ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಟಿಎಂ ಹಂತಕನ ತಲೆಗೆ 5 ಲಕ್ಷ ಬಹುಮಾನ

|
Google Oneindia Kannada News

ಬೆಂಗಳೂರು, ಡಿ.16 : ಬೆಂಗಳೂರಿನ ಎಟಿಎಂನಲ್ಲಿ ನ.19ರಂದು ಜ್ಯೋತಿ ಉದಯ್ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿ ಇನ್ನೂ ತಲೆ ಮರಿಸಿಕೊಂಡಿದ್ದಾನೆ. ಸದ್ಯ ಬೆಂಗಳೂರು ಪೊಲೀಸರು ಆರೋಪಿ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂ.ಗಳ ಬಹುಮಾನ ಘೋಷಿಸಿದ್ದಾರೆ.

ನ.21ರಂದು ಬೆಂಗಳೂರು ಪೊಲೀಸರು ಆರೋಪಿ ಬಗ್ಗೆ ಸುಳಿವು ನೀಡಿದವರಿಗೆ 1 ಲಕ್ಷ ರೂ. ಗಳ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಆದರೆ, ಆರೋಪಿಯ ಬಗ್ಗೆ ಯಾವುದೇ ಮಾಹಿತಿ ದೊರೆಯದ ಕಾರಣ, ಸೋಮವಾರ ಬಹುಮಾನದ ಮೊತ್ತವನ್ನು 5 ಲಕ್ಷ ರೂ.ಗಳಿಗೆ ಏರಿಕೆ ಮಾಡಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಈಗಾಗಲೇ ಆಂಧ್ರಪ್ರದೇಶದ ಪೊಲೀಸರು ಆರೋಪಿಯ ಸುಳಿವು ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಿದ್ದರು. ಆದರೆ, ಆಂಧ್ರಪ್ರದೇಶದಲ್ಲಿ ಆರೋಫಿ ಬಗ್ಗೆ ಯಾವುದೇ ಸುಳಿವು ಲಭಿಸಿಲ್ಲ. ಆಂಧ್ರಕ್ಕೆ ತನಿಖೆ ನಡೆಸಲು ತೆರಳಿದ್ದ ಪೊಲೀಸರು ಬರಿಗೈಲಿ ವಾಪಸ್ ಆಗಿದ್ದಾರೆ. (ಹಂತಕ ಆಂಧ್ರದಲ್ಲಿಲ್ಲ, ಪೊಲೀಸ್ ವಾಪಸ್)

ಎಟಿಎಂನಲ್ಲಿ ಕಾರ್ಪೋರೇಷನ್ ಬ್ಯಾಂಕ್ ಉದ್ಯೋಗಿ ಜ್ಯೋತಿ ಉದಯ್ ಮೇಲೆ ಹಲ್ಲೆ ನಡೆದು ಸುಮಾರು ಒಂದು ತಿಂಗಳು ಕಳೆಯುತ್ತ ಬಂದಿದೆ. ಆದರೆ, ಆರೋಪಿ ಇನ್ನು ಪತ್ತೆಯಾಗಿಲ್ಲ. ಆದ್ದರಿಂದ ಬೆಂಗಳೂರು ಪೊಲೀಸರು ಬಹುಮಾನ ಮೊತ್ತವನ್ನು ಹೆಚ್ಚಿಸಿ ಆರೋಪಿ ಬಗ್ಗೆ ಜನರಿಂದ ಸುಳಿವು ಪಡೆಯಲು ಮುಂದಾಗಿದ್ದಾರೆ. (ಕರ್ನಾಟಕದ ಇತರ ಜಿಲ್ಲಾಸುದ್ದಿಗಳು)

