‘ಹಿಂದೂ ವಿರೋಧಿಗಳು ಹಂದಿ ಹಾಲು ಕುಡಿದು ಬೆಳೆದಿದ್ದಾರಾ?’ ಸಿಟಿ ರವಿ ಪ್ರಶ್ನೆ
ದೇಶದಲ್ಲಿ ಹಿಂದೂ ಮತ್ತು ಹಿಂದುತ್ವದ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ. ಅದ್ರಲ್ಲೂ ಈ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ದೊಡ್ಡ ರಾಜಕೀಯ ಬೆಂಕಿ ಹೊತ್ತಿದೆ. ಇದೇ ಸಮಯದಲ್ಲಿ ಬಿಜೆಪಿ ಪಕ್ಷದ ರಾಷ್ಟ್ರೀಯ ನಾಯಕ ಸಿ.ಟಿ.ರವಿ ಅವರು ನೀಡಿರುವ ಒಂದು ಹೇಳಿಕೆ ಸಂಚಲನ ಸೃಷ್ಟಿಸಿದೆ. ಹಾಗಾದರೆ ಸಿ.ಟಿ.ರವಿ ಅವರು ಹೇಳಿದ್ದು ಏನು? ಮುಂದೆ ಓದಿ.
ಇತ್ತೀಚೆಗಷ್ಟೇ ಡಿಎಂಕೆ ಸಂಸದ ಸಂಸತ್ ಕಲಾಪದಲ್ಲಿ ನೀಡಿದ್ದ ಹೇಳಿಕೆ ವೈರಲ್ ಆಗಿ ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು. ಸಂಸತ್‌ನಲ್ಲಿ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಕುರಿತಾಗಿ ಮಾತನಾಡುವಾಗ ಬಿಜೆಪಿ ಗೆಲುವಿನ ವಿಚಾರ ಪ್ರಸ್ತಾಪ ಮಾಡಿದ್ದರು ಸೆಂಥಿಲ್ ಕುಮಾರ್. ಆಗ, ಬಿಜೆಪಿಯ ಗೆಲುವಿನ ಬಗ್ಗೆ ಹೇಳುತ್ತಾ 'ಗೋ ಮೂತ್ರದ ರಾಜ್ಯಗಳಲ್ಲಿ ಮಾತ್ರ ಬಿಜೆಪಿ ಗೆಲುವನ್ನು ಸಾಧಿಸಿದೆ' ಎಂದಿದ್ದರು. ದಕ್ಷಿಣ ಭಾರತದ ವಿಚಾರ ಪ್ರಸ್ತಾಪಿಸಿ ಬಿಜೆಪಿ ಕೇಂದ್ರ ನಾಯಕರನ್ನು ಕೆಣಕಿದ್ದರು. ಇದೇ ವಿಚಾರಕ್ಕೆ ಈಗ ಪರೋಕ್ಷವಾಗಿ ಸಿ.ಟಿ.ರವಿ ಉತ್ತರ ನೀಡಿದಂತೆ ಇದ್ದು, ಹಿಂದೂ ವಿರೋಧಿಗಳ ಬಗ್ಗೆ ಸಿ.ಟಿ.ರವಿ ಅವರ ಹೇಳಿಕೆ ಸಂಚಲನ ಸೃಷ್ಟಿಸಿದೆ.

