ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಪ್ಲೊಮಾ ಕೋರ್ಸ್‌ ಪಠ್ಯ ಬದಲಾವಣೆ; ವಿವಾದದ ಸುತ್ತ ಒಂದು ನೋಟ

|
Google Oneindia Kannada News

ಬೆಂಗಳೂರು, ನವೆಂಬರ್ 06: ಕರ್ನಾಟಕದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಅಡಿಯಲ್ಲಿ ಬರುವ ಡಿಪ್ಲೊಮಾ ಕೋರ್ಸ್‌ಗಳಲ್ಲಿ ಅಪ್ಲೈಡ್ ಸೈನ್ಸ್‌ ಮತ್ತು ಅಪ್ಲೈಡ್ ಸೈನ್ಸ್ ಲ್ಯಾಬ್ ವಿಷಯಗಳನ್ನು ತೆಗೆದು ಹಾಕಲಾಗಿದೆ. ಇದರಿಂದಾಗಿ ಈ ವಿಷಯಗಳನ್ನು ಬೋಧನೆ ಮಾಡುವ ಉಪನ್ಯಾಸಕರು ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಡಿಪ್ಲೊಮಾ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಹೊಸದಾಗಿ ತಯಾರಿಸಿರುವ C-20 ಪಠ್ಯಕ್ರಮಗಳಲ್ಲಿ ಅಪ್ಲೈಡ್ ಸೈನ್ಸ್ ಮತ್ತು ಅಪ್ಲೈಡ್ ಸೈನ್ಸ್ ಲ್ಯಾಬ್ ವಿಷಯಗಳನ್ನು ತೆಗೆದು ಹಾಕಲಾಗಿದೆ. ಈ ವಿಷಯಗಳನ್ನು ಬೋಧನೆ ಮಾಡುತ್ತಿದ್ದ ಸಾವಿರಾರು ಉಪನ್ಯಾಸಕರು ಮತ್ತು ಅವರನ್ನು ನಂಬಿರುವ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.

ಪರಾಕ್ರಮ ದಿವಸ : ಸರ್ಜಿಕಲ್ ಸ್ಟ್ರೈಕ್ ನೆನೆದ ವಿಜಯಪುರದ ಉಪನ್ಯಾಸಕಪರಾಕ್ರಮ ದಿವಸ : ಸರ್ಜಿಕಲ್ ಸ್ಟ್ರೈಕ್ ನೆನೆದ ವಿಜಯಪುರದ ಉಪನ್ಯಾಸಕ

ಎಸ್‌ಎಸ್‌ಎಲ್‌ಸಿ ಬಳಿ ಡಿಪ್ಲೊಮಾಕ್ಕೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಲ್ಲಿ ಅನೇಕರು ಗ್ರಾಮೀಣ ಪ್ರದೇಶದವರು. ಅವರಿಗೆ ನೇರವಾಗಿ ತಾಂತ್ರಿಕ ವಿಷಯಗಳನ್ನು ಬೋಧಿಸುವುದರಿಂದ ಗೊಂದಲಗೊಳ್ಳುವ ಸಾಧ್ಯತೆ ಇದೆ. ಅರ್ಧಕ್ಕೆ ಕೋರ್ಸ್‌ಗಳನ್ನು ಬಿಡುವ ಸಾಧ್ಯತೆಯೂ ಇದೆ. ವಿಜ್ಞಾನ ಮತ್ತು ಗಣಿತ ವಿಷಯಗಳು ತಾಂತ್ರಿಕ ಕೋರ್ಸ್‌ಗೆ ಕೊಂಡಿಯಾಗಿವೆ. ವಿಜ್ಞಾನ ಮತ್ತು ಗಣಿತ ವಿಷಯಗಳ ಅಗತ್ಯತೆ ತಾಂತ್ರಿಕ ಕೋರ್ಸ್‌ಗೆ ಇದೆ.

