ಇಷ್ಟು ಎಲೆಗೆ ಅಷ್ಟು ಹಣ ಯಾಕೆ? ಮನೆಯಲ್ಲೇ ಕೊತ್ತಂಬರಿ ಸೊಪ್ಪು ಬೆಳೆಸುವ ಸುಲಭ ವಿಧಾನ!

ಅಡುಗೆ ಮಾಡುವಾಗ ಕೊನೆಯ ಹಂತದಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿದರೆ ಸಾಕು, ಆಹಾರದ ರುಚಿ ಮತ್ತು ಪರಿಮಳ ಎರಡೂ ಹೆಚ್ಚಾಗುತ್ತವೆ. ಅದಕ್ಕಾಗಿಯೇ ಭಾರತೀಯ ಅಡುಗೆಮನೆಯಲ್ಲಿ ಕೊತ್ತಂಬರಿ ಸೊಪ್ಪಿಗೆ ವಿಶೇಷ ಸ್ಥಾನವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೊತ್ತಂಬರಿ ಸೊಪ್ಪಿನ ಬೆಲೆ ಹೆಚ್ಚಾಗಿದ್ದರಿಂದ ಅನೇಕರು ಕಡಿಮೆ ಪ್ರಮಾಣದಲ್ಲೇ ಖರೀದಿಸುತ್ತಿದ್ದಾರೆ. ಕೆಲವೊಮ್ಮೆ ಖರೀದಿಸಿದ ಸೊಪ್ಪು ಸರಿಯಾಗಿ ಬಳಸುವ ಮೊದಲೇ ಒಣಗಿ ಹೋಗುವುದು ಅಥವಾ ಹಾಳಾಗುವುದು ಕೂಡ ಸಾಮಾನ್ಯವಾಗಿದೆ.

ಇಂತಹ ಸಮಸ್ಯೆಗಳಿಗೆ ಸರಳ ಪರಿಹಾರ ಎಂದರೆ ಮನೆಯಲ್ಲೇ ಕೊತ್ತಂಬರಿ ಸೊಪ್ಪು ಬೆಳೆಸುವುದು. ಬಾಲ್ಕನಿ, ಟೆರೇಸ್ ಅಥವಾ ಕಿಟಕಿಯ ಪಕ್ಕದಲ್ಲಿ ಇರುವ ಸಣ್ಣ ಪಾಟ್‌ನಲ್ಲಿಯೇ ಸುಲಭವಾಗಿ ಕೊತ್ತಂಬರಿ ಬೆಳೆಸಬಹುದು. ಸರಿಯಾದ ವಿಧಾನ ಅನುಸರಿಸಿದರೆ ಕೆಲವೇ ವಾರಗಳಲ್ಲಿ ತಾಜಾ ಸೊಪ್ಪನ್ನು ಅಡುಗೆಗೆ ಬಳಸಬಹುದು.

Coriander Leaves Farming at Home

ಕೊತ್ತಂಬರಿ ಬೆಳೆಯಲು ಸೂಕ್ತವಾದ ಸ್ಥಳ ಯಾವುದು?

ಕೊತ್ತಂಬರಿ ಸೊಪ್ಪಿಗೆ ಹೆಚ್ಚು ಬಿಸಿಲು ಬಿದ್ದರೆ ತಡೆಯುವುದಿಲ್ಲ. ದಿನಕ್ಕೆ 3 ರಿಂದ 5 ಗಂಟೆಗಳಷ್ಟು ಸೌಮ್ಯವಾದ ಸೂರ್ಯನ ಬೆಳಕು ಸಿಗುವ ಸ್ಥಳವನ್ನು ಆಯ್ಕೆ ಮಾಡುಬೇಕು. ಬೇಸಿಗೆಯಲ್ಲಿ ಮಧ್ಯಾಹ್ನದ ತೀವ್ರ ಬಿಸಿಲಿನಿಂದ ಗಿಡವನ್ನು ರಕ್ಷಿಸಬೇಕು. ಬಾಲ್ಕನಿ, ಕಿಟಕಿಯ ಹತ್ತಿರ ಅಥವಾ ಭಾಗಶಃ ನೆರಳು ಇರುವ ಜಾಗ ಕೊತ್ತಂಬರಿ ಬೆಳೆಯಲು ಸೂಕ್ತವಾಗಿದೆ.

ಮನೆಯೊಳಗೆ ಹಸಿರು ಲೋಕ ಸೃಷ್ಟಿಸಬೇಕೇ? ಈ 9 ಸುಲಭ ಸಲಹೆಗಳನ್ನು ಅನುಸರಿಸಿ
ಮನೆಯೊಳಗೆ ಹಸಿರು ಲೋಕ ಸೃಷ್ಟಿಸಬೇಕೇ? ಈ 9 ಸುಲಭ ಸಲಹೆಗಳನ್ನು ಅನುಸರಿಸಿ

ಯಾವ ಮಣ್ಣಿನಲ್ಲಿ ಬೆಳೆಸಬೇಕು?

