ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮಿತ್ ಶಾಗೆ ಬಿಎಸ್ವೈ ಜೊತೆ ಈಶ್ವರಪ್ಪ ಮನೆಯಲ್ಲಿ ಡಿನ್ನರ್: ಮತ್ತೆ ಸಂಧಾನ?

|
Google Oneindia Kannada News

Recommended Video

ಬಿ ಎಸ್ ಯಡಿಯೂರಪ್ಪನವರಿಗೆ ಕೆ ಎಸ್ ಈಶ್ವರಪ್ಪ ಮನೆಯಲ್ಲಿ ಅಮಿತ್ ಶಾ ಡಿನ್ನರ್ ಪಾರ್ಟಿ | Oneindia Kannada

ಬೂತ್ ಮಟ್ಟದಲ್ಲಿ ಶ್ರಮವಹಿಸಿದರೆನೇ ಪಕ್ಷಕ್ಕೆ ಬಲಬರುವುದು ಎನ್ನುವ ಪಾಲಿಸಿಯನ್ನೇ ನಂಬಿಕೊಂಡು ಬಂದಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಎರಡು ದಿನಗಳ ಕರ್ನಾಟಕ ಪ್ರವಾಸದ ವೇಳಾಪಟ್ಟಿಯಲ್ಲಿ ಗಮನಿಸಿಸಬೇಕಾಗಿರುವುದು ಸೋಮವಾರ (ಮಾ 26) ಅವರಿಗೆ ರಾತ್ರಿ ಭೋಜನ ಆಯೋಜನೆಯಾಗಿರುವ ಸ್ಥಳ.

ಪಕ್ಷದ ಹಿರಿಯ ಮುಖಂಡ ಕೆ ಎಸ್ ಈಶ್ವರಪ್ಪನವರ ಮನೆಯಲ್ಲಿ ಅಮಿತ್ ಶಾ ಅವರಿಗೆ ಡಿನ್ನರ್ ಆಯೋಜಿಸಲಾಗಿದೆ. ಈಶ್ವರಪ್ಪನವರ ಮನೆಯಲ್ಲಿ ಡಿನ್ನರ್ ವೇಳೆ ನೀವು ಇರಲೇ ಬೇಕು ಎನ್ನುವ ಸೂಚನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ಶಾ ನೀಡಿದ್ದಾರೆ ಎನ್ನುವ ಮಾಹಿತಿಯಿದೆ.

ಮಾ.26, 27ರಂದು ಅಮಿತ್ ಶಾ ರಾಜ್ಯ ಪ್ರವಾಸಮಾ.26, 27ರಂದು ಅಮಿತ್ ಶಾ ರಾಜ್ಯ ಪ್ರವಾಸ

ಎಷ್ಟು ಬಾರಿ ಮಧ್ಯಸ್ಥಿಕೆ ವಹಿಸಿದರೂ, ಈಶ್ವರಪ್ಪ - ಯಡಿಯೂರಪ್ಪ ನಡುವಿನ ವೈಮನಸ್ಸು ಕಮ್ಮಿಯಾಗುತ್ತಿಲ್ಲ ಎನ್ನುವುದು ಅಮಿತ್ ಶಾ ಅವರಿಗೆ ಗೊತ್ತಿಲ್ಲದ ವಿಚಾರವೇನೂ ಅಲ್ಲ. ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹಿನ್ನಲೆಯಲ್ಲಿ ಕೊನೆಯ ಪ್ರಯತ್ನವಾಗಿಯೇ ಈ ಡಿನ್ನರ್ ಪಾರ್ಟಿ ಎಂದು ಹೇಳಲಾಗುತ್ತಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಭಿನ್ನಮತಕ್ಕೆ ಹಲವು ವರ್ಷಗಳ ಇತಿಹಾಸವಿದೆ. ರಾಜ್ಯದ ಇಬ್ಬರು ಈ ಪ್ರಭಾವಿ ಮುಖಂಡರ ನಡುವಿನ ಭಿನ್ನಮತ ಪಾರ್ಟಿಯ ಇಮೇಜಿಗೆ ಹಲವು ಬಾರಿ ಧಕ್ಕೆ ತಂದಿತ್ತು. ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿನ ಪಕ್ಷದ ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲಿ ಈ ಇಬ್ಬರು ನಾಯಕರ ನಡುವಿನ ಗೊಂದಲ ಇನ್ನಷ್ಟು ಹೆಚ್ಚಾಗಿದೆ ಎನ್ನಲಾಗುತ್ತಿದೆ.

