ಕರ್ನಾಟಕದ ಎಲ್ಲ ಜಿಲ್ಲೆಗಳ ಉಸ್ತುವಾರಿ ಸಚಿವರ ಪಟ್ಟಿ
ಬೆಂಗಳೂರು, ಜುಲೈ 31: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವು ರಾಜ್ಯದ ಎಲ್ಲ ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಿದೆ.
26 ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಲಾಗಿದ್ದು, ಕೆಲವರಿಗೆ ಎರಡೆರಡು ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ. ಕೆಲವು ಕಾಂಗ್ರೆಸ್ ಸಚಿವರಿಗೆ ಕಳೆದ ಬಾರಿ ಇದ್ದ ಜಿಲ್ಲೆಗಳ ಉಸ್ತುವಾರಿಯೇ ಈ ಬಾರಿಯೂ ಸಿಕ್ಕಿದೆ.
ಪರಮೇಶ್ವರ್ ಅವರಿಗೆ ಬೆಂಗಳೂರು ಉಸ್ತುವಾರಿ ವಹಿಸುವ ಬಗ್ಗೆ ಮುಂಚೆಯೇ ವಿರೋಧ ಕೇಳಿಬಂದಿತ್ತು ಆದರೂ ನಗರ ಉಸ್ತುವಾರಿ ಅವರ ಕೈಗೆ ಸೇರಿದೆ. ಜೊತೆಗೆ ತುಮಕೂರು ಸಹ ಅವರ ಉಸ್ತುವಾರಿಯಲ್ಲೇ ಇರಲಿದೆ.

ಜಿಲ್ಲಾವಾರು ಉಸ್ತುವಾರಿ ಸಚಿವರ ಪಟ್ಟಿ ಹೀಗಿದೆ...
| ಕ್ರಮ ಸಂಖ್ಯೆ | ಸಚಿವರ ಹೆಸರು | ಜಿಲ್ಲೆಯ ಹೆಸರು |
| 1 | ಜಿ ಪರಮೇಶ್ವರ | ಬೆಂಗಳೂರು ನಗರ ಮತ್ತು ತುಮಕೂರು |
| 2 | ಆರ್‌ವಿ ದೇಶಪಾಂಡೆ | ಉತ್ತರ ಕನ್ನಡ ಮತ್ತು ಧಾರವಾಡ |
| 3 | ಡಿಕೆ ಶಿವಕುಮಾರ್ | ರಾಮನಗರ ಮತ್ತು ಬಳ್ಳಾರಿ |
| 4 | ಕೆ.ಜೆ.ಜಾರ್ಜ್ | ಚಿಕ್ಕಮಗಳೂರು |
| 5 | ರಮೇಶ್ ಜಾರಕಿಹೊಳಿ | ಬೆಳಗಾವಿ |
| 6 | ಶಿವಾನಂದ ಪಾಟೀಲ್ | ಬಾಗಲಕೋಟೆ |
| 7 | ಪ್ರಿಯಾಂಕ್ ಖರ್ಗೆ | ಕಲಬುರಗಿ |
| 8 | ರಾಜಶೇಖರ.ಜಿ.ಪಾಟೀಲ್ | ಯಾದಗಿರಿ |
| 9 | ವೆಂಕಟರಮಣಪ್ಪ | ಚಿತ್ರದುರ್ಗ |
| 10 | ಶಿವಶಂಕರ ರೆಡ್ಡಿ | ಚಿಕ್ಕಬಳ್ಳಾಪುರ |
| 11 | ಕೃಷ್ಣಬೈರೇಗೌಡ | ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ |
| 12 | ಯು.ಟಿ.ಖಾದರ್ | ದಕ್ಷಿಣ ಕನ್ನಡ |
| 13 | ಸಿ.ಪುಟ್ಟರಂಗ ಶೆಟ್ಟಿ | ಚಾಮರಾಜನಗರ |
| 14 | ಜಮೀರ್ ಅಹ್ಮದ್ | ಹಾವೇರಿ |
| 15 | ಜಯಮಾಲಾ | ಉಡುಪಿ |
| 16 | ಆರ್ ಶಂಕರ್ | ಕೊಪ್ಪಳ |
| 17 | ಎನ್.ಮಹೇಶ್ | ಗದಗ |
| 18 | ವೆಂಕಟರಾವ್ ನಾಡಗೌಡ | ರಾಯಚೂರು |
| 19 | ಎಸ್.ಆರ್.ಶ್ರೀನಿವಾಸ್ | ದಾವಣಗೆರೆ |
| 20 | ಸಿ.ಎಸ್.ಪುಟ್ಟರಾಜು | ಮಂಡ್ಯ |
| 21 | ಸಾ.ರಾ.ಮಹೇಶ್ | ಕೊಡಗು |
| 22 | ಬಂಡೆಪ್ಪ ಕಾಶಂಪೂರ್ | ಬೀದರ್ |
| 23 | ಎಚ್.ಡಿ.ರೇವಣ್ಣ | ಹಾಸನ |
| 24 | ಡಿ.ಸಿ.ತಮ್ಮಣ್ಣ | ಶಿವಮೊಗ್ಗ |
| 25 | ಎಂ.ಸಿ.ಮನಗೋಳಿ | ವಿಜಯಪುರ |
| 26 | ಜಿ.ಟಿ.ದೇವೇಗೌಡ | ಮೈಸೂರು |












Click it and Unblock the Notifications