ಅನರ್ಹಗೊಂಡ ಮೂವರು ಶಾಸಕರ ಬಗ್ಗೆ ಈ ಮಾತನ್ನು ಹೇಳಲೇಬೇಕು
ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಇನ್ನಿಲ್ಲದಂತೆ ಕಾಡಿದ್ದ ಮೂವರು ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದಾರೆ. ಹಾಲಿ ಹದಿನೈದನೇ ವಿಧಾನಸಭೆಯ ಅವಧಿ ಮುಗಿಯವವರೆಗೆ ಇವರುಗಳು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ, ಆದರೆ ಇದರಲ್ಲಿ ಗೊಂದಲವಿದೆ. ಅನರ್ಹಗೊಂಡ ಮೂವರೂ, ಸ್ಪೀಕರ್ ತೀರ್ಪಿನ ವಿರುದ್ದ ಸುಪ್ರೀಂ ಕದ ತಟ್ಟುವ ಸಾಧ್ಯತೆಯಿದೆ.
ಅಲ್ಲಿಗೆ, ಇವರ ಮೇಲೆ ಮತ್ತು ಇವರು ಪ್ರತಿನಿಧಿಸುವ ಪಕ್ಷದ ಮೇಲೆ ನಂಬಿಕೆಯಿಟ್ಟು ವೋಟ್ ಹಾಕಿದ ಮತದಾರನನ್ನೂ ಒಂದರ್ಥದಲ್ಲಿ ಇವರು ಅವಮಾನ ಮಾಡಿದಂತಾಯಿತು. ಏನು ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡು ಅಥವಾ ಆಮಿಷಕ್ಕೊಳಗಾಗಿ ಇವರುಗಳು ರಾಜೀನಾಮೆ ನೀಡಿದ್ದರೋ ಅದು ಸದ್ಯದ ಮಟ್ಟಿಗೆ ನೀರಿನಲ್ಲಿ ಹೋಮ ಮಾಡಿದಂತಾಗಿದೆ.
ರಮೇಶ್ ಜಾರಕಿಹೊಳಿ ಪ್ರತಿನಿಧಿಸುವ ಗೋಕಾಕ್, ಮಹೇಶ್ ಕುಮಠಳ್ಳಿ ಪ್ರತಿನಿಧಿಸುವ ಅಥಣಿ ಮತ್ತು ಆರ್ ಶಂಕರ್ ಪ್ರತಿನಿಧಿಸುವ ರಾಣೆಬೆನ್ನೂರಿನ ಜನತೆ 14-15 ತಿಂಗಳಲ್ಲೇ ಮತ್ತೆ ಚುನಾವಣೆ ಎದುರಿಸಬೇಕಾಗಿದೆ. ಯಾವ ಪಕ್ಷವನ್ನು ನಂಬಿ ಇವರು ಪಕ್ಷವಿರೋಧಿ ಚಟುವಟಿಕೆ ನಡೆಸಿದ್ದರೋ, ಆ ಪಕ್ಷ ಇವರ ಬೆಂಬಲಕ್ಕೆ ಈಗ ನಿಲ್ಲುತ್ತಾ? ಉಪಚುನಾವಣೆ ಗೆಲ್ಲಲು ಇವರನ್ನು ಸೈಲೆಂಟಾಗಿ ಸೈಡಲ್ಲಿರು ಎಂದು ಹೇಳಿ ಇನ್ನೊಬ್ಬರನ್ನು ಕಣಕ್ಕಿಳಿಸದೇ ಇರುತ್ತಾ?
ಈಗ ರಾಜೀನಾಮೆ ಸಲ್ಲಿಸಿರುವರರ ಪೈಕಿ ಮೈತ್ರಿ ಸರಕಾರಕ್ಕೆ ಸಿಕ್ಕಾಪಟ್ಟೆ ತಲೆನೋವು ತಂದಿದ್ದವರು ರಮೇಶ್ ಜಾರಕಿಹೊಳಿ. ಇವರಿಗೆ ಉತ್ತಮ ಎನ್ನಬಹುದಾದ ಪೌರಾಡಳಿತ ಖಾತೆಯನ್ನೇ ಕುಮಾರಸ್ವಾಮಿ ಸರಕಾರ ನೀಡಿತ್ತು. ಆದರೆ, ಸಚಿವ ಸಂಪುಟ ಸಭೆಗೂ ಹಾಜರಾಗದೇ, ಹದಿನಾಲ್ಕು ತಿಂಗಳಲ್ಲಿ ಕ್ಷೇತ್ರದಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳದೇ, ಸರಕಾರ ಬೀಳಿಸಲು ಶಾಸಕರನ್ನು ಕೂಡಿ ಹಾಕುವ ಕೆಲಸವೇ ಜಾರಕಿಹೊಳಿಗೆ ಜನಸೇವೆಗಿಂತ ಹೆಚ್ಚಾಗಿ ಹೋಯಿತು.

ರಮೇಶ್ ಜಾರಕಿಹೊಳಿಯವರನ್ನು ರಾಜಕೀಯವಾಗಿ ಓಲೈಸುವುದೇ ಕುಮುಠಳ್ಳಿ ಕೆಲಸ
ಇನ್ನು ಇವರನ್ನು ಅನುಸರಿಸುವ ಮಹೇಶ್ ಕುಮುಠಳ್ಳಿ ಅವರದ್ದೂ ಇದೇ ಕಥೆ. ತನ್ನ ರಾಜಕೀಯ ಬದುಕನ್ನು ಸ್ಪಷ್ಟವಾಗಿ ಬರೆಯಲಾಗದೇ, ರಮೇಶ್ ಜಾರಕಿಹೊಳಿಯವರನ್ನು ರಾಜಕೀಯವಾಗಿ ಓಲೈಸುವುದೇ ಇವರ ಗುರಿಯಂತಿತ್ತು. ನಾನು ಕಾಂಗ್ರೆಸ್ಸಿಗ ಎಂದು ಹೇಳುವ ಇವರು, ಮಾಡುತ್ತಿದ್ದದ್ದು ಪಕ್ಷ ವಿರೋಧಿ ಕೆಲಸಗಳನ್ನೇ..

