BREAKING: ಡಿಜಿಪಿ ಡಾ ರಾಮಚಂದ್ರ ರಾವ್ ವಜಾ ಸಾಧ್ಯತೆ, ತನಿಖೆಗೆ ಶಿಫಾರಸು: ಗೃಹ ಸಚಿವ ಪರಮೇಶ್ವರ
ಬೆಂಗಳೂರು: ಸರ್ಕಾರಿ ಕಚೇರಿಯಲ್ಲಿ ಕರ್ತವ್ಯದಲ್ಲಿರುವಾಗಲೇ ಸರಸವಾಡಿದ್ದ ಡಿಜಿಪಿ ರಾಮಚಂದ್ರ ರಾವ್ ಅವರ ವಿರುದ್ಧ ರಾಜ್ಯ ಸರ್ಕಾರ ಮಂಗಳವಾರ ಅಮಾನತು ಮಾಡಿ ಆದೇಶಿಸಿದೆ. ಇದರ ಬೆನ್ನಲ್ಲೆ ಮತ್ತೊಂದು ಕ್ರಮದ ಸುಳಿವು ನೀಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು, ಅಮಾನತು ಬಳಿಕ ತನಿಖೆ ನಡೆಯಲಿದೆ. ಅದರ ಆಧಾರದಲ್ಲಿ ಅವರನ್ನು ವಜಾಗೊಳಿಸಲೂಬಹುದು ಎಂದು ಸಚಿವರು ರಾವ್ ಅವರ ವಜಾ ಬಗ್ಗೆ ಮಂಗಳವಾರ ಸುಳಿವು ನೀಡಿದರು.
ಮಂಗಳವಾರ ತಮ್ಮ ನಿವಾಸದ ಬಳಿ ಸುದ್ದಿಗಾರರ ಜೊತೆಗೆ ಮಾತನಾಡಿದ ಸಚಿವರು, ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ವಿಡಿಯೋ ಪ್ರಕರಣ ಹೊರ ಬರುತ್ತಿದ್ದಂತೆ ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿದ್ದೇವೆ. ಹಿರಿಯ ಅಧಿಕಾರಿ ಎಂದು ಯಾವುದನ್ನು ನೋಡದೇ, ಕಾನೂನಿನ ಪ್ರಕಾರ ಅಮಾನತು ಕ್ರಮ ಕೈಗೊಂಡಿದ್ದೇವೆ. ಮುಂದೆ ವಿಡಿಯೋ ಪ್ರಕರಣ, ಆರೋಪ ಸುಳ್ಳು ಎಂದ ಅವರ ಹೇಳಿಕೆ ಪ್ರಕಾರವು ತನಿಖೆ ನಡೆಯಲಿದೆ ಎಂದು ತಿಳಿಸಿದರು.

ಎಲ್ಲ ಆಯಾಮಗಳಲ್ಲೂ ತನಿಖೆ: ಪರಂ
ಪ್ರಕರಣ ಬೆಳಕಿಗೆ ಬಂದ ಬಳಿಕ ಅಧಿಕಾರಿಗಳ ಜೊತೆಗೆ ಸಿಎಂ ಜೊತೆ ಮಾತನಾಡಿ ಕ್ರಮ ಕೈಗೊಳ್ಳಲು ನಿರ್ಧರಿಸಿದೆವು. ಮುಖ್ಯಮಂತ್ರಿ ಸೂಚನೆ ಮೇರೆಗೆ ಅಮಾನತು ಮಾಡಲಾಗಿದೆ. ಬಳಿಕ ವಿಡಿಯೋ ವೈರಲ್ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿದರು. ರಾವ್ ಅವರು ತಮ್ಮ ಮೇಲಿನ ಆರೋಪ ಸುಳ್ಳು ಅಂತೆಲ್ಲ ಮಾತನಾಡಿದ್ದಾರೆ. ಆ ಬಗ್ಗೆಯು ತನಿಖೆ ನಡೆಯಲಿದೆ. ಆದರೆ ಮೇಲ್ನೋಟಕ್ಕೆ ಈ ವಿಡಿಯೋದಲ್ಲಿ ತಪ್ಪು ನಡೆದಿರುವುದು ಗೊತ್ತಾಗಿದೆ. ಈ ಕಾರಣಕ್ಕೆ ಅಮಾನತು ಮಾಡಿ, ತನಿಖೆಗೆ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು.