ಕೊತ್ತಂಬರಿ ಉತ್ತಮವಾಗಿ ಬೆಳೆಯಲು ನೀರು ಸುಲಭವಾಗಿ ಹರಿದು ಹೋಗುವ, ಸಡಿಲವಾದ ಮತ್ತು ಸಾವಯವ ಗೊಬ್ಬರ ಹೊಂದಿರುವ ಮಣ್ಣು ಬೇಕಾಗುತ್ತದೆ.

ಮಣ್ಣಿನ ಮಿಶ್ರಣಕ್ಕಾಗಿ:

50% ತೋಟದ ಮಣ್ಣು
30% ವರ್ಮಿ ಕಂಪೋಸ್ಟ್ ಅಥವಾ ಸಾವಯವ ಗೊಬ್ಬರ
20% ಮರಳು ಅಥವಾ ಕೋಕೋಪೀಟ್

ಇವುಗಳನ್ನು ಸೇರಿಸಿ ಪಾಟ್‌ನಲ್ಲಿ ತುಂಬಿದರೆ ಗಿಡದ ಬೆಳವಣಿಗೆ ಉತ್ತಮವಾಗಿರುತ್ತದೆ.

Coriander Leaves Farming at Home

ಬೀಜಗಳನ್ನು ಸಿದ್ಧಪಡಿಸುವುದು ಹೇಗೆ?

ಕೊತ್ತಂಬರಿ ಬೀಜಗಳು ಸಾಮಾನ್ಯವಾಗಿ ಎರಡು ಭಾಗಗಳಾಗಿ ಜೋಡಿಯಾಗಿ ಇರುತ್ತವೆ. ಉತ್ತಮ ಮೊಳಕೆಗೆ ಬೀಜಗಳನ್ನು ಸ್ವಲ್ಪ ಒಡೆದು ಬಳಸುವುದು ಒಳ್ಳೆಯದು. ಬೀಜಗಳನ್ನು 12 ರಿಂದ 24 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಬಳಿಕ ನೆರಳಿನಲ್ಲಿ ಸ್ವಲ್ಪ ಒಣಗಿಸಿ. ನಂತರ ಮಣ್ಣಿನಲ್ಲಿ ಬಿತ್ತನೆ ಮಾಡಿದರೆ ಬೇಗನೆ ಮೊಳಕೆ ಬರುತ್ತದೆ.

ಪುದೀನಾ ಗಿಡ ಬೇಗ ಬೆಳೆಯಬೇಕಾ, ಈ ಸರಳ ಟಿಪ್ಸ್ ಫಾಲೋ ಮಾಡಿ
ಪುದೀನಾ ಗಿಡ ಬೇಗ ಬೆಳೆಯಬೇಕಾ, ಈ ಸರಳ ಟಿಪ್ಸ್ ಫಾಲೋ ಮಾಡಿ

ಬೀಜ ಬಿತ್ತನೆ ಮಾಡುವ ಸರಿಯಾದ ವಿಧಾನ

ಪಾಟ್ ಅಥವಾ ಟ್ರೇಯಲ್ಲಿ ಮಣ್ಣನ್ನು ತುಂಬಿದ ನಂತರ ಬೀಜಗಳನ್ನು ಸಮವಾಗಿ ಹಾಕಬೆಕು. ಸುಮಾರು 1 ರಿಂದ 2 ಸೆಂ.ಮೀ ಆಳದಲ್ಲಿ ಬೀಜಗಳನ್ನು ಬಿತ್ತಬೇಕು. ಮೇಲಿಂದ ತೆಳುವಾಗಿ ಮಣ್ಣನ್ನು ಮುಚ್ಚಬೇಕು. ಬಿತ್ತನೆಯ ನಂತರ ನಿಧಾನವಾಗಿ ನೀರು ಸಿಂಪಡಿಸಬೇಕು, ಸಾಮಾನ್ಯವಾಗಿ 7 ರಿಂದ 15 ದಿನಗಳಲ್ಲಿ ಮೊಳಕೆ ಕಾಣಿಸಿಕೊಳ್ಳುತ್ತದೆ.

ನೀರು ಹಾಕುವಾಗ ಗಮನಿಸಬೇಕಾದ ಅಂಶಗಳು

ಕೊತ್ತಂಬರಿ ಗಿಡಕ್ಕೆ ನಿಯಮಿತವಾಗಿ ನೀರು ಬೇಕಾಗುತ್ತದೆ. ಆದರೆ ಹೆಚ್ಚು ನೀರು ಹಾಕಿದರೆ ಬೇರು ಕೊಳೆಯುವ ಸಾಧ್ಯತೆ ಇರುತ್ತದೆ.

ಕೊತ್ತಂಬರಿ ಸೊಪ್ಪಿನ ಕಟಾವು ಯಾವಾಗ ಮತ್ತು ಹೇಗೆ ಮಾಡಬೇಕು?

