ದೀಪಾಲಂಕಾರಕ್ಕೆ ಮೈಯೊಡ್ಡಿ ನಿಂತ ಧರ್ಮದ ನೆಲೆ

ಕಾರ್ತಿಕ ಮಾಸದಲ್ಲಿ ಶಿವನನ್ನು ವಿಶೇಷ ರೀತಿಯಲ್ಲಿ ಪೂಜಿಸಲಾಗುತ್ತದೆ. ರಾಹುಕಾಲದಲ್ಲಿ ಶಿವನನ್ನು ಪೂಜಿಸಿದರೆ, ವಿಶೇಷವಾದ ಪುಣ್ಯ ಬರುವುದು ಎಂಬ ನಂಬಿಕೆಯಿದೆ. ಜತೆಗೆ ಎಲ್ಲೆಡೆ ಲಕ್ಷದೀಪೋತ್ಸವ, ತೆಪ್ಪೋತ್ಸವಗಳು ಸಂಭ್ರಮದಿಂದ ನಡೆಯುತ್ತದೆ.

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಪುಣ್ಯ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ ಪುನಸ್ಕಾರದ ಜತೆಗೆ ಸರ್ವಧರ್ಮ ಸಮ್ಮೇಳನ, ವಿಜ್ಞಾನ ಮತ್ತು ತಂತ್ರಜ್ಞಾನ ವಸ್ತು ಪ್ರದರ್ಶನ, ಲಕ್ಷದೀಪೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಮುಖ ಆಕರ್ಷಣೆಯಾಗಿದೆ.ಲಕ್ಷದೀಪೋತ್ಸವ ಸಂದರ್ಭದಲ್ಲಿ ನಡೆದ ಕಾರ್ಯಕ್ರಮಗಳ ಸಚಿತ್ರ ವರದಿ ನಿತ್ಯ ನಿಮ್ಮ ಪರದೆಯಲ್ಲಿ ಮೂಡಿಸುವ ಪ್ರಯತ್ನ ನಮ್ಮದಾಗಿದೆ-ಒನ್ ಇಂಡಿಯಾ ಕನ್ನಡ

ದೀಪೋತ್ಸವ ಹೆಸರೇ ಹೇಳುವಂತೆ ಇದು ದೀಪಗಳ ಅಲಂಕಾರಗಳಿಂದ ಶೋಭಿಸುವ ಜಾತ್ರೆ. ಬಣ್ಣ ಬಣ್ಣದ ದೀಪಗಳ ಝಗಮಗಿಸುವ ಬೆಳಕು ಜನರ ಮನಸ್ಸನ್ನು ಸೂರೆಗೊಳಿಸುತ್ತದೆ. ದೀಪಗಳಿಗಿರುವ ಮೆರುಗೆ ಅತಂಹದ್ದು. ಇಂತಹ ಬೆಳಕಿನ ಲೋಕ ಕಂಡು ಬಂದದ್ದು ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವದಲ್ಲಿ. [ಗ್ಯಾಲರಿ: ಲಕ್ಷದೀಪೋತ್ಸವದ ಸಂಭ್ರಮ ಆರಂಭ]

ಲಕ್ಷದೀಪೋತ್ಸವದಂದು ಧರ್ಮಸ್ಥಳದ ಮಂಜುನಾಥ ದೇವಳ ಲಕ್ಷಾಂತರ ವಿದ್ಯುತ್ ದೀಪಗಳ ಅಲಂಕಾರದಿಂದ ಝಗಮಗಿಸುತ್ತದೆ. ದೇವಳದ ಕಮಾನು, ಬೀದಿಗಳು ಮತ್ತು ಇತರ ಕಟ್ಟಡಗಳ ಮೇಲೆ ವರ್ಣರಂಜಿತ ದೀಪಗಳ ಅಲಂಕಾರ ಮಾಡಲಾಗಿದೆ. ಎಲ್ಲೆಲ್ಲೂ ಕಂಡು ಬರುವ ದೀಪಗಳ ಮೆರುಗು ಭಕ್ತರ ಮನಸ್ಸನ್ನು ಮತ್ತಷ್ಟುಸೆಳೆಯುತ್ತಿದೆ. ಇಂತಾ ಅದ್ಬುತ ಬೆಳಕಿನ ಲೋಕಕ್ಕೆ ಸಾಕ್ಷಿಯಾಗಿದೆ ಧರ್ಮಸ್ಥಳ. ಫೋಟೋ: ಮುರಳಿಕೃಷ್ಣ ಕೃಷ್ಣ

ಅನೇಕಾನೇಕ ತರಹದ ವಿದ್ಯುತ್ ದೀಪಗಳು

ಅನೇಕಾನೇಕ ತರಹದ ವಿದ್ಯುತ್ ದೀಪಗಳು

ಗೂಡು ದೀಪ, ಮಿಣುಕು ದೀಪ, ಹೀಗೆ ಅನೇಕಾನೇಕ ತರಹದ ವಿದ್ಯುತ್ ದೀಪಗಳು ಚಿತ್ತಾಕರ್ಷಕವಾಗಿದೆ. ಶ್ರೀ ಕ್ಷೇತ್ರದ ಲಕ್ಷದೀಪೋತ್ಸವ ವೈಭವಗಳ ನಡುವೆ ನುಸುಳಿ ಹೋಗುವುದೇ ಒಂದು ರೀತಿಯ ಮೋಜು. ಆ ವರ್ಣರಂಜಿತ ಲೋಕದಲ್ಲಿ ಸಂಚಾರಿಸಿತ್ತಿದ್ದಾರೆ ಮತ್ತೆ ವಾಪಾಸಾಗಲು ಮನಸ್ಸು ನೀರಾಕರಿಸುತ್ತದೆ.

