ಸತತ 81 ಗಂಟೆಗಳ ಭಾಷ್ಯಾಜ್ಯ ಮಹಾಯಜ್ಞಕ್ಕೆ ಚಾಲನೆ
ಬೆಂಗಳೂರು, ಫೆ.19 : ಆಧ್ಯಾತ್ಮದ ಪ್ರಚಾರ ನಡೆಸುವ ಸಾಮಾಜಿಕ ಸೇವಾ ಟ್ರಸ್ಟ್ ಶಕ್ತಿವೇದಾ ವೆಲ್‍ನೆಸ್ ಮಿಷನ್, ಬೆಂಗಳೂರಿನಲ್ಲಿ ಭಾಷ್ಯಾಜ್ಯ ಮಹಾಯಜ್ಞ'ವನ್ನು ಆಯೋಜಿಸಿದ್ದು, ಮೂರು ದಿನಗಳ ಈ ಮಹಾಯಜ್ಞವನ್ನು ಕರ್ನಾಟಕ ಪ್ರವಾಸೋದ್ಯಮ ಖಾತೆ ಮಾಜಿ ಸಚಿವ ಡಾ. ಜೆ. ಅಲೆಕ್ಸಾಂಡರ್ ಬುಧವಾರ ಜಿಗಣಿಯಲ್ಲಿ ಚಾಲನೆ ನೀಡಿದ್ದಾರೆ.
ಒಟ್ಟು ಮೂರು ದಿನಗಳ ಕಾಲ ನಡೆಯುವ ಈ ಮಹಾಯಜ್ಞವು ಒಟ್ಟು 81 ಭಾಗಗಳ ಸರಣಿಯಾಗಿದ್ದು, ಸತತವಾಗಿ ಮೂರು ರಾತ್ರಿ ಮತ್ತು ನಾಲ್ಕು ಹಗಲುಗಳನ್ನು ಒಳಗೊಂಡು 81 ಗಂಟೆ ಕಾಲ ಅವಿರತವಾಗಿ ನಡೆಯಲಿದೆ. ಸಾಮಾಜಿಕ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಾಮುಖ್ಯತೆಗಳನ್ನು ಒಳಗೊಂಡ 81 ಪ್ರಮುಖ ವಿಷಯಗಳ ಕುರಿತು ಇರುವ ನಕಾರಾತ್ಮಕ ಅಂಶಗಳನ್ನು ನಿರ್ಮೂಲನೆ ಮಾಡಲು ಯಜ್ಞವನ್ನು ಆಯೋಜಿಸಲಾಗಿದೆ.
ಭಾಷ್ಯಾಜ್ಯ ಮಹಾಯಜ್ಞದ ಕುರಿತು ಮಾಹಿತಿ ನೀಡಿದ ಶಕ್ತಿವೇದಾ ವೆಲ್‍ನೆಸ್ ಮಿಷನ್‍ನ ಸಂಸ್ಥಾಪಕರಾದ ರಿಷಿದೇವ್ ನರೇಂದ್ರನ್‍ಜೀ, ನಾವು ಇಲ್ಲಿ 4ನೇ ಭಾಷ್ಯಾಜ್ಯ ಮಹಾಯಜ್ಞವನ್ನು ನಡೆಸುತ್ತಿದ್ದೇವೆ. ಈ ಯಜ್ಞವು 81 ಭಾಗಗಳನ್ನು ಒಳಗೊಂಡಿದ್ದು, ಜಗತ್ತಿನಲ್ಲಿ ಆವರಿಸಿರುವ ನಕಾರಾತ್ಮಕ ಶಕ್ತಿಗಳನ್ನು ತೆರವುಗೊಳಿಸಿ ಪ್ರತಿಯೊಬ್ಬರು ಸಂತಸದಿಂದ ಹಾಗೂ ಧಾರ್ಮಿಕ ಸೌಹಾರ್ದತೆಯಿಂದ ನೆಲಸಬೇಕು ಎಂಬ ಉದ್ದೇಶದಿಂದ ಇದನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.
ಆರೋಗ್ಯ ಸಚಿವ ಯುಟಿ ಖಾದರ್, ಗೃಹ ಸಚಿವ ಕೆ.ಜೆ. ಜಾರ್ಜ್, ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ದಿನೇಶ್ ಗುಂಡೂರಾವ್ ಮುಂತಾದವರು ಭಾಷ್ಯಾಜ್ಯ ಮಹಾಯಜ್ಞದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. [ಕರ್ನಾಟಕದ ಇತರ ಜಿಲ್ಲಾಸುದ್ದಿಗಳು]

