿಲ್ಲ. ಬೆಂಗಳೂರಿನ ಶಾಂತಿ ನಗರ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯಲ್ಲಿ 10,000 ಕೋಟಿ ಅಕ್ರಮ ಆಗಿದೆ. ಡಿಕೆಶಿ, ಸಿಡಿ ಹಗರಣದ ಆ ಹುಡುಗಿ, ನರೇಶ್, ಶ್ರವಣ್, ಮಂಡಿ ಮೊಹಲ್ಲಾದ ಮತ್ತಿಬ್ಬರ ವಿರುದ್ಧ ತನಿಖೆಯಾಗಬೇಕು ಎಂದರು.
ಇದು ನನ್ನ ಕೊನೆಯ ಚುನಾವಣೆ. ನನಗೆ ಈ ರಾಜಕಾರಣ ಸಾಕಾಗಿದೆ. ಮುಂದಿನ ಚುನಾವಣೆ ನನ್ನದು ಕೊನೆ ಚುನಾವಣೆ. ನನ್ನದು ಹಾತಾಶ ಭಾವವಲ್ಲ. ಇಲ್ಲಿ ನಾನು ಹೆದರುವ ಪ್ರಶ್ನೆಯಿಲ್ಲ ಎಂದು ಅವರು ತಿಳಿಸಿದರು.












Click it and Unblock the Notifications