Davanagere North: ಎಸ್‌.ಎಸ್‌ ಮಲ್ಲಿಕಾರ್ಜುನ್‌ V/S ಲೋಕಿಕೆರೆ ನಾಗರಾಜ್‌: ಕ್ಷೇತ್ರದಲ್ಲಿ ಯಾರಿಗೆ ಲಾಭ? ಯಾರಿಗೆ ನಷ್ಟ? ಇಲ್ಲಿ

ದಾವಣಗೆರೆ,ಏಪ್ರಿಲ್24:‌ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ಚುನಾವಣಾ ಕಣದಿಂದ ಹಾಲಿ ಶಾಸಕ ಎಸ್.ಎ.ರವೀಂದ್ರನಾಥ್ ಹಿಂದೆ ಸರಿದ ಬೆನ್ನಲ್ಲೇ ಬಿಜೆಪಿ ಮತ್ತೆ ಲಿಂಗಾಯತರಿಗೆ ಮಣೆ ಹಾಕಿದೆ. ಕಾಂಗ್ರೆಸ್ ಅಭ್ಯರ್ಥಿ ಎಸ್.ಎಸ್.ಮಲ್ಲಿಕಾರ್ಜುನ ವಿರುದ್ಧ ಬಿಜೆಪಿಯು ಸಾಮಾನ್ಯ ಕಾರ್ಯಕರ್ತ ಲೋಕಿಕೆರೆ ನಾಗರಾಜ್ ಅವರನ್ನು ಕಣಕ್ಕಿಳಿಸಿದೆ.

ಕಡಿಮೆ ಅಂತರದಲ್ಲಿ ಸೋಲು ಅನುಭವಿಸಿದ್ದ ಮಲ್ಲಿಕಾರ್ಜುನ್ ಅವರು ಸಹ ಈ ಬಾರಿಯ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಅವರು ಪಕ್ಷದ ಮುಖಂಡರು, ಕಾರ್ಯಕರ್ತರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಸಭೆ ನಡೆಸುತ್ತಿದ್ದಾರೆ. ಅದೇ ರೀತಿಯಲ್ಲಿ ಬಿಜೆಪಿಯು ಅಚ್ಚರಿ ಅಭ್ಯರ್ಥಿ ಕಣಕ್ಕಿಳಿಸಿ ಮಲ್ಲಿಕಾರ್ಜುನ್ ಅವರನ್ನು ಸೋಲಿಸಬೇಕೆಂಬ ರಣತಂತ್ರ ಹೆಣೆದಿದೆ.

Davanagere North Constituency Analysis: SS mallikarjun vs Lokikere Nagaraj: pros and cons

ಎಸ್‌ ಎಸ್‌ ಮಲ್ಲಿಕಾರ್ಜುನ್ ಪ್ಲಸ್‌ ಪಾಯಿಂಟ್‌ಗಳೇನು?

1. ಪ್ರಬಲ ಲಿಂಗಾಯತ ಸಮುದಾಯದ ನಾಯಕ: ಎಸ್‌ ಎಸ್‌ ಮಲ್ಲಿಕಾರ್ಜುನ್ ಅವರು ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದವರು. ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಪ್ರಾಬಲ್ಯವಿದೆ. ಇನ್ನೂ ಲಿಂಗಾಯತರ ಪ್ರಭಾವ ಹೊಂದಿರುವ ದಾವಣಗೆರೆ ಉತ್ತರದಲ್ಲಿ ಎಸ್‌ ಎಸ್‌ ಮಲ್ಲಿಕಾರ್ಜುನ್ ಗೆ ಸಕಾರಾತ್ಮಕ ಅಂಶವಾಗಿ ಪರಿಣಮಿಸಬಹುದು.

2. ಶಾಮನೂರು ಶಿವಶಂಕರಪ್ಪ ಅವರ ಪುತ್ರ: ಸೋಲಿಲ್ಲದ ಸರಾದರ ಶಾಮನೂರು ಶಿವಶಂಕರಪ್ಪ ಅವರು ಕಾಂಗ್ರೆಸ್‌ ನ ಹಿರಿಯ ನಾಯಕರ ಹಾಗೂ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾಗಿದ್ದು, ಕ್ಷೇತ್ರದಲ್ಲಿ ಹಾಗೂ ದಾವಣಗೆರೆ ಜಿಲ್ಲೆಯಲ್ಲಿಯೇ ತಮ್ಮದೇ ಆದ ವರ್ಚಸ್ಸನ್ನ ಹೊಂದಿದ್ದು, ಇದು ಎಸ್‌ ಎಸ್‌ ಮಲ್ಲಿಕಾರ್ಜುನ್‌ ಅವರಿಗೆ ವರದಾನವಾಗಲಿದೆ.

