ಡಿ.ಕೆ.ಶಿವಕುಮಾರ್ ಬಂಧನಕ್ಕೆ 'ಒಕ್ಕಲಿಗ' ಟಚ್ ಕೊಟ್ಟ ಗೌಡ್ರ ಕುಟುಂಬ!

ಹಾಸನ, ಸೆ 5: ಹಿರಿಯ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಬಂಧನಕ್ಕೆ, ರಾಜಕೀಯ ಕಾರಣ ಇದ್ದಿರಬಹುದು. ಆದರೆ, ಜಾತಿಧರ್ಮದ ಕಾರಣ ಏನಾದರೂ ಇರಲು ಸಾಧ್ಯವೇ? ಗೌಡ್ರ ಕುಟುಂಬದ ಸದಸ್ಯರೊಬ್ಬರ ಪ್ರಕಾರ, ಅದೇ ಡಿಕೆಶಿ ಅರೆಸ್ಟಿಗೆ ಕಾರಣ..

ಮಾಜಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಬೇಲೂರಿನಲ್ಲಿ ಮಾತನಾಡುತ್ತಾ, ಡಿ.ಕೆ.ಶಿವಕುಮಾರ್ ಬಂಧನಕ್ಕೆ ಜಾತಿಧರ್ಮದ ಲೇಪನವನ್ನು ಬಳೆದಿದ್ದಾರೆ.

" ಡಿ.ಕೆ.ಶಿವಕುಮಾರ್ ನಮ್ಮ ಸಮುದಾಯದ ನಾಯಕ. ಕಾಂಗ್ರೆಸ್ಸಿನಲ್ಲಿ ಬೆಳೆಯುತ್ತಿದ್ದಾನೆಂದು, ಇಡಿ ಕಡೆಯಿಂದ ಅರೆಸ್ಟ್ ಮಾಡಿಸಲಾಗಿದೆ" ಎನ್ನುವ ಹೇಳಿಕೆಯನ್ನು ರೇವಣ್ಣ ನೀಡಿದ್ದಾರೆ.

DK Shivakumar Is Growing Leader Of Vokkaliga, So He is Arrested: HD Revanna

" ಡಿಕೆಶಿ ಸಚಿವನಾಗಿದ್ದಾಗ, ಯಡಿಯೂರಪ್ಪನವರ ಮಗ, ಅವರ ಮನೆಗೆ ಹೋಗಿ, ಯೋಜನೆಗೆ ಹಣ ಬಿಡುಗಡೆ ಮಾಡಿಸಿಕೊಂಡಿದ್ದಾರೆ. ಆದರೂ, ಡಿಕೆಶಿ ಮೇಲೆ, ಅವರು ದ್ವೇಷವನ್ನು ಕಾರುತ್ತಿದ್ದಾರೆ" ಎಂದು ರೇವಣ್ಣ ಕಿಡಿಕಾರಿದ್ದಾರೆ.

" ಪಿತೃಗಳಿಗೆ ಎಡೆ ಇಡಬೇಕೆಂದರೂ ಅದಕ್ಕೆ ಅವಕಾಶ ನೀಡಲಿಲ್ಲ. ರಾಜ್ಯದ ಜನತೆ ಎಲ್ಲವನ್ನೂ ನೋಡುತ್ತಿದ್ದಾರೆ. ಇಡಿ ಅಧಿಕಾರಿಗಳಿಗೆ ಸ್ವಲ್ಪವಾದರೂ ಕರುಣೆ ಬೇಡವೇ" ಎಂದು ರೇವಣ್ಣ, ಬೇಸರ ವ್ಯಕ್ತಪಡಿಸಿದ್ದಾರೆ.

" ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದ ಮುಖ್ಯಮಂತ್ರಿಗಳು, ಕೆಎಂಎಫ್ ವಿಚಾರದಲ್ಲಿ ಮಾಡಿದ್ದೇನು? ಯಡಿಯೂರಪ್ಪನವರಿಗೆ ದೇವರು ಶಿಕ್ಷೆ ನೀಡುವ ಕಾಲ ದೂರವಿಲ್ಲ" ಎಂದು ರೇವಣ್ಣ, ಬಿಎಸ್ವೈ ವಿರುದ್ದ ಕೆಂಡವಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+