ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಜಿಟಲ್ ಇಂಡಿಯಾದಿಂದ ರಾಜ್ಯಕ್ಕಾಗುವ ಲಾಭಗಳೇನು?

|
Google Oneindia Kannada News

ಬೆಂಗಳೂರು, ಜು. 01: ಪ್ರಧಾನಿ ನರೇಂದ್ರ ಮೋದಿ ಕನಸಿನ ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಕರ್ನಾಟಕದಲ್ಲಿ ಡಿಜಿಟಲ್ ಇಂಡಿಯಾಕ್ಕೆ ಯಾವ ಬಗೆಯ ಅವಕಾಶಗಳಿವೆ? ಮತ್ತು ಡಿಜಿಟಲ್ ಇಂಡಿಯಾ ರಾಜ್ಯದ ಜನತೆಗೆ ಯಾವ ಪ್ರಮಾಣದ ಉದ್ಯೋಗ ಅವಕಾಶ ಕಲ್ಪಿಸಿಕೊಡಲಿದೆ? ಎಂಬುದರ ಮೇಲೆ ಒಂದು ಸಣ್ಣ ನೋಟ ಇಲ್ಲಿದೆ. ಸ್ವತಃ ಶಾಸಕ ಡಾ. ಅಶ್ವತ್ಥ ನಾರಾಯಣ ಈ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಈಗಾಗಲೇ ಸ್ಮಾರ್ಟ್ ಸಿಟಿ ಪರಿಕಲ್ಪನೆ ಜಾರಿಯಲ್ಲಿದ್ದು ಡಿಜಿಟಲ್ ಇಂಡಿಯಾ ಅಭಿಯಾನ ಅದಕ್ಕೆ ಯಾವ ರೀತಿ ಪೂರಕವಾಗಿ ನಿಲ್ಲಬಹುದು? ಎಂಬುದನ್ನು ಅವರು ವಿಶ್ಲೇಷಣೆ ಮಾಡಿದ್ದಾರೆ.[ಡಿಜಿಟಲ್ ಇಂಡಿಯಾ ಎಂದರೇನು]

bjp

ರಾಜ್ಯ ಸರ್ಕಾರ ರಾಜಕೀಯ ಕಾರಣಗಳನ್ನು ಬದಿಗಿಟ್ಟು ಇಂಥ ಕಾರ್ಯಕ್ರಮಗಳಿಗೆ ಸಹಕಾರ ನೀಡಬೇಕು, ನೀಡುತ್ತದೆ ಎಂದು ನಂಬಿದ್ದೇವೆ. ಕೇಂದ್ರ ಸರ್ಕಾರದ ಒತ್ತಮ ಯೋಜನೆ ಅಳವಡಿಸಿಕೊಂಡರೆ 2018 ರ ವೇಳೆಗೆ ರಾಜ್ಯದ ಎಲ್ಲ ಯುವಕರಿಗೆ ಉದ್ಯೋಗ ಲಭ್ಯವಾಗಲಿದೆ. ಅವರ ಮಾತಿನಲ್ಲೇ ಡಿಜಿಟಲ್ ಇಂಡಿಯಾ ಕರ್ನಾಟಕಕ್ಕೆ ಹೇಗೆ ನೆರವಾಗಲಿದೆ ಎಂಬುದನ್ನು ಮುಂದೆ ಕೇಳಿ...[ಕರ್ನಾಟಕದ 6 ನಗರಗಳು ಸ್ಮಾರ್ಟ್ ಸಿಟಿ]

ಕರ್ನಾಟಕದಲ್ಲಿ ಡಿಜಿಟಲ್ ಇಂಡಿಯಾಕ್ಕೆ ಇರುವ ಅವಕಾಶಗಳು
* ರಾಜ್ಯದ ಆರ್ಥಿಕ ಬದಲಾವಣೆ ಮತ್ತು ಬೆಳವಣಿಗೆಗೆ ಇದು ಮಾನದಂಡವಾಗಿ ನಿಲ್ಲುತ್ತದೆ.
* ಲಕ್ಷಾಂತರ ಯುವಕರಿಗೆ ಉದ್ಯೋಗದಾತನಾಗುತ್ತದೆ.
* ರಾಜ್ಯದಲ್ಲಿ 5 ಸಾವಿರ ಗ್ರಾಮ ಪಂಚಾಯಿತಿಗಳಿದ್ದು ಜನರ ಜೀವನ ಮಟ್ಟ ಸುಧಾರಣೆಗೆ ಡಿಜಿಟಲ್ ಇಂಡಿಯಾ ಕಾರಣವಾಗಬಲ್ಲದು
* ಬಡತನ ರೇಖೆಗಳಿಗಿಂತ ಕೆಳಗಿನವರು ತಮ್ಮ ಜೀವನ ಮಟ್ಟ ಸುಧಾರಣೆ ಮಾಡಿಕೊಳ್ಳಲು ನೇರವಾಗಿ ನೆರವಾಗುತ್ತದೆ.
* ಇದು ಕೇವಲ ನಗರಗಳಿಗೆ ಸೀಮಿತವಾದ ಯೋಜನೆಯಲ್ಲ. ಪ್ರತಿಯೊಂದು ಹಳ್ಳಿ ಗ್ರಾಮದದಲ್ಲಿ ಕಳೆದ 60 ವರ್ಷಗಳಲ್ಲಿ ಆಗದ ಬದಲಾವಣೆ ಸಾಧ್ಯವಿದೆ.
* ಅಂತ್ಯೋದಯ ಹೆಸರಿಗೆ ತಕ್ಕದಾದ ರೀತಿಯಲ್ಲಿ ಯೋಜನೆ ನಡೆದುಕೊಳ್ಳಲಿದ್ದು ಎಲ್ಲರ ಬೆಳವಣಿಗೆ ಧ್ಯೇಯ ಹೊಂದಿದೆ.
* ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಕಟ್ಟ ಕಡೆಯ ವ್ಯಕ್ತಿಗೂ ಸ್ವಂತ ಕಾಲ ಮೇಲೆ ನಿಲ್ಲುವ ಶಕ್ತಿ ಕಲ್ಪಿಸಿಕೊಡುತ್ತದೆ.
* ಬೆಂಗಳೂರು ಈಗಾಗಲೇ ಐಟಿ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದು ಉಳಿದ ನಗರಗಳು ಆ ದಾರಿಯಲ್ಲಿ ಸಾಗಲು ಡಿಜಿಟಲ್ ಇಂಡಿಯಾ ಕಾರಣವಾಗಲಿದೆ.

ಉದ್ಯೋಗ ಅವಕಾಶಗಳನ್ನು ಹೇಗೆ ಸೃಷ್ಟಿ ಮಾಡುತ್ತದೆ?
* ಗ್ರಾಮೀಣ ಭಾಗದಲ್ಲಿ ಮತ್ತು ಚಿಕ್ಕ ನಗರಗಳಲ್ಲಿ ಬಿಪಿಒ ಸೆಂಟರ್ ಗಳ ಸ್ಥಾಪನೆ
* ದ್ವೀತೀಯ ದರ್ಜೆಯ ನಗರಗಳಲ್ಲಿ ಮೇಕ್ ಇನ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾ ಜತೆಯಾಗಿ ಹೆಜ್ಜೆಹಾಕಲಿವೆ.
* ಹೊಸ ಸಂಶೋಧನೆ ಮತ್ತು ಪರಿಸರ ಕಾಳಜಿ ವಿಷಯಗಳಿಗೆ ವಿಶೇಷ ಒತ್ತು ನೀಡಲಿದೆ.
* ಅತ್ಯುತ್ತಮ ದರ್ಜೆ ಹೆದ್ದಾರಿಗಳ ನಿರ್ಮಾಣ.
* ಅಂತಾರಾಷ್ಟ್ರೀಯ ಮಟ್ಟದ ದೂರ ಸಂಪರ್ಕ.
* ಸಾರ್ವಜನಿಕ ಅಂತರ್ಜಾಲ ಸಂಪರ್ಕ ಸೇವೆ.
* ಎಲೆಕ್ಟ್ರಾನಿಕ್ ಉತ್ಪನ್ನ ತಯಾರಿಕೆಗೆ ವಿಶೇಷ ಒತ್ತು.

ಹೆಚ್ಚಿನ ಮಾಹಿತಿಗೆ ಮುಂದೆ ಓದಿ

English summary
The BJP led government at the centre under Modi’s stewardship has been working overtime behind the scenes to define the policy framework for its flagship schemes to come alive. The rapid pace at which announcements were made last week on both the Smart Cities contest and affordable housing for all are testimony to that. Malleshwaram MLA, BJP leader Dr C.N. Aswath Narayan, speaks about Narendra Modi's Digital India innovation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X