ಮುಖ್ಯಮಂತ್ರಿ ಹುದ್ದೆಗೇರಲು ಈಶ್ವರಪ್ಪ ಸೂಪರ್ ಮಾಸ್ಟರ್ ಪ್ಲಾನ್ಮುಖ್ಯಮಂತ್ರಿ ಹುದ್ದೆಗೇರಲು ಈಶ್ವರಪ್ಪ ಸೂಪರ್ ಮಾಸ್ಟರ್ ಪ್ಲಾನ್

ಪಕ್ಷದ ಚುನಾವಣಾ ಸಮಾವೇಶದಲ್ಲಿ ಕೆಲವೊಂದು ಕಡೆ ಯಡಿಯೂರಪ್ಪ ಮುಂದಿನ ಚುನಾವಣೆಯಲ್ಲಿ ಪಕ್ಷದ ಅಭ್ಯಥಿಗಳ ಹೆಸರನ್ನು ಘೋಷಿಸಿದ್ದರು. ಇದಕ್ಕೆ ಬಹಿರಂಗವಾಗಿಯೇ ಈಶ್ವರಪ್ಪ ಅಕ್ಷೇಪ ವ್ಯಕ್ತ ಪಡಿಸಿದ್ದರು. ಅಭ್ಯರ್ಥಿ ಯಾರೆಂದು ಇನ್ನೂ ಅಂತಿಮವಾಗಿಲ್ಲ ಎಂದು ವರಿಷ್ಠರು ಹೇಳಿದ ಮೇಲೂ, ಬಿಎಸ್ವೈ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸುತ್ತಿರುವುದು ಸರಿಯಲ್ಲ ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತ ಪಡಿಸಿದ್ದರು. ಮುಂದೆ ಓದಿ..

ಪಕ್ಷದ ವರಿಷ್ಠರು ತೇಪೆ ಹಚ್ಚುವ ಕೆಲಸವನ್ನಷ್ಟೇ ಮಾಡುತ್ತಿದ್ದಾರೆ

ಪಕ್ಷದ ವರಿಷ್ಠರು ತೇಪೆ ಹಚ್ಚುವ ಕೆಲಸವನ್ನಷ್ಟೇ ಮಾಡುತ್ತಿದ್ದಾರೆ

ಬಿಎಸ್ವೈ-ಈಶ್ವರಪ್ಪ ನಡುವಿನ ಭಿನ್ನಮತ ಶಮನಕ್ಕೆ ಪಕ್ಷದ ವರಿಷ್ಠರು ತೇಪೆ ಹಚ್ಚುವ ಕೆಲಸವನ್ನಷ್ಟೇ ಮಾಡುತ್ತಿದ್ದಾರೆ, ಶಾಸ್ವತ ಪರಿಹಾರ ಸೂತ್ರದೊಂದಿಗೆ ಮಾತುಕತೆಗೆ ಮುಂದಾಗುತ್ತಿಲ್ಲ ಎನ್ನುವ ಮಾತೂ ಪಕ್ಷದೊಳಗಿಂದ ಕೇಳಿ ಬರುತ್ತಿದೆ. ಹೀಗಾಗಿ, ಚುನಾವಣೆಗೆ ಮುನ್ನ ಇಬ್ಬರು ನಾಯಕರನ್ನು 'ಡಿನ್ನರ್ ಪಾರ್ಟಿ' ಹೆಸರಿನಲ್ಲಿ ಒಂದೆಡೆ ಸೇರಿಸಿ, ಸಂಧಾನಕ್ಕೆ ಅಮಿತ್ ಶಾ ಮುಂದಾಗಿದ್ದಾರೆ ಎನ್ನುವ ಸುದ್ದಿಯಿದೆ.

