ಈ ಸರ್ಕಾರದ ಆಡಳಿತದಲ್ಲಿ ಪ್ರತಿಭಟನೆ, ಮುಷ್ಕರ, ಬಂದ್‌ಗಳೆಲ್ಲ ಸಾಮಾನ್ಯವಾಗಿವೆ

ಬೆಂಗಳೂರು, ಸೆಪ್ಟೆಂಬರ್‌ 26: ಕಾಂಗ್ರೆಸ್ ಸರ್ಕಾರದ ಈ ನಾಲ್ಕು ತಿಂಗಳ ಆಡಳಿತದಲ್ಲಿ ಎಲ್ಲೆಂದರಲ್ಲಿ ಪ್ರತಿಭಟನೆ, ಮುಷ್ಕರ, ಬಂದ್‌ಗಳೆಲ್ಲವೂ ಅತ್ಯಂತ ಸಾಮಾನ್ಯವಾಗಿಬಿಟ್ಟಿವೆ ಎಂದು ರಾಜ್ಯ ಬಿಜೆಪಿ ಘಟಕ ಕಿಡಿಕಾರಿದೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ರಾಜ್ಯದ ಕಾಂಗ್ರೆಸ್ ಸರ್ಕಾರವು ತಮ್ಮ ನಾಲ್ಕು ತಿಂಗಳ ಆಡಳಿತದಲ್ಲಿ ನಾಲ್ಕೂ ಜನೋಪಯೋಗಿ ಕೆಲಸಗಳನ್ನು ಮಾಡಿಲ್ಲ. ಆದರೆ ಜನತೆಗೆ ನಾನಾ ರೀತಿಯ ಉಪದ್ರವವನ್ನು ಕೊಡಲು ಮಾತ್ರ ಸದಾ "ಸಿದ್ದ"ಎಂಬ ತನ್ನ ಧೋರಣೆಯನ್ನು ಪಾಲಿಸಿಕೊಂಡು, ಪೋಷಿಸಿಕೊಂಡು ಬರುತ್ತಿದೆ.

development-of-the-state

ಕೈ" ಸರ್ಕಾರದ ಆಡಳಿತದಲ್ಲಿ ಪ್ರತಿ ನಿತ್ಯ ರಾಜ್ಯದ ವಿವಿಧ ಭಾಗಗಳಲ್ಲಿ ಹೋರಾಟ, ಮುಷ್ಕರ, ಪ್ರತಿಭಟನೆಗಳ ಜೊತೆಗೆ ಬಂದ್‌ಗಳು ನಿರಂತರವಾಗಿ ನಡೆಯುತ್ತಿರುವುದು, ಸರ್ಕಾರದ ಆಡಳಿತದ ವೈಫಲ್ಯಕ್ಕೆ ಹಾಗೂ ಜನತೆಯಲ್ಲಿ ಸರ್ಕಾರದ ವಿರುದ್ಧ ಮಡುಗಟ್ಟಿರುವ ಆಡಳಿತ ವಿರೋಧಿ ಅಲೆಗೆ ಹಿಡಿದ ಕೈಗನ್ನಡಿ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಸ್ವಯಂಘೋಷಿತ ಆರ್ಥಿಕ ತಜ್ಞರ ದಂಡನ್ನೇ ಹೊಂದಿರುವ ಕೈ ಪಕ್ಷ, ಪೂರ್ವಾಪರ ಯೋಚಿಸದೆ, ಆರ್ಥಿಕ ಕೋಷ್ಟಕಗಳನ್ನು ಗಮನಿಸದೆ, ಚುನಾವಣೆಯನ್ನು ಗೆಲ್ಲಬೇಕು ಎಂಬ ಏಕೈಕ ಉದ್ದೇಶದಿಂದ ಘೋಷಿಸಿದ್ದ ಅವಾಸ್ತವಿಕ ಗ್ಯಾರಂಟಿಗಳ ಅಪ್ರಬುದ್ಧ ಅನುಷ್ಠಾನಕ್ಕಾಗಿ, ಅವೈಜ್ಞಾನಿಕವಾಗಿ ದರಗಳೆಲ್ಲವನ್ನು ಏರಿಸಿತು. ಅದರಲ್ಲಿಯೂ ವಿದ್ಯುತ್ ದರದಲ್ಲಿನ ಹೆಚ್ಚಳದ ನೇರ ಪರಿಣಾಮ ಬೀರಿದ್ದು ರಾಜ್ಯದ ಕೈಗಾರಿಕೋದ್ಯಮಿಗಳ ಮೇಲೆ.

