• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾಲಮನ್ನಾ ದೃಢೀಕೃತ ಮಾಹಿತಿಗೆ ಬ್ಯಾಂಕ್‌ಗಳಿಗೆ ಗಡುವು ನೀಡಿದ ಸರ್ಕಾರ

|

ಬೆಂಗಳೂರು, ನವೆಂಬರ್ 2: ರಾಜ್ಯ ಸಮ್ಮಿಶ್ರ ಸರ್ಕಾರವು ರೈತರ ಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕೇಷಿ ಸಾಲ ಮನ್ನಾ ಮಾಡಿದೆ. ಆದರೆ ರೈತರ ಸಾಲ ಕುರಿತು ಮಾಹಿತಿ ನೀಡಲು ಸಹಕಾರ ಸಂಘಗಳು ಹಾಗೂ ವಾಣಿಜ್ಯ ಬ್ಯಾಂಕ್‌ಗಳು ಹಿಂದೇಟು ಹಾಕುತ್ತಿವೆ.

ಹಾಗಾಗಿ ನವೆಂಬರ್ 25ರೊಳಗೆ ಸಾಲಮನ್ನಾ ದೃಢೀಕೃತ ಮಾಹಿತಿ ನೀಡಲು ರಾಜ್ಯ ಸರ್ಕಾರ ಗಡುವು ನೀಡಿದೆ. ಸಹಕಾರ ಸಂಘಗಳ ಸಾಲಮನ್ನಾ ತೀರ್ಮಾನದಂತೆ ಫಲಾನುಭವಿ ರೈತರ ದ್ವಯಂ ದರಢೀಕರಣ ಪತ್ರ ಹಾಗೂ ಆಧಾರ್ ಒಪ್ಪಿಗೆ ಪತ್ರ ಪಡೆಯಲು ಸಂಘಗಳಿಗೆ ನವೆಂಬರ್ 25 ಅಂತಿಮ ಗಡುವು ನೀಡಲಾಗಿದೆ.

ಸಹಕಾರ ಸಂಘಗಳಿಗೆ ಸುತ್ತೋಲೆ

ಸಹಕಾರ ಸಂಘಗಳಿಗೆ ಸುತ್ತೋಲೆ

ಈ ಕುರಿತು ಸಹಕಾರ ಸಂಘಗಳ ನಿಬಂಧಕರು ಸುತ್ತೋಲೆ ಹೊರಡಿಸಿದ್ದು, ಜುಲೈ 2018ಕ್ಕೆ ಹೊರಬಾಕಿ ಹೊಂದಿರುವ ಎಲ್ಲಾ ರೈತರಿಗೆ ಸಂಘದ ದಾಖಲೆಗಳಲ್ಲಿ ಲಭ್ಯವಿರುವ ಮಾಹಿತಿಯನ್ನು ಆನ್‌ಲೈನ್‌ ಎಂಟ್ರಿ ಮಾಡಿ ಬಳಿಕ ಸಂಬಂಧಿಸಿದ ರೈತರಿಂದ ಸ್ವಯಂ ದೃಢೀಕರಣ ಪತ್ರ ಹಾಗೂ ಆಧಾರ್ ಒಪ್ಪಿಗೆ ಪತ್ರ ಮಾಹಿತಿಯನ್ನು ಪಡೆಯಬೇಕು.

2 ಹಂತದ ನಮೂದು ಪ್ರಕ್ರಿಯೆ ನ.25ರೊಳಗೆ ಮುಗಿಯಬೇಕು

2 ಹಂತದ ನಮೂದು ಪ್ರಕ್ರಿಯೆ ನ.25ರೊಳಗೆ ಮುಗಿಯಬೇಕು

ರೈತರಿಂದ ಸ್ವಯಂ ದೃಢೀಕೃತ ಪತ್ರ ನಮೂದು ಹಾಗೂ ಆಧಾರ್ ಒಪ್ಪಿಗೆ ಪತ್ರ ನಮೂದು ಪ್ರಕ್ರಿಯೆ ನವೆಂಬರ್ 25ರೊಳಗಾಗಿ ಮುಗಿಯಬೇಕು ಎಂದು ಸ್ಪಷ್ಟನೆ ನೀಡಿದ್ದಾರೆ, ಸಂಘಗಳು ನಮೂದು ಮಾಡುವ ಪತ್ರಗಳನ್ನು ಅಧಿಕಾರಿಗಳು ದೃಢೀಕರಿಸಿದ ನಂತರ ಅರ್ಹ ರೈತರ ಖಾತೆಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತದೆ.

ಸಾಲಮನ್ನಾಕ್ಕೆ ಬ್ಯಾಂಕುಗಳು ಸಹಕರಿಸದಿದ್ದರೆ ನೇರ ರೈತರ ಖಾತೆಗೆ ಹಣ: ರೇವಣ್ಣ

ವಾಣಿಜ್ಯ ಬ್ಯಾಂಕ್ ವಿವರ ಸಲ್ಲಿಕೆ

ವಾಣಿಜ್ಯ ಬ್ಯಾಂಕ್ ವಿವರ ಸಲ್ಲಿಕೆ

ಸರ್ಕಾರದ ಸೂಚನೆಯಂತೆ ವಾಣಿಜ್ಯ ಬ್ಯಾಂಕ್‌ಗಳು ಹಾಗೂ ಗ್ರಾಮೀಣ ಬ್ಯಾಂಕ್‌ಗಳು ರೈತರ ಸಾಲದ ವಿವರಗಳನ್ಉ ಸಲ್ಲಿಸಿವೆ. ಒಟ್ಟು 20.65 ಲಕ್ಷ ಬೆಳೆ ಸಾಲದ ಖಾತೆಗಳ ಪೈಕಿ ಅ.31ರವರೆಗೆ ಒಟ್ಟು 20.62 ಲಕ್ಷ ಖಾತೆಗಳ ವಿವರ ಸಲ್ಲಿಕೆಯಾಗಿದೆ.

ರೈತರ ಬಳಿಕ ವಿದ್ಯಾರ್ಥಿಗಳ ಸಾಲಮನ್ನಾ: ಸುತ್ತೋಲೆ ಹೊರಡಿಸಿದ ಸರ್ಕಾರ

ರೈತರನ್ನು ಬ್ಯಾಂಕ್ ಶಾಖೆಗೆ ಕರೆತರಲಾಗುವುದು

ರೈತರನ್ನು ಬ್ಯಾಂಕ್ ಶಾಖೆಗೆ ಕರೆತರಲಾಗುವುದು

ಫಲಾನುಭವವಿ ರೈತರನ್ನು ಸಂಬಂಧಿಸಿದ ಬ್ಯಾಂಕ್ ಶಾಖೆಗೆ ಕರೆಸಿಕೊಂಡು ಈ ವಿವರಗಳನ್ನು ದೃಢೀಕರಿಸಿಕೊಳ್ಳುವಂತೆ ಸೂಚಿಸಲಾಗುವುದು. ಅಂತಿಮವಾಗಿ, ಬ್ಯಾಂಕ್ ವಿವರಗಳನ್ನು ಪರಿಶೀಲಿಸಿ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಗೆ ಕಳುಹಿಸಲಾಗುವುದು.

ಎಚ್ಡಿಕೆ ಸಾಲಮನ್ನಾ ಕನಸಿಗೆ ಕೈ ಜೋಡಿಸಿದ ದೊಡ್ಡ ಬ್ಯಾಂಕ್ ಗಳು

English summary
State government made an dealine for Banks to give proper information regarding agriculture loan waive off. They need to deadline actual information of beneficiaries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X