Get Updates
Get notified of breaking news, exclusive insights, and must-see stories!

Cauvery Water: ಕಾವೇರಿ ಕೊಳ್ಳದಲ್ಲಿ ಆತಂಕ, ಅಣೆಕಟ್ಟುಗಳಿಗೆ ಶೇ 42.54ರಷ್ಟು ಕಡಿಮೆ ನೀರು!

ಕಾವೇರಿ ನೀರಿನ ಕೊರತೆ ಕರ್ನಾಟಕದಲ್ಲಿ ಆತಂಕದ ವಾತಾವರಣ ಮೂಡಿಸಿದೆ. ಅದ್ರಲ್ಲೂ ಮುಂಗಾರು ಮಳೆಯ ಸಮಯ ಇನ್ನೇನು ಮುಗಿಯುತ್ತಾ ಬಂದರೂ ಪರಿಸ್ಥಿತಿ ಬದಲಾಗಿಲ್ಲ. ಈ ಪೈಕಿ ಕಾವೇರಿ ಕೊಳ್ಳದ ಸ್ಥಿತಿ ಭೀಕರವಾಗಿದ್ದು, ಮುಂದೆ ಏನು ಮಾಡೋದು? ಎಂಬ ಚಿಂತೆ ಶುರುವಾಗಿದೆ. ಇದೇ ಹೊತ್ತಲ್ಲಿ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಈ ವರ್ಷ ಮುಂಗಾರು ಮಳೆ ಶುರುವಾಗಿದ್ದೇ ತಡವಾಗಿತ್ತು. ಅದರಲ್ಲೂ ಕಾವೇರಿ ಕೊಳ್ಳದ ಭಾಗದಲ್ಲಿ ದುರ್ಬಲ ಮುಂಗಾರಿನ ಕಾರಣ, ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟುಗಳಿಗೆ ನೀರಿನ ಒಳಹರಿವು ಶೇ 42.54ರಷ್ಟು ತಗ್ಗಿದೆ. ಈ ವಿಚಾರವನ್ನು ಸ್ವತಃ ಕಾವೇರಿ ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಜೂನ್‌ 1, 2023ರಿಂದ ಆಗಸ್ಟ್‌ 9, 2023ರವರೆಗೆ ಜಲಾನಯನ ಭಾಗದ ಅಣೆಕಟ್ಟುಗಳಾದ ಕಬಿನಿ, ಹಾರಂಗಿ, ಹೇಮಾವತಿ & ಕೆಆರ್‌ಎಸ್‌ನಲ್ಲಿ ಒಳ ಹರಿವಿನ ಪ್ರಮಾಣ 30 ವರ್ಷಗಳ ಸರಾಸರಿಗೆ ಹೋಲಿಸಿದರೆ ಶೇ 42.54ರಷ್ಟು ಇಳಿಮುಖವಾಗಿದೆ ಎನ್ನಲಾಗಿದೆ. ಈ ಮಾಹಿತಿ ಕಳೆದ ವಾರ ನಡೆದಿದ್ದ ಪ್ರಾಧಿಕಾರದ ಸಭೆಯ ಕಾರ್ಯಸೂಚಿಯಲ್ಲಿ ಬಯಲಾಗಿದೆ.