ಕೈಗಾರಿಕೋದ್ಯಮಿಗಳು ತಮಗಾಗಿರುವ ಅನ್ಯಾಯವನ್ನು ಸರಿಪಡಿಸಿ ಎಂದು ಪರಿಪರಿಯಾಗಿ ವಿನಂತಿಸಿಕೊಂಡರೂ, ಸರ್ಕಾರ ಮಾತ್ರ ಸಂಪೂರ್ಣ ಕಿವುಡನಂತೆ ವರ್ತಿಸಿತ್ತು. ಬೇಸತ್ತ ಕೈಗಾರಿಕೋದ್ಯಮಿಗಳು ಜೂನ್ 22 ರಂದು ರಾಜ್ಯ ವ್ಯಾಪಿ ಕೈಗಾರಿಕೆಗಳನ್ನು ಬಂದ್ ಮಾಡಿ ಪ್ರತಿಭಟಿಸಿದರೂ, ಸರ್ಕಾರ ಕ್ಯಾರೆ ಅನ್ನಲಿಲ್ಲ. ಬದಲಿಗೆ ತನ್ನ ಡೋಂಟ್ ಕೇರ್ ಪ್ರವೃತ್ತಿಯನ್ನು ಮುಂದುವರೆಸಿದ ಪರಿಣಾಮ, ರಾಜ್ಯದ ಜಿಡಿಪಿಯ ಭಾಗವಾಗಿದ್ದ ಕೈಗಾರಿಕೆಗಳು ಪಕ್ಕದ ರಾಜ್ಯಗಳಿಗೆ ವಲಸೆ ಹೋಗುತ್ತಿವೆ.

ಅವೈಜ್ಞಾನಿಕ ಗ್ಯಾರಂಟಿಗಳ ಅಪ್ರಬುದ್ಧ ಅನುಷ್ಠಾನದಿಂದ ಹೊಡೆತ ತಿಂದ ಮತ್ತೊಂದು ವಲಯವೆಂದರೆ ಅದು ಖಾಸಗಿ ಸಾರಿಗೆ ವಲಯ. ಸಾಧಕ-ಬಾಧಕಗಳನ್ನು ಚರ್ಚಿಸದೆ, ಏಕಪಕ್ಷೀಯವಾಗಿ ಜಾರಿಗೆ ತಂದ ಶಕ್ತಿ ಯೋಜನೆಯಿಂದ ಖಾಸಗಿ ಬಸ್, ಕ್ಯಾಬ್, ಆಟೋ ಚಾಲಕರು ಜೀವನ ಸಾಗಿಸುವುದೇ ದುರ್ಗಮವಾಯಿತು.

ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದೆ ಖಾಸಗಿ ಸಾರಿಗೆ ವಲಯದ ಸಂಘಟನೆಗಳು ಮುಂದಿಟ್ಟರೂ, ಸರ್ಕಾರದಿಂದ ಬೆದರಿಕೆ ಬಂದಿತೇ ಹೊರತು, ಸ್ಪಂದನೆ ದೊರೆಯಲಿಲ್ಲ. ಸೆಪ್ಟೆಂಬರ್ 11 ರಂದು ಈ ಬಗ್ಗೆ ಖಾಸಗಿ ಸಾರಿಗೆ ವಲಯ ಬಂದ್ ಮಾಡಿ ಪ್ರತಿಭಟಿಸಿದರೂ, ಅವರ ಕಿವಿ ಮೇಲೆ ಸರ್ಕಾರ ಹೂವಿಟ್ಟಿದೆ ಹೊರತು, ಅವರ ಸಮಸ್ಯೆಗಳಿಗೆ ಇದುವರೆಗೂ ಸ್ಪಂದಿಸಿಲ್ಲ.

ಸ್ಟಾಲಿನ್‌ರವರನ್ನು ಓಲೈಸಲು ನ್ಯಾಯಾಲಯ ಹೇಳುವುದಕ್ಕಿಂತ ಮುಂಚಿತವಾಗಿ ಕೆ.ಆರ್.ಎಸ್. ನಿಂದ ರಾಜ್ಯ ಸರ್ಕಾರ ಬೇಕಾಬಿಟ್ಟಿಯಾಗಿ ನೀರು ಬಿಟ್ಟಿದ್ದನ್ನು ವಿರೋಧಿಸಿ ಮಂಡ್ಯದ ಜನತೆ ಸೆಪ್ಟೆಂಬರ್ 23ರಂದು ಮಂಡ್ಯವನ್ನು ಬಂದ್ ಮಾಡಿ ಪ್ರತಿಭಟಿಸಿದರು.