3. ಆಡಳಿತ ವಿರೋಧಿ ಅಲೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ನೇತೃತ್ವದ ಸರ್ಕಾರವು ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿವೆ. 40 ಪರ್ಸೆಂಟ್‌ ಭ್ರಷ್ಟಾಚಾರ, ಪಿಎಸ್‌ಐ ಹಗರಣ, ನಿಷ್ಕ್ರಿಯತೆ ಸೇರಿದಂತೆ ಹಲವು ಋಣಾತ್ಮಕ ಆರೋಪಗನ್ನು ಬಿಜೆಪಿ ಎದುರಿಸುತ್ತಿದೆ.

Davanagere North Constituency Analysis: SS mallikarjun vs Lokikere Nagaraj: pros and cons

4.ಲೋಕಿಕೆರೆ ನಾಗರಾಜ್‌ ಹೊಸ ಪರಿಚಯ: ಎಸ್‌ ಎಸ್‌ ಮಲ್ಲಿಕಾರ್ಜುನ್ ವಿರುದ್ಧ ಲೋಕಿಕೆರೆ ನಾಗರಾಜ್‌ ರನ್ನ ಬಿಜೆಪಿ ಕಣಕ್ಕಿಳಿಸಲಾಗಿದೆ. ಅವರು ದಾವಣಗೆರೆ ಉತ್ತರ ಕ್ಷೇತ್ರದ ಜನಕ್ಕೆ ಅಷ್ಟೇನು ಪರಿಚಿತರಲ್ಲದವರು. ಎಸ್‌ ಎಸ್ ಮಲ್ಲಿಕಾರ್ಜುನ್‌ ಅವರಿಗೆ ಈ ಬಾರಿ ಜನರು ಬೆಂಬಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

5.ಅಲ್ಪಮತಗಳ ಅಂತರದಿಂದ ಸೋಲಿನ ಅನುಕಂಪ: ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ತಮ್ಮದೇ ಶಾಮನೂರು ಸಂಸ್ಥೆಯ ಮೂಲಕ ಹಲವು ಕಾರ್ಯಕ್ರಮಗಳನ್ನ ಮಾಡಿದ್ದು, ಜನರಿಗೆ ಹೆಚ್ಚು ಪರಿಚಿತರಾಗಿದ್ದಾರೆ. ಅಲ್ಲದೇ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಉತ್ತಮ ಸಂಘಟನೆಯನ್ನ ಹೊಂದಿದ್ದು, ಕಳೆದ ಚುನಾವಣೆಯಲ್ಲಿ ಅಲ್ಪಮತಗಳ ಅಂತರದಿಂದ ಸೋಲಿನ ಅನುಕಂಪದಿಂದ ಈ ಬಾರಿ ಶಾಮನೂರು ಶಿವಶಂಕರಪ್ಪ ಅವರು ಪುತ್ರ ಎಸ್‌ ಎಸ್ ಮಲ್ಲಿಕಾರ್ಜುನ್‌ ಗೆಲ್ಲುವ ಸಾದ್ಯತೆ ಇದೆ ಎನ್ನಲಾಗಿದೆ.

ಎಸ್‌ ಎಸ್‌ ಮಲ್ಲಿಕಾರ್ಜುನ್ ಮೈನಸ್‌ ಪಾಯಿಂಟ್‌ಗಳೇನು?

1.ಕುಟುಂಬ ರಾಜರಾಜಣದ ಆರೋಪ: ಹಲವು ವರ್ಷಗಳಿಂದ ಶಾಮನೂರು ಶಿವಶಂಕರಪ್ಪ ಕುಟುಂಬ ರಾಜಕಾರಣದಲ್ಲಿದ್ದರೂ ದಾವಣಗೆರೆ ಅಭಿವೃದ್ಧಿಯಾಗಿಲ್ಲ ಎಂಬ ಆರೋಪ ಕೇಳಿ ಬಂದಿದ್ದು, ಬಿಜೆಪಿಯ ಎಸ್‌ಎ ರವೀಂದ್ರನಾಥ್‌ ಹಾಲಿ ಶಾಸಕರಾಗಿರುವುದರಿಂದ ಕಾಂಗ್ರೆಸ್‌ಗೆ ಕ್ಷೇತ್ರದಲ್ಲಿ ಹಿನ್ನಡೆಯಾಗುವ ಸಾಧ್ಯತೆ ಹೆಚ್ಚಾಗಿದೆ.