Discover the water war between Karnataka and Tamil Nadu

ಮುಂದಿನ ಪರಿಸ್ಥಿತಿಯೇ ಭಯಾನಕ

ಮತ್ತೊಂದ್ಕಡೆ ಜೂನ್ 1ರಿಂದ ಆಗಸ್ಟ್ 10ರ ತನಕ ಕೆಆರ್‌ಎಸ್ ಡ್ಯಾಂ‌ ವ್ಯಾಪ್ತಿಯ ಪ್ರದೇಶಗಳಲ್ಲಿ ಶೇಕಡಾ 23ರಷ್ಟು, ಕಬಿನಿ ವ್ಯಾಪ್ತಿಯಲ್ಲಿ ಶೇ 22ರಷ್ಟು ಮಳೆ ಕೊರತೆಯಾಗಿದೆ. ತಮಿಳುನಾಡು ಮತ್ತು ಕರ್ನಾಟಕ ಒಳಗೊಂಡು ಇಡೀ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ವಾಡಿಕೆಗಿಂತ ಶೇ 19ರಷ್ಟು ಕಡಿಮೆಯಾಗಿದೆ. ಹೀಗೆ ಮೊದಲೇ ಸೃಷ್ಟಿಯಾಗಿದ್ದ ಸಮಸ್ಯೆಗೆ ಈ ಮಾಹಿತಿ ಕಿಡಿ ಹಚ್ಚಿದಂತಾಗಿದೆ. ಮುಂಬರುವ ಕಷ್ಟದ ದಿನಗಳಿಗೆ ಕಾವೇರಿ ಕೊಳ್ಳದಲ್ಲಿನ ರೈತರು ಹಾಗೂ ಜನರು ಸಿದ್ಧವಾಗಬೇಕಾದ ಪರಿಸ್ಥಿತಿ ಎದುರಾಗಿದೆ.

ಮೆಟ್ಟೂರು ಡ್ಯಾಂ ಖಾಲಿ ಮಾಡಿದ ತಮಿಳುನಾಡು

ನಮ್ಮಲ್ಲಿ ನೀರು ಇಲ್ದೆ ಪರದಾಡುವ ವೇಳೆಗೆ ಅತ್ತ ತಮಿಳುನಾಡು ತನ್ನ ಮೆಟ್ಟೂರು ಡ್ಯಾಂ ಮೂಲಕ ಭಾರಿ ಪ್ರಮಾಣದ ನೀರನ್ನು ಹೊರಗೆ ಬಿಡುತ್ತಿದೆ. ತಮಿಳುನಾಡು ಸರ್ಕಾರ ಕೃಷಿ ಉದ್ದೇಶಕ್ಕೆ ಜೂನ್‌ 12ರಿಂದ ನೀರು ಹರಿಸಲು ಆರಂಭಿಸಿದ್ದರಿಂದ ಮೆಟ್ಟೂರು ಡ್ಯಾಂನಲ್ಲಿ ಇದ್ದ ನೀರಿನ ಪ್ರಮಾಣ ಆಗಸ್ಟ್‌ 7ಕ್ಕೆ 22.86 ಟಿಎಂಸಿ ಅಡಿ ತಲುಪಿದೆ. ಬಿಳಿಗುಂಡ್ಲು ಪ್ರದೇಶದಿಂದ ಮೆಟ್ಟೂರು ಡ್ಯಾಂ ತನಕ ವಾಡಿಕೆಯಂತೆ ಮಳೆಯಾಗಿದೆ. ತಮಿಳುನಾಡು ಸರ್ಕಾರ ಜೂನ್‌ 12 ರಿಂದ ಆಗಸ್ಟ್ 7ರ ನಡುವೆ 60.97 ಟಿಎಂಸಿ ಅಡಿಗಿಂತ ಹೆಚ್ಚು ನೀರನ್ನು ಬಳಕೆ ಮಾಡಿದೆ ಎಂಬ ಮಾಹಿತಿಯನ್ನ ಕರ್ನಾಟಕ ಈಗಾಗ್ಲೇ ಕಾವೇರಿ ನಿರ್ವಹಣಾ ಪ್ರಾಧಿಕಾರದ ಗಮನಕ್ಕೆ ತಂದಿದೆ.

ವಾಟರ್ ವಾರ್‌ಗೆ ವೇದಿಕೆ ಸಿದ್ಧ!