ಸಂಪೂರ್ಣ ಬೆಳಕಿನಿಂದ ಕಣ್ಮನ ಸೆಳೆಯುತ್ತಿದೆ

ಸಂಪೂರ್ಣ ಬೆಳಕಿನಿಂದ ಕಣ್ಮನ ಸೆಳೆಯುತ್ತಿದೆ

ಲಕ್ಷದೀಪೋತ್ಸವದಂದ್ದು ಶ್ರೀ ಕ್ಷೇತ್ರ ಬೆಳಕಿನ ಹೊಸದೊಂದು ಲೋಕವನ್ನು ಸೃಷ್ಟಿಸುತ್ತದೆ. ಮಂಜುನಾಥನ ಸನ್ನಿಧಿ ಸಂಪೂರ್ಣ ಬೆಳಕಿನಿಂದ ಕಣ್ಮನ ಸೆಳೆಯುತ್ತಿದೆ. ಇಲ್ಲಿ ದೀಪಗಳಿಗೆ ವಿಶೇಷವಾದ ಮಹತ್ವವನ್ನ ನೀಡಲಾಗಿದೆ.

ಮದುವನಗಿತ್ತಿಯಂತೆ ಬೀದಿಗಳು ಶೃಂಗಾರ

ಮದುವನಗಿತ್ತಿಯಂತೆ ಬೀದಿಗಳು ಶೃಂಗಾರ

ಮದುವನಗಿತ್ತಿಯಂತೆ ಬೀದಿಗಳು ಶೃಂಗಾರಗೊಂಡು ಉತ್ಸವಕ್ಕೊಂದು ಹೊಸ ಹುರುಪು ನೀಡುತ್ತಿದೆ. ಶ್ರೀ ಕ್ಷೇತ್ರಕ್ಕೆ ಬರೋ ಭಕ್ತಾದಿಗಳನ್ನ ಮನಸೆಳೆಯುವಲ್ಲಿ ದೀಪಗಳು ಅತೀ ಮುಖ್ಯ ವಹಿಸುತ್ತದೆ ಎಂದರೆ ತಪ್ಪಾಗಲಾರದು.

ಧರ್ಮಸ್ಥಳಕ್ಕೆ ಹರಿದು ಬಂದ ಭಕ್ತಸಾಗರ

ಧರ್ಮಸ್ಥಳಕ್ಕೆ ಹರಿದು ಬಂದ ಭಕ್ತಸಾಗರ

ಕರ್ನಾಟಕದ ಪ್ರಸಿದ್ಧ ಪುಣ್ಯ ಕ್ಷೇತ್ರ ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವವು ನವೆಂಬರ್ 18 ರಿಂದ ನ 23 ರವರೆಗೆ ನಡೆಯಲಿದೆ. ಇದರ ಅಂಗವಾಗಿ ಉಜಿರೆಯಿಂದ ಧರ್ಮಸ್ಥಳದವರೆಗೆ ಶ್ರೀ ಮಂಜುನಾಥ ಸ್ವಾಮಿಯ ಭಕ್ತರ ಪಾದಯಾತ್ರೆಯೊಂದಿಗೆ ಆರಂಭಗೊಂಡಿದೆ.

ಕೆರೆಕಟ್ಟೆ ಉತ್ಸವದ ಝಲಕ್

ಕೆರೆಕಟ್ಟೆ ಉತ್ಸವದ ಝಲಕ್

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಗೆ ಲಕ್ಷದೀಪೋತ್ಸವ ಪ್ರಾರಂಭವಾಗಿದ್ದು. ನ. 19ರಂದು ಕೆರೆಕಟ್ಟೆ ಉತ್ಸವ ನಡೆಯಿತು.

ಮಂಗಳೂರು ತಂಡದಿಂದ ಯಕ್ಷಗಾನ

ಮಂಗಳೂರು ತಂಡದಿಂದ ಯಕ್ಷಗಾನ

ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ವಸ್ತುಪ್ರದರ್ಶನ ಮಂಟಪದಲ್ಲಿ ಶ್ಯಾಂ ಜಾದೂಗಾರ್‌ ಪುತ್ತೂರು ಇವರಿಂದ ಜಾದೂ, ಮಂಗಳೂರು ಕದ್ರಿಯ ಬಾಲ ಯಕ್ಷಕೂಟ ತಂಡದಿಂದ ಯಕ್ಷಗಾನ ಪ್ರದರ್ಶನವಿತ್ತು.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+