DK Shivakumar: ಡಿ.ಕೆ ಶಿವಕುಮಾರ್‌ಗೆ ವಿಶೇಷ ಮನವಿ ಮಾಡಿದ ಬಿಜೆಪಿ ಶಾಸಕ ಜನಾರ್ಧನ ರೆಡ್ಡಿ

ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಕರ್ನಾಟಕದ ಕರಾವಳಿ ಜನರಿಗೆ ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಶಾಸಕ ಜಿ. ಜನಾರ್ದನ ರೆಡ್ಡಿ ಅವರು ವಿಶೇಷ ಮನವಿ ಮಾಡಿದ್ದಾರೆ.

ಗಂಗಾವತಿ ವಿಧಾನಸಭಾ ಕ್ಷೇತ್ರದ ಹಿರೇಬೆಣಕಲ್ ಗ್ರಾಮದ ಐತಿಹಾಸಿಕ ಹಾಗೂ ಪ್ರಾಗೈತಿಹಾಸಿಕ ತಾಣವಾದ "ಮೋರೆರ್ ಗುಡ್ಡ"ಕ್ಕೆ ತೆರಳಿ, ನಮ್ಮ ಸಾವಿರಾರು ವರ್ಷಗಳ ಇತಿಹಾಸದ ಜೀವಂತ ಹೆಜ್ಜೆಗುರುತುಗಳನ್ನು ಕಣ್ತುಂಬಿಕೊಂಡೆ. ಇಲ್ಲಿನ ಕಲ್ಲಿನಿಂದ ನಿರ್ಮಿಸಲಾದ ಪ್ರಾಚೀನ ಸಮಾಧಿ ರಚನೆಗಳು, ಬಂಡೆಗಳ ಮೇಲಿನ ಶಿಲಾಕೃತಿಗಳು, ಹಿಂದಿನ ತಲೆಮಾರುಗಳ ಬದುಕಿನ ಕುರುಹುಗಳು ಹಾಗೂ ಕಲ್ಲು-ಗುಡ್ಡಗಳಿಂದ ಕೂಡಿದ ಪ್ರಕೃತಿಯ ಸೌಂದರ್ಯವನ್ನು ವೀಕ್ಷಿಸುವುದು ನಿಜಕ್ಕೂ ಒಂದು ಅವಿಸ್ಮರಣೀಯ ಅನುಭವ ಮತ್ತು ಸೌಭಾಗ್ಯ. ಈ ಕಲ್ಲುಗಳು ಕೇವಲ ಕಲ್ಲುಗಳಲ್ಲ; ನಮ್ಮ ಪೂರ್ವಜರ ಬದುಕು, ಸಂಸ್ಕೃತಿ ಮತ್ತು ನಾಗರಿಕತೆಯ ಕಥೆಯನ್ನು ಸಾವಿರಾರು ವರ್ಷಗಳಿಂದ ನಮ್ಮೊಂದಿಗೆ ಮಾತನಾಡುತ್ತಿರುವ ಇತಿಹಾಸದ ಪುಟಗಳು ಎಂದು ಶಾಸಕ ಜಿ. ಜನಾರ್ದನ ರೆಡ್ಡಿ ಅವರು ಹೇಳಿದ್ದಾರೆ.

