ಬಿಜೆಪಿ ವಿರುದ್ದ ದಿನೇಶ್ ಗುಂಡೂರಾವ್ ಸಿಡಿಸಿದ ಹೊಸ ಬಾಂಬ್

Written By:
Subscribe to Oneindia Kannada

ಬೆಂಗಳೂರು, ಜ 21: ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಬಿಜೆಪಿಯಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ತಾರಕಕ್ಕೇರಿರುವ ಮನಸ್ತಾಪವನ್ನು ಪ್ರಸ್ತಾವಿಸಿ ಹೊಸ ಬಾಂಬ್ ಸಿಡಿಸಿದ್ದಾರೆ.

ಬಿಜೆಪಿಯಲ್ಲಿ ಈಗ ಏನು ನಡೆಯುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ, ಬಿಜೆಪಿಯಲ್ಲಿನ ಬೆಳವಣಿಗೆಯಿಂದ ಬೇಸರಗೊಂಡ ಹಲವು ಮುಖಂಡರು ಸದ್ಯದಲ್ಲೇ ಕಾಂಗ್ರೆಸ್ ಸೇರಲಿದ್ದಾರೆಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಶನಿವಾರ (ಜ 21) ಕೆಪಿಸಿಸಿ ಕಚೇರಿಯಲ್ಲಿ ಮಾತನಾಡುತ್ತಿದ್ದ ದಿನೇಶ್ ಗುಂಡೂರಾವ್, ಯಡಿಯೂರಪ್ಪನವರು ಕೆಜೆಪಿ ತೊರೆದು ಬಿಜೆಪಿ ಸೇರ್ಪಡೆಗೊಂಡಾಗಲೇ ಪಕ್ಷ ಒಡೆದಿತ್ತು ಎಂದಿದ್ದಾರೆ.

ನಮ್ಮ ಪಕ್ಷಕ್ಕೆ ಅಭ್ಯರ್ಥಿಗಳ ಕೊರತೆಯೇನೂ ಇಲ್ಲ, ಸಮರ್ಥ ಅಭ್ಯರ್ಥಿಗಳನ್ನು ನಮ್ಮ ಪಕ್ಷ ಕಣಕ್ಕಿಳಿಸಲಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಯಡಿಯೂರಪ್ಪ ಮತ್ತು ಈಶ್ವರಪ್ಪ ಪಕ್ಷದ ಇಬ್ಬರು ಹಿರಿಯ ಮುಖಂಡರು. ಇವರಿಬ್ಬರೇ ಹೀಗೆ ಕಿತ್ತಾಡಿಕೊಳ್ಳುತ್ತಿರುವಾಗ ಇನ್ನು ಪಕ್ಷದ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆಯಿಲ್ಲ ಎಂದು ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ. ಮುಂದೆ ಓದಿ..

ಬಿಜೆಪಿ ಬುನಾದಿ ಕಳೆದುಕೊಳ್ಳುತ್ತಿದೆ

2011ರ ಚುನಾವಣೆಗೆ ಹೋಲಿಸಿದರೆ ಕಾಂಗ್ರೆಸ್ 178 ಸ್ಥಾನವನ್ನು ಗೆದ್ದಿದೆ ಮತ್ತು ಬಿಜೆಪಿ ತನ್ನ ಬುನಾದಿಯನ್ನು ಕಳೆದುಕೊಳ್ಳುತ್ತಿದೆ - ದಿನೇಶ್ ಗುಂಡೂರಾವ್.

ಕಮಲ ಪಕ್ಷದ ಭ್ರಮೆ

ಕಮಲ ಪಕ್ಷದ ಭ್ರಮೆ

ಅಧಿಕಾರಕ್ಕೆ ಬರುತ್ತೇವೆ ಎನ್ನುವುದು ಬಿಜೆಪಿಯವರ ಭ್ರಮೆ. ಈಗಲೇ ಇಷ್ಟು ಕಿತ್ತಾಡಿಕೊಳ್ಳುತ್ತಿರುವವರು, ಇನ್ನು ಅಧಿಕಾರಕ್ಕೆ ಬಂದರೆ ಇನ್ನೇನು ಕಥೆ - ದಿನೇಶ್ ಗುಂಡೂರಾವ್ ವ್ಯಂಗ್ಯ. (ಚಿತ್ರ: ಕೆಪಿಸಿಸಿ ಟ್ವಿಟ್ಟರ್)

ಗುಂಡ್ಲುಪೇಟೆ ಮತ್ತು ನಂಜನಗೂಡು

ಗುಂಡ್ಲುಪೇಟೆ ಮತ್ತು ನಂಜನಗೂಡು

2018ರ ಚುನಾವಣೆಯಲ್ಲೂ ಕಾಂಗ್ರೆಸ್ ಜಯ ಸಾಧಿಸಲಿದೆ ಮತ್ತು ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲೂ ಕಾಂಗ್ರೆಸ್ ಗೆಲ್ಲಲಿದೆ. ಗುಂಡ್ಲುಪೇಟೆ ಮತ್ತು ನಂಜನಗೂಡು ಕ್ಷೇತ್ರದ ಉಪಚುನಾವಣೆ ನಡೆಯಬೇಕಿದೆ. (ಚಿತ್ರ: ಕೆಪಿಸಿಸಿ ಟ್ವಿಟ್ಟರ್)

ವಿ ಸೋಮಣ್ಣ

ವಿ ಸೋಮಣ್ಣ

ಸೋಮಣ್ಣ ಕಾಂಗ್ರೆಸ್ ಸೇರುವ ವಿಚಾರದಲ್ಲಿ ಹೆಚ್ಚಿನ ಪ್ರತಿಕ್ರಿಯೆ ಈಗ ನೀಡುವುದಿಲ್ಲ. ಸೋಮಣ್ಣ ರೀತಿಯಲ್ಲಿ ಹಲವು ಬಿಜೆಪಿ ಅತೃಪ್ತ ಮುಖಂಡರು ಕಾಂಗ್ರೆಸ್ ಬಾಗಿಲು ಬಡಿಯುತ್ತಿದ್ದಾರೆ - ದಿನೇಶ್ ಗುಂಡೂರಾವ್ (ಚಿತ್ರ: ಯಡಿಯೂರಪ್ಪ ವೆಬ್ ಸೈಟ್)

ಕೇಂದ್ರ ಸರಕಾರ

ಕೇಂದ್ರ ಸರಕಾರ ಬರ ಪರಿಹಾರವನ್ನು ರಾಜ್ಯಕ್ಕೆ ಅತಿ ಶೀಘ್ರದಲ್ಲಿ ಬಿಡುಗಡೆ ಮಾಡಲಿ. ರಾಜ್ಯದ ಬಿಜೆಪಿ ಮುಖಂಡರು ಕೇಂದ್ರ ಸರಕಾರಕ್ಕೆ ಒತ್ತಡ ತರಲಿ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Dissident BJP leaders will join Congress soon, KPCC working President Dinesh Gundu Rao.
Please Wait while comments are loading...