DK Shivakumar: ಡಿಕೆ ಶಿವಕುಮಾರ್ ಈ ಕಾರಣಕ್ಕಾಗಿಯೇ ಸಿಎಂ ಆಗಲೇಬೇಕು! ಆಗೇ ಆಗ್ತಾರೆ: ಪುತ್ರಿ ಐಶ್ವರ್ಯ
ಬೆಂಗಳೂರು, ಮಾರ್ಚ್ 11: ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಕಸರತ್ತು ನಡೆಯುತ್ತಿರುವುದು ಗುಪ್ತವಾಗೇನು ಉಳಿದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜ್ಯ ಸಿಎಂ ಆಗುತ್ತಾರೆ ಎಂದು ಹೇಳಲಾಗುತ್ತಿದೆ. ಸಿಎಂ ಸ್ಥಾನದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಕೇವಲ ಡಿ.ಕೆ ಶಿವಕುಮಾರ್ ಅವರಿಗೆ ಮಾತ್ರ ಇಲ್ಲ. ಅವರ ಇಡೀ ಕುಟುಂಬಕ್ಕೇ ಇದೆ. ಈ ಬಗ್ಗೆ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಅವರು ತಂದೆ ಸಿಎಂ ಆಗಬೇಕು, ಸಿಎಂ ಕನಸಿನ ಕುರಿತು ಬಹಿರಂಗವಾಗಿ ಮನದಾಳವನ್ನು ಹಂಚಿಕೊಂಡಿದ್ದಾರೆ.
ಎರಡೂವರೆ ವರ್ಷದ ನಂತರ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಕರ್ನಾಟಕದ ಸಿಎಂ ಆಗುತ್ತಾರೆ ಎನ್ನಲಾಗಿತ್ತು. ಸದ್ಯ ಈ ವಿಚಾರ ಬೂದಿ ಮುಚ್ಚಿದ ಕೆಂಡದಂತಿದೆ. ಸಿಎಂ ಸ್ಥಾನದ ಬಗ್ಗೆ ಮಾತನಾಡದಂತೆ ಕಾಂಗ್ರೆಸ್ ವರಿಷ್ಠರು ತಿಳಿಸಿದ್ದಾರೆ. ಹೀಗಾಗಿ ಸದ್ಯಕ್ಕೆ ಎಲ್ಲವು ತಣ್ಣಗಾಗಿದೆ. ಈ ಮಧ್ಯೆ ಡಿಕೆಶಿ ಪುತ್ರಿ ಐಶ್ವರ್ಯ ಅವರು ಹೇಳಿಕೆಗಳು ವೈರಲ್ ಆಗುತ್ತಿವೆ.

ತಂದೆ ಡಿಕೆ ಶಿವಕುಮಾರ್ ಅವರ ಸಿಎಂ ಸ್ಥಾನದ ಕುರಿತು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ ಪುತ್ರಿ ಐಶ್ವರ್ಯ ಅವರು, ಯಾವ ಕಾರಣಕ್ಕೆ ತಂದೆ ಸಿಎಂ ಆಗಬೇಕು ಎಂಬುದನ್ನು ರಿವೀಲ್ ಮಾಡಿದ್ದಾರೆ. ತಂದೆ ತಮ್ಮ ಬೆಂಬಲಿಗರು, ಕಾರ್ಯಕರ್ತರು ಸೇರಿದಂತೆ ಜನರ ಮೇಲೆ ಅಪಾರ ನಂಬಿಕೆ, ಪ್ರೀತಿ ಹೊಂದಿದ್ದಾರೆ ಎಂದಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಅವರು ಜೈಲಿಗೆ ಹೋಗಿ ಬಂದ ಬಳಿಕ ನಡೆದ ಸಂಗತಿಗಳನ್ನು ಅವರು ನೆನೆದು ತಮ್ಮ ತಂದೆ ಸಿಎಂ ಆಗೇ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಸಂದರ್ಶನದಲ್ಲಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೆರೆವಾಸದ ಬಳಿಕ ನೇರವಾಗಿ ಕುಟುಂಬ ನೋಡಲು ಬರಲಿಲ್ಲ!
ಅಪ್ಪ ಜೈಲಿನಿಂದ ಬಿಡುಗಡೆ ಆದ ಬಳಿಕ ಬಳಿಕ ಮೊದಲು ಕುಟುಂಬ ನೋಡಲು ಬರಲಿಲ್ಲ. ಕುಟುಂಬದಲ್ಲಿ ಯಾರೊಬ್ಬರಿಗೂ ಅವರು ಕರೆ ಮಾಡಲಿಲ್ಲ. ಅವರು ಮೊದಲು ಜನರನ್ನು ನೋಡಲು ತೆರಳಿದರು. ಎರಡು ದಿನ ನಾವು ತಂದೆಯೊಂದಿಗೆ ಮಾತನಾಡಲು ಆಗಲಿಲ್ಲ ಎಂದಿದ್ದಾರೆ.

