‘ಪ್ರತಾಪ್ ಸಿಂಹರ ವಿರುದ್ಧ ಸೋಕಾಲ್ಡ್ ದೇಶಭಕ್ತ ಬಿಜೆಪಿಗರ ವಾಗ್ದಾಳಿ ಇಲ್ಲ’
ಭಾರತ ದೇಶದ ಪ್ರಜಾಪ್ರಭುತ್ವದ ಗರ್ಭಗುಡಿ ಸಂಸತ್‌ಗೆ ಅಪರಿಚಿತರು ನುಗ್ಗಿದ ನಂತರ ಭಾರಿ ಸಂಚಲನ ಸೃಷ್ಟಿಯಾಗಿದೆ. ಅದರಲ್ಲೂ ಆರೋಪಿಗಳು ಕರ್ನಾಟಕ ಸಂಸದ ಪ್ರತಾಪ್ ಸಿಂಹರ ಹೆಸರು ಉಲ್ಲೇಖಿಸಿ ವಿಸಿಟರ್ ಪಾಸ್ ಪಡೆದು ಸಂಸತ್ತಿಗೆ ಪ್ರವೇಶಿಸಿದ್ದಾರೆ ಎಂಬ ಸುದ್ದಿ ಬಿರುಗಾಳಿ ಎಬ್ಬಿಸಿದೆ. ಇದೇ ವಿಚಾರ ಮುಂದೆ ಇಟ್ಟುಕೊಂಡು ವಿರೋಧ ಪಕ್ಷಗಳು ಬಿಜೆಪಿ ವಿರುದ್ದ ಕೂಡ ಹೋರಾಟ ಆರಂಭಿಸಿವೆ. ಹೀಗಿದ್ದಾಗ ಕರ್ನಾಟಕ ಕಾಂಗ್ರೆಸ್ ಸ್ಫೋಟಕ ಆರೋಪ ಮಾಡಿದೆ.
ಹೌದು, ಸೋಷಿಯಲ್ ಮೀಡಿಯಾ ಸೇರಿ ದೇಶದ ವಿವಿಧೆಡೆ ಸಂಸದ ಪ್ರತಾಪ್ ಸಿಂಹ ವಿರುದ್ಧ ಆಕ್ರೋಶದ ಬಿರುಗಾಳಿ ಎದ್ದಿದೆ. ಹೀಗೆ ಅಪರಿಚಿತರು ಸಂಸತ್ ಭವನದ ಒಳಗೆ ನುಗ್ಗಲು ಪ್ರತಾಪ್ ಸಿಂಹ ಅವರೇ ಪ್ರಮುಖ ಕಾರಣ ಅಂತ ಆರೋಪ ಮಾಡುತ್ತಿದೆ ಕಾಂಗ್ರೆಸ್. ಈ ಮೂಲಕ ಮಾಜಿ ಪತ್ರಕರ್ತ & ಹಾಲಿ ಸಂಸದ ಪ್ರತಾಪ್ ಸಿಂಹ ಅವರ ಹೆಸರು ಈಗ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ. ಇಷ್ಟೆಲ್ಲದರ ನಡುವೆ ಕರ್ನಾಟಕ ಕಾಂಗ್ರೆಸ್ ಕೂಡ ಸ್ಫೋಟಕ ಆರೋಪ ಮಾಡಿದ್ದು, ಸಂಚಲನ ಸೃಷ್ಟಿಯಾಗಿದೆ.

'ಪ್ರತಾಪ್ ಸಿಂಹರ ವಿರುದ್ಧ ಸೋಕಾಲ್ಡ್..'
ಈ ಬಗ್ಗೆ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿ, 'ಸಂಸತ್ ದಾಳಿ ಪ್ರಕರಣದ ಆರೋಪಿಗಳಿಗೆ ಪಾಸ್ ಒದಗಿಸಿದ್ದು ಸಂಸದ @mepratap • ಇದುವರೆಗೂ ಪ್ರತಾಪ್ ಸಿಂಹರ ವಿಚಾರಣೆ ಇಲ್ಲ. • ಇದುವರೆಗೂ ಪ್ರತಾಪ್ ಸಿಂಹರ ಬಂಧನವಿಲ್ಲ. • ಇದುವರೆಗೂ ಪ್ರತಾಪ್ ಸಿಂಹರನ್ನು ವಜಾಗೊಳಿಸಿಲ್ಲ. • ಇದುವರೆಗೂ ಪ್ರತಾಪ್ ಸಿಂಹರ ವಿರುದ್ಧ ಸೋಕಾಲ್ಡ್ ದೇಶಭಕ್ತ ಬಿಜೆಪಿಗರ ವಾಗ್ದಾಳಿ ಇಲ್ಲ. ಮುಖ್ಯವಾಗಿ, • ಇದುವರೆಗೂ ಸಂಸತ್ ದಾಳಿ ವಿಚಾರದಲ್ಲಿ @BJP4Karnataka ಒಂದೂ ಟ್ವೀಟ್ ಮಾಡಿಲ್ಲ.' ಅಂತಾ ಆರೋಪ ಮಾಡಿದೆ.
ಸಂಸತ್ ದಾಳಿ ಪ್ರಕರಣದ ಆರೋಪಿಗಳಿಗೆ ಪಾಸ್ ಒದಗಿಸಿದ್ದು ಸಂಸದ @mepratap .