ಭಾಷ್ಯಾಜ್ಯ ಮಹಾಯಜ್ಞಕ್ಕೆ ಚಾಲನೆ
ಶಕ್ತಿವೇದಾ ವೆಲ್‍ನೆಸ್ ಮಿಷನ್ ಬೆಂಗಳೂರಿನಲ್ಲಿ ನಡೆಸುತ್ತಿರುವ `ಭಾಷ್ಯಾಜ್ಯ ಮಹಾಯಜ್ಞ'ಕ್ಕೆ ಕರ್ನಾಟಕ ಪ್ರವಾಸೋದ್ಯಮ ಖಾತೆ ಮಾಜಿ ಸಚಿವ ಡಾ. ಜೆ. ಅಲೆಕ್ಸಾಂಡರ್ ಬುಧವಾರ ಜಿಗಣಿಯಲ್ಲಿ ಚಾಲನೆ ನೀಡಿದ್ದಾರೆ. ಒಟ್ಟು ಮೂರು ದಿನಗಳ ಕಾಲ ನಡೆಯುವ ಈ ಮಹಾಯಜ್ಞವು ಒಟ್ಟು 81 ಭಾಗಗಳ ಸರಣಿಯಾಗಿದ್ದು, ಸತತವಾಗಿ ಮೂರು ರಾತ್ರಿ ಮತ್ತು ನಾಲ್ಕು ಹಗಲುಗಳನ್ನು ಒಳಗೊಂಡು 81 ಗಂಟೆ ಕಾಲ ಅವಿರತವಾಗಿ ನಡೆಯಲಿದೆ.

ಫೆ.23ರಂದು ಪಶ್ಚಿಮಘಟ್ಟ ಉಳಿಸಿ ಸಮಾವೇಶ
ಪಶ್ಚಿಮಘಟ್ಟ ಉಳಿಸಿ ಸಂಘಟನಾ ಸಮಿತಿ ಬೆಂಗಳೂರಿನ ಗಾಂಧಿ ಭವನದಲ್ಲಿ ಫೆ.23ರಂದು ಪಶ್ಚಿಮಘಟ್ಟ ಉಳಿಸಿ ರಾಜ್ಯ ಮಟ್ಟದ ಸಮಾವೇಶ ಆಯೋಜಿಸಿದೆ. ಸಮಾವೇಶವನ್ನು ಪರಿಸರ ವಿಜ್ಞಾನಿ ಡಾ. ಮಾಧವ ಗಾಡ್ಗೀಳ್ ಉದ್ಘಾಟಿಸಲಿದ್ದು, ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿರುವ 6 ರಾಜ್ಯಗಳ 250ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಮಂಗನ ಕಾಟಕ್ಕೆ ನಾಗರೀಕರು ಸುಸ್ತು
ಬೆಂಗಳೂರಿನ ಯಲಹಂಕ ಬಳಿಯ ನೆಹರೂ ನಗರ, ಸೂಗಪ್ಪ ಲೇಔಟ್, ಗಾಂಧಿನಗರದ ಜನರ ಮಂಗಳ ಕಾಟದಿಂದ ಬೇಸತ್ತು ಹೋಗಿದ್ದಾರೆ. ಕಳೆದ ಆರು ತಿಂಗಳಿನಿಂದ ಇಲ್ಲಿನ ನಿವಾಸಿಗಳಿಗೆ ಮಂಗಗಳು ಕಾಟ ಕೊಡುತ್ತಿದ್ದು, ಕೋತಿ ಕಾಟದಿಂದ ಮುಕ್ತವಾಗಲು ಜನರು ನಾನಾ ಕಸರತ್ತು ನಡೆಸುತ್ತಿದ್ದಾರೆ. ಮನೆಯ ಮುಂದೆ ಆಗಾಗ ಪಟಾಕಿಗಳನ್ನು ಸಿಡಿಸಿ ಮಂಗಳನ್ನು ಓಡಿಸಲು ಹರಸಾಹಸ ಪಡುತ್ತಿದ್ದಾರೆ. ಮಂಗಗಳನ್ನು ಹಿಡಿಯುವಂತೆ ಬಿಬಿಎಂಪಿಗೆ ಮಾಡಿದ ಮನವಿಗೆ ಇದುವರೆಗೂ ಅವರು ಸ್ಪಂದಿಸಿಲ್ಲ.

