ಕಾವೇರಿ ವಿಚಾರದಲ್ಲಿ ‘ಉಕ್ರೇನ್’ ಯುದ್ಧವೂ ಎಂಟ್ರಿ! ಕಾರಣ ತಿಳಿಯಿರಿ
ಕಾವೇರಿ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಿಚ್ಚು ಹೊತ್ತಿಕೊಂಡಿದೆ. ಬೆಂಗಳೂರು ಇಂದು ಬಂದ್ ಆಗಿದ್ದು, ಕರ್ನಾಟಕ ಬಂದ್‌ಗೂ ಸಿದ್ಧತೆ ನಡೆಯುತ್ತಿದೆ. ಆದ್ರೆ ಇದೇ ಸಂದರ್ಭದಲ್ಲಿ ಕಾವೇರಿ ವಿವಾದದ ನಡುವೆ ಉಕ್ರೇನ್ ಯುದ್ಧವೂ ನುಸುಳಿದೆ. ಅರೆರೆ ಹೇಗೆ? ಅಂದ್ರಾ, ಅದರ ಸಂಪೂರ್ಣ ವಿವರ ಇಲ್ಲಿದೆ.
ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಕಾವೇರಿ ನೀರಿನ ವಿಚಾರಕ್ಕೆ ಕಿಚ್ಚು ಹೊತ್ತಿರುವಾಗ ಮತ್ತೊಮ್ಮೆ ಶಾಕ್ ಸಿಕ್ಕಿದೆ. ತಮಿಳುನಾಡಿಗೆ ಮುಂದಿನ 18 ದಿನ ಕಾಲ ಮತ್ತೆ ಪ್ರತಿ ನಿತ್ಯವೂ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಇಂದು ಆದೇಶ ನೀಡಿದೆ. ಹೀಗೆ ಪ್ರಾಧಿಕಾರದ ಆದೇಶಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಇಷ್ಟೆಲ್ಲದರ ನಡುವೆ ಕಾಂಗ್ರೆಸ್ ಮತ್ತು ಬಿಜೆಪಿ ಕನ್ನಡಿಗರ ಬಗ್ಗೆ ಚಿಂತಿಸುವ ಬದಲು ರಾಜಕೀಯ ಕೆಸರೆರಚಾಟದಲ್ಲಿ ಬ್ಯುಸಿಯಾಗಿವೆ ಎಂಬ ಆರೋಪ ಕೇಳಿಬಂದಿದೆ. ಹೀಗಿದ್ದಾಗಲೇ ಉಕ್ರೇನ್ ಯುದ್ಧದ ವಿಚಾರ ಕಾವೇರಿ ವಿವಾದಕ್ಕೆ ನುಸುಳಿದೆ.

ಮೋದಿ.. ಉಕ್ರೇನ್.. ಮತ್ತು ಕಾವೇರಿ..
ಹೌದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕಾವೇರಿ ಕಾಳಗ ಜೋರಾಗಿದೆ. ಹೀಗೆ ಕಾವೇರಿಯ ವಿವಾದ ಕರ್ನಾಟಕದಲ್ಲಿ ಪಕ್ಕಾ ರಾಜಕೀಯ ದಾಳವಾಗಿದೆ ಎಂಬ ಆರೋಪವೂ ಇದೆ. ಈ ಮಧ್ಯೆ ಟ್ವೀಟ್ ಮಾಡಿರುವ ಕಾಂಗ್ರೆಸ್, 'ರಷ್ಯಾ ಉಕ್ರೇನ್ ಯುದ್ಧವನ್ನು ಮೋದಿ ಕೇವಲ ಕಣ್ಣ ಇಷಾರೆಯಲ್ಲಿ ನಿಲ್ಲಿಸಿಬಿಟ್ಟರು ಎಂದು ಸುಳ್ಳುಗಳ ಮೂಲಕ ವೈಭವೀಕರಿಸಿದ್ದ ಬಿಜೆಪಿ ಸಂಸದರು ಕಾವೇರಿ ವಿಚಾರವಾಗಿ ಮಧ್ಯಪ್ರವೇಶ ಮಾಡಲು ಪ್ರಧಾನಿ ಮೋದಿಗೆ ಆಗ್ರಹಿಸುತ್ತಿಲ್ಲವೇಕೆ? ಮೋದಿ ವಿಶ್ವನಾಯಕ, ಮೋದಿ ಸರ್ವಶಕ್ತ, ಸರ್ವಾಂತರ್ಯಾಮಿ ಎನ್ನುವ ಕರ್ನಾಟಕ ಬಿಜೆಪಿ ಉತ್ತರಿಸಲಿ' ಎಂದು ಕಾಂಗ್ರೆಸ್ ಸವಾಲು ಹಾಕಿದೆ.
ರಷ್ಯಾ ಉಕ್ರೇನ್ ಯುದ್ಧವನ್ನು ಮೋದಿ ಕೇವಲ ಕಣ್ಣ ಇಷಾರೆಯಲ್ಲಿ ನಿಲ್ಲಿಸಿಬಿಟ್ಟರು ಎಂದು ಸುಳ್ಳುಗಳ ಮೂಲಕ ವೈಭವೀಕರಿಸಿದ್ದ ಬಿಜೆಪಿ ಸಂಸದರು ಕಾವೇರಿ ವಿಚಾರವಾಗಿ ಮಧ್ಯಪ್ರವೇಶ ಮಾಡಲು ಪ್ರಧಾನಿ ಮೋದಿಗೆ ಆಗ್ರಹಿಸುತ್ತಿಲ್ಲವೇಕೆ?