ಎಟಿಎಂ ಹಂತಕನ ತಲೆಗೆ 5 ಲಕ್ಷ ಬಹುಮಾನ

ಎಟಿಎಂ ಹಂತಕನ ತಲೆಗೆ 5 ಲಕ್ಷ ಬಹುಮಾನ

ಬೆಂಗಳೂರಿನ ಎಟಿಎಂನಲ್ಲಿ ನ.19ರಂದು ಜ್ಯೋತಿ ಉದಯ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪಿ ಇನ್ನೂ ತಲೆ ಮರಿಸಿಕೊಂಡಿದ್ದಾನೆ. ಸದ್ಯ ಬೆಂಗಳೂರು ಪೊಲೀಸರು ಆರೋಪಿ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂ.ಗಳ ಬಹುಮಾನ ಘೋಷಿಸಿದ್ದಾರೆ. ಮೊದಲು 1 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಆದರೆ, ಆರೋಪಿ ಬಗ್ಗೆ ಸುಳಿವು ದೊರೆಯದ ಹಿನ್ನಲೆಯಲ್ಲಿ ಬಹುಮಾನದ ಮೊತ್ತವನ್ನು ಹೆಚ್ಚಿಸಲಾಗಿದೆ. ಆಂಧ್ರಪ್ರದೇಶದಲ್ಲೂ ಆರೋಪಿ ತಲೆಗೆ 1 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ.

ಚಾಲಕನ ವರ್ತನೆಯಿಂದ ಟ್ರಾಫಿಕ್ ಜಾಮ್

ಚಾಲಕನ ವರ್ತನೆಯಿಂದ ಟ್ರಾಫಿಕ್ ಜಾಮ್

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್ ಚಾಲಕನೊಬ್ಬನ ದುಂಡಾವರ್ತನೆಯಿಂದ ಬೆಳ್ಳಂಬೆಳಗ್ಗೆ ರಾಮಕೃಷ್ಣ ಆಶ್ರಮ ವೃತದಲ್ಲಿ ಸುಮಾರು ಅರ್ಧ ಕಿಲೋ ಮೀಟರ್ ದೂರ ಟ್ರಾಫಿಕ್ ಜಾಮ್ ಉಂಟಾಗಿ, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಚಾಲಕ ವೇಗವಾಗಿ ಬಸ್ ಚಾಲನೆ ಮಾಡುತ್ತಿದ್ದ ಇದನ್ನು, ಅಕ್ಕಪಕ್ಕದ ವಾಹನ ಸವಾರರು ಪ್ರಶ್ನಸಿದರು. ಇದರಿಂದ ಕೋಪಗೊಂಡ ಆತ, ಬಸ್ ನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಅವರ ಮೇಲೆ ಜೊತೆ ಜಗಳವಾಡಿದ್ದಾನೆ. ಇದರಿಂದ ಗಾಂಧಿ ಬಜಾರ್, ಚಾಮರಾಜಪೇಟೆ, ಕನಕಪುರ ರಸ್ತೆಗಳಲ್ಲಿ ಸಂಚಾರ ವ್ಯತ್ಯಯ ಉಂಟಾಗಿತ್ತು. ಬಸವನಗುಡಿ ಠಾಣಾ ವ್ಯಾಪ್ತಿಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಕಳಸಾ ಬಂಡೂರಿ ಕುರಿತು ದೆಹಲಿಯಲ್ಲಿ ಪತ್ರಿಭಟನೆ

ಕಳಸಾ ಬಂಡೂರಿ ಕುರಿತು ದೆಹಲಿಯಲ್ಲಿ ಪತ್ರಿಭಟನೆ

ಕಳಸಾ ಬಂಡೂರಿ ನಾಲಾ ಜೋಡಣೆ ಯೋಜನೆ ಸಂಬಂಧ ಪ್ರಧಾನ ಮಂತ್ರಿಯವರ ಗಮನ ಸೆಳೆಯಲು ಕಳಸಾ ಬಂಡೂರಿ ನಾಲಾ ಹೋರಾಟ ಸಮಿತಿ ದಿಲ್ಲಿಯ ಸಂಸತ್ ಎದುರು ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿದೆ. ಕಳಸಾ ಬಂಡೂರಿ ನಾಲಾ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಈ ಕುರಿತು ಮಾಹಿತಿ ನೀಡಿದ್ದು, ಈ ಹೋರಾಟ ಪಕ್ಷಾತೀತವಾಗಿದ್ದು, ಉತ್ತರ ಕರ್ನಾಟಕದಿಂದ ಕನಿಷ್ಠ ಐದು ಸಾವಿರ ಜನ ಧರಣಿ ಸತ್ಯಾಗ್ರಹ ನಡೆಸಲು ತೆರಳಲಿದ್ದಾರೆ. ಡಿ. 22ರಂದು ಬೆಳಗಾವಿಯಲ್ಲಿ ವಿವಿಧ ಸಂಘಟನೆಗಳ ಸಭೆ ಕರೆದು, ಧರಣಿ ದಿನಾಂಕ ನಿರ್ಧರಿಸಲಾಗುವುದು ಎಂದು ಹೇಳಿದರು.