ಹೀಗೆ ತಮಿಳುನಾಡು ಹಾಗೂ ಕರ್ನಾಟಕದ ನಡುವೆ ಮತ್ತೆ ವಾಟರ್ ವಾರ್‌ಗೆ ವೇದಿಕೆಯೂ ಸಜ್ಜಾದಂತೆ ಕಾಣುತ್ತಿದೆ. ಇನ್ನು ತಮಿಳುನಾಡಿನ ನೀರಾವರಿ ಕೃಷಿ ಭೂಮಿಯ ಲೆಕ್ಕಾಚಾರ ನೋಡುವುದಾದರೆ, ತಮಿಳುನಾಡಲ್ಲಿ ಒಟ್ಟು 1 ಲಕ್ಷ 85 ಸಾವಿರ ಎಕರೆ ವಿಸ್ತೀರ್ಣದ ಭಾಗದ ಬೆಳೆಗೆ 32 ಟಿಎಂಸಿ ಅಡಿ ನೀರು ಅಗತ್ಯ ಎಂದು ಕಾವೇರಿ ಜಲವಿವಾದ ನ್ಯಾಯಮಂಡಳಿ ಹಂಚಿಕೆ ಮಾಡಿತ್ತು. ಆದ್ರೆ ತಮಿಳುನಾಡು ಸರ್ಕಾರ ಬೆಳೆಗೆ ಹಂಚಿದ್ದ ನೀರಿಗಿಂತ 2 ಪಟ್ಟು ಹೆಚ್ಚು ನೀರು ಬಳಕೆ ಮಾಡಿದೆ ಎಂದು ಕರ್ನಾಟಕ ಇದೀಗ ಪ್ರಧಿಕಾರದ ಗಮನಕ್ಕೆ ತಂದಿದೆ.

Discover the water war between Karnataka and Tamil Nadu

ಒಂದು ಸುತ್ತಿನ ಸಭೆಯಲ್ಲಿ ಫೈಟಿಂಗ್

ಇನ್ನು ಈಗಾಗಲೇ ಒಂದು ಸುತ್ತಿನ ಸಭೆಯಲ್ಲಿ ತಮಿಳುನಾಡು ಹಾಗೂ ಕರ್ನಾಟಕ ನಡುವೆ ಕಿರಿಕ್ ಆಗಿದೆ. ಸಿಡಬ್ಲ್ಯುಎಂಎ ತನ್ನ ಆದೇಶದಲ್ಲಿ ಆಗಸ್ಟ್ 12 ರಿಂದ 15 ದಿನ ಕಾಲ ಪ್ರತಿನಿತ್ಯ ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ 10 ಸಾವಿರ ಕ್ಯೂಸೆಕ್‌ ಹರಿವು ದಾಖಲಾಗುವಂತೆ ನೀರನ್ನು ಹರಿಸಿ ಎಂದಿದೆ. ಕರ್ನಾಟಕದಲ್ಲಿ ಕುಡಿಯುವ ನೀರು ಉದ್ದೇಶಕ್ಕೆ ಬೇಕಾಗಿರುವ ನೀರನ್ನ ಬಿಟ್ಟು ನ್ಯಾಯಮಂಡಳಿ ನಿಗದಿಪಡಿಸಿದ ನೀರಾವರಿ ಪ್ರದೇಶದ ಶೇ 50ರಷ್ಟು ಭೂಮಿಗೆ ಒದಗಿಸುವಷ್ಟು ನೀರು ಸಂಗ್ರಹದಲ್ಲಿಲ್ಲ. ಈವರೆಗೂ ಕೃಷಿ ಉದ್ದೇಶಕ್ಕೆ ಕರ್ನಾಟಕದಲ್ಲಿ ನೀರು ಬಿಟ್ಟಿಲ್ಲ. ರೈತರು ಕಾಲುವೆ ಮೂಲಕ ನೀರು ಹರಿಸುವಂತೆ ಒತ್ತಡ ಹೇರುತ್ತಿದ್ದು, ಇದು ಪರಿಸ್ಥಿತಿಯನ್ನ ಇಕ್ಕಟ್ಟಿಗೆ ಸಿಲುಕಿಸುತ್ತಿದೆ.

