Darshan Thoogudeepa: ನಟ ದರ್ಶನ್‌ ಗೆ ಅನಾರೋಗ್ಯ ; ನಿಲ್ಲೋಕೂ ಆಗ್ತಿಲ್ಲ, ಕೂರೋಕು ಆಗ್ತಿಲ್ಲ

ಬೆಂಗಳೂರು, ಅಕ್ಟೋಬರ್‌ 05: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಸ್ಯಾಂಡಲ್​​ವುಡ್ ನಟ ದರ್ಶನ್ ಅವರಿಗೆ ಒಂದಲ್ಲ ಒಂದು ಸಂಕಷ್ಟಗಳು ಎದುರಾಗುತ್ತಿವೆ. ದರ್ಶನ್​ಗೆ ಮಿತಿಮೀರಿದ ಬೆನ್ನು ನೋವು ಸಮಸ್ಯೆ ಕಾಣಿಸಿಕೊಂಡಿದ್ದು, ರಾತ್ರಿ ನಿದ್ದೆ ಇಲ್ಲದೇ ಬೆನ್ನುವ ನೋವಿನಿಂದ ಒದ್ದಾಡಿದ್ದಾರೆ.

ಕೊಲೆ ಕೇಸ್​ನಲ್ಲಿ ಬಳ್ಳಾರಿ ಸೆಂಟ್ರಲ್​ ಜೈಲು ಪಾಲಾಗಿರುವ ದರ್ಶನ್ ಅವರಿಗೆ ಸಂಕಷ್ಟ ಹೆಚ್ಚಿದೆ. ಒಂದು ಕಡೆ ಅವರು ಜಾಮೀನಿಗಾಗಿ ಪರದಾಡುತ್ತಿದ್ದಾರೆ. ಮತ್ತೊಂದು ಕಡೆ ಬೆನ್ನುನೋವಿನ ಸಮಸ್ಯೆಯಿಂದ ನಿಲ್ಲೋಕೂ ಆಗದೇ, ಕೂರೋಕು ಆಗದೇ ರಾತ್ರಿ ಎಲ್ಲಾ ನರಳಾಡಿದ್ದಾರೆ. ತೀವ್ರ ಬೆನ್ನು ನೋವಿನಿಂದ ಕುಳಿತುಕೊಳ್ಳಲು ಹಾಗೂ ನಿಲ್ಲಲು ಆಗದ ಸ್ಥಿತಿ ಬಂದಿದೆ. ಪೇನ್‌ಕ್ಯೂಲರ್ ಟ್ಯಾಬ್ಲೆಟ್ ನುಂಗಿದರೂ ನೋವು ಕಡಿಮೆಯಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