698 ಹಸುಗಳಿಗೆ ಮಾತ್ರ ಪರಿಹಾರ, ರೈತರ ಆಕ್ರೋಶ

698 ಹಸುಗಳಿಗೆ ಮಾತ್ರ ಪರಿಹಾರ, ರೈತರ ಆಕ್ರೋಶ

ಮೂರು ತಿಂಗಳ ಹಿಂದೆ ಕಾಲುಬಾಯಿ ಜ್ವರಕ್ಕೆ ಕೋಲಾರ ಜಿಲ್ಲೆಯ 10,422 ಹಸುಗಳು ತುತ್ತಾಗಿದ್ದರು ಅವುಗಳಲ್ಲಿ 2,259 ಹಸುಗಳು ಮೃತಪಟ್ಟಿದ್ದವು. ಸದ್ಯ, ಸರ್ಕಾರ ಕಾಲುಬಾಯಿ ಜ್ವರದಿಂದ ಸುತ್ತಿರುವ 698 ಹಸುಗಳಿಗೆ ಮಾತ್ರ ಪರಿಹಾರ ಘೋಷಣೆ ಮಾಡಿದ್ದು, 1.35 ಕೋಟಿ ರು. ಬಿಡುಗಡೆ ಮಾಡಿದೆ. ಸರ್ಕಾರ ಮೃತಪಟ್ಟಿರುವ ಹಸುಗಳ ಕುರಿತು ಮಾಹಿತಿ ಪಡೆಯಲು ರಚಿಸಿದ್ದ ಸಮಿತಿ ನೀಡಿರುವ ವರದಿಯನ್ವಯ ಶ್ರೀನಿವಾಸಪುರ, ಮಾಲೂರು ಮತ್ತು ಬಂಗಾರಪೇಟೆ ತಾಲೂಕಿನ 698 ಹಸುಗಳಿಗೆ ಮಾತ್ರ ಪರಿಹಾರ ನೀಡಲಾಗಿದೆ. ಕೋಲಾರ ಮತ್ತು ಮುಳಬಾಗಿಲು ತಾಲೂಕಿನಲ್ಲಿ ಸತ್ತಿರುವ ಹಸುಗಳಿಗೆ ಪರಿಹಾರ ಮಂಜೂರು ಮಾಡದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಕೆರೆ ಒತ್ತುವರಿ ತೆರವು