ಈ ವರ್ಷದಿಂದಲೇ ಡಿಪ್ಲೊಮಾ ಪಠ್ಯ ಪರಿಷ್ಕರಣೆ: ಡಾ. ಅಶ್ವಥ್ ನಾರಾಯಣ್ಈ ವರ್ಷದಿಂದಲೇ ಡಿಪ್ಲೊಮಾ ಪಠ್ಯ ಪರಿಷ್ಕರಣೆ: ಡಾ. ಅಶ್ವಥ್ ನಾರಾಯಣ್

 Diploma Syllabus Applied Science Science Lab Subject Cancelled

ಕಳೆದ ಹಲವಾರು ವರ್ಷಗಳಿಂದ AICTE ಪಠ್ಯಕ್ರಮ ರೂಪುರೇಷೆಗಳ ಪ್ರಕಾರ ವಿಜ್ಞಾನ ಮತ್ತು ಗಣಿತ ವಿಷಯವನ್ನು ಇಂಜಿನಿಯರಿಂಗ್ ಮತ್ತು ಡಿಪ್ಲೊಮಾ ಕೋರ್ಸ್‌ಗಳಲ್ಲಿ ಕಡ್ಡಾಯವಾಗಿ ಎಲ್ಲಾ ರಾಜ್ಯಗಳಲ್ಲಿ ಅಳವಡಿಸಿಕೊಂಡು ಬೋಧಿಸಲಾಗುತ್ತಿದೆ. ಬೇರೆ ಯಾವುದೇ ರಾಜ್ಯಗಳಲ್ಲಿ ಈ ವಿಷಯಗಳನ್ನು ಪಠ್ಯದಿಂದ ತೆಗೆದು ಹಾಕಿಲ್ಲ. ಕರ್ನಾಟಕದಲ್ಲಿ ಮಾತ್ರ ತೆಗೆದು ಹಾಕಲಾಗುತ್ತಿದೆ.

ಟಿಪ್ಪು ಸುಲ್ತಾನ್ ಪಠ್ಯ ರದ್ಧತಿ ಬಗ್ಗೆ ಗೃಹ ಸಚಿವರು ಏನಂದರು?ಟಿಪ್ಪು ಸುಲ್ತಾನ್ ಪಠ್ಯ ರದ್ಧತಿ ಬಗ್ಗೆ ಗೃಹ ಸಚಿವರು ಏನಂದರು?

2019ರಲ್ಲಿ AICTEಯ ಮಾದರಿ ಪಠ್ಯಕ್ರಮದಲ್ಲಿ ವಿಜ್ಞಾನ ವಿಭಾಗಕ್ಕೆ ಸಂಬಂಧಿಸಿದ ಒಟ್ಟು 8 ಕೋರ್ಸ್‌ಗಳನ್ನು ಪ್ರಥಮ ವರ್ಷದ ಡಿಪ್ಲೊಮಾದಲ್ಲಿ ಅಳವಡಿಸಲಾಗಿತ್ತು ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯು 6/02/2020ರಂದು ಇದಕ್ಕೆ ಪೂರಕವಾಗಿ ಅಭಿಪ್ರಾಯಗಳನ್ನು ಕ್ರೂಢೀಕರಿಸುವ ಕುರಿತು ವಿಷಯ ತಜ್ಞರುಗಳಿಗೆ ಜ್ಞಾಪನ ಪತ್ರವನ್ನು ಎಲ್ಲಾ ಪಾಲಿಟೆಕ್ನಿಕ್‌ಗಳಿಗೆ ಸಲ್ಲಿಸಿತ್ತು.

ಇದರ ಅನ್ವಯ ರಚನೆಗೊಂಡ ಪಠ್ಯಕ್ರಮದಲ್ಲಿ ವಿಜ್ಞಾನ ವಿಷಯಕ್ಕೆ ಸಂಬಂಧಪಟ್ಟ ಒಟ್ಟು 3 ವಿಷಯಗಳನ್ನು ಪ್ರಥಮ ಸೆಮಿಸ್ಟರ್ ಹಾಗೂ 3 ವಿಷಯಗಳನ್ನು ದ್ವಿತೀಯ ಸೆಮಿಸ್ಟರ್‌ನಲ್ಲಿ ಅಳವಡಿಸಿ ಅಂತಿಮಗೊಳಿಸಲಾಗಿತ್ತು.