Darshan Thoogudeepa Back Pain Increased

ಬೆನ್ನು ನೋವಿಗೆ ದರ್ಶನ್ ಸರ್ಜರಿಗೆ ಒಳಗಾಗಲೇ ಬೇಕಿದೆ. ಸರ್ಜರಿ ಮಾಡಿಸದಿದ್ದರೆ ಕಷ್ಟ ಎಂದು ವೈದ್ಯರು ಹೇಳುತ್ತಿದ್ದಾರೆ. ಆದರೆ, ದರ್ಶನ್ ಬಳ್ಳಾರಿಯಲ್ಲಿ ಸರ್ಜರಿಗೆ ರೆಡಿ ಇಲ್ಲ. ಬೆಂಗಳೂರಿನಲ್ಲಿಯೇ ಚಿಕಿತ್ಸೆ ಪಡೆಯುತ್ತೇನೆ ಎಂದು ಹಠ ಹಿಡಿದ್ದಾರೆ. ಇಂದು ವೈದ್ಯರು ಮತ್ತೆ ದರ್ಶನ್​ ಆರೋಗ್ಯ ತಪಾಸಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನೂ ಬೆನ್ನು ನೋವಿಗೆ ಸ್ಕ್ಯಾನಿಂಗ್ ಹಾಗೂ ಸರ್ಜರಿ ಮಾಡಿಸಲು ಎ2 ದರ್ಶನ್ ನಿರಾಕರಿಸಿದ್ದಾರೆ. ದರ್ಶನ್ ಹೇಳಿಕೆಯನ್ನು ಜೈಲಧಿಕಾರಿಗಳು ರೆಕಾರ್ಡ್ ಮಾಡಿದ್ದಾರೆ. ಏನಾದರೂ ಹೆಚ್ಚು ಕಡಿಮೆ ಆದರೆ ತಮ್ಮ ಮೇಲೆ ಬರಬಾರದು ಎನ್ನುವ ಕಾರಣಕ್ಕೆ ಜೈಲು ಅಧಿಕಾರಿಗಳ ಈ ರೀತಿ ಮಾಡಿದ್ದಾರೆ. ದರ್ಶನ್ ಒಪ್ಪಿದರೆ ವಿಮ್ಸ್​ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಲು ಸಿದ್ಧತೆ ನಡೆದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ರೇಣುಕಾಸ್ವಾಮಿ ಕೊಲೆ ಕೇಸ್‌ ನಲ್ಲಿ ನಟ ದರ್ಶನ್‌ ಅವರು ಜೈಲು ಸೇರಿ ನಾಲ್ಕು ತಿಂಗಳು ಕಳೆಯುತ್ತಾ ಬಂದಿದ್ದು, ಊಟ ನಿದ್ದೆ ಸರಿಯಾಗಿ ಆಗದೇ ದರ್ಶನ್ ಅವರ ಆರೋಗ್ಯ ಸಮಸ್ಯೆ ದಿನಕಳೆದಂತೆ ಹೆಚ್ಚುತ್ತಿದೆ. ಇದನ್ನು ಅವರ ಪರ ವಕೀಲರು ಕೋರ್ಟ್​ ಮುಂದೆ ಇಡೋ ಸಾಧ್ಯತೆ ಇದೆ. ಇದನ್ನು ಆಧರಿಸಿ ಜಾಮೀನು ನೀಡುವಂತೆ ಅವರು ಬೇಡಿಕೆ ಇಡೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ ನಲ್ಲಿ ನಟ ದರ್ಶನ್‌ ಸಂಕಷ್ಟಕ್ಕೆ ಸಿಲುಕಿದ್ದು, ನಟ ದರ್ಶನ್ ಅವರು ಬೆಂಗಳೂರು ಜೈಲಿನಲ್ಲಿ ಹಾಯಾಗಿ ಇದ್ದರು. ಬೇಕಾದ ವ್ಯವಸ್ಥೆಗಳು ಸಿಗುತ್ತಿದ್ದವು. ಆದರೆ, ಬಳ್ಳಾರಿ ಜೈಲಿನಲ್ಲಿ ಅವರ ಪರಿಸ್ಥಿತಿ ಹದಗೆಟ್ಟಿದೆ. ಅವರು ಪ್ರತಿ ವಿಚಾರಕ್ಕೂ ಕೋರ್ಟ್ ಮೊರೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದ್ದು, ಅವರು ಟಿವಿಗಾಗಿ ಬೇಡಿಕೆ ಇಟ್ಟಿದ್ದರು. ಹಲವು ದಿನಗಳ ಬಳಿಕ ಟಿವಿ ಸಿಕ್ಕಿತ್ತು. ಇದೀಗ ಒಂದಲ್ಲ ಒಂದು ಸಂಕಷ್ಟವನ್ನ ಎದುರಿಸುತ್ತಿದ್ದಾರೆ.

ಕೋರ್ಟ್​ನಲ್ಲಿ ದರ್ಶನ್ ಪರ ವಕೀಲರು ವಾದ ಮಂಡನೆ ಮಾಡುತ್ತಿದ್ದಾರೆ. ಎಲ್ಲಾ ಸಾಕ್ಷಿಗಳನ್ನು ಸೃಷ್ಟಿ ಮಾಡಲಾಗಿದೆ ಎನ್ನುವ ಆರೋಪವನ್ನು ಮಾಡುತ್ತಿದ್ದಾರೆ. ಕಲೆ ಹಾಕಿರುವ ಸಾಕ್ಷಿಗಳನ್ನು ಸೃಷ್ಟಿ ಮಾಡಲಾಗಿದ್ದು, ದರ್ಶನ್‌ ಅವರು ಅನಾರೋಗ್ಯದ ಹಿನ್ನಲೆ ಬಳ್ಳಾರಿ ಜೈಲಿನಿಂದ ಬೆಂಗಳೂರು ಜೈಲಿಗೆ ಶಿಫ್ಟ್‌ ಆಗಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+