ಕೆರೆ ಒತ್ತುವರಿ ತೆರವು

ತಿಪ್ಪಗೊಂಡನಹಳ್ಳಿ ಕೆರೆ ಜಲಾನಯನ ಪ್ರದೇಶದಲ್ಲಿ ಕೆರೆ ಅಂಗಳ ಅತಿಕ್ರಮಿಸಿಕೊಂಡು ನಿರ್ಮಿಸಿದ್ದ ವಸತಿ ಬಡಾವಣೆ ಹಾಗೂ ಕಟ್ಟಡ ನಿರ್ಮಾಣವನ್ನು ಬೆಂಗಳೂರು ನಗರ ಜಿಲ್ಲಾಡಳಿತ ತೆರವು ಮಾಡುವಲ್ಲಿ ಯಶಸ್ವಿಯಾಗಿದೆ. ಜಿಲ್ಲಾಧಿಕಾರಿ ಡಾ. ಜಿ.ಸಿ.ಪ್ರಕಾಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಚನ್ನೇನಹಳ್ಳಿ, ವನ್ನಿಗಾನಹಟ್ಟಿ ಗ್ರಾಮಗಳಲ್ಲಿ ಅಂದಾಜು 32 ಕೋಟಿ ರೂ. ಮೊತ್ತದ 4.5 ಎಕರೆ ವಿಸ್ತೀರ್ಣದ ಭೂಮಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಸಾವರ್ಜನಿಕರು ವಿರೋಧ ವ್ಯಕ್ತಪಡಿಸುತ್ತಾರೆ ಎಂಬ ಕಾರಣಕ್ಕೆ ಪೊಲೀಸ್ ಭದ್ರತೆಯಲ್ಲಿ ಅತಿಕ್ರಮಣಕಾರರನ್ನು ಹೊರಹಾಕಲಾಗಿದೆ.

ಮೂರು ಚಿರತೆ ಮರಿಗಳು ಪ್ರತ್ಯಕ್ಷ

ಮೂರು ಚಿರತೆ ಮರಿಗಳು ಪ್ರತ್ಯಕ್ಷ

ಹಾವೇರಿ ಸಮೀಪದ ಕಡೂರು ಗ್ರಾಮದ ಹೊರವಲಯದಲ್ಲಿ ಭಾನುವಾರ ರಾತ್ರಿ ಮೂರು ಚಿರತೆ ಮರಿಗಳು ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಕಡೂರು ಗ್ರಾಮದ ರೈತರು ಬೆಳಗ್ಗೆ ಕುಡುಪಲಿ-ತುಮ್ಮಿನಕಟ್ಟಿ ಕ್ರಾಸ್ ಬಳಿ ಈ ಚಿರತೆ ಮರಿಗಳನ್ನು ನೋಡಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಜನರನ್ನು ನೋಡಿದ ಮರಿಗಳು ತುಂಗಾ ಮೇಲ್ದಂಡೆ ನೀರು ಪೂರೈಸಲು ರಸ್ತೆ ಕೆಳಗೆ ಹಾಕಲಾದ ಪೈಪಿನಲ್ಲಿ ಅವಿತುಕೊಂಡಿವೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಮರಿಗಳು ಅವಿತುಕೊಂಡಿರುವುದನ್ನು ದೃಢಪಡಿಸಿದ್ದು, ಅವುಗಳನ್ನು ಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದಾರೆ.

ರೈಲ್ವೆ ಕಾಮಗಾರಿ ಸ್ಥಗಿತ

ರೈಲ್ವೆ ಕಾಮಗಾರಿ ಸ್ಥಗಿತ

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಬೆಂಗಳೂರು - ಮೈಸೂರು ಜೋಡಿ ರೈಲು ಮಾರ್ಗ ನಿರ್ಮಾಣಕ್ಕೆ ಭೂಮಿ ನೀಡಿದ ರೈತರಿಗೆ ಹಣ ವಿತರಿಸದೆ ವಿಳಂಬ ಮಾಡುತ್ತಿರುವ ರೇಲ್ವೆ ಇಲಾಖೆ ಕ್ರಮ ಖಂಡಿಸಿ ರೈತಸಂಘ ಕಾರ್ಯಕರ್ತರು ಕಾಮಗಾರಿಗೆ ಅಡ್ಡಿಪಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಶಿಂಷಾ ಸೇತುವೆ ಬಳಿ ಭೂ ಮಾಲೀಕರೊಂದಿಗೆ ರೈತರು ನಡೆಸುತ್ತಿರುವ ಪ್ರತಿಭಟನೆಯಿಂದಾಗಿ ಜೋಡಿ ರೈಲು ಮಾರ್ಗದ ಕಾಮಗಾರಿ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

English summary
Super fast news bites from interior Karnataka : Bangalore Police on Monday, December 16 announced a Rs.5 lakh reward for information about the untraceable assailant who brutally attacked a woman in an unguarded ATM kiosk on Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X