ಸಂದೇಶ ಸಮಾವೇಶದಲ್ಲಿ ಗುಡುಗಿದ ಗೌಡರು!
ಬೆಂಗಳೂರು, ಅಕ್ಟೋಬರ್ 16 : 'ಎರಡೂ ರಾಷ್ಟ್ರೀಯ ಪಕ್ಷಗಳಿಗೆ ನನ್ನ ಶಕ್ತಿ ಏನೆಂದು ತೋರಿಸುತ್ತೇನೆ. ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷ ಕೇವಲ 14 ಸ್ಥಾನಗಳನ್ನು ಗಳಿಸಿದ್ದರೂ ಬೆಂಬಲ ಕೇಳಿಕೊಂಡು ಮನೆ ಬಾಗಿಲಿಗೆ ಬಂದಿದ್ದರು' ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಹಿನ್ನಲೆಯಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ 'ಸಂದೇಶ ಸಮಾವೇಶ'ದಲ್ಲಿ ಮಾತನಾಡಿದ ದೇವೇಗೌಡರು, 'ರಾಷ್ಟ್ರೀಯ ಪಕ್ಷಗಳು ರಾಜ್ಯಕ್ಕೆ ಮಾಡಿದ್ದೇನು? ಎಂಬುದನ್ನು ಜನರೆದುರು ತೆರೆದಿಡುವ ಮತ್ತು ಆ ಪಕ್ಷಗಳಿಗೆ ಪಾಠ ಕಲಿಸುವ ಶಕ್ತಿ ನನಗಿದೆ' ಎಂದು ಗುಡುಗಿದರು. ['ಬಿಬಿಎಂಪಿಯಲ್ಲಿ ಮೈತ್ರಿ : ದೇವೇಗೌಡರಿಗೆ ಲಾಭ ಜಾಸ್ತಿ']
'ಬಿಬಿಎಂಪಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಕೇವಲ 14 ಸ್ಥಾನಗಳನ್ನು ಗಳಿಸಿದ್ದರೂ ರಾಷ್ಟ್ರೀಯ ಪಕ್ಷಗಳು ಬೆಂಬಲ ಕೇಳಿಕೊಂಡು ಮನಗೆ ಬಾಗಿಲಿಗೆ ಬಂದರು. ರಾಷ್ಟ್ರೀ ಪಕ್ಷಗಳಿಗೆ ನನ್ನ ಮತ್ತು ಪ್ರಾದೇಶಿಕ ಪಕ್ಷದ ಶಕ್ತಿ ಏನೆಂದು ತೋರಿಸುತ್ತೇನೆ' ಎಂದು ಗೌಡರು ತಿಳಿಸಿದರು. [ಅಸಮಾನ್ಯ ದೇವೇಗೌಡ್ರ 'ರಾಜಕೀಯ' ಕುಣಿಕೆಯಲ್ಲಿ ಬಿಜೆಪಿ, ಕಾಂಗ್ರೆಸ್]
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಬಸವರಾಜ ಹೊರಟ್ಟಿ, ಚೆಲುವರಾಯಸ್ವಾಮಿ, ಜಮೀರ್ ಅಹಮದ್ ಖಾನ್, ಮಧು ಬಂಗಾರಪ್ಪ ಮುಂತಾದ ನಾಯಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಸಮಾವೇಶದ ಚಿತ್ರಗಳನ್ನು ನೋಡಿ.....

