Government Employees: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಜನವರಿ 4ರಂದು ಸಾಂದರ್ಭಿಕ ರಜೆ ಮಂಜೂರು

ಬೆಂಗಳೂರು, ಜನವರಿ 01: ಹೊಸ ವರ್ಷದ ಆರಂಭದಲ್ಲೇ ರಾಜ್ಯ ಸರ್ಕಾರ ಮಹತ್ವದ ಆದೇಶವನ್ನ ಹೊರಡಿಸಿದೆ. ವಿಶ್ವ ಬ್ರೈಲ್ ದಿನಾಚರಣೆಯಂದು ದೃಷ್ಟಿದೋಷವುಳ್ಳ ವಿಕಲಚೇತನರ ಸರ್ಕಾರಿ ನೌಕರರಿಗೆ ದಿನಾಂಕ 04-01-2025ರಂದು ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಿ ಆದೇಶಿಸಿದೆ.

ಹೌದು, ಸಾಂದರ್ಭಿಕ ರಜೆ ಕುರಿತಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರು ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ ನಿರ್ದೇಶಕರು, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆರವರ ಪುಸ್ತಾವನೆಯಲ್ಲಿ ಪ್ರತಿ ವರ್ಷ ದಿವಂಗತ ಲೂಯಿ ಬೈಲ್ ರವರ ಜನ್ಮ ದಿನದ ಅಂಗವಾಗಿ ಜನವರಿ 04ರಂದು ನಡೆಯುವ ವಿಶ್ವ ಬ್ರೆಲ್ ದಿನಾಚರಣೆಯಲ್ಲಿ ಪಾಲ್ಗೊಳ್ಳುವ ದೃಷ್ಟಿದೋಷವುಳ್ಳ ವಿಕಲಚೇತನ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ ಸೌಲಭ್ಯವನ್ನು ಒದಗಿಸುವಂತೆ ಪ್ರಧಾನ ಕಾರ್ಯದರ್ಶಿಗಳು, ನ್ಯಾಷನಲ್ ಫೆಡರೇಷನ್ ಆಫ್ ದಿ ಬ್ರೌಂಡ್, ಬೆಂಗಳೂರು ಇವರು ಕೋರಿದ್ದರು.

Differently Abled Government Employees In The State casual leave on january 4

ಅದರಂತೆ ದಿನಾಂಕ: 04.01.2025 ರಂದು ದಿವಂಗತ ಲೂಯಿ ಬೈಲ್ ಅವರ ಜನ್ಮ ದಿನದ ಅಂಗವಾಗಿ ನಡೆಯುವ ವಿಶ್ವ ಬೈಲ್ ದಿನಾಚರಣೆಯಲ್ಲಿ ಪಾಲ್ಗೊಳ್ಳುವ ಅಂಧ ಸರ್ಕಾರಿ ನೌಕರರಿಗೆ ಒಂದು ದಿನ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಿ ಆದೇಶ ಹೊರಡಿಸುವಂತೆ ಕೋರಿರುತ್ತಾರೆ.

ಈ ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ದಿನಾಂಕ: 04.01.2025 ರಂದು ದಿವಂಗತ ಲೂಯಿ ಬೈಲ್ ರವರ ಜನ್ಮ ದಿನದ ಅಂಗವಾಗಿ ಆಚರಿಸಲಾಗುವ ವಿಶ್ವ ಬ್ರೆಲ್ ದಿನದ ಆಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ದೃಷ್ಟಿ ದೋಷವುಳ್ಳ ವಿಕಲಚೇತನ ಸರ್ಕಾರಿ ನೌಕರರಿಗೆ ಮಾತ್ರ ಅನ್ವಯಿಸಿ, ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸುವ ನೌಕರರು ಹಾಜರಾತಿ ಪ್ರಮಾಣ ಪತ್ರವನ್ನು ಒದಗಿಸುವ ಹಾಗೂ ಈ ವಿಶೇಷ ಸಾಂದರ್ಭಿಕ ರಜೆ ದಿನಕ್ಕೆ ಸರ್ಕಾರದಿಂದ ಯಾವುದೇ ದಿನ ಭತ್ಯೆ ಅಥವಾ ಪ್ರಯಾಣ ಭತ್ಯೆಯ ಕ್ರೈಮ್‌ನ್ನು ಪರಿಗಣಿಸಲಾಗುವುದಿಲ್ಲವೆಂಬ ಷರತ್ತುಗಳಿಗೊಳಪಟ್ಟು, ದಿನಾಂಕ:04.01.2025 ರಂದು ಒಂದು ದಿನ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಿ ಆದೇಶಿಸಿದ್ದಾರೆ.

67 IAS-IPS ಅಧಿಕಾರಿಗಳಿಗೆ ಬಡ್ತಿ ನೀಡಿದ ರಾಜ್ಯ ಸರ್ಕಾರ

ಹೊಸ ವರ್ಷಕ್ಕೆ ರಾಜ್ಯ ಸರ್ಕಾರ 62 ಐಪಿಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ಮಹತ್ವದ ಆದೇಶ ಹೊರಡಿಸಿದೆ. 2025 ರ ಜನವರಿ 1 ರಿಂದಲೇ ಅನ್ವಯವಾಗುವಂತೆ 67 ಐಎಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದ 62 ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಈ ಮುಂಬಡ್ತಿ ಪಡೆದ ಅಧಿಕಾರಿಗಳ ಪೈಕಿ ನಾಲ್ವರ ಸ್ಥಾನಗಳ ಬದಲಾಗಿದ್ದು, ಇನ್ನುಳಿದವರಿಗೆ ವೇತನ ಶ್ರೇಣಿ ಉನ್ನತೀಕರಿಸಿ ಅದೇ ಹುದ್ದೆಯಲ್ಲಿ ಮುಂದುವರೆಸಲಾಗಿದೆ.

ಐಪಿಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ವರ್ಗಾವಣೆ

* ರಮಣ ಗುಪ್ತಾ: ಹೆಚ್ಚುವರಿ ಪೊಲೀಸ್ ಆಯುಕ್ತ, ಗುಪ್ತಚರ ವಿಭಾಗ
* ಚೇತನ್ ಸಿಂಗ್ ರಾಥೋಡ್: ಐಜಿಪಿ, ಈಶಾನ್ಯ ವಲಯ (ಬೆಳಗಾವಿ)
* ವಿಕಾಸ್ ಕುಮಾರ್: ಹೆಚ್ಚುವರಿ ಪೊಲೀಸ್ ಆಯುಕ್ತ, ಬೆಂಗಳೂರು ಪಶ್ಚಿಮ
* ಅಮಿತ್ ಸಿಂಗ್: ಐಜಿಪಿ, ಪಶ್ಚಿಮ ವಲಯ(ಮಂಗಳೂರು)
* ವಂಶಿಕೃಷ್ಣ: ಡಿಐಜಿ, ಪೊಲೀಸ್ ನೇಮಕಾತಿ ವಿಭಾಗ, ಬೆಂಗಳೂರು
* ಕಾರ್ತಿಕ್ ರೆಡ್ಡಿ: ರಾಮನಗರ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮುಂದುವರಿಕೆ
* ಕುಲದೀಪ್ ಕುಮಾರ್ ಜೈನ್: ಡಿಐಜಿ, ಆಡಳಿತ ವಿಭಾಗದ ಜಂಟಿ ಪೊಲೀಸ್ ಆಯುಕ್ತ
* ಸಂತೋಷ್ ಬಾಬು: ಡಿಐಜಿಯಾಗಿ ಬಡ್ತಿ, ಗುಪ್ತಚರ ಇಲಾಖೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+