ಕೆಸರುಗದ್ದೆಗೆ ಇಳಿದು ಮಕ್ಕಳ ಜೊತೆಯಲ್ಲೇ ಆಟವಾಡಿದ ಮೂಡಿಗೆರೆ ಶಾಸಕ

Recommended Video

      ಕೆಸರುಗದ್ದೆಗೆ ಇಳಿದು ಮಕ್ಕಳ ಜೊತೆಯಲ್ಲೇ ಆಟವಾಡಿದ ಮೂಡಿಗೆರೆ ಶಾಸಕ | Oneindia Kannada

      ಚಿಕ್ಕಮಗಳೂರು, ಆಗಸ್ಟ್.06: ಮಲೆನಾಡಿನಲ್ಲಿ ಮಳೆ ಅಬ್ಬರಿಸಿ ಕೊಂಚ ಬಿಡುವು ಪಡೆದುಕೊಂಡಿದೆ. ಎಲ್ಲೆಲ್ಲೂ ಗ್ರಾಮೀಣ ಕ್ರೀಡಾಕೂಟಗಳು ನಡೆಯುತ್ತಿವೆ. ಅದರಲ್ಲೂ ಕೆಸರುಗದ್ದೆ ಕ್ರೀಡಾಕೂಟಗಳು ಹೆಚ್ಚು ಆಯೋಜನೆಗೊಳ್ಳುತ್ತಿವೆ.

      ಹಾಗೆಯೇ ಭಾನುವಾರ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಸವನದಿಣ್ಣೆ ಗ್ರಾಮದಲ್ಲಿ ಆಯೋಜನೆಗೊಂಡಿದ್ದ ಕ್ರೀಡಾಕೂಟದಲ್ಲಿ ಸ್ವತಃ ಶಾಸಕರೇ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಭಾಗಿಯಾಗಿ ಎಂಜಾಯ್​ ಮಾಡಿದ್ದಾರೆ.

      ರೋಟರಿ ಸಂಸ್ಥೆ ವತಿಯಿಂದ ಆಯೋಜನೆಗೊಂಡಿದ್ದ ಜಿಲ್ಲಾ ಮಟ್ಟದ ಕೆಸರುಗದ್ದೆ ಕ್ರೀಡಾಕೂಟವನ್ನು ಉದ್ಘಾಟನೆ ಮಾಡಿದ ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ, ನಂತರ ತಾವೇ ಕೆಸರುಗದ್ದೆಯಲ್ಲಿ ಇಳಿದು ಮಕ್ಕಳೊಂದಿಗೆ ಮಕ್ಕಳಂತೆ ಆಡಿ ರೇಸ್​ ನಲ್ಲಿ ಪಾಲ್ಗೊಂಡು ನಾ ಮುಂದು, ತಾ ಮುಂದು ಎಂದು ಓಡಿದರು.

      District level Kesaru Gadde sports were held at Chikkamagalur

      ಈ ವೇಳೆ ಪಕ್ಕಾ ಗ್ರಾಮೀಣ ಉಡುಪಿನಲ್ಲಿ ಕೆಸರುಗದ್ದೆಗೆ ಇಳಿದ ಶಾಸಕರು, ನಾನು ಗ್ರಾಮೀಣ ಪ್ರತಿಭೆ ಎಂಬುದನ್ನು ತೋರಿಸಿಕೊಟ್ಟರು. ಇದೇ ವೇಳೆ ಮಾತನಾಡಿದ ಕುಮಾರಸ್ವಾಮಿ, ಕೆಸರುಗದ್ದೆಯಲ್ಲಿ ಆಟವಾಡುವುದು ಕೇವಲ ಕ್ರೀಡೆಯಲ್ಲದೇ, ಆರೋಗ್ಯದ ವೃದ್ದಿಗೂ ಸಹಕಾರಿ.

      District level Kesaru Gadde sports were held at Chikkamagalur

      ಅಲ್ಲದೇ ವಿವಿಧ ರೋಗಗಳ ನಿವಾರಣೆಗೂ ಈ ಮಣ್ಣಿನಲ್ಲಿರುವ ಕಬ್ಬಿಣದ ಅಂಶ ರೋಗ ನಿರೋಧಕವಾಗಿ ಕೆಲಸಮಾಡುತ್ತದೆ ಎಂದು ಸಲಹೆ ನೀಡಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+