ಕೆಪಿಜೆಪಿ ಪಕ್ಷದಿಂದ ಸ್ಪರ್ಧಿಸಿ ನಾಲ್ಕು ಸಾವಿರ ಮತಗಳ ಅಂತರದಿಂದ ಗೆದ್ದಿದ್ದ ಶಂಕರ್
ಕೆಪಿಜೆಪಿ ಪಕ್ಷದಿಂದ ಸ್ಪರ್ಧಿಸಿ ನಾಲ್ಕು ಸಾವಿರ ಮತಗಳ ಅಂತರದಿಂದ ಶಂಕರ್ ಗೆದ್ದಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಮತಗಳು ವಿಭಜನೆಗೊಂಡಿದ್ದರಿಂದ. ಶಾಸಕರಾದ ಶಂಕರ್, ಯಾವ ಕ್ಷಣದಲ್ಲಿ ಯಾವ ಪಕ್ಷದ ಪರವಾಗಿ ನಿಯತ್ತು ತೋರಿಸುತ್ತಾರೋ ಎನ್ನುವುದು ಖುದ್ದು ಅವರಿಗೇ ಗೊತ್ತಿರುವುದಿಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಜಂಪಿಂಗ್ ಸ್ಟಾರ್ ಶಾಸಕ ಎಂದೇ ಕುಖ್ಯಾತಿ ಪಡೆದರು.

ಡಿ ಕೆ ಶಿವಕುಮಾರ್ ಮುಂಬೈನಲ್ಲಿ ಹೊಟೇಲ್ ಮುಂದೆ ಕೂತಿದ್ದು
ಈ ಮೂವರಿಗೆ ಕಾಂಗ್ರೆಸ್ ನಲ್ಲಿ ಸಮಸ್ಯೆ ಏನೇ ಇರಲಿ, ಸರಕಾರದ ಭವಿಷ್ಯಕ್ಕೆ ತೊಂದರೆಯಾಗುತ್ತದೆ ಎನ್ನುವ ಗಂಭೀರ ಸ್ಥಿತಿ ನಿರ್ಮಾಣವಾದಾಗ, ಇವರುಗಳ ಬೇಡಿಕೆಯನ್ನು ಅಥವಾ ಬೇಡಿಕೆಗಳನ್ನು ಈಡೇರಿಸಲು ಮೈತ್ರಿ ಪಕ್ಷ ಪ್ರಯತ್ನಿಸಿದ್ದಂತೂ ನಿಜ. ಇದಕ್ಕಾಗಿಯೇ ಡಿ ಕೆ ಶಿವಕುಮಾರ್ ಮುಂಬೈನಲ್ಲಿ ಇವರು ತಂಗಿದ್ದ ಹೊಟೇಲ್ ಮುಂದೆ ಕೂತಿದ್ದು ಎನ್ನುವುದು ಲೋಕಕೆಲ್ಲಾ ಗೊತ್ತಿರುವ ವಿಚಾರ.

ಸರ್ವೋಚ್ಚ ನ್ಯಾಯಾಲಯ
ಪಕ್ಷಾಂತರದ ಪಿಡುಗನ್ನು ತಪ್ಪಿಸಲು, ಈ ಮೂವರ ಸ್ವಾರ್ಥ ರಾಜಕಾರಣದಿಂದ ಮತ್ತೆ ಚುನಾವಣೆ ಎದುರಿಸುವಂತಾಗಿದ್ದರಿಂದ, ಚುನಾವಣಾ ಖರ್ಚನ್ನು ಇವುರುಗಳೇ ಭರಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಒಂದು ವೇಳೆ ಆದೇಶ ನೀಡಿದರೆ, ಇವರ ಬೆನ್ನಿಗೆ ಇನ್ನಷ್ಟು ಬರೆಬಿದ್ದಂತೆ.

ಮೂವರ ಸದ್ಯದ ಪರಿಸ್ಥಿತಿ, ಅಲ್ಲೂ ಇಲ್ಲ, ಇಲ್ಲೂ ಇಲ್ಲ, ಎಲ್ಲೂ ಇಲ್ಲ
ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ಸಿನ ಯಾರೇ ಚುನಾಯಿತ ಪ್ರತಿನಿಧಿಗಳು ಇರಬಹುದು, ಇನ್ನೊಂದು ಪಕ್ಷಕ್ಕೆ ಜಂಪಿಂಗ್ ಮಾಡುವ ಮೊದಲು, ಸ್ಪೀಕರ್ ಅವರ ತೀರ್ಪು ಹತ್ತುಬಾರಿ ಆಲೋಚನೆ ಮಾಡುವಂತಾಗಿರುವುದಂತೂ ಸತ್ಯ. ಮೂವರ ಸದ್ಯದ ಪರಿಸ್ಥಿತಿ, ಅಲ್ಲೂ ಇಲ್ಲ, ಇಲ್ಲೂ ಇಲ್ಲ, ಎಲ್ಲೂ ಇಲ್ಲ ಇನ್ನುವಂತಾಗಿದೆ. ಕಾಮನ್ ಮ್ಯಾನ್ ಹೇಳುವ ಪ್ರಕಾರ, ಇದು ಆಗಬೇಕಾಗಿರುವುದೇ..
-
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications