Congress Guarantee: ‘ರಾಜ್ಯವನ್ನು ಕತ್ತಲೆಗೆ ದೂಡಿ ಕಾಣೆಯಾಗಿದ್ದಾರೆ!’

ರಾಜ್ಯದಲ್ಲಿ ಕಾಂಗ್ರೆಸ್ & ಬಿಜೆಪಿ ಜಗಳ ಜೋರಾಗಿದ್ದು ಒಬ್ಬರ ಮೇಲೊಬ್ಬರು ಆರೋಪಗಳ ಮೂಟೆಯನ್ನೇ ಸುರಿಸುತ್ತಿದ್ದಾರೆ. ಅತ್ತ ಕಾಂಗ್ರೆಸ್ ಆರೋಪ ಮಾಡಿದರೆ ಬಿಜೆಪಿ ಮತ್ತೊಂದು ಆರೋಪ ಸಿದ್ಧವಾಗಿ ಇಟ್ಟುಕೊಳ್ಳುತ್ತದೆ. ಇತ್ತ ಬಿಜೆಪಿ ಆರೋಪ ಮಾಡಿದ್ರೆ ಕಾಂಗ್ರೆಸ್ ಕೂಡ ಪ್ರತ್ಯಾರೋಪ ಮಾಡುತ್ತಿದೆ. ಆದರೆ ಈಗ ಕಾಂಗ್ರೆಸ್ ಮೇಲೆ ಬಿಜೆಪಿ ಗಂಭೀರ ಆರೋಪವನ್ನ ಹೊರಿಸಿದೆ, ಅದೂ ಗ್ಯಾರಂಟಿ ವಿಚಾರದಲ್ಲಿ. ಹಾಗಾದ್ರೆ ಏನದು ಗಂಭೀರ ಆರೋಪ? ಬನ್ನಿ ತಿಳಿಯೋಣ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಆಶ್ವಾಸನೆ, ಬಿಜೆಪಿಗೆ ಬ್ರಹ್ಮಾಸ್ತ್ರ ಕೊಟ್ಟಂತಿದೆ. ಒಂದು ಕಡೆ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯವನ್ನು ಕಾಂಗ್ರೆಸ್ ದಿವಾಳಿ ಮಾಡ್ತಿದೆ ಅಂತಾ ಬಿಜೆಪಿ ಆರೋಪ ಮಾಡುತ್ತಿದ್ರೆ, ಬಿಜೆಪಿಗೆ ಅರ್ಥಶಾಸ್ತ್ರವೇ ಗೊತ್ತಿಲ್ಲ ಅಂತಾ ಪದೇ ಪದೆ ಕಾಂಗ್ರೆಸ್ ಕೌಂಟರ್ ಕೊಡುತ್ತಿದೆ. ಎರಡೂ ಪಕ್ಷಗಳ ರಾಜಕೀಯ ಕೆಸರೆರಚಾಟಕ್ಕೂ ಈ ಗ್ಯಾರಂಟಿ ಆಶ್ವಾಸನೆ ಕಾರಣವಾಗಿದೆ. ಪರಿಸ್ಥಿತಿ ಹೀಗಿದ್ದಾಗ ಬಿಜೆಪಿ ಏನ್ ಹೇಳಿದೆ ಗೊತ್ತಾ?

Discover how BJP challenged Congress over electricity issue

'ರಾಜ್ಯವನ್ನು ಕತ್ತಲೆಗೆ ದೂಡಿ ಕಾಣೆಯಾಗಿದ್ದಾರೆ!'

ಕರ್ನಾಟಕ ಕಾಂಗ್ರೆಸ್‌ಗೆ ತಿರುಗೇಟು ನೀಡಲು ಟ್ವೀಟ್ ಮಾಡಿರುವ ಬಿಜೆಪಿ, 'ಡಿಯರ್‌
ಕರ್ನಾಟಕ ಕಾಂಗ್ರೆಸ್, ಕಾಣೆಯಾಗಿದ್ದ ಬಸ್‌ ಸ್ಟಾಂಡ್‌ನನ್ನು ಕೊನೆಗೂ ಹುಡುಕಿದ್ದೇವೆ ಎಂದು ನಿಮ್ಮ ಬೆನ್ನನ್ನು ನೀವೇ ತಟ್ಟಿಕೊಳ್ಳುತ್ತಿದ್ದೀರಿ, ಇರಲಿ ನಿಮ್ಮ ಸಾಹಸ ನಿಜಕ್ಕೂ ಶ್ಲಾಘನೀಯ!! ಕರ್ನಾಟಕದಲ್ಲೆಲ್ಲಾ ಕತ್ತಲೆ ಹರಡಿ ನಾಪತ್ತೆಯಾಗಿರುವ ನಿಮ್ಮ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರನ್ನು ಹುಡುಕಿ ಕೊಡಿ, ರಾಜ್ಯದ ಜನತೆ ಸಂಕಷ್ಟದಲ್ಲಿದ್ದಾರೆ.' ಎಂದು ತಿರುಗೇಟು ನೀಡಿ ಟ್ವೀಟ್ ಪೋಸ್ಟ್ ಮಾಡಿದೆ.