'ಹಿಂದೂ ವಿರೋಧಿಗಳು ಹಂದಿ ಹಾಲು..?'
ಹೌದು ಇಂದು ಸಿ.ಟಿ.ರವಿ ಅವರು ಟ್ವೀಟ್ ಒಂದನ್ನ ಮಾಡಿದ್ದು, ಹಿಂದೂ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಸಮಯದಲ್ಲಿ 'ಹಿಂದೂ ವಿರೋಧಿಗಳು ಹಂದಿ ಹಾಲು ಕುಡಿದು ಬೆಳೆದಿದ್ದಾರಾ?' ಎನ್ನುವ ರೀತಿ ಪೋಸ್ಟ್ ಹಾಕಿದ್ದಾರೆ. ಟ್ವಿಟ್ಟರ್ ಅಂದ್ರೆ 'X' ಖಾತೆ ಪೋಸ್ಟ್ ಮೂಲಕ ಆಕ್ರೋಶವನ್ನ ಹೊರಹಾಕಿರುವ ಮಾಜಿ ಸಚಿವ ಸಿ.ಟಿ.ರವಿ, 'ಪ್ರೀತಿಯ ಹಿಂದೂ ವಿರೋಧಿಗಳೇ, ನೀವು ಹಸು ಹಾಲು ಕುಡಿದು ಬೆಳೆದಿದ್ದೀರಾ ಅಥವಾ ಹಂದಿಯ ಹಾಲು ಕುಡಿದು ಬೆಳೆದಿದ್ದೀರಾ?' ಎಂದು ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಸಿ.ಟಿ. ರವಿ ಅವರ ಹೇಳಿಕೆ ವಿವಾದದ ಕಿಡಿಯನ್ನೇ ಹೊತ್ತಿಸಿದೆ.
Dear Hindu Haters,
— C T Ravi 🇮🇳 ಸಿ ಟಿ ರವಿ (@CTRavi_BJP) December 6, 2023
Did you grow up drinking Gau milk or Swine milk ?
ಡಿಎಂಕೆ ಸಂಸದನ ಮಾತಿಗೆ ಭಾರಿ ವಿರೋಧ!
ಇನ್ನೊಂದು ಕಡೆ ಡಿಎಂಕೆ ಸಂಸದ ಸೆಂಥಿಲ್ ಕುಮಾರ್ ಹೇಳಿಕೆ ಈಗ ಸಂಸತ್ ಕಲಾಪದಲ್ಲಿ ಕೂಡ ಸಂಚಲನ ಸೃಷ್ಟಿಸಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ ರಾಜ್ಯಗಳಲ್ಲಿ ಗೆದ್ದಿದೆ. ಆದ್ರೆ ತೆಲಂಗಾಣ ರಾಜ್ಯದಲ್ಲಿ ಸೋಲುಂಡಿದೆ. ಕೆಲವು ತಿಂಗಳ ಹಿಂದೆ ಕರ್ನಾಟಕದಲ್ಲೂ ಬಿಜೆಪಿ ಅಧಿಕಾರ ಕಳೆದುಕೊಂಡಿತ್ತು.

ಈ ಮೂಲಕ ದಕ್ಷಿಣದಲ್ಲಿ ಅಂದರೆ ದಕ್ಷಿಣ ಭಾರತದಲ್ಲಿ ಬಿಜೆಪಿ ಸಂಪೂರ್ಣ ಖಾಲಿ ಆಗಿದೆ ಎಂಬ ಅರ್ಥದಲ್ಲಿ ಡಿಎಂಕೆ ಸಂಸದ ಕೆಲವು ದಿನಗಳ ಹಿಂದಷ್ಟೇ ವಾಗ್ದಾಳಿ ಮಾಡಿದ್ದರು. ಇದೇ ವೇಳೆ ಯಡವಟ್ಟು ಹೇಳಿಕೆ ನೀಡುತ್ತಾ, 'ಗೋ ಮೂತ್ರದ ರಾಜ್ಯಗಳಲ್ಲಿ ಮಾತ್ರ, ಬಿಜೆಪಿ ಗೆಲುವನ್ನು ಸಾಧಿಸಿದೆ' ಎಂಬ ಪದ ಬಳಸಿದ್ದರು. ಈ ವಿವಾದದ ಕಿಡಿ ಜೋರಾಗುತ್ತಿದ್ದು, ಎನ್‌ಡಿಎ & ಇಂಡಿಯಾ ಒಕ್ಕೂಟದ ನಡುವೆ ದೊಡ್ಡ ಘರ್ಷಣೆಗೂ ಕಾರಣವಾಗುತ್ತಿದೆ.












Click it and Unblock the Notifications