ದಾವಣಗೆರೆಯಲ್ಲಿ 64 ವರ್ಷದ ವೃದ್ಧೆ ಮೇಲೆ ಗ್ಯಾಂಗ್‌ರೇಪ್
ದಾವಣಗೆರೆ, ನವೆಂಬರ್. 02: ಮಧ್ಯಕರ್ನಾಟಕದ ರಾಜಧಾನಿ ದಾವಣಗೆರೆಯಲ್ಲಿ 64 ವರ್ಷದ ವೃದ್ಧೆ ಮೇಲೆ ಅತ್ಯಾಚಾರ ಎಸಗಲಾಗಿದೆ. ಭಾನುವಾರ ತಡರಾತ್ರಿ ನಡೆದ ಪ್ರಕರಣ ಸೋಮವಾರ ಬೆಳಕಿಗೆ ಬಂದಿದ್ದು ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ನಾಲ್ವರು ಯುವಕರು ವೃದ್ಧೆಯ ಮೇಲೆ ಗ್ಯಾಂಗ್ ರೇಪ್ ಎಸಗಿದ್ದಾರೆ. ಸಂತ್ರಸ್ತೆಯನ್ನು ದಾವಣೆಗರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಭಾನುವಾರ ತಡರಾತ್ರಿ ದಾವಣಗೆರೆಯ ಹೊರಹೊಲ ರಾಮನಗರದ ನಿರ್ಜನ ಪ್ರದೇಶಕ್ಕೆ ವೃದ್ಧೆಯನ್ನು ಹೊತ್ತೊಯ್ದ ಕಾಮುಕರು ಅತ್ಯಾಚಾರ ಎಸಗಿದ್ದಾರೆ.[ಕಾಮುಕರ ಪುರುಷತ್ವ ಹರಣ ಮಾಡಿ: ಮದ್ರಾಸ್ ಹೈಕೋರ್ಟ್]

ಅಸ್ವಸ್ಥಗೊಂಡು ಬಿದ್ದಿದ್ದ ಮಹಿಳೆಯನ್ನು ಕಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.[ಅತ್ಯಾಚಾರ ತಡೆಗೆ ನೀವು ಸಹಿ ಮಾಡಿ]
35 ರಿಂದ 40 ವರ್ಷದ ಯುವಕರು ಕೃತ್ಯ ಎಸಗಿರುವ ಸಂಶಯವಿದೆ. ಸದ್ಯ ಮಹಿಳೆ ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಮಹಿಳೆ ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ ಹೆಚ್ಚಿನ ಮಾಹಿತಿ ಕಲೆಹಾಕಿ ಆರೋಪಿಗಳ ಚಹರೆ ಪತ್ತೆಹಚ್ಚಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications