Dharmasthala case: ಧರ್ಮಸ್ಥಳ ಪ್ರಕರಣ: ಕೇರಳದ ಚಾನೆಲ್‌ಗಳಿಗೆ ಥ್ಯಾಂಕ್ಸ್ ಎಂದಿದ್ಯಾಕೆ ಕನ್ನಡಿಗರು!
Dharmasthala case: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಶವಗಳನ್ನು ಹೂಳಲಾಗಿದೆ ಎನ್ನುವ ಪ್ರಕರಣವು ಭಾರೀ ಚರ್ಚೆಗೆ ಕಾರಣವಾಗಿದೆ. ಕರ್ನಾಟಕದಲ್ಲಿ ಈ ಪ್ರಕರಣ ನಡೆದಿದ್ದರೂ ಕರ್ನಾಟಕಕ್ಕಿಂತ ಈ ವಿಚಾರವು ನೆರೆಯ ಕೇರಳದಲ್ಲಿ ಭಾರೀ ಚರ್ಚೆ ನಡೆದಿದೆ. ಅಚ್ಚರಿಯತ ವಿಚಾರ ಎಂದರೆ ಕನ್ನಡಿಗರು ಕೇರಳದ ನ್ಯೂಸ್ ಚಾನೆಲ್‌ಗಳಿಗೆ ಥ್ಯಾಂಕ್ಸ್ ಹೇಳುತ್ತಿದ್ದಾರೆ. ಇಷ್ಟರ ಮಟ್ಟಿಗೆ ಕೇರಳದ ನ್ಯೂಸ್ ಚಾನೆಲ್‌ಗಳು ಈ ವಿಚಾರವನ್ನು ಬೆನ್ನು ಬಿಡದೆ ಕವರ್ ಮಾಡಿವೆ. ಕನ್ನಡ ಕೆಲವೇ ಕೆಲವು ಚಾನೆಲ್‌ಗಳು ಪ್ರಾರಂಭದ ಹಂತದಲ್ಲಿ ಈ ವಿಷಯವನ್ನು ಪ್ರಸಾರ ಮಾಡುವಾಗ ಕೇರಳದ ಚಾನೆಲ್‌ಗಳು ಈ ವಿಚಾರದ ಬಗ್ಗೆ ಗಂಭೀರ ಚರ್ಚೆ ಹಾಗೂ ಡಿಬೆಟ್‌ಗಳನ್ನು ನಡೆಸಿವೆ. ಕೇರಳ ಹಾಗೂ ರಾಷ್ಟ್ರೀಯ ಮಾಧ್ಯಮಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಮೇಲೆ ಇದು ಕಾಂಗ್ರೆಸ್‌ಗೆ ಹಾಗೂ ರಾಹುಲ್ ಗಾಂಧಿ ಅವರಿಗೂ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ನೆರೆಯ ಕೇರಳದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ಇದೆ. ಈ ಚುನಾವಣೆಯ ಪೂರ್ವಭಾವಿ ಪ್ರಚಾರವಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೇರಳಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲೇ ಚರ್ಚೆ ಕಾವು ಪಡೆದುಕೊಂಡಿದೆ. ಎಲ್ಲಾ ರಾಜ್ಯಗಳಲ್ಲಿ ನಡೆದಿರುವ ವಿಚಾರಗಳ ಬಗ್ಗೆ ರಾಹುಲ್ ಗಾಂಧಿ ಅವರು ಮಾತನಾಡುತ್ತಿದ್ದಾರೆ. ಆದರೆ, ಅವರದ್ದೇ ಸರ್ಕಾರ ಆಡಳಿತದಲ್ಲಿ ಇರುವ ಕರ್ನಾಟಕದಲ್ಲಿ ಈ ರೀತಿಯ ಗಂಭೀರವಾದ ಆರೋಪಗಳು ಕೇಳಿ ಬಂದರೂ ರಾಹುಲ್ ಗಾಂಧಿ ಅವರು ಮಾತನಾಡಿಲ್ಲ ಎಂದು ತೀಕ್ಷ್ಣವಾಗಿ ಪ್ರಶ್ನೆ ಮಾಡಿದ್ದವು. ರಾಷ್ಟ್ರೀಯ ಮಾಧ್ಯಮಗಳು ಕನ್ನಡದ ಚಾನೆಲ್‌ಗಳಿಗಿಂತಲೂ ವೇಗವಾಗಿ ಈ ವಿಷಯವನ್ನು ಪ್ರಸಾರ ಮಾಡಲು ಪ್ರಾರಂಭಿಸಿತು.

ಅಲ್ಲದೇ ಕೇರಳದ ಕೆಲವು ಯುವತಿಯರು ಸಹ ಈ ಹಿಂದೆ ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾರೆ ಎನ್ನುವ ವಿಚಾರವೂ ಸಹ ಕೇರಳದ ಚಾನೆಲ್‌ಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವುದಕ್ಕೆ ಕಾರಣ. ಇಲ್ಲಿ ನೂರಾರು ಜನ ಯುವತಿಯರನ್ನು ಹೂಳಲಾಗಿದೆ. ಅವರ ಮಾನಭಂಗ ಮಾಡಲಾಗಿದೆ ಎನ್ನುವ ವಿಚಾರದ ಬಗ್ಗೆ ಪದೇ ಪದೇ ಚರ್ಚೆಯಾಗುತ್ತಿದೆ. ಅಲ್ಲದೇ ಆರೋಪಿಯೇ ಬಂದು ಸಾಕ್ಷಿ ಹೇಳುವುದಕ್ಕೆ ಮುಂದಾದರೂ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವ ಆರೋಪ ಕೇಳಿ ಬಂದಿತ್ತು.
ಇನ್ನು ಈ ವಿಚಾರವಾಗಿ ಕರ್ನಾಟಕ ಮಹಿಳಾ ಆಯೋಗ ಈ ಬಗ್ಗೆ ಸರ್ಕಾರಕ್ಕೆ ಎಸ್‌ಐಟಿ ರಚನೆ ಮಾಡುವಂತೆ ಮನವಿ ಮಾಡಿದರೂ ಸರ್ಕಾರ ಯಾವುದೇ ಗಂಭೀರವಾದ ಕ್ರಮ ಅಥವಾ ಗಂಭೀರವಾಗಿ ಪರಿಗಣಿಸಿರಲಿಲ್ಲ. ಯಾವಾಗ ರಾಷ್ಟ್ರೀಯ ಮಾಧ್ಯಮಗಳು ಹಾಗೂ ಕೇರಳ ಮಾಧ್ಯಮಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದವೂ ಆಗ ಕಾಂಗ್ರೆಸ್ ಹೈಕಮಾಂಡ್‌ಗೆ ಒತ್ತಡ ಶುರುವಾಯ್ತು.












Click it and Unblock the Notifications