ಶಾ ಎರಡು ದಿನದ ರಾಜ್ಯ ಪ್ರವಾಸ ಮಾರ್ಚ್ 26ರಂದು ಆರಂಭ

ಶಾ ಎರಡು ದಿನದ ರಾಜ್ಯ ಪ್ರವಾಸ ಮಾರ್ಚ್ 26ರಂದು ಆರಂಭ

ಕರುನಾಡ ಜಾಗೃತಿ ಯಾತ್ರೆ' ಹೆಸರಿನಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಎರಡು ದಿನದ ರಾಜ್ಯ ಪ್ರವಾಸ ಮಾರ್ಚ್ 26ರಂದು ಆರಂಭವಾಗಲಿದೆ. ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗೆ ಅವರು ಭೇಟಿ ನೀಡಲಿದ್ದಾರೆ. ಪ್ರವಾಸದ ವೇಳೆ ಲೆಕ್ಕವಿಲ್ಲದಷ್ಟು ಪೀಠಾಧಿಪತಿಗಳನ್ನು ಅಮಿತ್ ಶಾ ಜಾತ್ಯಾತೀತವಾಗಿ ಭೇಟಿಯಾಗಿ ಆಶೀರ್ವಾದ ಪಡೆದುಕೊಳ್ಳಲಿದ್ದಾರೆ.

ಮಾರ್ಚ್ 26ರಂದು ರಾತ್ರಿ 8.30ಕ್ಕೆ ಬೆಕ್ಕಿನ ಕಲ್ಮಠಕ್ಕೆ ಭೇಟಿ

ಮಾರ್ಚ್ 26ರಂದು ರಾತ್ರಿ 8.30ಕ್ಕೆ ಬೆಕ್ಕಿನ ಕಲ್ಮಠಕ್ಕೆ ಭೇಟಿ

ಮಾರ್ಚ್ 26ರಂದು ರಾತ್ರಿ 8.30ಕ್ಕೆ ಬೆಕ್ಕಿನ ಕಲ್ಮಠಕ್ಕೆ ಭೇಟಿ ನೀಡಿದ ನಂತರ ಈಶ್ವರಪ್ಪನವರ ನಿವಾಸದಲ್ಲಿ ಅಮಿತ್ ಶಾ ಭೋಜನ ಸವಿಯಲಿದ್ದಾರೆ. ಆ ವೇಳೆ ಜಿಲ್ಲಾ ಪದಾಧಿಕಾರಿಗಳ ಸಭೆಯನ್ನು ಅಮಿತ್ ಶಾ ನಡೆಸಲಿದ್ದಾರೆ. ಯಡಿಯೂರಪ್ಪ ಈ ವೇಳೆಯಲ್ಲಿ ಹಾಜರಿರಬೇಕು ಎನ್ನುವ ಸೂಚನೆಯನ್ನು ಶಾ ನೀಡಿದ್ದಾರೆ ಎನ್ನಲಾಗುತ್ತಿದೆ. ಪದಾಧಿಕಾರಿಗಳ ಜೊತೆ ಮಾತುಕತೆಯ ನಂತರ, ಇಬ್ಬರು ನಾಯಕರ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸಲಿದ್ದಾರೆ ಎನ್ನುವ ಮಾಹಿತಿಯಿದೆ.