ತನಿಖೆ ಬಳಿಕ ವಜಾ, ಸಂತ್ರಸ್ತರ ಬಗ್ಗೆ ಹೇಳಿದ್ದೇನು?
ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ನಡೆಯಲಿದೆ. ಅದರಲ್ಲಿ ಸಿಗುವ ಮಾಹಿತಿ ಆಧಾರದಲ್ಲಿ ಮುಂದಿನ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಇಂತಹ ಸನ್ನಿವೇಶದಲ್ಲಿ ಸರ್ಕಾರ ಸೂಕ್ತ ಮತ್ತು ತ್ವರಿತ ಅಮಾನತು ಕ್ರಮ ಕೈಗೊಂಡಿದೆ. ಮುಂದೆ ತನಿಖೆ ನಡೆದ ಮೇಲೆ ಅವರು ವಜಾ ಸಹ ಆಗುವ ಸಾಧ್ಯತೆ ಇದೆ ಎಂದರು. ಡಿಜಿಪಿ ರಾಮಚಂದ್ರ ರಾವ್ ಭೇಟಿಗೆ ಬಂದಾಗ ನಾನು ನಿದ್ದೆ ಮಾಡುತ್ತಿದ್ದೆ. ಸಂತ್ರಸ್ತರು ಯಾರೆಂಬುದು? ತಿಳಿಯಬೇಕಿದೆ ಎಂದು ವಿಡಿಯೋದಲ್ಲಿನ ಮಹಿಳೆಯರ ಕುರಿತು, ದೂರು ದಾಖಲಾಗಿವೆಯಾ? ಎಂಬ ಕೆಲವು ಪ್ರಶ್ನೆಗಳಿಗೆ ಅವರು ಹೀಗೆ ಉತ್ತರಿಸಿದರು.
ರಾಮಚಂದ್ರ ರಾವ್ ಅವರ ರಾಸಲೀಲೆ ವಿಡಿಯೋ ಪ್ರಕರಣವು ಕರ್ನಾಟಕ ಪೊಲೀಸ್ ಇಲಾಖೆಗೆ ಮುಜುಗರ ತಂದಿದ್ದನ್ನು ಸಚಿವರು ಒಪ್ಪಿಕೊಂಡರು. ಪೊಲೀಸ್ ಇಲಾಖೆ ಮಾತ್ರವಲ್ಲ ಯಾವುದೇ ಇಲಾಖೆಯಲ್ಲೂ ಈ ರೀತಿ ಆಗುವುದು ಸರಿಯಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತ್ರವಲ್ಲದೇ ನಾನು ಸಹ ಈ ಪ್ರಕರಣದಿಂದ ಬೇಸರಗೊಂಡಿದ್ದೇನೆ. ಅದರಲ್ಲೂ ನಮ್ ಇಲ್ಲಾಖೆಯಲ್ಲಿ ಇಂಥಹ ಘಟನೆ ನಡೆದಿದ್ದು ಬೇಸರ ತರಿಸಿದೆ ಎಂದರು.
-
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ? -
ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್ -
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
ಬೆಂಗಳೂರಿನಲ್ಲಿ ಇಂದು ಶ್ರೀ ಎಂ ಅವರ "ಉಪನಿಷತ್ತುಗಳು ಮತ್ತು ಜೆ.ಕೃಷ್ಣಮೂರ್ತಿ" ಹೊಸ ಕೃತಿ ಬಿಡುಗಡೆ -
ವಾಂಖೆಡೆಯಲ್ಲಿ ಆರ್ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ವರದಿ ಹೀಗಿದೆ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Duet Songs: ಆಶಾ ಭೋಸ್ಲೆ-ಲತಾ ಮಂಗೇಶ್ಕರ್ ಸಹೋದರಿಯರ ಕಂಠಸಿರಿಯಲ್ಲಿ ಅರಳಿದ ಮಾಧುರ್ಯ: ಒಟ್ಟಿಗೆ ಹಾಡಿದ ಹಿಟ್ ಹಾಡುಗಳಿವು -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
ಎಪಿಎಂಸಿಯಲ್ಲಿ ಮೂಟೆಗಳು ಮೈಮೇಲೆ ಬಿದ್ದರೂ ಪವಾಡಸದೃಶ್ಯದಂತೆ ಬದುಕಿದ ಮಹಿಳೆ Video Viral -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ











Click it and Unblock the Notifications