Davanagere North Constituency Analysis: SS mallikarjun vs Lokikere Nagaraj: pros and cons

2. ದಾವಣಗೆರೆ ಪಾಲಿಕೆಯಲ್ಲಿ ಬಿಜೆಪಿ ಹೆಚ್ಚಿನ ಸದಸ್ಯರು: ಬಿಜೆಪಿಯ ಎಸ್‌ ಎ ರವೀಂದ್ರನಾಥ್‌ ಹಾಲಿ ಶಾಸಕರಾಗಿರುವುದರಿಂದ ಕಾಂಗ್ರೆಸ್‌ಗೆ ಕ್ಷೇತ್ರದಲ್ಲಿ ಹಿನ್ನಡೆಯಾಗಲಿದ್ದು, ದಾವಣಗೆರೆಯ ಪಾಲಿಕೆಯಲ್ಲಿ ಬಿಜೆಪಿ ಪಕ್ಷದ ಸದಸ್ಯರು ಹೆಚ್ಚಿನ ಸಂಖ್ಯೆಯನ್ನ ಹೊಂದಿರುವುದು ಕೂಡ ಕಾಂಗ್ರೆಸ್‌ಗೆ ಮೈನಸ್‌ ಆಗಲಿದೆ. ಅಲ್ಲದೇ ವನ್ಯಜೀವಿಗಳ ಅಕ್ರಮ ಸಾಕಾಣಿಕೆ, ಅವುಗಳ ಮಾಂಸ ಸೇವನೆ ಆರೋಪ ಕೇಳಿ ಬಂದಿರುವುದು ಸಹ ಎಸ್‌ ಎಸ್‌ ಮಲ್ಲಿಕಾರ್ಜುನ್‌ ಕ್ಷೇತ್ರದಲ್ಲಿ ಮೈನಸ್‌ ಆಗಲಿದೆ.

3. ಪ್ರಧಾನಿ ಮೋದಿ ವರ್ಚಸ್ಸು: ಬಿಜೆಪಿಯ ಎಸ್‌ ಎ ರವೀಂದ್ರನಾಥ್‌ ಹಾಲಿ ಶಾಸಕರಾಗಿದ್ದು, ಹೊಸ ಮುಖವನ್ನ ದಾವಣಗೆರೆ ಉತ್ತರದಿಂದ ಕಣಕ್ಕಿಳಿಸಿದೆ. ಈ ಬಾರೀ ದಾವಣಗೆರೆಯಲ್ಲಿ ಮೋದಿ ಪ್ರಚಾರ ನಡೆಸಿದ್ದು, ಪ್ರಧಾನಿ ಮೋದಿ ವರ್ಚಸ್ಸು ಈ ಬಾರೀ ಬಿಜೆಪಿಯ ಹೊಸ ಮುಖಕ್ಕೆ ಅನುಕೂಲವಾಗಲಿದೆ. ಯುವಕರು ಬಿಜೆಪಿ ಪರ ನಿಲ್ಲಬಹುದು. ಮೊದಲ ಬಾರಿಯ ಮತದಾರರು ಬಿಜೆಪಿಗೆ ಮತ ನೀಡುವ ಸಾಧ್ಯತೆ ಹೆಚ್ಚಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.

ಲೋಕಿಕೆರೆ ನಾಗರಾಜ್‌ ಪ್ಲಸ್‌ ಪಾಯಿಂಟ್‌ಗಳೇನು?

1. ಬಿಜೆಪಿಗೆ ಕಾರ್ಯಕರ್ತರೇ ಶಕ್ತಿ: ಬಿಜೆಪಿಯ ಹೊಸ ಮುಖಕ್ಕೆ ಬಿಜೆಪಿ ಹೈಕಮಾಂಡ್‌ ಮಣೆ ಹಾಕಿದ್ದು, ಬಿಜೆಪಿಗೆ ಕಾರ್ಯಕರ್ತರೇ ಶಕ್ತಿ ಎಂದು ಈ ಬಾರಿ ಹಲವು ಕ್ಷೇತ್ರದಲ್ಲಿ ಬಿಜೆಪಿ ಹೈಕಮಾಂಡ್‌ ಟಿಕೆಟ್‌ ನೀಡಿದೆ. ಇನ್ನೂ ರೈತ ಮೋರ್ಚಾ ಅಧ್ಯಕ್ಷರಾಗಿ ರೈತರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದು, ಲೋಕಿಕೆರೆ ನಾಗರಾಜ್‌ ಪರ ಕ್ಷೇತ್ರದಲ್ಲಿ ಉತ್ತಮ ವಾತಾವರಣವಿದೆ.