ಕಟಾವಿನ ಸಮಯ: ಬಿತ್ತನೆಯಾದ 30 ರಿಂದ 45 ದಿನಗಳ ಬಳಿಕ ಕೊತ್ತಂಬರಿ ಸೊಪ್ಪು ಕಟಾವಿಗೆ ಸಿದ್ಧವಾಗುತ್ತದೆ.
ಬೆಳವಣಿಗೆಯ ಹಂತ: ಗಿಡವು 10-15 ಸೆಂ.ಮೀ ಎತ್ತರ ಬೆಳೆದಾಗ ಎಲೆಗಳನ್ನು ಕತ್ತರಿಸಲು ಸೂಕ್ತ ಸಮಯ.
ಕಟಾವು ಮಾಡುವ ವಿಧಾನ: ಸಂಪೂರ್ಣ ಗಿಡವನ್ನು ಬೇರು ಸಮೇತ ಕೀಳುವ ಬದಲು, ಮೇಲಿನ ಎಲೆಗಳನ್ನು ಮಾತ್ರ ಕತ್ತರಿಸಬೇಕು. ಇದರಿಂದ ಅದೇ ಗಿಡದಲ್ಲಿ ಮತ್ತೆ ಹೊಸ ಎಲೆಗಳು ಚಿಗುರಿ ಬೆಳೆಯುತ್ತವೆ.
ಉತ್ತಮ ಪರಿಮಳಕ್ಕಾಗಿ: ಗಿಡದಲ್ಲಿ ಹೂವು ಬಿಡುವ ಮುನ್ನವೇ ಕಟಾವು ಮಾಡಬೇಕು. ಆಗ ಎಲೆಗಳ ರುಚಿ ಮತ್ತು ಪರಿಮಳ ಅತ್ಯಂತ ಉತ್ತಮವಾಗಿರುತ್ತದೆ.

ಮನೆಯಲ್ಲೇ ಕೊತ್ತಂಬರಿ ಬೆಳೆಯುವುದರಿಂದ ಸಿಗುವ ಲಾಭಗಳು

"ಮನೆಯ ಕೈತೋಟದಲ್ಲಿ ಬೆಳೆದ ಕೊತ್ತಂಬರಿ ಸೊಪ್ಪು ಆರೋಗ್ಯಕ್ಕೂ ಒಳ್ಳೆಯದು, ಮನಸ್ಸಿಗೂ ಸಂತೋಷ ನೀಡುತ್ತದೆ."

ತಾಜಾತನ: ಅಡುಗೆಗೆ ಯಾವಾಗ ಬೇಕಾದರೂ ತಕ್ಷಣವೇ ತಾಜಾ ಸೊಪ್ಪು ಲಭ್ಯವಾಗುತ್ತದೆ.
ಆರ್ಥಿಕ ಉಳಿತಾಯ: ದಿನನಿತ್ಯ ಮಾರುಕಟ್ಟೆಯಿಂದ ಖರೀದಿಸುವ ವೆಚ್ಚ ಕಡಿಮೆಯಾಗುತ್ತದೆ.
ಆರೋಗ್ಯಕರ: ಯಾವುದೇ ವಿಷಕಾರಿ ರಾಸಾಯನಿಕ ಹಾಗೂ ಕೀಟನಾಶಕಗಳಿಲ್ಲದ ಶುದ್ಧ, ಸಾವಯವ ಸೊಪ್ಪು ಸಿಗುತ್ತದೆ.
ಮನೆಯ ಸೌಂದರ್ಯ: ಬಾಲ್ಕನಿ ಅಥವಾ ಗಾರ್ಡನ್‌ನಲ್ಲಿ ಇದನ್ನು ಬೆಳೆಸುವುದರಿಂದ ಮನೆಯ ಸೌಂದರ್ಯ ಹೆಚ್ಚುತ್ತದೆ.
ಮಕ್ಕಳಿಗೆ ಪ್ರೇರಣೆ: ಮಕ್ಕಳಲ್ಲಿ ನೈಸರ್ಗಿಕವಾಗಿ ತೋಟಗಾರಿಕೆಯ ಬಗ್ಗೆ ಆಸಕ್ತಿ ಮತ್ತು ಹವ್ಯಾಸವನ್ನು ಬೆಳೆಸಬಹುದು.

ಕೊತ್ತಂಬರಿ ಸೊಪ್ಪನ್ನು ಮನೆಯಲ್ಲೇ ಬೆಳೆಯುವುದು ಅತ್ಯಂತ ಸುಲಭ ಮತ್ತು ಲಾಭದಾಯಕ. ಅಡುಗೆಯ ರುಚಿ ಹೆಚ್ಚಿಸುವ ಜೊತೆಗೆ ಇದು ಮನೆಯ ಹಸಿರನ್ನೂ ಹೆಚ್ಚಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+