ಹೆಚ್ಚುವರಿ ನೀರನ್ನು ಏನು ಮಾಡಿದ್ರು?

ಕಳೆದ ವರ್ಷವೇ ತಮಿಳುನಾಡು ಮೂಲಕ 400 ಟಿಎಂಸಿಗೂ ಹೆಚ್ಚು ನೀರು ಸಮುದ್ರ ಸೇರಿದೆ. ಮುಂಗಾರು ಅಬ್ಬರದ ಕಾರಣ ಮೆಟ್ಟೂರು ಡ್ಯಾಂನಿಂದ 472.6 ಟಿಎಂಸಿ ಹೆಚ್ಚುವರಿ ನೀರನ್ನು ಹೊರಬಿಡಲಾಗಿತ್ತು. 62 ವರ್ಷದ ನಂತರ ಇಷ್ಟು ಪ್ರಮಾಣದಲ್ಲಿ ನೀರನ್ನು ಹೊರಬಿಟ್ಟಿದ್ದು, ಗಮನ ಸೆಳೆದಿತ್ತು. 1961ರಲ್ಲಿ 321 ಟಿಎಂಸಿ ನೀರನ್ನ ಬಿಡಲಾಗಿತ್ತು. ಹೀಗೆ ನೂರಾರು ಟಿಎಂಸಿ ನೀರು ವ್ಯರ್ಥವಾಗಿ ತಮಿಳುನಾಡು ಮೂಲಕ ಸಮುದ್ರ ಸೇರಿದೆ. ಇಷ್ಟೆಲ್ಲ ನೀರನ್ನ ಅಲ್ಲಿ ವ್ಯರ್ಥ ಮಾಡಿದ್ದರೂ ಈ ವರ್ಷ ಮತ್ತೆ ನೀರಿ ಬೇಕು ಅಂತಾ ತಮಿಳುನಾಡು ಕಿರಿಕ್ ಶುರುಮಾಡುತ್ತಿದೆ. ಹೀಗಾಗಿ ತಮಿಳುನಾಡು ಸರ್ಕಾರದ ವರ್ತನೆಗೆ ಬೇಸರ ವ್ಯಕ್ತವಾಗುತ್ತಿದೆ.

ಮೇಕೆದಾಟು ಯೋಜನೆ ಬೇಕೆ ಬೇಕು...

ಇಷ್ಟೆಲ್ಲದರ ನಡುವೆ ಮತ್ತೆ ಮೇಕೆದಾಟು ಯೋಜನೆ ವಿಚಾರ ಚರ್ಚೆಗೆ ಬಂದಿದೆ. ಮೇಕೆದಾಟು ಡ್ಯಾಂ ನಿರ್ಮಾಣವಾಗಿದ್ದರೆ ಮಳೆಗಾಲದಲ್ಲಿ ಸುಮ್ಮನೆ ವ್ಯರ್ಥವಾಗುವ ನೀರನ್ನು, ಕರ್ನಾಟಕ & ತಮಿಳುನಾಡು ಗಡಿ ಭಾಗದಲ್ಲಿ ಕುಡಿಯುವ ನೀರಿನ ಉದ್ದೇಶಕ್ಕೆ ಬಳಸಲು ಸಾಧ್ಯ. ಮೇಕೆದಾಟು ಡ್ಯಾಂನಲ್ಲಿ ನೀರು ಸಂಗ್ರಹವಾದ್ರೆ 65ರಿಂದ 66 ಟಿಎಂಸಿ ಹೆಚ್ಚುವರಿ ನೀರು ತಮಿಳುನಾಡಿನಿಂದ ಸಮುದ್ರದ ಪಾಲಾದಂತೆ ತಡೆಯಬಹುದು. ತಮಿಳುನಾಡು ಕೂಡ ಉಪಯೋಗ ಪಡೆಯಲಿದೆ. ಹೀಗಾಗಿ ಮೇಕೆದಾಟು ಬಗ್ಗೆ ಚರ್ಚೆ ಶುರುವಾಗಿದೆ.