DK Shivakumar BJP MLA Janardhana Reddy Makes Special Request to Karnataka CM

ಇಂತಹ ಅಪೂರ್ವ ಇತಿಹಾಸ ಮತ್ತು ಪಾರಂಪರ್ಯವನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕನಾಗಿರುವುದು ನನ್ನ ಪಾಲಿನ ಪುಣ್ಯ ಮತ್ತು ಹೆಮ್ಮೆ. ನಮ್ಮ ಪೂರ್ವಜರು ಬಿಟ್ಟುಹೋದ ಈ ಅಮೂಲ್ಯ ಪರಂಪರೆಯನ್ನು ಕೇವಲ ನಾವು ನೋಡಿಕೊಂಡು ಹೋಗುವುದಲ್ಲ; ಮುಂದಿನ ಪೀಳಿಗೆಯೂ ಹೆಮ್ಮೆಯಿಂದ ನೋಡಿ, ಅರಿತು, ಅನುಭವಿಸಬೇಕು. ದೇಶ-ವಿದೇಶಗಳಿಂದ ಪ್ರವಾಸಿಗರು ಹಾಗೂ ಇತಿಹಾಸಾಸಕ್ತರು ಇಲ್ಲಿಗೆ ಆಗಮಿಸುವಂತೆ ಈ ಪ್ರದೇಶವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಅಗತ್ಯವಿದೆ.

ಆ ನಿಟ್ಟಿನಲ್ಲಿ, ಹಿರೇಬೆಣಕಲ್‌ನ ಮೋರೆರ್ ಗುಡ್ಡದ ಐತಿಹಾಸಿಕ ಮಹತ್ವವನ್ನು ಉಳಿಸಿಕೊಂಡು, ಪ್ರವಾಸಿಗರಿಗೆ ಸುಲಭ ಹಾಗೂ ಸುರಕ್ಷಿತವಾಗಿ ಈ ತಾಣವನ್ನು ವೀಕ್ಷಿಸಲು ಅನುಕೂಲವಾಗುವಂತೆ ರೋಪ್‌ವೇ ಹಾಗೂ ಹೆಲಿಪ್ಯಾಡ್ ಸೇರಿದಂತೆ ಅಗತ್ಯ ಪ್ರವಾಸೋದ್ಯಮ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕೆಂದು ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರಿಗೆ ಮನವಿ ಮಾಡುತ್ತೇನೆ. ನಮ್ಮ ಇತಿಹಾಸ ನಮ್ಮ ಹೆಮ್ಮೆ... ನಮ್ಮ ಪರಂಪರೆ ನಮ್ಮ ಹೊಣೆ... ಮೋರೆರ್ ಗುಡ್ಡದ ವೈಭವ ಮುಂದಿನ ಪೀಳಿಗೆಗೂ ಉಳಿಯಲಿ ಎಂಬುದು ನನ್ನ ಸಂಕಲ್ಪ ಅಂತಲೂ ಶಾಸಕ ಜಿ. ಜನಾರ್ದನ ರೆಡ್ಡಿ ಅವರು ಹೇಳಿದ್ದಾರೆ.

ಕಡಲ ಮಕ್ಕಳ ರಕ್ಷಣೆಗೆ ಸರ್ಕಾರ ಬದ್ಧ: ಡಿ.ಕೆ ಶಿವಕುಮಾರ್

ಕಡಲ ಮಕ್ಕಳ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಮಂಗಳೂರಿನ ಮೀನುಗಾರಿಕಾ ಬಂದರಿಗೆ ಈಚೆಗೆ ಭೇಟಿ ನೀಡಿ, ಪ್ರಗತಿಯಲ್ಲಿರುವ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಯಿತು.

ಜೊತೆಗೆ ಮೀನುಗಾರರೊಂದಿಗೆ ಸಂವಾದ ನಡೆಸಿ, ಅವರ ಸಮಸ್ಯೆಗಳು, ಅಗತ್ಯತೆಗಳು ಹಾಗೂ ಜೀವನೋಪಾಯದ ಸ್ಥಿತಿಗತಿಗಳ ಕುರಿತು ಮಾಹಿತಿ ಪಡೆದು, ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ. ಇನ್ನು ಮೀನುಗಾರರು ಪ್ರೀತಿಯಿಂದ ಅಂಜಲ್ ಮೀನನ್ನು ಉಡುಗೊರೆಯಾಗಿ ನೀಡಿದ್ದು ವಿಶೇಷವಾಗಿತ್ತು. ಅವರ ಆತ್ಮೀಯತೆ ಹಾಗೂ ಪ್ರೀತಿಗೆ ಧನ್ಯವಾದಗಳು ಅಂತಲೂ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+