ಯುಜನತೆಯಲ್ಲಿ ದೇಶಭಕ್ತಿ ಮೂಡಿಸುವ 'ನನ್ನ ಭಾರತ' ಅಭಿಯಾನ
ಬೆಂಗಳೂರು, ಜುಲೈ 12: ದಿಶಾ ಭಾರತ್ ಎನ್ನುವ ಶೈಕ್ಷಣಿಕ ಸಂಸ್ಥೆಯು ನನ್ನ ಭಾರತ(MyBHARAT) ಆನ್‌ಲೈನ್ ಅಭಿಯಾನವನ್ನು ಹಮ್ಮಿಕೊಂಡಿದೆ.
ನನ್ನ ಭಾರತ ಆನ್‌ಲೈನ್ ಅಭಿಯಾನವು ಆಗಸ್ಟ್ 1ರಿಂದ 15ರವರೆಗೆ ಒಟ್ಟು ಹದಿನೈದು ದಿನಗಳ ಕಾಲ ನಡೆಯಲಿದೆ.
75ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಈ ಆನ್‌ಲೈನ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಯುವಜನತೆಯಲ್ಲಿ ದೇಶಭಕ್ತಿ ಮೂಡಿಸುವುದು ಈ ಅಭಿಯಾನದ ಮೂಲ ಉದ್ದೇಶವಾಗಿದೆ.

#MyBHARAT ಹ್ಯಾಶ್‌ಟ್ಯಾಗ್‌ನಲ್ಲಿ ಅಭಿಯಾನ ನಡೆಯಲಿದೆ, ಈ ಕುರಿತು ಉಪಮುಖ್ಯಮಂತ್ರಿ ಡಾ. ಸಿ.ಎನ್, ಅಶ್ವತ್ಥನಾರಾಯಣ ಕೂಡ ಟ್ವೀಟ್ ಮಾಡಿದ್ದಾರೆ. ದಿಶಾ ಭಾರತ್ ಸಂಸ್ಥೆ ಪ್ರತಿ ವರ್ಷವೂ 15 ದಿನಗಳ ಕಾಲ ಈ ಅಭಿಯಾನವನ್ನು ನಡೆಸುತ್ತಿದೆ.
ಈ ಅಭಿಯಾನದಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳು ಆನ್‌ಲೈನ್ ಮೂಲಕ ನಡೆಯಲಿದ್ದು, ದಿಶಾ ಭಾರತ್ ಫೇಸ್‌ಬುಕ್ ಪೇಜ್ www.facebook.com/DishaBharat ಮೂಲಕ ನೇರಪ್ರಸಾರವಾಗಲಿದೆ.
Recommended Video
ಎರಡು ದಿನಗಳ ಹಿಂದೆ ಉಪಮುಖ್ಯಮಂತ್ರಿ ಸಿಎನ್ ಅಶ್ವತ್ಥ ನಾರಾಯಣ ಅವರು ಟ್ವೀಟ್ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಅಭಿಯಾನದ ಪೋಸ್ಟರ್ ಹಾಗೂ ಲಾಂಛನವನ್ನು ಬಿಡುಗಡೆ ಮಾಡಲಾಗಿತ್ತು.












Click it and Unblock the Notifications