ಏಪ್ರಿಲ್ 2020ರಲ್ಲಿ ಈ ವಿಷಯಗಳಿಗೆ ಸಂಬಂಧಿಸಿದ ಕಾರ್ಯಗಾರವನ್ನು ಆಯೋಜನೆ ಮಾಡಲಾಗಿತ್ತು. ಆದರೆ, ಕೋವಿಡ್ ಪರಿಸ್ಥಿತಿ ಕಾರಣ ಸೆಪ್ಟಂಬರ್‌ನಲ್ಲಿ ಆತುರವಾಗಿ ಪಠ್ಯಕ್ರಮವನ್ನು ಬದಲಿಸಿ ಕೇವಲ ಒಂದು ವಿಷಯವನ್ನು ಮಾತ್ರ ಪ್ರಥಮ ಸೆಮಿಸ್ಟರ್ ಹಾಗೂ ಒಂದು ಹೊಸ ವಿಷಯವನ್ನು ದ್ವಿತೀಯ ಸೆಮಿಸ್ಟರ್‌ನಲ್ಲಿ ಅಳವಡಿಸಿ ಮಿಕ್ಕ 4 ವಿಷಯಗಳನ್ನು ತೆಗೆದು ಹಾಕಲಾಗಿದೆ.

ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿನ ಹೊಸ ಪಠ್ಯಕ್ರಮ ವೈಜ್ಞಾನಿಕ (ವಿಜ್ಞಾನ) ದೂರದೃಷ್ಟಿ, ಗಂಭೀರ ಚಿಂತನೆ, ಸೃಜನಾತ್ಮಕ ಮತ್ತು ಗಣಿತವನ್ನು ಒಳಗೊಂಡಿದೆ ಎಂದು ಹೇಳಲಾಗಿದೆ.

ಆದರೆ, ಇದಕ್ಕೆ ವಿರುದ್ಧವಾಗಿ ಕರ್ನಾಟಕದಲ್ಲಿ ಮಾತ್ರ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಈ ವಿಷಯಗಳನ್ನು ಹೊರಗಿಟ್ಟು ಪಠ್ಯಕ್ರಮ ರೂಪಿಸಿ ಮಲತಾಯಿ ಧೋರಣೆ ಮಾಡಲಾಗುತ್ತಿದೆ. ಯಾವುದೇ ಡಿಪ್ಲೊಮಾ ಪಾಸು ಮಾಡಿದ ವಿದ್ಯಾರ್ಥಿಗಳು ಮುಂದೆ ನೌಕರಿಗಾಗಿ ಅಥವಾ ವಿದ್ಯಾಭ್ಯಾಸಕ್ಕಾಗಿ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕಾಗಿರುತ್ತದೆ.

Recommended Video

BJP ಯುವ ಮೋರ್ಚಾ ಕಾರ್ಯಕರ್ತರ ಹೋರಾಟ!! | Arnab Goswami | Oneindia Kannada

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗರಿಷ್ಠ ಪ್ರಶ್ನೆಗಳು ವಿಜ್ಞಾನ ಮತ್ತು ಗಣಿತ ವಿಷಯಗಳಿಂದಲೇ ಬಂದಿರುತ್ತದೆ. ಈ ವಿಷಯಗಳನ್ನು ತೆಗೆದು ಹಾಕುವುದರಿಂದ ಬೇರೆ ರಾಜ್ಯದ ಅಭ್ಯರ್ಥಿಗಳಿಗೆ ನಾವೇ ಅವಕಾಶ ನೀಡಿ ನಮ್ಮಲ್ಲಿನ ಹುದ್ದೆಗಳನ್ನು ನೀಡಿದಂತಾಗುತ್ತದೆ.

English summary
Department of college and technical education cancelled applied science and science lab subjects form the diploma syllabus. Lecturer who teaching these subjects now panic of jobs loss.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X