ರಾಹುಲ್ ಗಾಂಧಿಗೆ ಜಾಮೀನು: ಅರೆಸ್ಟ್ ಆಗೋದು ಡೌಟ್!
ರಾಹುಲ್ ಗಾಂಧಿ ಬಂಧನದ ಭೀತಿಯಿಂದ ದೂರವಾಗಿದ್ದು, ಅಂತೂ ಅವರಿಗೆ ಜಾಮೀನು ಈಗ ಸಿಕ್ಕಿದೆ. ಈ ಹಿಂದೆ ಸಿಎಂ ಸಿದ್ದರಾಮಯ್ಯ & ಡಿ.ಕೆ. ಶಿವಕುಮಾರ್ ಅವರಿಗೂ ಜಾಮೀನು ಸಿಕ್ಕು ಬಂಧನ ಭೀತಿಯಿಂದ ಬಚಾವ್ ಆಗಿದ್ದರು. ಇದೀಗ ಕಾಂಗ್ರೆಸ್ ಅಧಿನಾಯಕ ಎಂದು ಕರೆಸಿಕೊಳ್ಳುವ ರಾಹುಲ್ ಗಾಂಧಿ ಅವರಿಗೂ ಜಾಮೀನು ಸಿಕಿದ್ದು, ಅರೆಸ್ಟ್ ಆಗುವ ಸಾಧ್ಯತೆಗಳಿಂದಲು ಬಚಾವ್ ಆಗಿದ್ದಾರೆ. ಹಾಗಾದ್ರೆ ಯಾವ ಕೇಸ್‌ನಲ್ಲಿ ಈಗ ರಾಹುಲ್ ಗಾಂಧಿಗೆ ಬೇಲ್ ಸಿಕ್ಕಿದೆ? ಮುಂದೆ ಓದಿ.
2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಬ್ರಹ್ಮಾಸ್ತ್ರ ಪ್ರಯೋಗ ಮಾಡಿತ್ತು. ಅಂದಹಾಗೆ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಸುಳ್ಳಾದ ಆರೋಪ ಮಾಡಿದ್ದಾರೆ ಎನ್ನುವ ಆರೋಪ ಎದುರಿಸುತ್ತಿದ್ದರು ರಾಹುಲ್ ಗಾಂಧಿ. ರಾಹುಲ್ ಗಾಂಧಿ ಅವರ ಜೊತೆ ಸಿಎಂ ಸಿದ್ದರಾಮಯ್ಯ & ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೂಡ ಆರೋಪ ಎದುರಿಸುತ್ತಿದ್ದರು. ಈ ಕೇಸ್ ಇಡೀ ದೇಶದಲ್ಲೇ ದೊಡ್ಡ ಸದ್ದು ಮಾಡಿತ್ತು.

ಡಿ.ಕೆ. ಶಿವಕುಮಾರ್ ಸಹೋದರನ ಸಹಾಯ
ಹೀಗಿದ್ದಾಗಲೇ ಸಿದ್ದರಾಮಯ್ಯ & ಡಿ.ಕೆ. ಶಿವಕುಮಾರ್ ಅವರಿಗೆ ಕೆಲವು ದಿನಗಳ ಹಿಂದೆ ಬೇಲ್ ಸಿಕ್ಕಿತ್ತು. ಆದ್ರೆ ರಾಹುಲ್ ಗಾಂಧಿ ಅವರು ಆಗ ವಿಚಾರಣೆಗೆ ಬಂದಿರಲಿಲ್ಲಿ. ಈಗ ಅವರಿಗೆ ಕೂಡ ಬೇಲ್, ಅಂದ್ರೆ ಈ ಕೇಸ್‌ನಲ್ಲಿ ಜಾಮೀನು ಸಿಕ್ಕಿದೆ. ಈ ಮೂಲಕ ರಾಹುಲ್ ಗಾಂಧಿ ಕಂಟಕದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ರಾಹುಲ್ ಗಾಂಧಿ ಜಾಮೀನಿಗೆ ಸಹಿ ಹಾಕಿದ್ದು ಯಾರು? ಡಿಕೆ ಶಿವಕುಮಾರ್ ಸಹೋದರ ಈ ಕೇಸ್‌ನಲ್ಲಿ ಸಹಾಯ ಮಾಡಿದ್ದು ಹೇಗೆ? ಮುಂದೆ ಓದಿ.
ಹೀನಾಯವಾಗಿ ಸೋತಿದ್ದ ಬಿಜೆಪಿ
ಬಿಜೆಪಿ 2023ರ ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ತೋಪೆದ್ದು ಹೀನಾಯ ಪ್ರದರ್ಶನವನ್ನ ನೀಡಲು ಇದೇ 40% ಕಮಿಷನ್ ಆರೋಪ ಕಾರಣವಾಗಿತ್ತು, ಅಲ್ಲದೆ ಈ ಬಗ್ಗೆ ಕೇಸ್ ದಾಖಲಾಗಿತ್ತು. ರಾಹುಲ್ ಗಾಂಧಿ ಇಂದು 42ನೇ ಎಸಿಎಂಎಂ ಕೋರ್ಟ್ ಗೆ ವಿಚಾರಣೆಗೆ ಖುದ್ಧ ಹಾಜರಾಗಿದ್ದರು. ಈ ವೇಳೆ ಕೋರ್ಟ್ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ಜಾಮೀನು ಬಾಂಡ್‌ಗೂ ಸಹಿ ಬೇಕಿತ್ತು.
ಈಗ ಕಾಂಗ್ರೆಸ್ ಮಾಜಿ ಸಂಸದ ಡಿಕೆ ಸುರೇಶ್ ಸಹಿ ಮಾಡಿದ್ದಾರೆ ಎನ್ನಲಾಗಿದ್ದು, ರಾಹುಲ್ ಗಾಂಧಿ ಅವರಿಗೆ ಈಗ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಬಿಜೆಪಿ ಕರ್ನಾಟಕ ದಾಖಲಿಸಿದ್ದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಷರತ್ತುಬದ್ಧ ಜಾಮೀನು ನೀಡಿದೆ. ಈ ಮೂಲಕ ಲೋಕಸಭೆ ಚುನಾವಣೆ ಮುಕ್ತಾಯವಾಗಿ ಫಲಿತಾಂಶ ಬಂದ ಬೆನ್ನಲ್ಲೇ, ರಾಹುಲ್ ಗಾಂಧಿ ಮತ್ತಷ್ಟು ನಿರಾಳರಾಗಿದ್ದಾರೆ.












Click it and Unblock the Notifications