ಮಂಡ್ಯ ಬಂದ್‌ಗೆ ಉತ್ತಮ ಸ್ಪಂದನೆ ದೊರೆಯಿತಾದರೂ, ಬಂದ್‌ನ ಉದ್ದೇಶಕ್ಕೆ ಮಾತ್ರ ಕೈ ಸರ್ಕಾರದಿಂದ ಸ್ಪಂದನೆ ದೊರೆತಿಲ್ಲ. ಕೆ.ಆರ್.ಎಸ್ ನ ನೀರು, ಸ್ಟಾಲಿನ್‌ರತ್ತ ನಿರಂತರವಾಗಿ ಹರಿಯುತ್ತಲೇ ಇದೆ. ಭದ್ರಾ ಜಲಾನಯನ ಪ್ರದೇಶದಲ್ಲಿ ಬೆಳೆಯುವ ಬೆಳೆಗಳಿಗೆ ಈ ಹಿಂದಿನ ಸರ್ಕಾರಗಳು ಪ್ರತಿ ವರ್ಷ 100 ದಿನ ನೀರು ಹರಿಸುತ್ತಿದ್ದವು. ಆದರೆ ಸರ್ಕಾರ ಕಾಂಗ್ರೆಸ್ ಸರ್ಕಾರ ಬಂದ ನಂತರ, ಕೇವಲ 30 ದಿನಗಳವರೆಗೆ ಮಾತ್ರ ನೀರು ಹರಿಸಿ "ಕೈ" ತೊಳೆದುಕೊಂಡಿದೆ.

ರೈತರು ತಮ್ಮ ಸಂಕಷ್ಟಗಳನ್ನು ಇಂಚಿಂಚಾಗಿ ವಿವರಿಸಿದರೂ ದಪ್ಪ ಚರ್ಮದ ಸರ್ಕಾರಕ್ಕೆ, ರೈತರ ನೋವು ಅರ್ಥವಾಗಲಿಲ್ಲ. ಕೊನೆಗೆ ಭದ್ರೆಯ ನೀರಿಗಾಗಿ ರೈತರು ಸೆಪ್ಟೆಂಬರ್ 25ರಂದು ದಾವಣಗೆರೆಯನ್ನು ಬಂದ್ ಮಾಡಿ ಪ್ರತಿಭಟಿಸಿದರೂ, ಸರ್ಕಾರ ಮಾತ್ರ ರೈತರ ಬೇಡಿಕೆಗಳಿಗೆ ಸ್ಪಂದಿಸದೆ, ತನ್ನ ಭಂಡಾಟವನ್ನು ಮುಂದುವರೆಸಿದೆ.

ಕಾವೇರಿ ವಿಚಾರದಲ್ಲಿ ಸರ್ಕಾರದ ಬೇಜವಾಬ್ದಾರಿ ನಡೆಯನ್ನು ಖಂಡಿಸಿ, ಇಂದು ಬೆಂಗಳೂರು ಬಂದ್ ನಡೆಯುತ್ತಿದೆ. ಜನತೆ ಸ್ವಯಂಪ್ರೇರಿತವಾಗಿ ಬಂದ್ ಮಾಡಿ, ಸರ್ಕಾರದ ರೈತ ವಿರೋಧಿ ಹಾಗೂ ನಾಡ ವಿರೋಧಿ ನೀತಿಯನ್ನು ಖಂಡಿಸಿದ್ದಾರೆ‌. ಆದರೆ ಸರ್ಕಾರ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ.

ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ರಾಜ್ಯದ ಅಭಿವೃದ್ಧಿ ಸಂಪೂರ್ಣ ಬಂದ್ ಆಗಿದೆ. ಆಡಳಿತ ಸಂಪೂರ್ಣ ಹಳಿ ತಪ್ಪಿದ್ದು, ಜನತೆಯ ಕನಸಿನ ಆಶಾಗೋಪುರವನ್ನು ಕಾಂಗ್ರೆಸ್‌ ತನ್ನ ಕೆಟ್ಟ ಆಡಳಿತದಿಂದ ಕೆಡವುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+