Discover the water war between Karnataka and Tamil Nadu

ಕಷ್ಟದ ಸಮಯದಲ್ಲಿ ಮೇಕೆದಾಟು ಆಧಾರ

ಬೆಂಗಳೂರು ಸುತ್ತಮುತ್ತ ಕುಡಿವ ನೀರು ಒದಗಿಸುವ ಜೊತೆಗೆ, ಕರ್ನಾಟಕಕ್ಕೂ ಅಗತ್ಯ ಇರುವ ವಿದ್ಯುತ್‌ ಉತ್ಪಾದನೆಗೆ ಸಹಕಾರಿ. ಇಷ್ಟೆಲ್ಲಾ ಇದ್ದರೂ ಅತ್ತ ನಮಗೂ ಡ್ಯಾಂ ಕಟ್ಟಲು ಬಿಡದೆ ಇತ್ತ ಬಿಟ್ಟಿರುವ ನೀರನ್ನು ಉಳಿಸಿಕೊಳ್ಳದೆ ನೆರೆಯ ರಾಜ್ಯ ತಮಿಳುನಾಡು ಕಿರಿಕ್ ಮಾಡುತ್ತಿದೆ. ರಾಮನಗರ ಸುತ್ತಲು ಅಂತರ್ಜಲ ಬತ್ತಿ ಹೋಗುತ್ತಿದ್ದು, ಮೇಕೆದಾಟು ಡ್ಯಾಂ ನಿರ್ಮಾಣವಾದ್ರೆ ಅಂತರ್ಜಲ ಏರಿಕೆ ಆಗುವ ನಿರೀಕ್ಷೆ ಇದೆ. ಮೇಕೆದಾಟು ಡ್ಯಾಂನಿಂದ ಸಾಕಷ್ಟು ಸಹಾಯವೂ ಆಗಲಿದೆ.

ಅನಿಶ್ಚಿತ ಮಳೆ ಕಾರಣ ರಾಮನಗರ & ಬೆಂಗಳೂರು ಹೊರವಲಯದ ರೈತರಲ್ಲಿನ ಆತಂಕವನ್ನು ಮೇಕೆದಾಟು ಡ್ಯಾಂ ದೂರ ಮಾಡುತ್ತದೆ. ಸಮಸ್ಯೆಗೆ ಒಂದು ಅಂತ್ಯ ಕಾಣಿಸಬಹುದು. ಆದರೆ ತಮಿಳುನಾಡಿನ ರಾಜಕೀಯ ಹಾಗೂ ಅಲ್ಲಿನ ರಾಜಕಾರಣಿಗಳಿಗೆ ಸಮಸ್ಯೆ ಸರಿಮಾಡುವುದು ಬೇಡ ಅಂತಾ ಕಾಣುತ್ತದೆ. ಇದೇ ಕಾರಣಕ್ಕೆ ಈಗ ಕಿರಿಕ್ ಮತ್ತೆ ಶುರುವಾಗಿದೆ. ಇವರಿಬ್ಬರ ತಿಕ್ಕಾಟದಲ್ಲಿ ಎರಡೂ ರಾಜ್ಯಗಳ ಸಂಬಂಧ ಹಾಳಾಗುತ್ತಿರುವುದು ವಿಪರ್ಯಾಸವೇ ಸರಿ. ಈ ಬಗ್ಗೆ ಕೇಂದ್ರ ಸರ್ಕಾರ ಮಧ್ಯಪ್ರವೇಶಕ್ಕೆ ಎರಡೂ ಕಡೆಯಿಂದ ಬೇಡಿಕೆ ಇದೆ. ಆದರೆ ಇದು ದಿನದಿಂದ ದಿನಕ್ಕೆ ಬಿಡಿಸಲಾಗದ ಕಗ್ಗಂಟಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+