ಬಿಜೆಪಿ VS ಕಾಂಗ್ರೆಸ್ ಮಹಾಯುದ್ಧ!

ಇನ್ನು ಬಿಜೆಪಿ ಟ್ವೀಟ್‌ಗೆ ಮುನ್ನ ಟ್ವೀಟ್ ಪೋಸ್ಟ್ ಮಾಡಿದ್ದ ಕಾಂಗ್ರೆಸ್, 'ಡಿಯರ್ ಕರ್ನಾಟಕ ಬಿಜೆಪಿ, ಕಾಣೆಯಾಗಿರುವುದು ಸರ್ಕಾರವೂ ಅಲ್ಲ, ಬಸ್ ಸ್ಟ್ಯಾಂಡೂ ಅಲ್ಲ. ಕಾಣೆಯಾಗಿರುವುದು, ನಿಮ್ಮ ಬುದ್ದಿ, ನಿಮ್ಮ ನೈತಿಕತೆ, ಹಾಗೂ ವಿರೋಧ ಪಕ್ಷದ ನಾಯಕ! ಖಾಸಗಿ ಜಾಹಿರಾತು ಸಂಸ್ಥೆಯೊಂದು ತಮ್ಮ ಕಳಪೆ ಗುಣಮಟ್ಟದ ಬಸ್ ಸ್ಟ್ಯಾಂಡ್ ನಿರ್ಮಿಸಿತ್ತು, ಸಾರ್ವಜನಿಕ ಹಿತದೃಷ್ಟಿಯಿಂದ ಪಾಲಿಕೆ ಅದನ್ನು ತೆರವುಗೊಳಿಸಿತ್ತು. ವಿಷಯವನ್ನು ತಿರುಚುವುದು, ಸುಳ್ಳು ಹೇಳುವುದು ಬಿಜೆಪಿಯ ಜಾಯಮಾನ ಅನ್ನೋದನ್ನ ಮತ್ತೊಮ್ಮೆ ಸಾಬೀತು ಮಾಡಿದೆ.' ಎಂದು ಬಿಜೆಪಿಗೆ ಕಾಲೆಳೆದಿತ್ತು, ಈಗ ಬಿಜೆಪಿ ಅದಕ್ಕೆ ಉತ್ತರ ನೀಡಿದೆ.

ಒಟ್ನಲ್ಲಿ ಕಮಲ ಮತ್ತು ಕೈ ನಡುವಿನ ಫೈಟ್ ಸದ್ಯಕ್ಕೆ ನಿಲ್ಲುವ ಸೂಚನೆ ಇಲ್ಲ. ಒಂದಲ್ಲ ಒಂದು ವಿಚಾರಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಕಿರಿಕ್ ಆಗ್ತಾನೆ ಇದೆ. ಹೀಗೆ ಎರಡೂ ಕಡೆ ಕಿಡಿ ಹೊತ್ತಿಕೊಂಡಿದೆ. ಮುಂದೆ ಇದು ಯಾವಾಗ ಜ್ವಾಲೆಯಾಗುತ್ತೋ ಗೊತ್ತಿಲ್ಲ. ಈ ಮಧ್ಯೆ ಲೋಕಸಭೆ ಚುನಾವಣೆ ಹಾಗೂ 5 ರಾಜ್ಯಗಳ ವಿಧಾನಸಭೆ ಚುನಾವಣೆ ಹತ್ತಿರದಲ್ಲೇ ಇರುವ ಕಾರಣ ತಿಕ್ಕಾಟ ಹಾಗೂ ಕಿತ್ತಾಟ ಇನ್ನಷ್ಟು ಹೆಚ್ಚಾಗುವ ಸೂಚನೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+