— Karnataka Congress (@INCKarnataka) September 25, 2023
ಮೋದಿ ವಿಶ್ವನಾಯಕ, ಮೋದಿ ಸರ್ವಶಕ್ತ, ಸರ್ವಾಂತರ್ಯಾಮಿ ಎನ್ನುವ @BJP4Karnataka ಉತ್ತರಿಸಲಿ,
ಕಾವೇರಿ…
ಹಾಗೇ ಮತ್ತೊಂದ್ಕಡೆ 'ಕಾವೇರಿ ಬಿಕ್ಕಟ್ಟಿಗೆ ಮಧ್ಯಪ್ರವೇಶಿಸಲು ಮೋದಿ ಮುಂದಾಗುತ್ತಿಲ್ಲವೇಕೆ? ಕರ್ನಾಟಕದ ಬಗ್ಗೆ ಮೋದಿಗಿರುವ ತಾತ್ಸರ, ತಿರಸ್ಕಾರ ಮನೋಭಾವ ಮುಂದುವರೆದಿದೆಯೇ? ಕರ್ನಾಟಕದ 25 ಬಿಜೆಪಿ ಸಂಸದರು ಒತ್ತಾಯಿಸುತ್ತಿಲ್ಲವೇಕೆ?' ಎಂಬ ಪ್ರಶ್ನೆಗಳನ್ನೂ ಬಿಜೆಪಿಗೆ ಮತ್ತು ಬಿಜೆಪಿ ರಾಜ್ಯ ನಾಯಕರಿಗೆ ಕಾಂಗ್ರೆಸ್ ಕೇಳಿದೆ. ಈ ಮೂಲಕ ಕಾವೇರಿ ವಿಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ದೊಡ್ಡ ಯುದ್ಧ ನಡೆಯುತ್ತಿದೆ. ಇತ್ತ ಕರ್ನಾಟಕ & ತಮಿಳುನಾಡು ಮಧ್ಯೆ ಕಿಚ್ಚು ಹೊತ್ತಿರುವಾಗ, ರಾಜ್ಯದಲ್ಲಿ ನೀರಿನ ರಾಜಕೀಯ ಜೋರಿದೆ.
ಸುಪ್ರೀಂಕೋರ್ಟ್ ತೀರ್ಪು ಬರುವುದಕ್ಕೂ ಮುನ್ನವೇ I.N.D.I ಮೈತ್ರಿಕೂಟ ಮೆಚ್ಚಿಸಲು ರಾತ್ರೋ ರಾತ್ರಿ ತಂಡಿ ಬಿಟ್ಟು ಕಾವೇರಿ ನೀರು ಹರಿಸಿದ್ದೇಕೆಂದು ರೈತ ವಿರೋಧಿ, ನಾಡ ದ್ರೋಹಿ @INCKarnataka, @DKShivakumar ಮತ್ತು @siddaramaiah ಅವರನ್ನೇಕೆ ಪ್ರಶ್ನಿಸುತ್ತಿಲ್ಲ..?
— BJP Karnataka (@BJP4Karnataka) September 26, 2023
ನಿಮ್ಮ ಹಳವಂಡಗಳನ್ನು ಸರಿಪಡಿಸಲು ಪ್ರಧಾನಿಯವರನ್ನು ಮಧ್ಯ… https://t.co/tIZrDMVLFl
ಕಾಂಗ್ರೆಸ್‌ಗೆ ಉತ್ತರ ನೀಡಿದ ಬಿಜೆಪಿ
ಇನ್ನು ಒಂದು ಕಡೆ ಕಾಂಗ್ರೆಸ್ ಮಾಡಿರುವ ಆರೋಪಕ್ಕೆ ಬಿಜೆಪಿ ಕೂಡ ಪ್ರತ್ಯಾರೋಪವನ್ನ ಮಾಡಿದ್ದು, 'ಸುಪ್ರೀಂಕೋರ್ಟ್ ತೀರ್ಪು ಬರುವುದಕ್ಕೂ ಮುನ್ನವೇ I.N.D.I ಮೈತ್ರಿಕೂಟ ಮೆಚ್ಚಿಸಲು ರಾತ್ರೋ ರಾತ್ರಿ ತಂಡಿ ಬಿಟ್ಟು ಕಾವೇರಿ ನೀರು ಹರಿಸಿದ್ದೇಕೆಂದು ರೈತ ವಿರೋಧಿ, ನಾಡ ದ್ರೋಹಿ @INCKarnataka, @DKShivakumar ಮತ್ತು @siddaramaiah ಅವರನ್ನೇಕೆ ಪ್ರಶ್ನಿಸುತ್ತಿಲ್ಲ..? ನಿಮ್ಮ ಹಳವಂಡಗಳನ್ನು ಸರಿಪಡಿಸಲು ಪ್ರಧಾನಿಯವರನ್ನು ಮಧ್ಯ ಪ್ರವೇಶಿಸಬೇಕೆಂದು ಪರಿಪರಿಯಾಗಿ ಬೇಡಿಕೊಳ್ಳುವ ಕಾಂಗ್ರೆಸ್ ತನ್ನ ಅಸಮರ್ಥತೆಯನ್ನು ಈ ಮೂಲಕ ಒಪ್ಪಿಕೊಂಡಿದೆ. ಸಮಸ್ಯೆ ಬಗೆಹರಿಸುವ ಸಾಮರ್ಥ್ಯವಿಲ್ಲದಿದ್ದರೆ ಸರ್ಕಾರ ವಿಸರ್ಜಿಸಿ ರಾಜೀನಾಮೆ ಕೊಟ್ಟು ಮನೆಗೆ ಹೋಗಿ, ನಿಮ್ಮ ಆಡಳಿತಕ್ಕೆ ಜನರು ಬಸವಳಿದು ಹೋಗಿದ್ದಾರೆ.' ಎಂದಿದೆ.












Click it and Unblock the Notifications