ಪದಾಧಿಕಾರಿಗಳ ಸಭೆಯಲ್ಲಿ ಗೌಪ್ಯವಾಗಿ ಶಾ ಮಾಹಿತಿ ಪಡೆದುಕೊಳ್ಳುವ ಸಾಧ್ಯತೆ

ಪದಾಧಿಕಾರಿಗಳ ಸಭೆಯಲ್ಲಿ ಗೌಪ್ಯವಾಗಿ ಶಾ ಮಾಹಿತಿ ಪಡೆದುಕೊಳ್ಳುವ ಸಾಧ್ಯತೆ

ಈ ಇಬ್ಬರು ನಾಯಕರ ನಡುವಿನ ಮನಸ್ತಾಪಕ್ಕೆ ಕಾರಣವೇನು ಎನ್ನುವ ಮಾಹಿತಿಯನ್ನು ಪದಾಧಿಕಾರಿಗಳ ಸಭೆಯಲ್ಲೂ ಗೌಪ್ಯವಾಗಿ ಅಮಿತ್ ಶಾ ಪಡೆದುಕೊಳ್ಳುವ ಸಾಧ್ಯತೆಯಿದೆ. ಚುನಾವಣೆಯ ವೇಳೆ ಇಬ್ಬರು ನಾಯಕರ ಮುನಿಸು ಪಕ್ಷದ ಗೆಲುವಿನ ಸಾಧ್ಯತೆಗೆ ಅಡ್ಡಿಯಾಗಬಹುದು ಎನ್ನುವುದನ್ನು ಅರಿತಿರುವ ಅಮಿತ್ ಶಾ, ಈ ಬಾರಿ ಪರ್ಮನೆಂಟ್ ಸೊಲ್ಯೂಷನ್ ಹುಡುಕುವ ಸಾಧ್ಯತೆಯಿದೆ.

ಪಕ್ಷ, ಕಾರ್ಯಕರ್ತರ ವಲಯದಲ್ಲಿ ಸಾಕಷ್ಟು ಮಹತ್ವ ಪಡೆದುಕೊಂಡ ಡಿನ್ನರ್ ಪಾರ್ಟಿ

ಪಕ್ಷ, ಕಾರ್ಯಕರ್ತರ ವಲಯದಲ್ಲಿ ಸಾಕಷ್ಟು ಮಹತ್ವ ಪಡೆದುಕೊಂಡ ಡಿನ್ನರ್ ಪಾರ್ಟಿ

ಇಬ್ಬರು ನಾಯಕರ ಭಿನ್ನಮತದಿಂದ ರಾಜ್ಯ ಬಿಜೆಪಿ ಘಟಕಕ್ಕೆ ಅಮಿತ್ ಶಾ ಅವರ ಈಶ್ವರಪ್ಪ ಮನೆಯಲ್ಲಿನ ಡಿನ್ನರ್ ಪಾರ್ಟಿ ಪಕ್ಷ ಮತ್ತು ಕಾರ್ಯಕರ್ತರ ವಲಯದಲ್ಲಿ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ. ಶಿವಮೊಗ್ಗದಲ್ಲಿನ ಪಕ್ಷದ ಅಭ್ಯರ್ಥಿಗಳ ಆಯ್ಕೆ, ಆಯಕಟ್ಟಿನ ಪಕ್ಷದ ನಿರ್ಣಯದ ವಿಚಾರದಲ್ಲಿ ಅಮಿತ್ ಶಾ, ಈಶ್ವರಪ್ಪ ಮತ್ತು ಯಡಿಯೂರಪ್ಪನವರ ಮನವೊಲಿಸುವ/ಎಚ್ಚರಿಕೆ ನೀಡುವ ಸಾಧ್ಯತೆಯಿದೆ.

English summary
Dinner party organized for BJP National President Amit Shah at Senior BJP Leader KS Eshwarappa residence in Shivamogga during his 2days Karnataka visit on March 26. Due to difference between Yeddyurappa and Eshwarappa, Amit Shah dinner party at Eshwarappa residence
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X