ಸಚಿವರ ಬೆನ್ನಲ್ಲೆ 'ರೈತ ಆತ್ಮಹತ್ಯೆ' ಬಗ್ಗೆ ಡಿಕೆ ಶಿವಕುಮಾರ್ ವಿವಾದಿತ ಹೇಳಿಕೆ: ವಿಡಿಯೋ

ಬೆಂಗಳೂರು, ಸೆಪ್ಟಂಬರ್ 06: ರೈತರ ಆತ್ಮಹತ್ಯೆ ಕುರಿತು ಹಗುರವಾಗಿ ಮಾತನಾಡಿದ್ದ ಸಚಿವ ಶಿವಾನಂದ ಪಾಟೀಲ್ ಅವರ ಬೆನ್ನಲ್ಲೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಹ ವಿವಾದಿತ ಹೇಳಿಕೆ ನೀಡಿದ್ದಾರೆ. ಈ ವಿಡಿಯೋ ತುಣಕನ್ನು ಕರ್ನಾಟಕ ಬಿಜೆಪಿ ಸಾಮಾಜಿಕ ಜಾತಲಾಣದಲ್ಲಿ ಹಂಚಿಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಮದ್ಯಪಾನದಿಂದ ಮೃತಪಟ್ಟಿದ್ದರು ಸಹ ಅಂತವರನ್ನು ಸಹ ಪರಿಹಾರದ ಆಸೆಗೆ ರೈತರ ಆತ್ಮಹತ್ಯೆ ಎಂದು ಬಿಂಬಿಸಲಾಗುತ್ತದೆ ಎಂದು ಸಚಿವ ಶಿವಾನಂದ ಪಾಟೀಲ್ ಹೇಳುವ ಮೂಲಕ ವಿಪಕ್ಷಗಳಿಗೆ ಆಹಾರವಾಗಿದ್ದರು. ಈ ಕುರಿತು ಆಕ್ರೋಶ ತಣ್ಣಗಾಗುವ ಮೊದಲೇ ಡಿಕೆ ಶಿವಕುಮಾರ್ ಅವರು ಅದೇ ದಾಟಿಯಲ್ಲಿ ಮಾತನಾಡಿದ ವಿಡಿಯೋ ಹರಿದಾಡುತ್ತಿದೆ.

dk-shivakumar-a-disputed-statement-about-farmer-suicide

ಈ ವಿಡಿಯೋದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತಿರುವ ಡಿಕೆ ಶಿವಕುಮಾರ್ ಅವರು, 'ಎಲ್ಲಿದೆ ರೈತರ ಆತ್ಮಹತ್ಯೆ, ಸ್ವಂತಕ್ಕೆಲ್ಲ ಆತ್ಮಹತ್ಯೆ ಮಾಡಿಕೊಂಡವರನ್ನು ರೈತರು ಎನ್ನುವುದಕ್ಕೆ ಆಗುವುದಿಲ್ಲ. ಇದೆಲ್ಲ ಸುಳ್ಳು' ಎಂದು ವಾವಾದಿತ ಹೇಳಿಕೆ ನೀಡಿದ್ದಾರೆ.

ಈ ಮೂಲಕ ಸಚಿವರ ಬಳಿಕ ರೈತರ ಆತ್ಮಹತ್ಯೆಯನ್ನು ನಕಲಿ ಎಂದು ಡಿಕೆ ಶಿವಕುಮಾರ್ ಅವರು ಆರೋಪಿಸಿದ್ದಾರೆ. ಗ್ರಾಮೀಣ ಭಾಗದ ರೈತರ ಸಮಸ್ಯೆಗಳು, ಸಂಕಷ್ಟಗಳನ್ನು ರಾಜ್ಯ ಸರ್ಕಾರ ತಳ್ಳಿ ಹಾಕುವಂತಿಲ್ಲ. ಇದೊಂದು ಗಂಭೀರ ವಿಚಾರ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಆಕ್ರೋಶ

ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ X ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿಯು, ಕರ್ನಾಟಕದಲ್ಲಿ ಮುಂಗಾರು ಮಳೆ ಕೊರತೆ ಉಂಟಾಗಿದೆ ಎಂಬುದಕ್ಕೆ ಬರಡು ಭೂಮಿ, ಮೋಡವಿಲ್ಲದ ಆಕಾಶ, ಸುಟ್ಟ ಬೆಳೆಗಳೇ ಸಾಕ್ಷಿ ಹೇಳುತ್ತಿವೆ. ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 100 ದಿನಗಳಲ್ಲಿ ನೂರಕ್ಕೂ ಹೆಚ್ಚು ರೈತರನ್ನು ಬಲಿ ತೆಗೆದುಕೊಂಡು ದಾಖಲೆ ಬರೆದಿದೆ ಎಂದು ದೂರಿದೆ.

ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ತಮ್ಮ ಸ್ಥಾನದ ಜವಾಬ್ದಾರಿ ಮರೆತು ಹೀಗೆ 'ಪುಂಗಿ' ಊದಿದರೆ ಇನ್ನು ಸಂಪುಟದ ಸಚಿವರು ಅದಕ್ಕೆ ತಕ್ಕಂತೆ ಕುಣಿದೇ ಕುಣಿಯುತ್ತಾರೆ. ಉಪಮುಖ್ಯಮಂತ್ರಿಗಳಿಂದಲೇ ನೇರವಾಗಿ ಸ್ಫೂರ್ತಿ ಪಡೆದು ಸಚಿವ ಶಿವಾನಂದ ಪಾಟೀಲರು ರೈತರ ಸಾವಿನ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆ.

ತನ್ನ ಸ್ವಂತ ಕುಟುಂಬವನ್ನೇ ಸಲಹಲು ಆಗುತ್ತಿಲ್ಲ ಎಂಬ ರೈತನ ಬೇಗೆಯನ್ನು ಸ್ವಂತಕ್ಕೆ ಆತ್ಮಹತ್ಯೆ ಎನ್ನುತ್ತೀರುವ ಉಪಮುಖ್ಯಮಂತ್ರಿಗಳೆ ಅವರು ನಿಮಗಾಗಿ ಅತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ನೀವು ಬಯಸಿದಂತಿದೆ. ಈ ರೀತಿಯಲ್ಲಿ ರೈತ ಸಮುದಾಯಕ್ಕೆ ಅವಮಾನ ಮಾಡುವ ನಿಮ್ಮ ಹೀನ ಮನಸ್ಥಿತಿಯೇ ಅತ್ಯಂತ ನಾಚಿಗೆಗೇಡಿನದ್ದು ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+