— Karnataka Congress (@INCKarnataka) December 14, 2023
• ಇದುವರೆಗೂ ಪ್ರತಾಪ್ ಸಿಂಹರ ವಿಚಾರಣೆ ಇಲ್ಲ.
• ಇದುವರೆಗೂ ಪ್ರತಾಪ್ ಸಿಂಹರ ಬಂಧನವಿಲ್ಲ.
• ಇದುವರೆಗೂ ಪ್ರತಾಪ್ ಸಿಂಹರನ್ನು ವಜಾಗೊಳಿಸಿಲ್ಲ.
• ಇದುವರೆಗೂ ಪ್ರತಾಪ್ ಸಿಂಹರ ವಿರುದ್ಧ ಸೋಕಾಲ್ಡ್ ದೇಶಭಕ್ತ ಬಿಜೆಪಿಗರ ವಾಗ್ದಾಳಿ ಇಲ್ಲ.
ಮುಖ್ಯವಾಗಿ,
•…
'ಮೋದಿ "ಚೌಕಿದಾರ್" ಆಗಿದ್ದು..'
ಮತ್ತೊಂದು ಟ್ವೀಟ್ ಮೂಲಕ ಕಾಂಗ್ರೆಸ್, 'ಪುಲ್ವಾಮ ದಾಳಿಗೂ ಮೊದಲು ಇಂಟಲಿಜೆನ್ಸ್ ಎಚ್ಚರಿಕೆ ನೀಡಿದ್ದರೂ ಸಹ ದುರಂತ ನಡೆಯಲು ಅನುವು ಮಾಡಿಕೊಡಲಾಗಿತ್ತು. ಈಗ ಖಲಿಸ್ತಾನಿ ಉಗ್ರರು ದಾಳಿ ಮಾಡುವ ಸುಳಿವು ನೀಡಿದ್ದರೂ ಸಹ ಭದ್ರತೆಯನ್ನು ಬಿಗಿಗೊಳಿಸದೆ ದಾಳಿಗೆ ಅನುವು ಮಾಡಿಕೊಡಲಾಗಿದೆ. ಮೋದಿ ಆಡಳಿತದಲ್ಲಿ, ಸೈನಿಕರಿಗೆ ರಕ್ಷಣೆ ಇಲ್ಲ, ಗಡಿಗಳು ಸುರಕ್ಷಿತವಾಗಿಲ್ಲ, ದೇಶದ ಮಹಿಳೆಯರಿಗೆ ರಕ್ಷಣೆ ಇಲ್ಲ, ರೈತರು, ವಿದ್ಯಾರ್ಥಿಗಳಿಗೆ ರಕ್ಷಣೆ ಇಲ್ಲ, ಈಗ ಸಂಸತ್ತಿಗೇ ರಕ್ಷಣೆ ಇಲ್ಲ. ಮೋದಿ "ಚೌಕಿದಾರ್" ಆಗಿದ್ದು ಅದಾನಿ, ಅಂಬಾನಿಗಳಿಗೆ ಮಾತ್ರವೇ @BJP4Karnataka?' ಎಂದು ಪ್ರಶ್ನೆ ಮಾಡಿದೆ ಕಾಂಗ್ರೆಸ್.
ಪುಲ್ವಾಮ ದಾಳಿಗೂ ಮೊದಲು ಇಂಟಲಿಜೆನ್ಸ್ ಎಚ್ಚರಿಕೆ ನೀಡಿದ್ದರೂ ಸಹ ದುರಂತ ನಡೆಯಲು ಅನುವು ಮಾಡಿಕೊಡಲಾಗಿತ್ತು.
— Karnataka Congress (@INCKarnataka) December 14, 2023
ಈಗ ಖಲಿಸ್ತಾನಿ ಉಗ್ರರು ದಾಳಿ ಮಾಡುವ ಸುಳಿವು ನೀಡಿದ್ದರೂ ಸಹ ಭದ್ರತೆಯನ್ನು ಬಿಗಿಗೊಳಿಸದೆ ದಾಳಿಗೆ ಅನುವು ಮಾಡಿಕೊಡಲಾಗಿದೆ.
ಮೋದಿ ಆಡಳಿತದಲ್ಲಿ,
ಸೈನಿಕರಿಗೆ ರಕ್ಷಣೆ ಇಲ್ಲ,
ಗಡಿಗಳು ಸುರಕ್ಷಿತವಾಗಿಲ್ಲ,
ದೇಶದ ಮಹಿಳೆಯರಿಗೆ…
ಒಟ್ನಲ್ಲಿ ಸಂಸತ್ ಘಟನೆ ಈಗ ಕರ್ನಾಟಕದಲ್ಲಿ ರಾಜಕೀಯ ತಿಕ್ಕಾಟಕ್ಕೂ ವೇದಿಕೆ ಒದಗಿಸಿ, ಅದರಲ್ಲೂ ಸಂಸದ ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸುತ್ತಿದೆ. ಈ ಬಗ್ಗೆ, ಸಂಸದ ಪ್ರತಾಪ್ ಸಿಂಹ ಯಾವ ರೀತಿ ಪ್ರತಿಕ್ರಿಯೆ ನೀಡಲಿದ್ದಾರೆ? ಅನ್ನೋದನ್ನು ಮುಂದೆ ನೋಡಬೇಕಿದೆ. ಅಲ್ಲಿಯವರೆಗೂ ತಿಕ್ಕಾಟ ಮುಂದುವರಿಯೋದು ಗ್ಯಾರಂಟಿ.












Click it and Unblock the Notifications