'ಪಕ್ಷ ಸಂಘಟನೆ ಮಾಡುತ್ತೇವೆ'
ಸಮಾವೇಶದಲ್ಲಿ ಮಾತನಾಡಿದ ದೇವೇಗೌಡರು 'ನಮ್ಮ ಪಕ್ಷದ ಕಾರ್ಯಕ್ರಮಗಳಿಗೆ ಅಪಾರ ಜನ ಸೇರುತ್ತಾರೆ. ಆದರೆ, ಅವುಗಳು ಮತಗಳಾಗಿ ಪರಿವರ್ತನೆಯಾಗುವುದಿಲ್ಲ. ಕೆಲವು ಜಿಲ್ಲೆ, ತಾಲೂಕುಗಳಲ್ಲಿ ಜೆಡಿಎಸ್ ನಿಷ್ಕ್ರಿಯವಾಗಿದೆ. ಪಕ್ಷ ಉಳಿಸಲಿಕ್ಕಾಗಿ ಅವುಗಳನ್ನು ಸಕ್ರಿಯಗೊಳಿಸುತ್ತೇವೆ' ಎಂದು ಹೇಳಿದರು.

'ರಾಷ್ಟ್ರೀಯ ಪಕ್ಷಗಳಿಗೆ ಪಾಠ ಕಲಿಸುವೆ'
'ರಾಷ್ಟ್ರೀಯ ಪಕ್ಷಗಳು ರಾಜ್ಯಕ್ಕೆ ಮಾಡಿದ್ದೇನು? ಎಂಬುದನ್ನು ಜನರೆದುರು ತೆರೆದಿಡುವ, ಪಕ್ಷಗಳಿಗೆ ಪಾಠ ಕಲಿಸುವ ಶಕ್ತಿ ನನಗಿದೆ' ಎಂದು ದೇವೇಗೌಡರು ಹೇಳಿದರು.

'ಬೆಂಬಲ ಕೇಳಲು ಬಂದಿರಲಿಲ್ಲವೇ?'
'ಬಿಬಿಎಂಪಿ ಚುನಾವಣೆಯಲ್ಲಿ ಜೆಡಿಎಸ್ 14 ಸ್ಥಾನಗಳಲ್ಲಿ ಮಾತ್ರ ಜಯಗಳಿಸಿದರೂ ಎರಡು ರಾಷ್ಟ್ರೀಯ ಪಕ್ಷಗಳ ಮುಖಂಡರು ಬೆಂಬಲ ಕೋರಿ ಮನೆ ಬಾಗಿಲಿಗೆ ಬಂದಿದ್ದರು. ಇದು ಪ್ರಾದೇಶಿಕ ಪಕ್ಷಗಳ ಶಕ್ತಿ ಎಂದು' ದೇವೇಗೌಡರು ಹೇಳಿದರು.

'ಕಾರ್ಯಕರ್ತರಿಗೆ ಎಚ್ಚರಿಕೆ'
'ಪಕ್ಷದ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳಲ್ಲಿ ಸರಿಯಾಗಿ ಕೆಲಸ ಮಾಡದವರನ್ನು ಪದಚ್ಯುತಿಗೊಳಿಸುತ್ತೇನೆ. ಆ ಘಟಕಗಳನ್ನು ಈ ತಿಂಗಳಲ್ಲೇ ಪುನಃ ಸಂಘಟಿಸಲಾಗುವುದು. ಕೆಲಸ ಮಾಡದವರು ಎಷ್ಟೇ ದೊಡ್ಡವರಾದರೂ, ಯಾವ ಜಾತಿಗೇ ಸೇರಿದ್ದರೂ ಲೆಕ್ಕಿಸುವುದಿಲ್ಲ' ಎಂದು ಎಚ್ಚರಿಕೆ ನೀಡಿದರು.

'ಯಡಿಯೂರಪ್ಪ ಸಾಲ ಮನ್ನಾ ಮಾಡಲು ವಿರೋಧಿಸಿದ್ದರು'
ಸಮಾವೇಶದಲ್ಲಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ 'ರೈತರ ಸಾಲ ಮನ್ನಾ ಮಾಡುವ ಗುರಿ ಜೆಡಿಎಸ್ ಪಕ್ಷಕ್ಕಿದೆ. ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರೈತರ ಸಾಲ ಮನ್ನಾ ಮಾಡಲು ಮುಂದಾದಾಗ, ಅಂದಿನ ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರೋಧಿಸಿದ್ದರು' ಎಂದರು.











Click it and Unblock the Notifications