5 ಲಕ್ಷ ಲಂಚ ಕೇಳಿದ್ದ ದೇವನಹಳ್ಳಿ ತಹಶೀಲ್ದಾರ್ ಅಮಾನತು

ಬೆಂಗಳೂರು, ನವೆಂಬರ್ 21 : ದೇವನಹಳ್ಳಿ ತಹಶೀಲ್ದಾರ್ ನಾರಾಯಣಸ್ವಾಮಿಯನ್ನು ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಆರ್‌ಟಿಸಿ ವರ್ಗಾವಣೆ ಮಾಡಲು ಲಂಚ ಕೇಳಿದ್ದ ಶಹಶೀಲ್ದಾರ್ ವಿರುದ್ಧ ಎಸಿಬಿಯಲ್ಲಿ ದೂರು ದಾಖಲಾಗಿತ್ತು.

ನಾರಾಯಣಸ್ವಾಮಿ ಲಂಚ ಕೇಳಿದ್ದಾರೆ ಎಂದು ಉಮೇಶ್ ಎಂಬುವವರು ದೂರು ನೀಡಿದ್ದರು. ಸರ್ಕಾರ ಈ ಬಗ್ಗೆ ತನಿಖೆ ನಡೆಸುವಂತೆ ಎಸಿಬಿಗೆ ಸೂಚನೆ ನೀಡಿತ್ತು. ಎಫ್‌ಐಆರ್ ದಾಖಲು ಮಾಡಿದ್ದ ಎಸಿಬಿ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು.

Devanahalli tahsildar suspended

ಸರ್ಕಾರದ ಅಧೀನ ಕಾರ್ಯದರ್ಶಿ ಅವರು ಎಸಿಬಿ ವರದಿಯ ಅನ್ವಯ ತಹಶೀಲ್ದಾರ್ ನಾರಾಯಣಸ್ವಾಮಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.

ಏನಿದು ಪ್ರಕರಣ? : ದೇವನಹಳ್ಳಿ ತಾಲೂಕಿನ ರಾಮನಾಥಪುರ ಗ್ರಾಮದ ಸರ್ವೆ ನಂ 12ರ 4 ಎಕರೆ 10 ಗುಂಟೆ ಜಮೀನಿನಲ್ಲಿ ಉಮೇಶ್ ಎಂಬುವವರು 2 ಎಕರೆ ನಮ್ಮ ಪಿತ್ರಾರ್ಜಿತ ಆಸ್ತಿ ಎಂದು ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದರು.

ಅರ್ಜಿಯನ್ನು ಪರಿಗಣಿಸಿದ ಜಿಲ್ಲಾಧಿಕಾರಿಗಳು ಪ್ರಕರಣದ ತನಿಖೆ ನಡೆಸಿ ಕ್ರಮ ಕೈಗೊಳ್ಳಿ ಎಂದು ದೇವನಹಳ್ಳಿ ತಹಶೀಲ್ದಾರ್ ನಾರಾಯಣಸ್ವಾಮಿ ಅವರಿಗೆ ಕಳುಹಿಸಿದ್ದರು. ನಾರಾಯಣಸ್ವಾಮಿ ಅವರು ಆರ್‌ಟಿಸಿ ಮಾಡಿಕೊಡುವುದಕ್ಕೆ 5 ಲಕ್ಷ ರೂ. ಲಂಚ ಕೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+