ಅನರ್ಹ ಶಾಸಕರ ಅಕೌಂಟಿಗೆ ಬಿದ್ದ ದುಡ್ಡೆಷ್ಟು? ಸ್ಪೋಟಕ ಮಾಹಿತಿ ಬಹಿರಂಗ ಪಡಿಸಿದ ಕಾಂಗ್ರೆಸ್

ಹದಿನೈದು ಕ್ಷೇತ್ರಗಳ ಅಸೆಂಬ್ಲಿ ಉಪಚುನಾವಣೆಗೆ ವೇದಿಕೆ ಈಗಾಗಲೇ ಸಜ್ಜಾಗಿದ್ದು, ನಾಮಪತ್ರ ಸಲ್ಲಿಸಲು ಇಂದು (ನ 18) ಕೊನೆಯ ದಿನವಾಗಿದೆ. ಡಿಸೆಂಬರ್ ಐದರಂದು ಚುನಾವಣೆ ನಡೆಯಲಿದ್ದು, ಡಿ.9ರಂದು ಫಲಿತಾಂಶ ಹೊರಬೀಳಲಿದೆ.

ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಹಲವು ವಿರೋಧಗಳ ನಡುವೆಯೂ ತನ್ನದಾಗಿಸಿಕೊಂಡಿದ್ದ ಸಿದ್ದರಾಮಯ್ಯನವರಿಗೆ ಈ ಚುನಾವಣೆ ಮಹತ್ವದ್ದು. ಜೊತೆಗೆ, ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಅವರಿಗೂ ಕೂಡಾ.

ಇವೆಲ್ಲದರ ನಡುವೆ, ದಿನೇಶ್ ಗುಂಡೂರಾವ್ ಟ್ವೀಟ್ ಒಂದನ್ನು ಶೇರ್ ಮಾಡಿಕೊಂಡಿರುವುದು, ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸುವ ಸಾಧ್ಯತೆಯಿದೆ. ಇದು, ಕಾಂಗ್ರೆಸ್ ಅನರ್ಹ ಶಾಸಕರೊಬ್ಬರ ವಿಚಾರವಾಗಿರುವ ಟ್ವೀಟ್.

ಉಪಚುನಾವಣೆಯ ಹೊಸ್ತಿಲಲ್ಲಿ ಇದು ಯಾವ ರೀತಿ ಕಾಂಗ್ರೆಸ್ಸಿಗೆ ವರ್ಕೌಟ್ ಆಗಲಿದೆ, ಬಿಜೆಪಿಗೆ ಮುಳುವಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. ಒಟ್ಟು 48.32 ಕೋಟಿ ರೂಪಾಯಿ ಸಂದಾಯವಾಗಿದೆ ಎಂದು ಟ್ವೀಟ್ ನಲ್ಲಿ ಹೇಳಲಾಗಿದೆ.

ಆಗರ್ಭ ಶ್ರೀಮಂತ ಎಂಟಿಬಿ ನಾಗರಾಜ್ ಅವರಿಗೆ ಸಂದಾಯವಾಗಿರುವ ದುಡ್ಡು

ಆಗರ್ಭ ಶ್ರೀಮಂತ ಎಂಟಿಬಿ ನಾಗರಾಜ್ ಅವರಿಗೆ ಸಂದಾಯವಾಗಿರುವ ದುಡ್ಡು

ದಿನೇಶ್ ಗುಂಡೂರಾವ್, ಈ ಟ್ವೀಟ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. ಇದು ಇಂಡಿಯನ್ ಯೂಥ್ ಕಾಂಗ್ರೆಸ್ಸಿನ ರಾಷ್ಟ್ರೀಯ ಪ್ರಚಾರ ಸಮಿತಿಯ ಮುಖ್ಯಸ್ಥರು ಮಾಡಿದ್ದ ಟ್ವೀಟ್. ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ, ಆಗರ್ಭ ಶ್ರೀಮಂತ ಎಂಟಿಬಿ ನಾಗರಾಜ್ ಅವರಿಗೆ ಸಂದಾಯವಾಗಿರುವ ದುಡ್ಡಿನ ಬಗ್ಗೆ ವಿವರಿಸಲಾಗಿರುವ ಟ್ವೀಟ್.

ಇಂಡಿಯನ್ ಯೂಥ್ ಕಾಂಗ್ರೆಸ್ಸಿನ ರಾಷ್ಟ್ರೀಯ ಪ್ರಚಾರ ಸಮಿತಿ ಮುಖ್ಯಸ್ಥರ ಟ್ವೀಟ್

ಈ ಟ್ವೀಟ್ ನಲ್ಲಿ, "ಬಿಎಸ್ವೈ ಮುಖ್ಯಮಂತ್ರಿಯಾದ ಕೆಲವೇ ದಿನಗಳಲ್ಲಿ ಎಂಟಿಬಿ ನಾಗರಾಜ್ 48.32 ಕೋಟಿ ರೂಪಾಯಿ ಸಂದಾಯವಾಗಿರುತ್ತದೆ. ಆಗಸ್ಟ್ ಎರಡರಿಂದ ಎಂಟನೇ ತಾರೀಕಿನ ಅವಧಿಯಲ್ಲಿ ಈ ದುಡ್ಡು ಅವರ ಅಕೌಂಟಿಗೆ ಬಿದ್ದಿದೆ. ಪ್ರತೀ ಬಾರಿಯೂ ತೊಂಬತ್ತು ಲಕ್ಷ ರೂಪಾಯಿ ಡೆಪಾಸಿಟ್ ಆಗಿದೆ. ಎಲ್ಲಿಂದ ದುಡ್ಡು ಇವರಿಗೆ ಬಂದು. ಸಿಬಿಐ-ಐಟಿ-ಇಡಿ ವಿಚಾರಣೆ ಇಲ್ಲವೇ" ಎಂದು ರಾಷ್ಟ್ರೀಯ ಪ್ರಚಾರ ಸಮಿತಿಯ ಮುಖ್ಯಸ್ಥರು ಟ್ವೀಟ್ ಮಾಡಿದ್ದಾರೆ.

ಶೇರ್ ಮಾಡಿರುವ ದಿನೇಶ್ ಗುಂಡೂರಾವ್

ಶೇರ್ ಮಾಡಿರುವ ದಿನೇಶ್ ಗುಂಡೂರಾವ್

ಇದನ್ನು ಶೇರ್ ಮಾಡಿರುವ ದಿನೇಶ್ ಗುಂಡೂರಾವ್, "ಅಗಾಧ ಮೊತ್ತ, ಅನರ್ಹ ಶಾಸಕರೊಬ್ಬರ ಅಕೌಂಟಿಗೆ ಬಿದ್ದಿದೆ, ಇದು ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಆಗಿರುವುದು. ಅನರ್ಹ ಶಾಸಕರಿಗೆ ಬಿಜೆಪಿಯೊಡ್ಡಿರುವ ಆಮಿಷದ ಬಗ್ಗೆ ಹಲವು ವಿಡಿಯೋ/ಆಡಿಯೋ ಟೇಪ್ ಗಳನ್ನು ಬಹಿರಂಗಗೊಂಡಿದೆ. ಈ ಹಣದ ಮೂಲದ ಬಗ್ಗೆ ತನಿಖೆಯಾಗಬಾರದೇ? ಯಾಕೆ ಐಟಿ-ಇಡಿ ಮೌನವಾಗಿದೆ" ಎಂದು ದಿನೇಶ್ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ. ದುಡ್ಡಿನ ಮಾಹಿತಿ, ಮುಂದಿನ ಸ್ಲೈಡಿನಲ್ಲಿ

ಟ್ವೀಟ್ ಪ್ರಕಾರ ಹಣ ಸಂದಾಯವಾಗಿರುವುದು ಹೀಗೆ - 1

ಟ್ವೀಟ್ ಪ್ರಕಾರ ಹಣ ಸಂದಾಯವಾಗಿರುವುದು ಹೀಗೆ - 1

02.08.19 - 5 ಅಕೌಂಟಿಗೆ ಒಟ್ಟು - 4,63,86,583/-
02.08.19 - 5 ಅಕೌಂಟಿಗೆ ಒಟ್ಟು - 4,63,82,355/-
02.08.19 - 5 ಅಕೌಂಟಿಗೆ ಒಟ್ಟು - 4,63,73,900/-
04.08.19 - 7 ಅಕೌಂಟಿಗೆ ಒಟ್ಟು - 6,49,29,291/-
04.08.19 - 10 ಅಕೌಂಟಿಗೆ ಒಟ್ಟು - 9,34,27,980/-

ಟ್ವೀಟ್ ಪ್ರಕಾರ ಹಣ ಸಂದಾಯವಾಗಿರುವುದು ಹೀಗೆ - 2

ಟ್ವೀಟ್ ಪ್ರಕಾರ ಹಣ ಸಂದಾಯವಾಗಿರುವುದು ಹೀಗೆ - 2

04.08.19 - 2 ಅಕೌಂಟಿಗೆ ಒಟ್ಟು - 1,85,29,688/-
04.08.19 - 1 ಅಕೌಂಟಿಗೆ ಒಟ್ಟು - 83,47,292/-
04.08.19 - 1 ಅಕೌಂಟಿಗೆ ಒಟ್ಟು - 9.27,477/-
05.08.19 - 16 ಅಕೌಂಟಿಗೆ ಒಟ್ಟು - 14,85,99,312/-
07.08.19 - 1 ಅಕೌಂಟಿಗೆ ಒಟ್ಟು - 92,91,264/-
ಒಟ್ಟು: 48,31,95,142/-

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+