2: ಹಾಲಿ ಶಾಸಕ ಎಸ್‌ಎ ರವೀಂದ್ರನಾಥ್‌ ಬೆಂಬಲ: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಎಸ್‌ ಎ ರವೀಂದ್ರ ನಾಥ್‌ ಪರ ಅಲೆ ಬೆಂಬಲ ಹೆಚ್ಚಾಗಿದ್ದು, 2018 ರಲ್ಲಿ 76,540 ಮತಗಳನ್ನ ಪಡೆದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು, ಈ ಬಾರಿ ಹೊಸ ಮುಖವಾದ ಲೋಕಿಕೆರೆ ನಾಗರಾಜ್‌ ರನ್ನ ಬಿಜೆಪಿ ಹೈಕಮಾಂಡ್‌ ಕಣಕ್ಕಿಳಿಸಿದ್ದು, ಹಾಲಿ ಶಾಸಕರಾಗಿರುವ ಎಸ್‌ ಎ ರವೀಂದ್ರನಾಥ್‌ ಅವರ ಬೆಂಬಲ ಸಿಗಲಿದೆ ಎಂದು ಹೇಳಲಾಗಿದೆ.

3.ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ್‌ ಬೆಂಬಲ: ಹಾಲಿ ಶಾಸಕ ಎಸ್‌ ಎ ರವೀಂದ್ರ ನಾಥ್‌ ಜೊತೆಗೆ ದಾವಣಗೆರೆ ಸಂಸದ ಜಿ ಎಂ ಸಿದ್ದೇಶ್ವರ್‌ ಬೆಂಬಲ ಹೊಸ ಅಭ್ಯರ್ಥಿಯಾಗಿರುವ ಲೋಕಿಕೆರೆ ನಾಗರಾಜ್‌ ಅವರಿಗೆ ಸಿಗಲಿದ್ದು, ಇದು ಸಹ ಪ್ಲಸ್‌ ಆಗಲಿದೆ. ದಾವಣಗೆರೆಯ ಪಾಲಿಕೆಯಲ್ಲಿ ಹೆಚ್ಚಿನ ಸದಸ್ಯರು ಇರುವುದು ಕೂಡ ಲೋಕಿಕೆರೆ ನಾಗರಾಜ್‌ ಅವರಿಗೆ ಸಹಾಯಕವಾಗಲಿದೆ.

ಲೋಕಿಕೆರೆ ನಾಗರಾಜ್‌ ಮೈನಸ್‌ ಪಾಯಿಂಟ್‌ಗಳೇನು?

1.ಆಡಳಿತ ವಿರೋಧಿ ಅಲೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿಗೆ ಆಡಳಿತ ವಿರೋಧ ಅಲೆ ಎದುರಾಗಿದೆ. ಇದು ಹೊಸ ಮುಖವಾದ ಲೋಕಿಕೆರೆ ನಾಗರಾಜ್‌ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು ಎನ್ನಲಾಗಿದೆ.

2.ಕಳೆದ ಬಾರಿ ಎಸ್‌ಎಸ್‌ ಮಲ್ಲಿಕಾರ್ಜುನ್‌ ಸೋತ ಅನುಕಂಪ: ಹೊಸ ಮುಖ ಆಗಿರುವುದರಿಂದ ಕ್ಷೇತ್ರದಲ್ಲಿ ಅಷ್ಟೊಂದು ಪರಿಚಯ ಇಲ್ಲದಿರುವುದು ಲೋಕಿಕೆರೆ ನಾಗರಾಜ್‌ ಮೇಲೆ ಋಣಾತ್ಮಕ ಪರಿಣಾಮ ಬೀರಲಿದ್ದು, 4071 ಮತಗಳಿಂದ ಸೋಲು ಅನುಭವಿಸಿರುವ ಎಸ್‌ ಎಸ್‌ ಮಲ್ಲಿಕಾರ್ಜುನ ಪರವಾಗಿ ಈ ಬಾರೀ ಅನುಕಂಪದ ಅಲೆ ಪ್ರಭಾವ ಬೀರುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+