ಸಂಭಾಜಿ ಪಾಟೀಲ್ ಕನ್ನಡ ಕೇಳಿ ಜನರಿಗೆ ಅಚ್ಚರಿ
ಬೆಳಗಾವಿಯಲ್ಲಿ ನಡೆದ ಶಿವಾಜಿ ಜಯಂತಿ ಉತ್ಸವದಲ್ಲಿ ಬಿಜೆಪಿ ಶಾಸಕ ಸಂಜಯ ಪಾಟೀಲ ಮರಾಠಿ ಯಲ್ಲಿ ಹಾಗೂ ಎಂಇಎಸ್ ಬೆಂಬಲಿತ ಶಾಸಕ ಸಂಭಾಜಿ ಪಾಟೀಲ್ ಕನ್ನಡದಲ್ಲಿ ಭಾಷಣ ಮಾಡುವ ಜನರಲ್ಲಿ ಅಚ್ಚರಿ ಮೂಡಿಸಿದರು. ಬಿಜೆಪಿ ಶಾಸಕ ಸಂಜಯ ಪಾಟೀಲ ಮರಾಠಿಯಲ್ಲಿ "ಶಿವಾಜಿ ಯಾವುದೇ ಜಾತಿ, ಭಾಷೆಗೆ ಸೀಮಿತವಾದವರಲ್ಲ. ಅವರು ಒಬ್ಬ ಧೀಮಂತ ರಾಷ್ಟ್ರಪುರುಷ ಎಂದು ಬಣ್ಣಿಸಿದರು". ಕುಮಾರ ಗಂಧರ್ವ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಭಾಜಿ ಪಾಟೀಲ್ ಅಚ್ಚ ಕನ್ನಡದಲ್ಲಿ ಭಾಷಣ ಮಾಡುವ ಮೂಲಕ ಜನರ ಅಚ್ಚರಿಗೆ ಕಾರಣರಾದರು.

ನರ್ಸ್‌ಗಳ ಮುಷ್ಕರ: 8 ಮಂದಿ ಅಸ್ವಸ್ಥ
ರಾಜ್ಯ ಗುತ್ತಿಗೆ ಶುಶ್ರೂಷಕರ ಸಂಘ ನಡೆಸುತ್ತಿರುವ ಅಹೋರಾತ್ರಿ ಮುಷ್ಕರ ಎಂಟನೇ ದಿನವೂ ಮುಂದುವರಿದಿದ್ದು, ಏಳು ಮಂದಿ ಅಸ್ವಸ್ಥಗೊಂಡು ಬೆಂಗಳೂರಿನ ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಫೆ.12ರಿಂದ ಗುತ್ತಿಗೆ ಶುಶ್ರೂಷಕರು ಮುಷ್ಕರ ನಡೆಸುತ್ತಿದ್ದಾರೆ. ಉಪವಾಸನಿರತ 50 ಮಂದಿ ಪೈಕಿ ಬುಧವಾರ 8 ಮಂದಿ ಅಸ್ವಸ್ಥಗೊಂಡಿದ್ದಾರೆ.

ಪ್ರಾಯೋಗಿಕ ರೈಲು ಸಂಚಾರ
ಕೊಟ್ಟೂರು-ಹರಿಹರ ಹೊಸ ರೈಲು ಮಾರ್ಗದಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಪ್ರಯಾಣಿಕರ ಸುರಕ್ಷತೆ ಅರಿಯಲು, ಪ್ರಾಯೋಗಿಕ ರೈಲು ಸಂಚಾರ ಗುರುವಾರ ನಡೆಯಲಿದ. ಕಮಿಷನರ್ ಆಫ್ ರೈಲ್ವೆ ಸೇಫ್ಟಿ (ಸಿಆರ್‌ಎಸ್) ವಿಭಾಗದ ಉನ್ನತ ಅಧಿಕಾರಿಗಳು ಹಾಗೂ ಯೋಜನೆಯ ನಿರ್ಮಾಣ ವಿಭಾಗದ ಅಧಿಕಾರಿಗಳಿರುವ ತಂಡ, ಇದಕ್ಕಾಗಿ ಕೊಟ್ಟೂರಿಗೆ ಆಗಮಿಸಿದೆ.


Click it and Unblock the Notifications