ಮಗಳೇ ನಾನು ಜೈಲಲ್ಲಿದ್ದಾಗ ಊಟ- ನೀರು ಬಿಟ್ಟು ಜೈಲಿನ ಮುಂದೆ ಜನ ನನಗಾಗಿ ಕಾಯುತ್ತಾ ನಿಂತಿದ್ದರು. ಕಾಲಿಗೆ ಚಪ್ಪಲಿ ಇಲ್ಲದೇ ವಿಮಾನ ಏರಿ ಬಂದಿದ್ದಾರೆ. ಅವರಿಗಾಗಿ ನಾನು ಇರದೇ ಕುಟುಂಬಕ್ಕಾಗಿ ಹೇಗೆ ಓಡೋಡಿ ಬರಲಿ! ಎಂದು ನನ್ನ ಬಳಿ ಹೇಳಿಕೊಂಡಿದ್ದಾರೆ. ಅದನ್ನು ಇವತ್ತು ನಿಮ್ಮೊಂದುಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ಐಶ್ವರ್ಯ ಅವರು ತಿಳಿಸಿದ್ದಾರೆ.

ರಾಜ್ಯದ ಜನರ ಮೇಲಿರುವ ತಂದೆಯ ಪ್ರೀತಿ ಎಂಥದ್ದು ಎಂದು ಪುತ್ರಿ ಐಶ್ವರ್ಯ ತಿಳಿಸಿದ್ದಾರೆ. ತಂದೆಯ ಈ ಕಮಿಟ್‌ಮೆಂಟ್ ಕಾರಣದಿಂದಲೇ ಅವರು ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂದು ಇಡಿ ಕುಟುಂಬದವರು ಕಾಯುತ್ತಿದ್ದೇವೆ. ನಮಗೆ ವಿಶ್ವಾಸವಿದೇ ನಮ್ಮ ತಂದೆ ಸಿಎಂ ಆಗೇ ಆಗುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ, ಇಡಿ ದಾಳಿ ಬಳಿಕ ಸೆರೆವಾಸ ಅನುಭವಿಸಿದರು. ಡಿಕೆ ಶಿವಕುಮಾರ್ ಜೈಲುವಾಸ ಅನುಭವಿಸಿ ಬಂದ ಬಳಿಕ ಸಿಎಂ ಆಗುತ್ತಾರೆ ಎಂದು ಅನೇಕ ಜ್ಯೋತಿಷಿಗಳು ಭವಿಷ್ಯ ನುಡಿದಿದ್ದರು. ಬಿಜೆಪಿಯ ನಾಯಕರು ಈ ಬಗ್ಗೆ ಮಾತನಾಡಿದ್ದರು. ಆಗಾಗ ಸಿಎಂ ಬದಲಾವಣೆ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಚರ್ಚೆ ಆಗುತ್ತಲೇ ಇರುತ್ತದೆ. ಈ ಚರ್ಚೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.
ಡಿಕೆ ಶಿವಕುಮಾರ್ ಅವರನ್ನು ಸಿಎಂ ಸ್ಥಾನದಲ್ಲಿ ನೋಡಲು ಕನಕಪುರ ಕ್ಷೇತ್ರದ ಜನರು, ಕಾರ್ಯಕರ್ತರು, ಬೆಂಬಲಿಗರು ಮಾತ್ರವಲ್ಲದೇ, ಡಿಸಿಎಂ ಅವರ ಇಡೀ ಕುಟುಂಬವೇ ಕಾಯುತ್ತಿದೆ ಎಂಬುದನ್ನು ಪುತ್ರಿ ಐಶ್ವರ್ಯ ರಿವೀಲ್ ಮಾಡಿದ್ದಾರೆ.












Click it and Unblock the Notifications